Pakistan Drone: ಪಂಜಾಬ್ ಗಡಿಯಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್
ಪಂಜಾಬ್‌ನ ಗುರ್ಡಾಸ್‌ಪುರ್ ಅಂತಾರಾಷ್ಟ್ರೀಯ ಗಡಿರೇಖೆ ಬಳಿ ಇಂದು ಪಾಕಿಸ್ತಾನದ ಡ್ರೋನ್‌ವೊಂದು ಪತ್ತೆಯಾಗಿದೆ. ಈ ಡ್ರೋನ್ ಪಾಕಿಸ್ತಾನದ ಕಡೆಗೆ ಹಾರಾಟ ನಡೆಸುತ್ತಿತ್ತು, ಈ ಸಮಯದಲ್ಲಿ ಗಡಿ ಭದ್ರತಾ ಪಡೆಗಳ ಕಣ್ಣಿಗೆ ಇದು ಬಿದ್ದಿದ್ದು, ಯೋಧರು ಹಲವು ಸುತ್ತು ಗುಂಡು ಹಾರಿಸಿ ಈ ಡ್ರೋನನ್ನು ಹೊಡೆದುರುಳಿಸಿದ್ದಾರೆ.
ಪಂಜಾಬ್‌ನ ಗುರ್ಡಾಸ್‌ಪುರ್ ಅಂತಾರಾಷ್ಟ್ರೀಯ ಗಡಿರೇಖೆ ಬಳಿ ಇಂದು ಪಾಕಿಸ್ತಾನದ ಡ್ರೋನ್‌ವೊಂದು ಪತ್ತೆಯಾಗಿದೆ. ಈ ಡ್ರೋನ್ ಪಾಕಿಸ್ತಾನದ ಕಡೆಗೆ ಹಾರಾಟ ನಡೆಸುತ್ತಿತ್ತು, ಈ ಸಮಯದಲ್ಲಿ ಗಡಿ ಭದ್ರತಾ ಪಡೆಗಳ ಕಣ್ಣಿಗೆ ಇದು ಬಿದ್ದಿದ್ದು, ಯೋಧರು ಹಲವು ಸುತ್ತು ಗುಂಡು ಹಾರಿಸಿ ಈ ಡ್ರೋನನ್ನು ಹೊಡೆದುರುಳಿಸಿದ್ದಾರೆ.
ಮುಂಜಾನೆ ಸುಮಾರು 5 ಗಂಟೆ ವೇಳೆಗೆ ಅಂತಾರಾಷ್ಟ್ರೀಯ ಗಡಿ ಬಳಿ ಈ ಡ್ರೋನ್ ಪತ್ತೆಯಾಗಿತ್ತು. ಪಾಕಿಸ್ತಾನವು ಮುಂಜಾನೆ ಹೊತ್ತಿನಲ್ಲಿ ಅಥವಾ ರಾತ್ರಿ ಹೊತ್ತಿನಲ್ಲಿ ಈ ಬೇಹುಗಾರಿಕಾ ಡ್ರೋನ್ ಅನ್ನು ಭಾರತದ ಗಡಿಯೊಳಗೆ ನುಸುಳಿಸಿರುವ ಸಾಧ್ಯತೆಯಿದೆ. ಬಿಎಸ್‌ಎಫ್ ಯೋಧರು ಈ ಡ್ರೋನ್ ಕಡೆಗೆ ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ, ಕೆಳಕ್ಕೆ ಬಿದ್ದ ಡ್ರೋನ್ ದೊರಕಿದೆಯೇ ಇಲ್ಲವೇ ಎನ್ನುವ ಕುರಿತು ಇನ್ನಷ್ಟೇ ಮಾಹಿತಿ ಬರಬೇಕಿದೆ.
ಪಂಜಾಬ್ ಗಡಿಭಾಗದಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಪತ್ತೆಯಾಗುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಈ ಹಿಂದೆ ಇಂತಹ ಡ್ರೋನ್ ಒಳನುಸುಳುವಿಕೆ ಜಮ್ಮುವಿನಲ್ಲಿ ಹೆಚ್ಚಿತ್ತು. ಆದರೆ, ಈಗ ಪಂಜಾಬ್ ಗಡಿಭಾಗದಲ್ಲಿ ಇಂತಹ ಚಟುವಟಿಕೆಗಳು ಹೆಚ್ಚಾಗಿವೆ.
ಬಿಎಸ್‌ಎಫ್ ಪ್ರಕಾರ ಈ ವರ್ಷ ಸುಮಾರು 107 ಡ್ರೋನ್‌ಗಳು ಗಡಿಯಲ್ಲಿ ಪತ್ತೆಯಾಗಿದೆ. ಕಳೆದ ವರ್ಷ ಒಟಡ್ಟು 97 ಡ್ರೋನ್‌ಗಳು ಪತ್ತೆಯಾಗಿದ್ದವು. ಕಳೆದ ವರ್ಷ ಅಂತಾರಾಷ್ಟ್ರೀಯ ಗಡಿರೇಖೆಯಲ್ಲಿ ಪತ್ತೆಯಾದ 97 ಡ್ರೋನ್‌ಗಳಲ್ಲಿ 31 ಡ್ರೋನ್‌ಗಳು ಜಮ್ಮುವಿನಲ್ಲಿ, 64 ಡ್ರೋನ್‌ಗಳು ಪಂಜಾಬ್‌ನಲ್ಲಿ ಪತ್ತೆಯಾಗಿದ್ದವು.
