ಕನ್ನಡ ಸುದ್ದಿ  /  Nation And-world  /  Parliament 5 Days Special Session Starts From Today 8 Bills And Session In New Building National News In Kannada Rmy

Parliament Special Session: ಇಂದಿನಿಂದ 5 ದಿನಗಳ ಸಂಸತ್ ವಿಶೇಷ ಕಲಾಪ; 8 ಮಸೂದೆಗಳ ಅಂಗೀಕಾರಕ್ಕೆ ಸಿದ್ಧತೆ ಸೇರಿ 10 ಅಂಶಗಳು ಇವೇ

ಕೇಂದ್ರ ಎನ್‌ಡಿಎ ಸರ್ಕಾರ ಇಂದಿನಿಂದ ಐದು ದಿನಗಳ ವಿಶೇಷ ಸಂಸತ್ ಅಧಿವೇಶ ಕರೆದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ತೆರೆದಿಡಲು ಸಿದ್ಧತೆಗಳನ್ನು ಮಾಡಿಕೊಂಡಿದೆ. ಹೀಗಾಗಿ ಕಲಾಪದಲ್ಲಿ ಗದ್ದಲ ಕೋಲಾಹಲವಾಗುವ ಸಾಧ್ಯತೆ ಇದೆ.

ಕೇಂದ್ರ ಎನ್‌ಡಿಎ ಸರ್ಕಾರ ಇಂದಿನಿಂದ ಐದು ದಿನಗಳ ವಿಶೇಷ ಸಂಸತ್ ಅಧಿವೇಶವನ್ನು ನಡೆಸುತ್ತಿದೆ.
ಕೇಂದ್ರ ಎನ್‌ಡಿಎ ಸರ್ಕಾರ ಇಂದಿನಿಂದ ಐದು ದಿನಗಳ ವಿಶೇಷ ಸಂಸತ್ ಅಧಿವೇಶವನ್ನು ನಡೆಸುತ್ತಿದೆ.

ದೆಹಲಿ: ಇಂದಿನಿಂದ (ಸೆಪ್ಟೆಂಬರ್ 18, ಸೋಮವಾರ) ಐದು ದಿನಗಳ ಸಂಸತ್ತಿನ ವಿಶೇಷ ಅಧಿವೇಶನ (Parliament Special Session) ನಡೆಯಲಿದ್ದು, 8 ಮಸೂದೆಗಳನ್ನು ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಪಟ್ಟಿ ಮಾಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಸಂಸತ್ತಿನ 75 ವರ್ಷಗಳ ಪಯಣ ಮತ್ತು ಹೊಸ ಕಟ್ಟಡಕ್ಕೆ ಸದನದ ನಡಾವಳಿಗಳ ಕುರಿತು ಚರ್ಚೆಯನ್ನು ನೋಡುವ ಅಧಿವೇಶನದ ಸಮಯದಲ್ಲಿ ಸರ್ಕಾರವು ಏನಾದರೂ ಹೊಸ ವಿಷಯವನ್ನು ಕಲಾಪದ ಮುಂದಿಡಲಿದೆಯೇ ಎಂಬುದು ತೀವ್ರ ಕುತೂಹಲದ ನಡುವೆ ಲೋಕಸಭೆ ಮತ್ತು ರಾಜ್ಯಸಭೆಗಳ ಕಲಾಪಗಳು ನಡೆಯಲಿವೆ.

ಸಂಸತ್ ವಿಶೇಷದ ಅಧಿವೇಶನದ ಅಜೆಂಡಾದಲ್ಲಿ ಏನಿದೆ?

1. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಕಲಾಪದ ಬಗ್ಗೆ ಮಾಹಿತಿ ನೀಡಿದ್ದು, ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಒಟ್ಟು 8 ಮಸೂದೆಗಳನ್ನು ಪಟ್ಟಿ ಮಾಡಿರುವುದಾಗಿ ತಿಳಿಸಿದ್ದಾರೆ.

2. ಭಾನುವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಹಿರಿಯ ನಾಗರಿಕರ ಕಲ್ಯಾಣ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆದೇಶಕ್ಕೆ ಸಂಬಂಧಿಸಿದ ಮೂರು ಮಸೂದೆಗಳನ್ನು ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ ಎಂದು ನಾಯಕರಿಗೆ ಮನವರಿಕೆ ಮಾಡಲಾಗಿದೆ.

3. ಈ ಹಿಂದೆ ಪಟ್ಟಿ ಮಾಡಲಾದ ಮಸೂದೆಗಳಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಾತಿ ಕುರಿತ ಮಸೂದೆಗಳು ಸೇರಿವೆ. ಕಳೆದ ಮಳೆಗಾಲದ ಅಧಿವೇಶನದಲ್ಲಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರ ಸೇವಾ ಷರತ್ತುಗಳನ್ನು ಕ್ಯಾಬಿನೆಟ್ ಕಾರ್ಯದರ್ಶಿಗೆ ಸರಿಸಮಾನವಾಗಿ ಇರಿಸಲು ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಲ್ಲ ಎಂದು ಹೇಳಿದ್ದ ವಿಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಇದೀಗ ಮತ್ತೆ ಈ ಮಸೂದೆ ಚರ್ಚೆಗೆ ಕಾರಣವಾಗುತ್ತಿದೆ.

