ಕೇಂದ್ರ ಬಜೆಟ್‌ನಲ್ಲಿ ಈಸಲ ಶಿಕ್ಷಣ, ಪಿಎಂ ಪೋಷಣ್‌ಗೆ ಹೆಚ್ಚಿನ ಆದ್ಯತೆ, ಸುಸ್ಥಿರ ಅಭಿವೃದ್ಧಿಗೆ ಪೂರಕ, ಅಕ್ಷಯಪಾತ್ರ ಸಿಇಒ ಶ್ರೀಧರ್ ಅಭಿಮತ
ಕೇಂದ್ರ ಬಜೆಟ್ 2024; ಕೇಂದ್ರ ಸರ್ಕಾರ ಈ ಸಲದ ಬಜೆಟ್‌ನಲ್ಲಿ ಶಿಕ್ಷಣ, ಪಿಎಂ ಪೋಷಣ್‌ಗೆ ಹೆಚ್ಚಿನ ಆದ್ಯತೆ ನೀಡಿದೆ. ಇದು ಸುಸ್ಥಿರ ಅಭಿವೃದ್ಧಿಯ ಗುರಿ ಸಾಧನೆಗೆ ಪೂರಕವಾಗಿದೆ ಎಂದು ಅಕ್ಷಯಪಾತ್ರ ಸಿಇಒ ಶ್ರೀಧರ್ ವೆಂಕಟ್ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು: ಕೇಂದ್ರ ಸರ್ಕಾರ ಇಂದು ಪ್ರಸಕ್ತ ವರ್ಷದ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಿದೆ. ಈ 2024-2025ರ ಆಯವ್ಯಯ ಪತ್ರವು(ಬಜೆಟ್) ಭಾರತದಲ್ಲಿ ಶಿಕ್ಷಣ ಹಾಗೂ ಪೋಷಣೆಗೆ ಧನಾತ್ಮಕ ಮಾರ್ಗಸೂಚಿಯಂತೆ ಇದೆ ಎಂದು ಅಕ್ಷಯಪಾತ್ರ ಫೌಂಡೇಶನ್ ಸಿಇಒ ಶ್ರೀಧರ್ ವೆಂಕಟ್ ಅಭಿಪ್ರಾಯ ಪಟ್ಟಿದ್ದಾರೆ.
ಶಿಕ್ಷಣ ಮತ್ತು ಪೋಷಣೆಗೆ ಸಂಬಂಧಿಸಿದ ಎರಡು ಅಂಶಗಳು ನಮ್ಮ ಗಮನಸೆಳೆದಿವೆ ಎಂದಿರುವ ಅವರು ಅದನ್ನು ವಿವರಿಸಿರುವುದು ಹೀಗೆ-
1) ರಾಷ್ಟ್ರೀಯ ಅನುಕೂಲತೆ ಹಾಗೂ ಅರ್ಹತಾ ವಿದ್ಯಾರ್ಥಿ ವೇತನ ಯೋಜನೆ (The National Means cum Merit Scholarship Scheme)ಯ ಅನುದಾನ ಗಣನೀಯವಾಗಿ ಹೆಚ್ಚಳವಾಗಿದೆ. 2024- 25ರಲ್ಲಿ 377 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈ ಹೆಚ್ಚಳವು, ಅಕ್ಷಯ ಪಾತ್ರ ವಿದ್ಯಾರ್ಥಿ ವೇತನ ಯೋಜನೆಯೊಂದಿಗೆ ಸುಂದರವಾಗಿ ಹೊಂದಿಕೊಳ್ಳುತ್ತದೆ. ಈ ಯೋಜನೆಗಳು , ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಂದ ಬಂದ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರೈಸಲು ನೆರವಾಗುತ್ತದೆ. ಈ ಮೂಲಕ ಶಿಕ್ಷಣವನ್ನು ಅರ್ಧಕ್ಕೆ ಕೈ ಬಿಟ್ಟವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ.
2) ಪ್ರಧಾನ ಮಂತ್ರಿ ಪೋಷಣ್ (PM POSHAN) (ಈ ಮೊದಲು ಮಧ್ಯಾಹ್ನದ ಬಿಸಿಯೂಟ ಎಂದು ಕರೆಯಲ್ಪಡುತ್ತಿದ್ದುದು) ಯೋಜನೆಗೆ 12,467.39 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದು 2023-24ರಲ್ಲಿ ಇದ್ದ 10,000 ಕೋಟಿ ರೂಪಾಯಿಯ ಪರಿಷ್ಕೃತ ಅಂದಾಜಿನಿಂದ ಶೇಕಡ 24.67 ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ. ನಮ್ಮ ಮಕ್ಕಳ ಪೋಷಣೆಯಲ್ಲಿ ಈ ಮಹತ್ತರವಾದ ಹೂಡಿಕೆಯು ಸಮಾಧಾನಕರ ಅಂಶವಾಗಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಯ ಪ್ರಮುಖ ಅನುಷ್ಠಾನಕಾರರಾಗಿ ಅಕ್ಷಯ ಪಾತ್ರದಲ್ಲಿ ನಾವು ಈ ಬದ್ಧತೆಯಿಂದ ಇನ್ನಷ್ಟು ಶಕ್ತಿ ಪಡೆದುಕೊಂಡಿದ್ದೇವೆ.
ಸದರಿ ಅನುದಾನ ಹಂಚಿಕೆಗಳು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಐದು ವರ್ಷಗಳ ವಿಸ್ತರಣೆಯೊಂದಿಗೆ ಅನೇಕ (ಎಸ್‌ಡಿಜಿ) (Sustainability Development goals) ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಹಸಿವನ್ನು ಎದುರಿಸುವ ಮತ್ತು ಶಿಕ್ಷಣವನ್ನು ಉತ್ತೇಜಿಸುವ ಮೂಲಕ, ನಾವು ಎಸ್‌ಡಿಜಿ 2 ,(ಶೂನ್ಯ ಹಸಿವು ) ಎಸ್‌ಡಿಜಿ 4 (ಗುಣಮಟ್ಟದ ಶಿಕ್ಷಣ) ಮತ್ತು ಎಸ್‌ಡಿಜಿ 10 (ಕಡಿಮೆ ಅಸಮಾನತೆಗಳು) ಗಳತ್ತ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದ್ದೇವೆ. ಅಕ್ಷಯ ಪಾತ್ರದಲ್ಲಿ, ನಾವು ಈ ಪ್ರಮುಖ ಕ್ಷೇತ್ರಗಳಲ್ಲಿ ಸರ್ಕಾರದೊಂದಿಗೆ ಸಹಕರಿಸಲು ಎಂದಿಗಿಂತ ಹೆಚ್ಚು ಪ್ರೇರಿತರಾಗಿದ್ದೇವೆ. ಈ ಬಜೆಟ್ ನಮಗೆ ಶೂನ್ಯ ಹಸಿವು SDG ಸಾಧಿಸಲು ಮತ್ತು ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಲು ಇನ್ನೊಂದು ಹೆಜ್ಜೆ ಮುನ್ನಡೆಸುತ್ತದೆ.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್. ತಾಜಾ ವಿದ್ಯಮಾನ ಮತ್ತುಬಜೆಟ್ ವಿವರಣೆ,ರಾಜಕೀಯ ವಿಶ್ಲೇಷಣೆಗಳಿಗಾಗಿkannada.hindustantimes.com/nation-and-world ಕ್ಕೆ ಭೇಟಿ ನೀಡಿ.)
