Pakistan Explosion: ಗುಜರಿ ವಸ್ತುಗಳನ್ನು ವಿಂಗಡಿಸುವಾಗ ಸ್ಫೋಟ; ಪಾಕಿಸ್ತಾನದಲ್ಲಿ ಒಂದೇ ಕುಟುಂಬದ 6 ಮಂದಿ ಸಾವು
Junk Material Explosion: ಈ ಕುಟುಂಬವು ಗುಜರಿ ವ್ಯಾಪಾರ ನಡೆಸುತ್ತಿದ್ದು, ಗುಜರಿ ವಸ್ತುಗಳನ್ನು ವಿಂಗಡಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದೆ. ಹೀಗಾಗಿ ಗುಜರಿಯಲ್ಲಿ ಯಾವುದಾದರೂ ಸ್ಫೋಟಕ ಸಾಧನ ಇದ್ದಿರಬಹುದೆಂದು ಶಂಕಿಸಲಾಗಿದೆ.
ಪಂಜಾಬ್ (ಪಾಕಿಸ್ತಾನ): ಮನೆಯೊಳಗೆ ಸ್ಫೋಟ ಸಂಭವಿಸಿ ಒಂದೇ ಕುಟುಂಬದ ಆರು ಜನರು ಸಾವನ್ನಪ್ಪಿರುವ ಘಟನೆ ಇಂದು ( ಜೂನ್ 1, ಗುರುವಾರ) ಪಾಕಿಸ್ತಾನದ (Pakistan) ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.
ಪಂಜಾಬ್ ಪ್ರಾಂತ್ಯದ ಕೋಟ್ ಅಡ್ಡು ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ ಇನ್ನೂ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುಟುಂಬವು ಗುಜರಿ ವ್ಯಾಪಾರ ನಡೆಸುತ್ತಿದ್ದು, ಗುಜರಿ ವಸ್ತುಗಳನ್ನು ವಿಂಗಡಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದೆ. ಹೀಗಾಗಿ ಗುಜರಿಯಲ್ಲಿ ಯಾವುದಾದರೂ ಸ್ಫೋಟಕ ಸಾಧನ ಇದ್ದಿರಬಹುದೆಂದು ಶಂಕಿಸಲಾಗಿದೆ.
ಸ್ಫೋಟದ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಮುಜಾಫರ್‌ಗಢ ಜಿಲ್ಲಾ ಪೊಲೀಸ್ ಅಧಿಕಾರಿ (ಡಿಪಿಒ) ಸೈಯದ್ ಹಸ್ನೈನ್ ಹೈದರ್ ಹೇಳಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಮೃತರಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಮತ್ತು 2 ವರ್ಷದ ಮಗು ಸೇರಿ ಇಬ್ಬರು ಮಕ್ಕಳು ಇದ್ದಾರೆ. ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮೊಹ್ಸಿನ್ ನಖ್ವಿ ಅವರು ಜೀವಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಘಟನೆಯ ಬಗ್ಗೆ ವರದಿ ಕೇಳಿದ್ದಾರೆ.
ಚಾಮರಾಜನಗರದಲ್ಲಿ ಸಣ್ಣ ವಿಮಾನ ಪತನ
ಕರ್ನಾಟಕದ ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಮದ ಬಳಿ ಸಣ್ಣ ವಿಮಾನವೊಂದು ಪತನಗೊಂಡಿರುವ ಘಟನೆ ನಡೆದಿದೆ. ಇಂದು (ಜೂನ್ 1, ಗುರುವಾರ) ಮಧ್ಯಾಹ್ನ 12 ಗಂಟೆ ಸಮಯದಲ್ಲಿ ವಿಮಾನ ಪತನವಾಗಿದೆ. ವಿಮಾನದಲ್ಲಿ ಇಬ್ಬರು ಪೈಲಟ್ ಗಳು ಇದ್ದು ಅವರು ಪ್ಯಾರಾಚೂಟ್ ಮೂಲಕ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಫೋಟೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಬ್ರೆಜಿಲ್‌ನ ಸೌಂದರ್ಯ ಸ್ಪರ್ಧೆಯಲ್ಲಿ ನತಲ್ಲಿ ಬೆಕರ್ ಎಂಬವರು ರನ್ನರ್ ಅಪ್ ಆಗಿದ್ದಾರೆ. ಪತ್ನಿಗೆ ಎರಡನೇ ಸ್ಥಾನ ಬಂದಿದ್ದಕ್ಕೆ ಕೋಪಗೊಂಡ ಆಕೆಯ ಪತಿ ವೇದಿಕೆಯ ಮೇಲೆಯೇ ಕಿರೀಟವನ್ನು ಎತ್ತಿ ಬಡಿದಿದ್ದಾನೆ. ವಿವರ ಮಾಹಿತಿ ಹಾಗೂ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ..