ಸಿಂಗಾಪುರ ಶಾಲೆಯಲ್ಲಿ ಅಗ್ನಿ ಅನಾಹುತ, ಪವನ್ ಕಲ್ಯಾಣ್ ಪುತ್ರನಿಗೆ ಗಾಯ, ಆಸ್ಪತ್ರೆಯಲ್ಲಿರುವ ಮಾರ್ಕ್ ಶಂಕರ್ ಫೋಟೋ ವೈರಲ್
Pawan Kalyan Son: ಸಿಂಗಾಪುರದ ಬೇಸಿಗೆ ಶಿಬಿರದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕಿರಿಯ ಪುತ್ರ ಮಾರ್ಕ್ ಶಂಕರ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್ ಆಗಿದೆ.

Pawan Kalyan Son: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕಿರಿಯ ಪುತ್ರ ಮಾರ್ಕ್ ಶಂಕರ್ ಸಿಂಗಾಪುರದ ಬೇಸಿಗೆ ಶಿಬಿರದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಮಾರ್ಕ್ ಶಂಕರ್ ಅವರ ಕಾಲು ಮತ್ತು ಕೈಗಳಿಗೆ ಗಾಯಗಳಾಗಿವೆ. ಕಪ್ಪು ಹೊಗೆಯನ್ನು ಉಸಿರಾಡಿದ ಕಾರಣ ಮಾರ್ಕ್ ಶಂಕರ್ ಅಸ್ವಸ್ಥಗೊಂಡಿರುವುದಾಗಿ ವರದಿಯಾಗಿದೆ. ಈ ದುರಂತದ ಸುದ್ದಿ ತಿಳಿದ ಕೂಡಲೇ ಪವನ್ ಕಲ್ಯಾಣ್ ಮತ್ತು ಚಿರಂಜೀವಿ ಸಿಂಗಾಪುರಕ್ಕೆ ತೆರಳಿದರು. ಈ ನಡುವೆ, ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್ ಅವರ ಫೋಟೋ ವೈರಲ್ ಆಗಿದೆ. ಬಾಲಕನ ಕೈಯಲ್ಲಿ ಬ್ಯಾಂಡೇಜ್ ಹಿಡಿದಿರುವ ಫೋಟೋ ವೈರಲ್ ಆಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ತೆಲುಗು ವರದಿ ಮಾಡಿದೆ.
ಸಿಂಗಾಪುರ ಶಾಲೆ ಅಗ್ನಿ ಅನಾಹುತದಲ್ಲಿ ಪವನ್ ಕಲ್ಯಾಣ್ ಪುತ್ರನಿಗೆ ಗಾಯ
ಸಿಂಗಾಪುರ ಶಾಲೆಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಪುತ್ರನಿಗೆ ಗಾಯವಾಗಿದೆ. ಗಾಯಗೊಂಡಿರುವ ಮಾರ್ಕ್ ಶಂಕರ್‌ಗೆ ಅಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾರ್ಕ್ ಶಂಕರ್ ಆರೋಗ್ಯವಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ಪವನ್ ಕಲ್ಯಾಣ್ ಮತ್ತು ಚಿರಂಜೀವಿ ಹೇಳಿದ್ದಾರೆ.
ಮಾರ್ಕ್ ಶಂಕರ್ ಅಗ್ನಿ ಅನಾಹುತದಲ್ಲಿ ತೊಂದರೆಗೀಡಾದ ಸುದ್ದಿ ತಿಳಿದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿ ಪವನ್ ಕಲ್ಯಾಣ್ ಜತೆಗೆ ಮಾತನಾಡಿದರು. ಪವನ್ ಕಲ್ಯಾಣ್‌ಗೆ ಧೈರ್ಯ ತುಂಬಿದರು. ಇದೇ ರೀತಿ ಚಲನಚಿತ್ರರಂಗದವರು, ರಾಜಕಾರಣಿಗಳು ಅನೇಕರು ಕರೆ ಮಾಡಿದ್ದು, ಮಾಡುತ್ತಿದ್ದು ಎಲ್ಲರೂ ಧೈರ್ಯ ತುಂಬಿದರು ಎಂದು ಪವನ್ ಆಪ್ತ ವಲಯ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾಗಿ ವರದಿ ಹೇಳಿದೆ. ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಮಾರ್ಕ್ ಶಂಕರ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಜನಸೇನಾ ಬೆಂಬಲಿಗರು ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ.
