Humza Yousaf: ಸ್ಕಾಟ್‌ಲೆಂಡ್‌ ಪ್ರಧಾನಿಯಾಗಿ ಪಾಕ್‌ ಮೂಲದ ಯುವ ನಾಯಕನ ಆಯ್ಕೆ: ಯಾರು ಹಮ್ಜಾ ಯೂಸುಫ್?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Humza Yousaf: ಸ್ಕಾಟ್‌ಲೆಂಡ್‌ ಪ್ರಧಾನಿಯಾಗಿ ಪಾಕ್‌ ಮೂಲದ ಯುವ ನಾಯಕನ ಆಯ್ಕೆ: ಯಾರು ಹಮ್ಜಾ ಯೂಸುಫ್?

Humza Yousaf: ಸ್ಕಾಟ್‌ಲೆಂಡ್‌ ಪ್ರಧಾನಿಯಾಗಿ ಪಾಕ್‌ ಮೂಲದ ಯುವ ನಾಯಕನ ಆಯ್ಕೆ: ಯಾರು ಹಮ್ಜಾ ಯೂಸುಫ್?

ಪಾಕಿಸ್ತಾನ ಮೂಲದ ಹಮ್ಜಾ ಯೂಸುಫ್‌ ಅವರು ಸ್ಕಾಟ್‌ಲ್ಯಾಂಡ್‌ನ ನ್ಯಾಷನಲ್‌ ಪಾರ್ಟಿ ನಾಯಕತ್ವ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಈ ಮೂಲಕ ಸ್ಕಾಟ್‌ಲ್ಯಾಂಡ್‌ನ ಅತ್ಯಂತ ಕಿರಿಯ ಫಸ್ಟ್‌ ಮಿನಿಸ್ಟರ್(ಪ್ರಧಾನಮಂತ್ರಿ)‌ ಮತ್ತು ಪಶ್ಚಿಮ ಯುರೋಪ್‌ನ ಸರ್ಕಾರವೊಂದರ ನಾಯಕತ್ವವಹಿಸಿದ ಮೊದಲ ಮುಸ್ಲಿಂ ನಾಯಕ ಎಂಬ ಹೆಗ್ಗಳಿಕೆಗೆ ಹಮ್ಜಾ ಯೂಸುಫ್ ಪಾತ್ರರಾಗಿದ್ದಾರೆ.

ಹಮ್ಜಾ ಯೂಸುಫ್‌ (ಸಂಗ್ರಹ ಚಿತ್ರ)
ಹಮ್ಜಾ ಯೂಸುಫ್‌ (ಸಂಗ್ರಹ ಚಿತ್ರ) (AFP)

ಲಂಡನ್:‌ ಪಾಕಿಸ್ತಾನ ಮೂಲದ ಹಮ್ಜಾ ಯೂಸುಫ್‌ ಅವರು ಸ್ಕಾಟ್‌ಲ್ಯಾಂಡ್‌ನ ನ್ಯಾಷನಲ್‌ ಪಾರ್ಟಿ ನಾಯಕತ್ವ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಈ ಮೂಲಕ ಸ್ಕಾಟ್‌ಲ್ಯಾಂಡ್‌ನ ಅತ್ಯಂತ ಕಿರಿಯ ಫಸ್ಟ್‌ ಮಿನಿಸ್ಟರ್(ಪ್ರಧಾನಮಂತ್ರಿ)‌ ಮತ್ತು ಪಶ್ಚಿಮ ಯುರೋಪ್‌ನ ಸರ್ಕಾರವೊಂದರ ನಾಯಕತ್ವವಹಿಸಿದ ಮೊದಲ ಮುಸ್ಲಿಂ ನಾಯಕ ಎಂಬ ಹೆಗ್ಗಳಿಕೆಗೆ ಹಮ್ಜಾ ಯೂಸುಫ್ ಪಾತ್ರರಾಗಿದ್ದಾರೆ.

ನಿಕೋಲಾ ಸ್ಟರ್ಜನ್ ಅವರ ಸ್ಥಾನವನ್ನು ತುಂಬಲಿರುವ 37 ವರ್ಷದ ಹಮ್ಜಾ ಯೂಸುಫ್‌, ಮೂಲತಃ ಪಾಕಿಸ್ತಾನದವರಾಗಿದ್ದಾರೆ. ಸ್ಕಾಟ್‌ಲ್ಯಾಂಡ್‌ ಫಸ್ಟ್‌ ಮಿನಿಸ್ಟರ್‌ ಆಗಿ ಚುನಾಯಿತರಾದ ಬೆನ್ನಲ್ಲೇ, ಹಮ್ಜಾ ಯೂಸುಫ್‌ ಅವರು ಸ್ಕಾಟ್‌ಲ್ಯಾಂಡ್‌ನ ಸ್ವಾತಂತ್ರ್ಯದ ಕಿಚ್ಚನ್ನು ಪುನಶ್ಚೇತನಗೊಳಿಸುವ ಪ್ರತಿಜ್ಞೆ ಮಾಡಿದ್ದಾರೆ.

ಇಂದು(ಮಾ.29-ಬುಧವಾರ) ಬುಧವಾರದ ಸಮಾರಂಭದಲ್ಲಿ ಔಪಚಾರಿಕವಾಗಿ ಪ್ರಮಾಣವಚನ ಸ್ವೀಕರಿಸಲಿರುವ ಹಮ್ಜಾ ಯೂಸುಫ್‌, ಸ್ಕಾಟ್‌ಲ್ಯಾಂಡ್‌ನ ಸ್ವಾತಂತ್ರ್ಯದ ಕುರತು ನೇರವಾಗಿ ಏನನ್ನೂ ಮಾತನಾಡಿಲ್ಲ. ಆದರೆ ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ತಮ್ಮ ಸರ್ಕಾರ ಪಾಲನೆ ಮಾಡಲಿದೆ ಎಂಬ ಅವರ ಹೇಳಿಕೆ ಇದೀಗ ಗಮನ ಸೆಳೆದಿದೆ.

ಯಾರು ಹಮ್ಜಾ ಯೂಸುಫ್?‌

1. ಹಮ್ಜಾ ಯೂಸುಫ್ 1960ರ ದಶಕದಲ್ಲಿ ಸ್ಕಾಟ್‌ಲೆಂಡ್‌ಗೆ ವಲಸೆ ಬಂದ ಪಾಕ್‌ ಕುಟುಂಬದಲ್ಲಿ ಜನಿಸಿದರು. ಹಮ್ಜಾ ಅವರ ತಂದೆ ಪಾಕಿಸ್ತಾನದವರಾಗಿದ್ದರೆ, ಅವರ ತಾಯಿ ಕೀನ್ಯಾದಲ್ಲಿ ನೆಲೆಸಿದ್ದ ದಕ್ಷಿಣ ಏಷ್ಯಾದ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಹಮ್ಜಾ ಅವರ ಕುಟುಂಬ ಗ್ಲಾಸ್ಗೋದಲ್ಲಿ ನೆಲೆಯೂರಿತ್ತು.

2. ಹಮ್ಜಾ ಯೂಸುಫ್‌ ಅವರು ಗ್ಲ್ಯಾಸ್ಗೋದಲ್ಲಿನ ಹಚ್ಸನ್ಸ್ ಗ್ರಾಮರ್ ಶಾಲೆಯಲ್ಲಿ ಅಧ್ಯಯನ ಮಾಡಿದರು. ನಂತರ ಗ್ಲ್ಯಾಸ್ಗೋ ವಿಶ್ವವಿದ್ಯಾಲಯದಿಂದ ರಾಜಕೀಯದಲ್ಲಿ ಪದವಿ ಪಡೆದರು.

3. 1962ರಲ್ಲಿ ಪಾಕಿಸ್ತಾನದ ಒಂದು ಸಣ್ಣ ಪಟ್ಟಣದಿಂದ ಸ್ಕಾಟ್‌ಲೆಂಡ್‌ಗೆ ಬಂದಿಳಿದ ನನ್ನ ತಾತ, ಮುಂದೊಂದು ದಿನ ನನ್ನ ಮೊಮ್ಮಗ ಸ್ಕಾಟ್‌ಲೆಂಡ್‌ನ ಫಸ್ಟ್‌ ಮಿನಿಸ್ಟರ್‌ ಆಗಲಿದ್ದಾನೆ ಎಂಬುದನ್ನು ಊಹಿಸಿರಲು ಸಾಧ್ಯವಿಲ್ಲ. ಆದರೆ ಸ್ಕಾಟ್‌ಲೆಂಡ್‌ ಜನರ ಒಗ್ಗಟ್ಟು ಇದನ್ನು ಸಾಧಿಸಿ ತೋರಿಸಿದೆ ಎಂದು ಹಮ್ಜಾ ಯೂಸುಫ್‌ ಹೇಳಿದ್ದಾರೆ,