4. ಯಾವುದೇ ಸಂಭವನೀಯ ಹೊಸ ಶಾಸನದ ಬಗ್ಗೆ ಯಾವುದೇ ಅಧಿಕೃತ ಪದಗಳಿಲ್ಲದಿದ್ದರೂ, ಕೆಲವು ವರದಿಗಳು ಕೆಲವು ಮಸೂದೆಗಳನ್ನು ಒಳಗೊಂಡಿವೆ ಎಂದು ಹೇಳಲಾಗಿದ್ದು, ರದ್ದುಗೊಳಿಸುವಿಕೆ ಮತ್ತು ತಿದ್ದುಪಡಿ ಮಸೂದೆ, 2022, ಅಂಚೆ ಕಚೇರಿ ಬಿಲ್ 2023, ವಕೀಲರ (ತಿದ್ದುಪಡಿ) ಮಸೂದೆ 2023, ದಿ ಪ್ರೆಸ್ ಮತ್ತು ನಿಯಕಾಲಿಕೆಗಳ ನೋಂದಣಿ ಮಸೂದೆ 2023, ಹಿರಿಯ ನಾಗರಿಕರ ಕಲ್ಯಾಣ ಮಸೂದೆ 2023 ಮತ್ತು ಸಂವಿಧಾನ (ಎಸ್‌ಸಿ/ಎಸ್‌ಟಿ) ಆದೇಶ 2023 ಮಸೂದೆಗಳು ಈ ಪಟ್ಟಿಯಲ್ಲಿದೆ.

5. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಂತಹ ಚುನಾಯಿತ ಶಾಸಕಾಂಗಗಳಲ್ಲಿ ಮಹಿಳಾ ಕೋಟಾವನ್ನು ಖಾತ್ರಿಪಡಿಸುವ ಮಸೂದೆಗೆ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳು ಒತ್ತಾಯಿಸಿವೆ. ಈ ಬೇಡಿಕೆಯ ಬಗ್ಗೆ ಸರ್ಕಾರದ ನಿಲುವಿನ ಬಗ್ಗೆ ಕುರಿತ ಪ್ರಶ್ನೆಗೆ ಪ್ರಹ್ಲಾದ್ ಜೋಶಿ, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

6. ಲೋಕಸಭೆಯ ಬುಲೆಟಿನ್ ಪ್ರಕಾರ, ಈ ಕಾರ್ಯವು ಭಾರತದ ಸಂಸತ್ತಿನ ಶ್ರೀಮಂತ ಪರಂಪರೆಯನ್ನು ಸ್ಮರಿಸುತ್ತದೆ. 20247ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನಿರ್ಧರಿಸುತ್ತದೆ.

7. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಮತ್ತು ಇಂಡಿಯಾವನ್ನು ಭಾರತ ಎಂದು ಮರುನಾಮಕರಣ ಮಾಡುವ ನಿರ್ಣಯಗಳನ್ನು ಒಳಗೊಂಡಿವೆ ಎಂದು ಹೇಳಲಾಗುತ್ತಿದೆ. ಆದರೆ ಇಂಡಿಯಾವನ್ನು ಭಾರತ ಎಂದು ಮರುನಾಮಕರಣ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಕೆಲ ಸಚಿವರು ಸ್ಪಷ್ಟನೆ ನೀಡಿದ್ದರು.

8. ಲೋಕಸಭೆ ಕಾರ್ಯಾಲಯ ಹೊರಡಿಸಿರುವ ಬುಲೆಟಿನ್ ಪ್ರಕಾರ, ಮಂಗಳವಾರ ಬೆಳಗ್ಗೆ 9.30ಕ್ಕೆ ಎಲ್ಲಾ ಸಂಸದರವನ್ನು ಗ್ರೂಪ್ ಫೋಟೋಗಾಗಿ ಕರೆಯಲಾಗಿದೆ.

9. ಹಳೆಯ ಕಟ್ಟಡದ ಒಳ ಆವರಣದಲ್ಲಿ ಗುಂಪು ಛಾಯಚಿತ್ರಕ್ಕಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

10. ಬುಧವಾರದಿಂದ (ಸೆಪ್ಟೆಂಬರ್ 20) ಸಂಸತ್ ನೂತನ ಕಟ್ಟಡದಲ್ಲಿ ಸರ್ಕಾರದ ಶಾಸಕಾಂಗ ವ್ಯವಹಾರಗಳು ಆರಂಭವಾಗಲಿವೆ. ಮಂಗಳವಾರ ಬೆಳಗ್ಗೆ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸದಸ್ಯರನ್ನು ಗ್ರೂಪ್ ಫೋಟೋಗಾಗಿ ಕರೆಯಲಾಗಿದೆ.

ಉಪ ರಾಷ್ಟ್ರಪತಿ ಮತ್ತು ರಾಜ್ಯಸಭೆ ಸಭಾಪತಿ ಜಗದೀಪ್ ಧಂಖರ್ ಅವರು ಭಾನುವಾರ ಬೆಳಗ್ಗೆ ಹೊಸ ಸಂಸತ್ ಭವನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ದಾರೆ. ಪ್ರಸ್ತುತ ಇರುವ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಸಮಾರಂಭದ ನಂತರ ಅಧಿವೇಶನವು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ಸಚಿವ ಜೋಶಿ ಮಾಹಿತಿ ನೀಡಿದ್ದಾರೆ.