2022ರ ಜುಲೈವರೆಗೆ ಪತ್ತೆಯಾದ 107 ಡ್ರೋನ್‌ಗಳಲ್ಲಿ 14 ಡ್ರೋನ್‌ಗಳು ಜಮ್ಮುವಿನಲ್ಲಿ ಮತ್ತು 93 ಡ್ರೋನ್‌ಗಳು ಪಂಜಾಬ್ ಸೆಕ್ಟರ್‌ನಲ್ಲಿ ಪತ್ತೆಯಾಗಿವೆ.
"ಬಹುತೇಕ ಈ ಡ್ರೋನ್‌ಗಳು ಪಾಕಿಸ್ತಾನದಿಂದ ಬರುತ್ತವೆ. ಹೆಚ್ಚಿನ ಡ್ರೋನ್‌ಗಳಲ್ಲಿ ಮಾದಕ ಪದಾರ್ಥಗಳು, ಶಸ್ತ್ರಾಸ್ತ್ರಗಳು, ಬಾಂಬ್‌ಗಳು ಮತ್ತು ಅಮ್ಯುನೇಷನ್‌ಗಳನ್ನು ಸಾಗಿಸಲಾಗುತ್ತಿದೆʼʼ ಎಂದು ಬಿಎಸ್‌ಎಫ್ ಮಾಹಿತಿ ನೀಡಿದೆ.
ಗಡಿಯಲ್ಲಿ ಡ್ರೋನ್ ಹೊಡೆದುರುಳಿಸುವ ವಿಶೇಷ ಪಡೆಗಳು ಕಾರ್ಯನಿರ್ವಹಿಸುತ್ತವೆ. ಈ ತಂಡದ ಜತೆಗೆ ಗಡಿ ಗಸ್ತು ವಿಭಾಗವು ಆಕಾಶದಲ್ಲಿ ಯಾವುದಾದರೂ ಸಂಶಯಸ್ಪದ ಕದಲುವಿಕೆಯ ಮೇಲೆ ನಿಗಾ ಇರಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಡ್ರೋನ್‌ಗಳಲ್ಲಿ ನಾರ್ಕೊಟಿಕ್ಸ್ ಇತ್ಯಾದಿ ಮಾದಕ ವಸ್ತುಗಳ ಸಾಗಾಟ ನಡೆಸಲಾಗುತ್ತದೆ ಎಂದು ಬಿಎಸ್‌ಎಫ್ ಮಾಹಿತಿ ನೀಡಿದೆ.
ಪಂಜಾಬ್ ಮತ್ತು ಪಾಕಿಸ್ತಾನದ ಗಡಿಯು ಸುಮಾರು 553 ಕಿ.ಮೀ. ಇದ್ದು, ಜಮ್ಮು-ಪಾಕಿಸ್ತಾನ ಗಡಿಯು 198 ಕಿ.ಮೀ. ಇದೆ. ಈ ಗಡಿಯನ್ನು ಭಾರತದ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಕಾವಲು ಕಾಯುತ್ತಿದೆ. ಇಷ್ಟೊಂದು ವಿಶಾಲ ವ್ಯಾಪ್ತಿಯಲ್ಲಿ ಡ್ರೋನ್‌ಗಳು ಹಾರಾಟ ನಡೆಸುವಾಗ ಅವುಗಳನ್ನು ತಕ್ಷಣ ಗುರುತಿಸಿ ಹೊಡೆದುರುಳಿಸುವ ವ್ಯವಸ್ಥೆ ಗಡಿಯಲ್ಲಿಲ್ಲವೆಂದು ಬಿಎಸ್‌ಎಫ್ ಮಾಹಿತಿ ನೀಡಿದೆ. ಗಡಿ ಕಾಯುತ್ತಿರುವ ಯೋಧರೇ ಆಕಾಶದಲ್ಲಿ ಇಂತಹ ಡ್ರೋನ್‌ಗಳ ಚಲನವಲನ ಗುರುತಿಸುತ್ತಾರೆ.
"ನಾವು ಕೇವಲ ನೆಲದ ಮೇಲೆ ಮಾತ್ರವಲ್ಲ, ಆಕಾಶದತ್ತಲೂ ನಾವು ನಿಗಾ ವಹಿಸುರತ್ತೇವೆ. ಗುರುತಿಸಲಾಗದ ಯುಎವಿಗಳನ್ನು ಹೊಡೆದುರುಳಿಸಲು ಬಿಎಸ್‌ಎಫ್ ಪಡೆಯು ವಿಶೇಷ ತರಬೇತಿ ಪಡೆದಿದೆ. ಕೆಲವೊಮ್ಮೆ ಡ್ರೋನ್‌ಗಳು ತುಂಬಾ ಎತ್ತರದಲ್ಲಿ ಹಾರುತ್ತವೆ. ಇಂತಹ ಸಂದರ್ಭದಲ್ಲಿ ಅವುಗಳ ಶಬ್ದವನ್ನು ಅಂದಾಜು ಮಾಡಿ ಪತ್ತೆಹಚ್ಚಲಾಗುತ್ತದೆʼʼ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಿಭಾಗ