Pariksha Pe Charcha 2023: ಇಂದು ಪರೀಕ್ಷಾ ಪೇ ಚರ್ಚಾ, ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ, ನೇರ ಪ್ರಸಾರ ವೀಕ್ಷಿಸಿ
Pariksha Pe Charcha 2023:ಪರೀಕ್ಷಾ ಪೇ ಚರ್ಚಾ (PPC 2023)ಗೆ ಈ ಬಾರಿ 38 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಶಿಕ್ಷಣ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ ಸುಮಾರು 20 ಲಕ್ಷ ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ. ಎನ್‌ಸಿಇಆರ್‌ಟಿಯು ಈ ಪ್ರಶ್ನೆಗಳನ್ನು ವಿವಿಧ ವಿಷಯಗಳಿಗೆ ತಕ್ಕಂತೆ ಶಾರ್ಟ್‌ಲಿಸ್ಟ್ ಮಾಡಿದೆ.
ನವದೆಹಲಿ: ಕೇಂದ್ರ ಸರಕಾರವು ಇಂದು ಪರೀಕ್ಷಾ ಪೇ ಚರ್ಚಾವನ್ನು(Pariksha Pe Charcha 2023) ಆಯೋಜಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕಿಯರು ಮತ್ತು ಪೋಷಕರ ಜತೆ ನೇರ ಸಂವಾದ ನಡೆಸಲಿದ್ದಾರೆ. ದೆಹಲಿಯ ಟಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಯಲಿದೆ. ಹಿಂದೂಸ್ತಾನ್ ಟೈಮ್ಸ್ ಕನ್ನಡ ವೆಬ್‌ನಲ್ಲಿಯೂ ಈ ಕಾರ್ಯಕ್ರಮದ ನೇರ ಪ್ರಸಾರದ ಲಿಂಕ್‌ಗಳನ್ನು ಪ್ರಕಟಲಿಸಲಿದ್ದೇವೆ.
ಇದೀಗ ಬಂದ ಅಪ್‌ಡೇಟ್
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಆರಂಭವಾಗಿದ್ದು, ನೇರ ಪ್ರಸಾರವನ್ನು ಈ ಕೆಳಗೆ ನೀಡಲಾಗಿದೆ
.
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಅಮೂಲ್ಯ ಸಲಹೆಗಳನ್ನು ನೀಡಲಿದ್ದಾರೆ. ಪರೀಕ್ಷಾ ಒತ್ತಡ ನಿಭಾಯಿಸುವುದು ಹೇಗೆ? ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಇದರೊಂದಿಗೆ ಶಿಕ್ಷಣ ಮತ್ತು ಕರಿಯರ್‌ಗೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
ಪರೀಕ್ಷಾ ಪೇ ಚರ್ಚಾ (PPC 2023)ಗೆ ಈ ಬಾರಿ 38 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಶಿಕ್ಷಣ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ ಸುಮಾರು 20 ಲಕ್ಷ ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ. ಎನ್‌ಸಿಇಆರ್‌ಟಿಯು ಈ ಪ್ರಶ್ನೆಗಳನ್ನು ವಿವಿಧ ವಿಷಯಗಳಿಗೆ ತಕ್ಕಂತೆ ಶಾರ್ಟ್‌ಲಿಸ್ಟ್ ಮಾಡಿದೆ.
ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕೆ ನೋಂದಣಿ ಮಾಡಿರುವವರಲ್ಲಿ16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯ ಮಂಡಳಿಗಳವರಾಗಿದ್ದಾರೆ. ಸುಮಾರು 155 ದೇಶಗಳಿಂದ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚು ಹೆಸರು ಈ ವರ್ಷ ನೋಂದಣಿಯಾಗಿದೆ.
"ಮಕ್ಕಳು ಪರೀಕ್ಷೆಯ ಒತ್ತಡದಿಂದ ಹೊರ ಬಂದು ಆಸಕ್ತಿಯಿಂದ, ಖುಷಿಯಿಂದ ಪರೀಕ್ಷೆ ಬರೆಯಲು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಡೆದುಕೊಳ್ಳಬೇಕು" ಎಂದು ರಾಜ್ಯದ ವಿದ್ಯಾರ್ಥಿಗಳಿಗೆ ಬಿ.ಸಿ. ನಾಗೇಶ್ ಸಲಹೆ ನೀಡಿದ್ದಾರೆ.
ಆನ್‌ಲೈನ್ ಮೂಲಕ, ಪತ್ರಗಳ ಮೂಲಕ ಮಕ್ಕಳು, ಪಾಲಕರು ಕೇಳಿರುವ ಪ್ರಶ್ನೆಗಳಿಗೆ ಪ್ರಧಾನಿಯವರು ಉತ್ತರ ನೀಡುತ್ತಾರೆ. ಮಕ್ಕಳು ಧೈರ್ಯದಿಂದ, ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಬರೆಯಲು ನೀಡುವ ಸಲಹೆ, ಸೂಚನೆಗಳು ಮಕ್ಕಳಿಗೆ ಉಪಯುಕ್ತವಾಗಲಿವೆ.
ಪರೀಕ್ಷೆಯ ಕುರಿತು ಮಕ್ಕಳು ಮಾತ್ರವಲ್ಲದೇ, ಪಾಲಕರು, ಶಿಕ್ಷಕರು ಕೂಡ ಆತಂಕಕ್ಕೆ ಒಳಗಾಗುತ್ತಾರೆ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಆತಂಕ ಹೆಚ್ಚಾಗುತ್ತಲೇ ಹೋಗುತ್ತದೆ. ಹೀಗಾಗಿ, ಚೆನ್ನಾಗಿ ಓದಿಕೊಂಡಿರುವ ಮಕ್ಕಳು ಕೂಡ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯಲು ವಿಫಲರಾಗುತ್ತಾರೆ. ಪಾಲಕರು ಕೂಡ ತಮ್ಮ ಮಕ್ಕಳ ಮೇಲೆ ಒತ್ತಡ ಹೇರುವ ಕಾರಣ ಆತಂಕ, ಒತ್ತಡಕ್ಕೆ ಒಳಗಾಗುತ್ತಾರೆ. ಇಂತಹ ಸಮಸ್ಯೆಗಳಿಂದ ಹೊರ ಬಂದು ಮಕ್ಕಳು ಖುಷಿಯಿಂದ ಪರೀಕ್ಷೆ ಬರೆಯುವುದು ಹೇಗೆ ಎಂಬ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ.
ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮಾತ್ರವಲ್ಲದೆ ಎಲ್ಲರೂ ಈ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವನ್ನು ವೀಕ್ಷಿಸಬಹುದು. ಟೀವಿಯಲ್ಲಿ ನೋಡುವುದಾದರೆ ದೂರದರ್ಶನ ಚಾನೆಲ್‌ನಲ್ಲಿ ಈ ಕಾರ್ಯಕ್ರಮ ವೀಕ್ಷಿಸಬಹುದು. ಶಿಕ್ಷಣ ಸಚಿವಾಲಯ, ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಸಾರ ಭಾರತಿ ಸುದ್ದಿ ಸೇವೆಗಳ ಟ್ವಿಟರ್ ಹ್ಯಾಂಡಲ್‌ಗಳಲ್ಲಯೂ ನೇರ ಪ್ರಸಾರದ ಲಿಂಕ್ ದೊರಕಲಿದೆ. ಇದೇ ರೀತಿ, ಫೇಸ್‌ಬುಕ್, ಯೂಟ್ಯೂಬ್‌ಗಳಲ್ಲಿಯೂ ವೀಕ್ಷಿಸಬಹುದು. education.gov.in ವೆಬ್‌ಸೈಟ್‌ನಲ್ಲಿಯೂ ನೇರ ಪ್ರಸಾರ ವೀಕ್ಷಿಸಬಹುದು.