USAID ಯೋಜನೆಯನ್ನು ಡೊನಲ್ಡ್ ಟ್ರಂಪ್ ನಿಲ್ಲಿಸಿದ್ರೆ ಕೆಲವು ದೇಶಗಳಿಗೆ ಸಮಸ್ಯೆ, ಆದರೆ ಭಾರತಕ್ಕೆ ಅನುಕೂಲ; ಕೃಷ್ಣ ಭಟ್‌ ಬರಹ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Usaid ಯೋಜನೆಯನ್ನು ಡೊನಲ್ಡ್ ಟ್ರಂಪ್ ನಿಲ್ಲಿಸಿದ್ರೆ ಕೆಲವು ದೇಶಗಳಿಗೆ ಸಮಸ್ಯೆ, ಆದರೆ ಭಾರತಕ್ಕೆ ಅನುಕೂಲ; ಕೃಷ್ಣ ಭಟ್‌ ಬರಹ

USAID ಯೋಜನೆಯನ್ನು ಡೊನಲ್ಡ್ ಟ್ರಂಪ್ ನಿಲ್ಲಿಸಿದ್ರೆ ಕೆಲವು ದೇಶಗಳಿಗೆ ಸಮಸ್ಯೆ, ಆದರೆ ಭಾರತಕ್ಕೆ ಅನುಕೂಲ; ಕೃಷ್ಣ ಭಟ್‌ ಬರಹ

ಕೃಷ್ಣ ಭಟ್‌ ಬರಹ: ಅಮೆರಿಕ ಅಧ್ಯಕ್ಷಷ ಡೊನಾಲ್ಡ್‌ ಟ್ರಂಪ್‌ ಅವರು ವಿದೇಶಗಳಲ್ಲಿ ಮಾನವೀಯ ನೆರವು ನೀಡುವ ಯುಎಸ್‌ಏಡ್‌ ಅನ್ನು ನಿಲ್ಲಿಸುವ ಮುಚ್ಚಲು ಹೊರಟಿದ್ದಾರೆ. ಇದು ಕೆಲವು ದೇಶಗಳಿಗೆ ಸಮಸ್ಯೆಯಾಗಬಹುದು. ಆದರೆ, ಅತ್ಯಂತ ಅನುಕೂಲ ಆಗುವುದು ಭಾರತಕ್ಕೆ ಎಂದು ಕೃಷ್ಣಭಟ್‌ ತನ್ನ ಸೋಷಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಬರೆದಿದ್ದಾರೆ.

USAID ಯೋಜನೆಯನ್ನು ಡೊನಲ್ಡ್ ಟ್ರಂಪ್ ನಿಲ್ಲಿಸುವುದರ ವಿರುದ್ಧ ಪ್ರತಿಭಟನೆ
USAID ಯೋಜನೆಯನ್ನು ಡೊನಲ್ಡ್ ಟ್ರಂಪ್ ನಿಲ್ಲಿಸುವುದರ ವಿರುದ್ಧ ಪ್ರತಿಭಟನೆ (Getty Images via AFP)

ಕೃಷ್ಣ ಭಟ್‌ ಬರಹ: ಅಮೆರಿಕ ಅಧ್ಯಕ್ಷಷ ಡೊನಾಲ್ಡ್‌ ಟ್ರಂಪ್‌ ಅವರು ವಿದೇಶಗಳಲ್ಲಿ ಮಾನವೀಯ ನೆರವು ನೀಡುವ ಯುಎಸ್‌ಏಡ್‌ ಅನ್ನು ನಿಲ್ಲಿಸುವ ಮುಚ್ಚಲು ಹೊರಟಿದ್ದಾರೆ. ಇದು ಕೆಲವು ದೇಶಗಳಿಗೆ ಸಮಸ್ಯೆಯಾಗಬಹುದು. ಆದರೆ, ಅತ್ಯಂತ ಅನುಕೂಲ ಆಗುವುದು ಭಾರತಕ್ಕೆ ಎಂದು ಕೃಷ್ಣಭಟ್‌ ತನ್ನ ಸೋಷಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಅವರ ಫೇಸ್‌ಬುಕ್‌ ಪೋಸ್ಟ್‌ ಅನ್ನು ಯತಾವತ್ತಾಗಿ ಮುಂದೆ ಪ್ರಕಟಿಸಲಾಗಿದೆ.

ಯುಎಸ್‌ಏಡ್ ಯೋಜನೆಯನ್ನು ಟ್ರಂಪ್ ನಿಲ್ಲಿಸಿದ್ದರಿಂದ ಕೆಲವು ದೇಶಗಳಲ್ಲಿ ಸಮಸ್ಯೆಯಾಗಬಹುದು. ಆದರೆ, ಅತ್ಯಂತ ಅನುಕೂಲ ಆಗುವುದು ಭಾರತಕ್ಕೆ!

ಕೋಲ್ಡ್ ವಾರ್ ಕಾಲದಲ್ಲಿ ಜಾನ್ ಎಫ್ ಕೆನಡಿ ಅಮೆರಿಕ ಪರವಾದ ಅಜೆಂಡಾವನ್ನು ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಬಿತ್ತುವುದಕ್ಕೆ ಅಂತಲೇ ಈ ಸಂಸ್ಥೆಯನ್ನು ಶುರು ಮಾಡಿದರು. ಇದರಿಂದ ಅಮೆರಿಕಕ್ಕೆ ದೊಡ್ಡಣ್ಣನ ಸ್ಥಾನ ಸಿಕ್ಕಿತು. ಇದಕ್ಕೆ ಪರ್ಯಾಯವಾಗಿ ಆಗ ರಷ್ಯಾ ಕೂಡ ಭಾರಿ ಹಣ ಕೊಟ್ಟು ರಷ್ಯಾ ಪರವಾದ ಲಾಬಿ ನಡೆಸುತ್ತಿತ್ತು. ಆದರೆ, ರಷ್ಯಾ ಛಿದ್ರವಾಗಿ ಜಾಗತಿಕ ಮಟ್ಟದಲ್ಲಿ ರಷ್ಯಾದ ಪ್ರಭಾವ ಕಡಿಮೆಯಾದ ಮೇಲೂ USAID ಮುಂದುವರಿಯಿತು. ಅದರ ಗುರಿಯೂ ಬದಲಾಯಿತು.

ಹ್ಯುಮಾನಿಟೇರಿಯನ್ ಏಡ್ ಹೆಸರಿನಲ್ಲಿ USAID ಎಡಪಂಥೀಯ ಚಿಂತನೆಗಳನ್ನು ಹರಿಬಿಡುವ ಯೋಜನೆ ಎಂಬುದಕ್ಕೆ ಈಗ ಯಾವ ಸಾಕ್ಷಿಯೂ ಬೇಕಿಲ್ಲ.

ಬಹುಶಃ ಕಳೆದ 35-40 ವರ್ಷಗಳಲ್ಲಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಎಡಪಂಥೀಯರು ಬದುಕುಳಿದಿದ್ದೇ ಈ USAID ಇಂದ. ಒಂದು ವೇಳೆ USAID ಇರುತ್ತಿಲ್ಲದಿದ್ದರೆ ಎಡಪಂಥೀಯರಿಗೆ ಹಣ ಸಿಗುತ್ತಿರಲಿಲ್ಲ. ಪರಿಸರ (ವಿರೋಧಿ) ಹೋರಾಟಕ್ಕೆ ಹಣ ಇರುತ್ತಿರಲಿಲ್ಲ. ಹಿಂದು ಧರ್ಮವನ್ನು ಆಡಿಕೊಂಡು ನಗುವುದಕ್ಕೆ ಕಾಸು ಕಾಣಿಸುತ್ತಿರಲಿಲ್ಲ.

ಎಡಪಂಥೀಯರಿಗೆ ಮೊದಲು ಬೆಂಕಿ ಬಿದ್ದಿದ್ದು, 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ವಿದೇಶದಿಂದ ಎನ್‌ಜಿಒಗಳಿಗೆ ಬರುತ್ತಿದ್ದ ಹಣಕ್ಕೆ ನಿಯಂತ್ರಣ ಹಾಕಿತ್ತು. ಆಗ USAID ಸೇರಿದ ಹಾಗೆ ಹಲವು ಮೂಲದಿಂದ ಭಾರತಕ್ಕೆ ವಿದೇಶಿ ಕರೆನ್ಸಿ ಬಂದು ಬೀಳುವುದು ಕಡಿಮೆಯಾಗಿತ್ತು. ಬೂಸಾ ಎನ್‌ಜಿಒಗಳೆಲ್ಲ ಛತ್ರಿ ಮಡಚಿಕೊಂಡು ಬೇರೆ ವ್ಯಾಪಾರ ಶುರು ಮಾಡಿಕೊಂಡಿದ್ದವು. ಅಸಲಿ ಎನ್‌ಜಿಒಗಳು ಉಳಿದುಕೊಂಡಿದ್ದವು.

ಆದರೂ, ಅಮೆರಿಕದ ಕಡೆಯಿಂದ ಹಣವನ್ನು ನೂಕುವ ಕೆಲಸ ನಡೆಯುತ್ತಿತ್ತು. ಈಗ ಅದಕ್ಕೂ ಬಿರಡೆ ಬಿದ್ದಂತಾಗಿದೆ.

ಕಳೆದ ಕೆಲವು ವರ್ಷಗಳಿಂದ ಚೀನಾ ಕೂಡಾ ಬೆಲ್ಟ್ ಆಂಡ್ ರೋಡ್ ಯೋಜನೆ ಹೆಸರಿನಲ್ಲಿ ಹಣ ಹಂಚುತ್ತಿದೆ. ಕ್ರಿಶ್ಚಿಯನ್ ಮಿಶನರಿಗಳು ಹಣ ಹಂಚುತ್ತಿವೆ. ಇವೆರಡೂ ನಿಂತರೆ ಬಹುಶಃ ಭಾರತಕ್ಕೆ ಇನ್ನಷ್ಟು ನೆಮ್ಮದಿ ಸಿಕ್ಕಬಹುದು.

2023 ರ ಒಂದು ವರ್ಷದಲ್ಲೇ ಇಡೀ ಯುಎಸ್‌ಏಯ್ಡ್ ಸುಮಾರು 2.5 ಲಕ್ಷ ಕೋಟಿ ರೂ. ಹಣವನ್ನು ಹಂಚಿದೆ ಎಂದರೆ ಅದರ ವ್ಯಾಪ್ತಿ ಎಷ್ಟಿರಬಹುದು! ಅದರಲ್ಲಿ ಭಾರತಕ್ಕೆ ಎಷ್ಟು ಹಣ ಬಂದಿರಬಹುದು?!

ಇನ್ನು ಅಮೆರಿಕದ ಟ್ರಂಪ್ ಅನ್ನು ಬೈಯುವ ಎಡಪಂಥೀಯರ ಸಂಖ್ಯೆ ರಪಕ್ಕನೆ ಏರಿಕೆಯಾಗುತ್ತದೆ. ಟ್ರಂಪ್ ಹೆಸರು ಕೇಳಿದರೇ ಬೆಂಕಿ ಬಿದ್ದವರಂತೆ ಯಾರು ಆಡತೊಡಗುತ್ತಾರೋ ಅವರಿಗೆ USAID ಸರಿಯಾಗಿ ಬುಡಕ್ಕೆ ಬಿದ್ದಿದೆ ಎಂದು ಅರ್ಥ.

ಬರಹ: ಕೃಷ್ಣಭಟ್‌

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.