Opinion: ಯುವ ಜನರನ್ನು ಬೆಳೆಸುವ, ಅವರನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವ ಕೇಂದ್ರದ ಬದ್ಧತೆ ಗಮನಾರ್ಹ, ಉದ್ಯಮಿ ಜೈ ಡಿಕೋಸ್ಟಾ ಅಭಿಮತ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Opinion: ಯುವ ಜನರನ್ನು ಬೆಳೆಸುವ, ಅವರನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವ ಕೇಂದ್ರದ ಬದ್ಧತೆ ಗಮನಾರ್ಹ, ಉದ್ಯಮಿ ಜೈ ಡಿಕೋಸ್ಟಾ ಅಭಿಮತ

Opinion: ಯುವ ಜನರನ್ನು ಬೆಳೆಸುವ, ಅವರನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವ ಕೇಂದ್ರದ ಬದ್ಧತೆ ಗಮನಾರ್ಹ, ಉದ್ಯಮಿ ಜೈ ಡಿಕೋಸ್ಟಾ ಅಭಿಮತ

ಕೇಂದ್ರ ಬಜೆಟ್ 2024 ಇಂದು ಮಂಡನೆಯಾಗಿದ್ದು, ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.ಯುವ ಜನರನ್ನು ಬೆಳೆಸುವ, ಅವರನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವ ಕೇಂದ್ರದ ಬದ್ಧತೆ ಗಮನಾರ್ಹ ಎಂದು ಕೆ12 ಟೆಕ್ನೋ ಸರ್ವೀಸಸ್‌ ಎಂಡಿ ಮತ್ತು ಸಿಇಒ ಜೈ ಡಿಕೋಸ್ಟಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2024: ಯುವ ಜನರನ್ನು ಬೆಳೆಸುವ, ಅವರನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವ ಕೇಂದ್ರದ ಬದ್ಧತೆ ಗಮನಾರ್ಹ, ಉದ್ಯಮಿ ಜೈ ಡಿಕೋಸ್ಟಾ ಅಭಿಮತ
ಕೇಂದ್ರ ಬಜೆಟ್ 2024: ಯುವ ಜನರನ್ನು ಬೆಳೆಸುವ, ಅವರನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವ ಕೇಂದ್ರದ ಬದ್ಧತೆ ಗಮನಾರ್ಹ, ಉದ್ಯಮಿ ಜೈ ಡಿಕೋಸ್ಟಾ ಅಭಿಮತ

ಬೆಂಗಳೂರು: ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಪೂರ್ಣ ಬಜೆಟ್ (Union Budget 2024 25) ಅನ್ನು ಇಂದು (ಜುಲೈ 23) ಸಂಸತ್ತಿನಲ್ಲಿ ಮಂಡನೆ ಮಾಡಿತು. ಇದರಲ್ಲಿ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯೋಗ ಸೃಜನೆಗೆ ಹೆಚ್ಚಿನ ಮಹತ್ವ ನೀಡಿದ್ದು ಗಮನಾರ್ಹ. ಇದು ಯುವ ಜನರನ್ನು ಬೆಳೆಸುವ, ಅವರನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಕೆ12 ಟೆಕ್ನೋ ಸರ್ವೀಸಸ್‌ ಎಂಡಿ ಮತ್ತು ಸಿಇಒ ಜೈ ಡಿಕೋಸ್ಟಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2024ರ ಕೇಂದ್ರ ಬಜೆಟ್ ನಲ್ಲಿ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ವಿಚಾರವಾಗಿ ಹೆಚ್ಚು ಗಮನ ಹರಿಸಿರುವುದನ್ನು ಮುಕ್ತವಾಗಿ ಸ್ವಾಗತಿಸುತ್ತದೆ. ಬಜೆಟ್ ನಲ್ಲಿ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯ ಅಬಿವೃದ್ಧಿಗಾಗಿ ರೂ.1.48 ಲಕ್ಷ ಕೋಟಿ ಹಂಚಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರವು ಯುವ ಜನತೆಯನ್ನು ಬೆಳೆಸುವ ಮತ್ತು ಅವರನ್ನು ಭವಿಷ್ಯಕ್ಕೆ ಸಿದ್ಧಗೊಳಿಸುವ ವಿಚಾರದಲ್ಲಿ ಬದ್ಧತೆ ಪ್ರದರ್ಶಿಸಿದೆ.

ಐದು ವರ್ಷಗಳಲ್ಲಿ 1 ಕೋಟಿ ಯುವಕರಿಗೆ ಸಮಗ್ರ ಇಂಟರ್ನ್‌ಶಿಪ್ ಕಾರ್ಯಕ್ರಮ ಒದಗಿಸುವ ಯೋಜನೆಯ ಕುರಿತು ನಾವು ಕುತೂಹಲಿಗರಾಗಿದ್ದೇವೆ. ಈ ಕ್ರಮವು ಯುವಜನತೆಗೆ ಪ್ರಾಯೋಗಿಕ ಕಲಿಕಾ ಅನುಭವಗಳನ್ನು ಒದಗಿಸಬೇಕು ಎಂಬ ನಮ್ಮ ಯೋಚನೆಯ ಜೊತೆ ಹೊಂದಾಣಿಕೆಯಾಗುತ್ತದೆ. ವರ್ಲ್ಡ್ ಎಕನಾಮಿಕ್ ಫೋರಮ್‌ನ ಫ್ಯೂಚರ್ ಆಫ್ ಜಾಬ್ಸ್ ರಿಪೋರ್ಟ್ 2023ರಲ್ಲಿ ಮುಂದಿನ ಐದು ವರ್ಷಗಳಲ್ಲಿ 44% ಕಾರ್ಮಿಕರು ಕೌಶಲ್ಯಗಳ ವಿಚಾರದಲ್ಲಿ ಹಿಂದೆ ಬೀಳಲಿದ್ದಾರೆ ಎಂದು ತಿಳಿಸಲಾಗಿತ್ತು. ಆದ್ದರಿಂದ ಉದ್ಯೋಗ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಅತಿ ವೇಗದ ಬದಲಾವಣೆಗಳಿಗೆ ನಮ್ಮ ಯುವಜನತೆಯನ್ನು ಸಿದ್ಧಗೊಳಿಸುವಲ್ಲಿ ಈ ಇಂಟರ್ನ್ ಶಿಪ್ ಕಾರ್ಯಕ್ರಮವು ಮಹತ್ವದ ಪಾತ್ರ ವಹಿಸಲಿದೆ.

ಉನ್ನತ ಶಿಕ್ಷಣ ಸಾಲಗಳಿಗೆ ಇ-ವೋಚರ್ ಗಳನ್ನು ಪರಿಚಯಿಸಿರುವುದು ಮತ್ತು ಮಾಡೆಲ್ ಸ್ಕಿಲ್ ಲೋನ್ ಸ್ಕೀಮ್ ಅನ್ನು ಪರಿಷ್ಕರಿಸಿರುವುದು ಗುಣಮಟ್ಟದ ಶಿಕ್ಷಣವನ್ನು ಸುಲಭವಾಗಿ ಎಲ್ಲರಿಗೂ ದೊರಕಿಸುವ ನಿಟ್ಟಿನಲ್ಲಿನ ಮಹತ್ವದ ಹೆಜ್ಜೆಯಾಗಿದೆ. 2025ರ ವೇಳೆಗೆ ಭಾರತದ ಎಜು-ಟೆಕ್ ಕ್ಷೇತ್ರವು $10.4 ಶತಕೋಟಿ ತಲುಪಲಿದೆ ಎಂದು ನಂಬಲಾಗಿದೆ. ಹಾಗಾಗಿ ಈ ಆರ್ಥಿಕ ಯೋಜನೆಗಳು ದೇಶದಲ್ಲಿ ತಂತ್ರಜ್ಞಾನ-ಸಂಯೋಜಿತ ಕಲಿಕಾ ಕ್ರಮಗಳನ್ನು ಅಳವಡಿಸುವ ಪ್ರಕ್ರಿಯೆಯನ್ನು ತೀವ್ರಗೊಳಿಸಬಹುದಾಗಿದೆ.

ವಿಶೇಷವಾಗಿ ಅನುಸಂಧಾನ ರಾಷ್ಟ್ರೀಯ ಸಂಶೋಧನಾ ನಿಧಿಯ ಸ್ಥಾಪನೆ ನಿಜಕ್ಕೂ ಒಂದು ಮಹತ್ವದ ಯೋಜನೆಯಾಗಿದೆ. ಯುನೆಸ್ಕೋ ಸೈನ್ಸ್ ರಿಪೋರ್ಟ್ 2021ರ ಪ್ರಕಾರ ಸಂಶೋಧನೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ಭಾರತ ಮಾಡುತ್ತಿರುವ ದೇಶೀಯ ವೆಚ್ಚವು ದೇಶದ ಜಿಡಿಪಿಯ 0.7%ರಷ್ಟು ಮಾತ್ರ ಇದೆ. ಹಾಗಾಗಿ ಈ ನಿಧಿಯು ಭಾರತದ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರುವ ನಂಬಿಕೆ ಇದೆ. ಜೊತೆಗೆ ಶಿಕ್ಷಣದಲ್ಲಿ ನಾವೀನ್ಯತೆ ಮತ್ತು ತಾಂತ್ರಿಕ ಸುಧಾರಣೆ ಸಾಧ್ಯವಾಗಿಸುವ ವಿಚಾರದಲ್ಲಿ ಸೂಕ್ತ ಕೊಡುಗೆಯನ್ನು ನೀಡುವ ನಿರೀಕ್ಷೆ ಇದೆ.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ತಾಜಾ ವಿದ್ಯಮಾನ ಮತ್ತು ಬಜೆಟ್‌ ವಿವರಣೆ, ರಾಜಕೀಯ ವಿಶ್ಲೇಷಣೆಗಳಿಗಾಗಿ kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.