4. ಸ್ಕಾಟ್‌ಲೆಂಡ್‌ ಜನರು ಚರ್ಮದ ಬಣ್ಣವನ್ನು ಆಧರಿಸಿ ತಮ್ಮ ನಾಯಕನನ್ನು ಆರಿಸುವುದಿಲ್ಲ. ದೇಶದ ಒಳಿತಿಗಾಗಿ ಯಾರೇ ಆಗಲಿ ಅವರನ್ನು ಸ್ಕಾಟ್‌ಲೆಂಡ್‌ ಜನ ಅಪ್ಪಿಕೊಳ್ಳುತ್ತಾರೆ. ಭವಿಷ್ಯದಲ್ಲೂ ವಲಸಿಗ ಸಮುದಾಯದ ನಾಯಕರು ಈ ದೇಶದ ಪ್ರಧಾನಿಯಾಗಬಹುದು ಎಂದು ಹಮ್ಜಾ ಯೂಸುಫ್‌ ಅಭಿಪ್ರಾಯಪಟ್ಟಿದ್ದಾರೆ

5. 2012ರಲ್ಲಿ, ಯೂಸಫ್ ಸ್ಕಾಟಿಷ್ ಸರ್ಕಾರಕ್ಕೆ ನೇಮಕಗೊಂಡ ಮೊದಲ ಮುಸ್ಲಿಂ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2016ರಲ್ಲಿ ಸಾರಿಗೆ ಸಚಿವರಾದ ಅವರು, ವಿಮೆ ಇಲ್ಲದೆ ಸ್ನೇಹಿತನ ಕಾರನ್ನು ಚಲಾಯಿಸಿದ್ದಕ್ಕಾಗಿ 30 ಸಾವಿರ ರೂ. ದಂಡ ಕಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ಒಟ್ಟಿನಲ್ಲಿ ಇಂಗ್ಲೆಂಡ್‌ಗೆ ಭಾರತೀಯ ಮೂಲದ ರಿಷಿ ಸುನಕ್‌ ಪ್ರಧಾನಿಯಾಗಿ ಆಯ್ಕೆಯಾದರೆ, ಸ್ಕಾಟ್‌ಲೆಂಡ್‌ನ ಫಸ್ಟ್‌ ಮಿನಿಸ್ಟರ್‌ ಆಗಿ ಪಾಕಿಸ್ತಾನ ಮೂಲದ ಹಮ್ಜಾ ಯೂಸುಫ್‌ ಆಯ್ಕೆಯಾಗಿರುವುದು ಜಾಗತಿಕವಾಗಿ ಗಮನ ಸೆಳೆದಿದೆ.

ಇಂದಿನ ಪ್ರಮುಖ ಸುದ್ದಿ

Save KMF: ದಹಿ, ದೂದ್‌, ಪಾನಿ..ಕೆಎಂಎಫ್‌ನಿಂದ ಕನ್ನಡ ಮಾಯವಾಗಿಸುವ ಗುಮಾನಿ?: ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಕರುನಾಡಿನ ಸ್ವಾಭಿಮಾನಿ

ಕೆಎಂಎಫ್‌ನಲ್ಲಿ ಒತ್ತಾತಯಪೂರ್ವಕ ಹಿಂದಿ ಹೇರಿಕೆಯ ಆರೋಪ ಕೇಳಿಬಂದಿದ್ದು, ಒಕ್ಕೂಟದ ಸಿಬ್ಬಂದಿಗೆ ಹಾಲು ಉತ್ಪನ್ನಗಳಿಗೆ ಕನ್ನಡದ ಬದಲು ಹಿಂದಿ ಪದಗಳನ್ನು ಬಳಸುವಂತೆ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ. ಯಶವಂತಪುರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ "ಗುಜರಾತಿಗಳಿಂದ ಕನ್ನಡಿಗರ KMF ಉಳಿಸಿ" ಮನವಿ ಹಾರ ಹಾಕಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.