ಅಗ್ನಿ ಅನಾಹುತದ ವಿಡಿಯೋ ವೈರಲ್
ಮಾರ್ಕ್ ಶಂಕರ್ ಸಿಂಗಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ರಾತ್ರಿ ಹೈದರಾಬಾದ್‌ನಿಂದ ಸಿಂಗಾಪುರಕ್ಕೆ ತೆರಳಿದ್ದ ಪವನ್ ಕಲ್ಯಾಣ್ ನೇರವಾಗಿ ಆಸ್ಪತ್ರೆಗೆ ತೆರಳಿ ಶಂಕರ್ ಅವರ ಆರೋಗ್ಯ ವಿಚಾರಿಸಿದರು. ಕೈ ಮತ್ತು ಕಾಲುಗಳಿಗೆ ಸುಟ್ಟ ಗಾಯಗಳಾಗಿದ್ದು, ಹೊಗೆಯನ್ನು ಉಸಿರಾಡಿದ್ದರಿಂದ ತುರ್ತು ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಾಲಕನನ್ನು ಈಗ ತುರ್ತು ವಾರ್ಡ್ ನಿಂದ ಮತ್ತೊಂದು ಕೋಣೆಗೆ ಸ್ಥಳಾಂತರಿಸಲಾಗಿದೆ ಎಂದು ಪವನ್ ಕಲ್ಯಾಣ್ ತಿಳಿಸಿದ್ದಾರೆ. ಮಾರ್ಕ್ ಶಂಕರ್ ಅವರ ಶಾಲೆಯಲ್ಲಿ ಸಂಭವಿಸಿದ ಬೆಂಕಿಯ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿವೆ.
ಮಾರ್ಕ್ ಶಂಕರ್ ಫೋಟೋ ವೈರಲ್
ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕಿರಿಯ ಪುತ್ರ ಮಾರ್ಕ್ ಶಂಕರ್ ಶೀಘ್ರ ಗುಣಮುಖರಾಗಲಿ ಎಂದು ಜನಸೇನಾ ಕಾರ್ಯಕರ್ತರು ಪೀತಾಪುರಂನ 10 ನೇ ಶಕ್ತಿಪೀಠಂನ ಪಾದಗಯ ಕ್ಷೇತ್ರ ದೇವಾಲಯದ ಆವರಣದಲ್ಲಿ ಮೃತ್ಯುಂಜಯ ಹೋಮ ನಡೆಸಿದರು. ಈ ನಡುವೆ, ಮಾರ್ಕ್ ಶಂಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್ ಆಗಿದೆ.
ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜನಸೇನಾ ಮುಖಂಡರು, ಕಾರ್ಪೊರೇಟರ್‌ಗಳು, ಕಾರ್ಯಕರ್ತರು ಮತ್ತು ಮಹಿಳೆಯರು ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾರ್ಕ್ ಶಂಕರ್ ಅವರ ಆರೋಗ್ಯದಲ್ಲಿ ಶೀಘ್ರ ಚೇತರಿಕೆ ಕಾಣಲಿ ಎಂದು ವೆಂಕೋಜಿಪಾಲಂನ ಶ್ರೀ ವೀರ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಜನಸೇನಾ ಮುಖಂಡರು ಮತ್ತು ಪವನ್ ಕಲ್ಯಾಣ್ ಅಭಿಮಾನಿಗಳು ಮಾರ್ಕ್ ಶಂಕರ್ ಶೀಘ್ರ ಗುಣಮುಖರಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
