ಬಾಂಬ್ ಬೆದರಿಕೆ; ದೆಹಲಿ-ವಾರಣಾಸಿ ನಡುವಿನ ಇಂಡಿಗೊ ವಿಮಾನದ ರೆಕ್ಕೆಯ ಮೇಲೆ ನಡೆದು ಹೋದ ಪ್ರಯಾಣಿಕರು; ವಿಡಿಯೊ ವೈರಲ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬಾಂಬ್ ಬೆದರಿಕೆ; ದೆಹಲಿ-ವಾರಣಾಸಿ ನಡುವಿನ ಇಂಡಿಗೊ ವಿಮಾನದ ರೆಕ್ಕೆಯ ಮೇಲೆ ನಡೆದು ಹೋದ ಪ್ರಯಾಣಿಕರು; ವಿಡಿಯೊ ವೈರಲ್

ಬಾಂಬ್ ಬೆದರಿಕೆ; ದೆಹಲಿ-ವಾರಣಾಸಿ ನಡುವಿನ ಇಂಡಿಗೊ ವಿಮಾನದ ರೆಕ್ಕೆಯ ಮೇಲೆ ನಡೆದು ಹೋದ ಪ್ರಯಾಣಿಕರು; ವಿಡಿಯೊ ವೈರಲ್

ಇಂಡಿಗೊ ವಿಮಾನಕ್ಕೆ ಬಾಂಬ್ ಬೆದರಿ ಹಿನ್ನೆಲೆಯಲ್ಲಿ ವಿಮಾನದಲ್ಲಿದ್ದ ಎಲ್ಲಾ ಸಿಬ್ಬಂದಿ, 176 ಪ್ರಯಾಣಿಕರನ್ನ ಸ್ಥಳಾಂತರಿಸಿ ಶೋಧ ಕಾರ್ಯ ನಡೆಸಲಾಗಿದೆ. ತುರ್ತು ಬಾಗಿಲಿನಿಂದ ಹೊರ ಬಂದ ಪ್ರಯಾಣಿಕರು ವಿಮಾನದ ರೆಕ್ಕೆಯ ಮೇಲೆ ನಡೆದು ಹೋಗಿರುವ ವಿಡಿಯೊ ವೈರಲ್ ಆಗಿದೆ.

ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ದೆಹಲಿ-ವಾರಣಾಸಿ ನಡುವಿನ ಇಂಡಿಗೊ ವಿಮಾನದ ತುರ್ತು ಬಾಗಿನಿಲಿಂದ ಹೊರ ಬಂದ ಪ್ರಯಾಣಿಕರು ವಿಮಾನದ ರೆಕ್ಕೆಯ ಮೇಲೆ ನಡೆದು ಹೋಗಿರುವ ವಿಡಿಯೊ ವೈರಲ್ ಆಗಿದೆ.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ದೆಹಲಿ-ವಾರಣಾಸಿ ನಡುವಿನ ಇಂಡಿಗೊ ವಿಮಾನದ ತುರ್ತು ಬಾಗಿನಿಲಿಂದ ಹೊರ ಬಂದ ಪ್ರಯಾಣಿಕರು ವಿಮಾನದ ರೆಕ್ಕೆಯ ಮೇಲೆ ನಡೆದು ಹೋಗಿರುವ ವಿಡಿಯೊ ವೈರಲ್ ಆಗಿದೆ. (X/@ANI)

ದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ (ಮೇ 28) ಬೆಳಿಗ್ಗೆ ದೆಹಲಿಯಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೊ ವಿಮಾನಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಪ್ರಯಾಣಿಕರನ್ನು ತಲ್ಲಣಗೊಳಿಸಿದೆ. ಕೂಡಲೇ ಅಧಿಕಾಗಳು ವಿಮಾನದಲ್ಲಿದ್ದ ಎಲ್ಲಾ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಹೊರ ಕಳುಹಿಸಿ ತೀವ್ರ ತಪಾಸಣೆ ನಡೆಸಿದ್ದಾರೆ. ಬಳಿಕ ಇದು ಹುಸಿ ಬಾಂಬ್ ಅನ್ನೋದು ಗೊತ್ತಾಗಿದೆ.

ಇನ್ನು ಈ ನಾಯಕೀಯ ಬೆಳವಣಿಗೆಯಲ್ಲಿ ಪ್ರಯಾಣಿಕರು ವಿಮಾನದಿಂದ ಹೊರಗಡೆ ಬಂದಿದ್ದಾರೆ. ಅರದಲ್ಲೂ ಕೆಲವು ಪ್ರಯಾಣಿಕರು ತುರ್ತು ಬಾಗಿಲಿನಿಂದ ಹೊರ ಬಂದು ವಿಮಾನದ ರೆಕ್ಕಿಯ ಮೇಲೆ ನಡೆದು ಹೋಗಿದ್ದಾರೆ. ಈ ವಿಡಿಯೊ ಸಖತ್ ವೈರಲ್ ಆಗಿದೆ.

ತುರ್ತು ಸ್ಲೈಡ್‌ಗಳನ್ನು ಬಳಸಿಕೊಂಡು ಪೈಲಟ್ ವಿಮಾನದಿಂದ ಜಾರುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ವಯಸ್ಸಾದ ಮಹಿಳಾ ಪ್ರಯಾಣಿಕರು ಮತ್ತು ಇಂಡಿಗೊ ಸಿಬ್ಬಂದಿ ತುರ್ತು ನಿರ್ಗಮನದ ಮೂಲಕ ವಿಮಾನದ ರೆಕ್ಕೆಗೆ ಬರುತ್ತಿರುವುದನ್ನು ಕಾಣಬಹುದು. ಏರ್‌ಹೋಸ್ಟರ್ಸ್ ಪ್ರಯಾಣಿಕರನ್ನು ಮತ್ತೊಂದು ತುರ್ತು ಸ್ಲೈಡ್‌ಗೆ ಕರೆದೊಯ್ಯುವಾಗ ತನ್ನ ಕೈಯನ್ನು ಹಿಡಿದು ರೆಕ್ಕೆಯ ಮೇಲೆ ನಡೆಯಲು ಸಹಾಯ ಮಾಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೊ 6 ಇ 2211 ವಿಮಾನವು ಹೊರಡಲು ಸಿದ್ಧವಾಗುವ ಸ್ವಲ್ಪ ಸಮಯದ ಮೊದಲು ಬಾಂಬ್ ಬೆದರಿಕೆ ಬಂದಿದೆ. ವಿಮಾನದಲ್ಲಿದ್ದ ಎಲ್ಲಾ ಸಿಬ್ಬಂದಿ ಮತ್ತು 176 ಪ್ರಯಾಣಿಕರನ್ನು ಸ್ಥಳಾಂತರಿಸಿ ಶೋಧ ಕಾರ್ಯಾ ನಡೆಸಲಾಗಿತ್ತು.

'ಬಾಂಬ್ @5:30'

ಇಂದು (ಮೇ 28, ಮಂಗಳವಾರ) "ಬೆಳಿಗ್ಗೆ 5 ಗಂಟೆ ಸುಮಾರಿಗೆ, ವಾರಣಾಸಿಗೆ ಹೊರಡಬೇಕಿದ್ದ ಇಂಡಿಗೊ ವಿಮಾನದ ಶೌಚಾಲಯದಲ್ಲಿ "ಬಾಂಬ್ @ 5.30" ಎಂದು ಬರೆದಿರುವ ಕಾಗದದ ಬಗ್ಗೆ ಮಾಹಿತಿ ಬಂದಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಅಧಿಕಾರಿಗಳು ವಿಮಾನದೊಳಗೆ ತೀವ್ರ ಶೋಧ ನಡೆಸಿದ ನಂತರ ಮತ್ತು ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಾರರದ ನಂತರ ಇದನ್ನು ಹುಸಿ ಎಂದು ಪರಿಗಣಿಸಲಾಯಿತು.

ದೆಹಲಿಯಿಂದ ವಾರಣಾಸಿಗೆ 6 ಇ 2211 ವಿಮಾನವನ್ನು ನಿರ್ವಹಿಸಲು ಪರ್ಯಾಯ ವಿಮಾನವನ್ನು ವ್ಯವಸ್ಥೆ ಮಾಡಲಾಗಿದೆ. ಇದು ದೆಹಲಿ ವಿಮಾನ ನಿಲ್ದಾಣದಲ್ಲಿ ನಿರ್ದಿಷ್ಟ ಬಾಂಬ್ ಬೆದರಿಕೆಯಿಂದಾಗಿ ವಿಳಂಬವಾಯಿತು. ಪ್ರಯಾಣಿಕರಿಗೆ ಉಪಹಾರವನ್ನು ಒದಗಿಸಲಾಗಿದೆ. ಬೆಳಿಗ್ಗೆ 11.10ಕ್ಕೆ ವಿಮಾನ ವಾರಣಾಸಿಗೆ ಹೊರಟಿತು. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ" ಎಂದು ಏರ್‌ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಈ ತಿಂಗಳ ಆರಂಭದಲ್ಲಿ ಗುಜರಾತ್‌ನ ವಡೋದರಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಇದೇ ರೀತಿಯ ಬಾಂಬ್ ಹುಸಿ ಬಂದಿತ್ತು. ಆ ಪ್ರಕರಣದಲ್ಲೂ, ಸಿಬ್ಬಂದಿಯೊಬ್ಬರು ಶೌಚಾಲಯದೊಳಗೆ ಉಳಿದಿರುವ ಟಿಶ್ಯೂ ಪೇಪರ್ ಮೇಲೆ "ಬಾಂಬ್" ಎಂಬ ಪದವನ್ನು ಬರೆದಿರುವುದನ್ನು ಕಂಡುಕೊಂಡಿದ್ದರು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.