Padma Awards 2025: ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದ ಕೇಂದ್ರ ಸರ್ಕಾರ; ಕರ್ನಾಟಕದ 9 ಸಾಧಕರಿಗೆ ಉನ್ನತ ಗೌರವ
ಪದ್ಮ ಪ್ರಶಸ್ತಿಗಳು 2025: ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕರ್ನಾಟಕದ ಒಟ್ಟು 9 ಸಾಧಕರಿಗೆ ಉನ್ನತ ಗೌರವ ಸಂದಿದ್ದು, ಅವರ ವಿವರ ಇಲ್ಲಿದೆ. ಒಟ್ಟು 139 ಸಾಧಕರಿಗೆ ಈ ಬಾರಿಯ ಪದ್ಮ ಪ್ರಶಸ್ತಿಗಳು ಒಲಿದು ಬಂದಿವೆ.

ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು 'ಪದ್ಮ ಪ್ರಶಸ್ತಿ'ಗಳನ್ನು (Padma Awards 2025) ಘೋಷಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತದೆ. ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. ಕರ್ನಾಟಕದ ಒಬ್ಬರಿಗೆ ಪದ್ಮವಿಭೂಷಣ, ಇಬ್ಬರಿಗೆ ಪದ್ಮಭೂಷಣ ಹಾಗೂ 6 ಸಾಧಕರಿಗೆ ಪದ್ಮಶ್ರೀ ಗೌರವ ಘೋಷಣೆಯಾಗಿದೆ. ಒಟ್ಟಾರೆಯಾಗಿ 139 ಸಾಧಕರಿಗೆ ಈ ಬಾರಿಯ ಪದ್ಮ ಪ್ರಶಸ್ತಿಗಳು ಒಲಿದು ಬಂದಿವೆ.
ಪಿಟೀಲು ವಾದಕ ಲಕ್ಷ್ಮೀನಾರಾಯಣ ಸುಬ್ರಮಣ್ಯಂ ಅವರಿಗೆ ಪದ್ಮವಿಭೂಷಣ ಗೌರವ ಸಂದಿದೆ. ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಗೌರವ ನೀಡಲಾಗಿದೆ. ಇದೇ ವೇಳೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೂರ್ಯ ಪ್ರಕಾಶ್ ಅವರಿಗೆ ಪದ್ಮಭೂಷಣ ಗೌರವ ಸಂದಿದೆ. ಗೊಂದಲಿ ಕಲಾವಿದ ವೆಂಕಪ್ಪ ಅಂಬಾಜಿ, ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ, ಪ್ರಶಾಂತ್ ಪ್ರಕಾಶ್, ರಿಕಿ ಗ್ಯಾನ್ ಕೇಜ್, ಹಾಸನ ರಘು ಹಾಗೂ ವಿಜಯಲಕ್ಷ್ಮಿ ದೇಶಮನೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಕರ್ನಾಟಕದ ಗೊಂದಲಿ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್‌ಗೆ ಪ್ರತಿಷ್ಠಿತ 2025ರ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಕಲಬುರಗಿಯ ಹಿರಿಯ ವೈದ್ಯೆ, ಕ್ಯಾನ್ಸರ್ ತಜ್ಞರಾಗಿರುವ ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ಈ ಬಾರಿಯ ಪದ್ಮಶ್ರೀ ಗೌರವ ಒಲಿದು ಬಂದಿದೆ. 4 ದಶಕಗಳ ಕಾಲ ಕ್ಯಾನ್ಸರ್ ರೋಗಿಗಳ ಉಳಿವಿಗಾಗಿ ಶ್ರಮಿಸಿದ 70 ವರ್ಷ ವಯಸ್ಸಿನ ತಾಯಿಗೆ ಉನ್ನತ ಗೌರವ ಸಂದಿದೆ.
ಗಣರಾಜ್ಯೋತ್ಸವಕ್ಕೂ ಮುನ್ನ ಕೇಂದ್ರ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗದವರ ಹೆಸರನ್ನು ಪ್ರಕಟಿಸಿದೆ. ತಡವಾಗಿ ಪದ್ಮ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪ್ರಶಸ್ತಿ ಘೋಷಣೆಯಾದವರಲ್ಲಿ ಗೋವಾದ 100 ವರ್ಷದ ಸ್ವಾತಂತ್ರ್ಯ ಹೋರಾಟಗಾರ್ತಿ ಲಿಬಿಯಾ ಲೋಬೊ ಸರ್ದೇಸಾಯಿ, ಪಶ್ಚಿಮ ಬಂಗಾಳದ ಧಕ್ ಆಟಗಾರ್ತಿ ಗೋಕುಲ್ ಚಂದ್ರ ದಾಸ್, ಕುವೈತ್‌ನ ಯೋಗ ಸಾಧಕಿ ಶೈಖಾ ಎ ಜೆ ಅಲ್ ಸಬಾ ಸೇರಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ಪತ್ತೆ, ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ಪರಿಣತಿ ಹೊಂದಿರುವ ದೆಹಲಿಯ ಸ್ತ್ರೀರೋಗತಜ್ಞೆ ಡಾ. ನೀರ್ಜಾ ಭಟ್ಲಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಕರ್ನಾಟಕದ ಪುರಸ್ಕೃತರ ವಿವರ
- ಲಕ್ಷ್ಮೀನಾರಾಯಣ ಸುಬ್ರಮಣ್ಯಂ (ಕಲೆ) -ಪದ್ಮವಿಭೂಷಣ
- ಸೂರ್ಯ ಪ್ರಕಾಶ್ (ಸಾಹಿತ್ಯ ಮತ್ತು ಶಿಕ್ಷಣ -ಪತ್ರಿಕೋದ್ಯಮ) -ಪದ್ಮಭೂಷಣ
- ಅನಂತ್ ನಾಗ್ (ಕಲೆ) -ಪದ್ಮಭೂಷಣ
- ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ (ಕಲೆ) -ಪದ್ಮಶ್ರೀ
- ಹಾಸನ ರಘು (ಕಲೆ) -ಪದ್ಮಶ್ರೀ
- ಪ್ರಶಾಂತ್ ಪ್ರಕಾಶ್ (ವ್ಯಾಪಾರ ಮತ್ತು ಕೈಗಾರಿಕೆ) -ಪದ್ಮಶ್ರೀ
- ರಿಕಿ ಗ್ಯಾನ್ ಕೇಜ್ (ಕಲೆ) -ಪದ್ಮಶ್ರೀ
- ವೆಂಕಪ್ಪ ಅಂಬಾಜಿ ಸುಗಟೇಕರ್ (ಕಲೆ) -ಪದ್ಮಶ್ರೀ
- ವಿಜಯಲಕ್ಷ್ಮಿ ದೇಶಮಾನೆ (ಔಷಧಿ) -ಪದ್ಮಶ್ರೀ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರಮುಖರ ವಿವರ
- ಎಲ್ ಹ್ಯಾಂಗ್ಥಿಂಗ್ (ನಾಗಾಲ್ಯಾಂಡ್)
- ಹರಿಮಾನ್ ಶರ್ಮಾ (ಹಿಮಾಚಲ ಪ್ರದೇಶ)
- ಜುಮ್ಡೆ ಯೋಮ್ಗಮ್ ಗ್ಯಾಮ್ಲಿನ್ (ಅರುಣಾಚಲ ಪ್ರದೇಶ)
- ಜೋಯ್ನಾಚರಣ್ ಬಥಾರಿ (ಅಸ್ಸಾಂ)
- ನರೇನ್ ಗುರುಂಗ್ (ಸಿಕ್ಕಿಂ)
- ವಿಲಾಸ್ ಡಾಂಗ್ರೆ (ಮಹಾರಾಷ್ಟ್ರ)
- ಶೈಖಾ ಎ ಜೆ ಅಲ್ ಸಬಾ (ಕುವೈತ್)
- ನಿರ್ಮಲಾ ದೇವಿ (ಬಿಹಾರ)
- ಭೀಮ್ ಸಿಂಗ್ ಭವೇಶ್ (ಬಿಹಾರ)
- ರಾಧಾ ಬಹಿನ್ ಭಟ್ಟ್ (ಉತ್ತರಾಖಂಡ)
- ಸುರೇಶ್ ಸೋನಿ (ಗುಜರಾತ್)
- ಪಾಂಡಿ ರಾಮ್ ಮಾಂಡವಿ (ಛತ್ತೀಸ್‌ಗಢ)
ಇದನ್ನೂ ಓದಿ | Padma Awards 2025: ಕಲಬುರಗಿಯ ಕ್ಯಾನ್ಸರ್ ತಜ್ಞೆ ವಿಜಯಲಕ್ಷ್ಮೀ ದೇಶಮಾನೆ ಅರಸಿ ಬಂದ ಪದ್ಮಶ್ರೀ ಗೌರವ
- ಜೋನಸ್ ಮಾಸೆಟ್ (ಬ್ರೆಜಿಲ್)
- ಜಗದೀಶ್ ಜೋಶಿಲಾ (ಮಧ್ಯಪ್ರದೇಶ)
- ಹರ್ವಿಂದರ್ ಸಿಂಗ್ (ಹರಿಯಾಣ)
- ಭೇರು ಸಿಂಗ್ ಚೌಹಾಣ್ (ಮಧ್ಯಪ್ರದೇಶ)
- ವೆಂಕಪ್ಪ ಅಂಬಾಜಿ ಸುಗಾಟೆಕರ್ (ಕರ್ನಾಟಕ)
- ಭೀಮವ್ವ ದೊಡ್ಡಬಾಳಪ್ಪ (ಕರ್ನಾಟಕ)
- ವಿಜಯಲಕ್ಷ್ಮಿ ದೇಶಮನೆ (ಕರ್ನಾಟಕ)
- ಪಿ ದಚ್ಚನಮೂರ್ತಿ (ಪುದುಚೇರಿ)
- ಲಿಬಿಯಾ ಲೋಬೊ ಸರ್ದೇಸಾಯಿ (ಗೋವಾ)
- ಗೋಕುಲ್ ಚಂದ್ರ ದಾಸ್ (ಪಶ್ಚಿಮ ಬಂಗಾಳ)
- ಹಗ್ ಗ್ಯಾಂಟ್ಜರ್ (ಉತ್ತರಾಖಂಡ)
- ಕೊಲೀನ್ ಗ್ಯಾಂಟ್ಜರ್ (ಉತ್ತರಾಖಂಡ)
- ಡಾ. ನೀರ್ಜಾ ಭಟ್ಲಾ (ದೆಹಲಿ)
ಇದನ್ನೂ ಓದಿ | Padma Awards 2025: ಕರ್ನಾಟಕದ ಗೊಂದಲಿ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್‌ಗೆ ಒಲಿದ ಪದ್ಮಶ್ರೀ ಪ್ರಶಸ್ತಿ

ವಿಭಾಗ