ಕನ್ನಡ ಸುದ್ದಿ  /  Nation And-world  /  Pepsi Has A New Logo And Is Trending In Social Media

Pepsi has a new logo: ಹದಿನೈದು ವರ್ಷದ ಬಳಿಕ ಬದಲಾಗುತ್ತಿದೆ ಪೆಪ್ಸಿ ಲೋಗೋ; ಸೋಷಿಯಲ್‌ ಮೀಡಿಯಾದಲ್ಲಿ ಲೋಗೋ ಟ್ರೆಂಡ್‌

Pepsi has a new logo: ಪೆಪ್ಸಿ ಉತ್ತರ ಅಮೆರಿಕದಲ್ಲಿ ಹೊಸ ಲೋಗೋವನ್ನು ಪರಿಚಯಿಸಿದೆ. ಪ್ರಪಂಚದಾದ್ಯಂತ ಈ ಲೋಗೋ 2024ರ ವೇಳೆಗೆ ಚಾಲ್ತಿಗೆ ಬರಲಿದೆ ಎಂದು ಕಂಪನಿಯ ಹೇಳಿಕೆ ತಿಳಿಸಿದ್ದಾಗಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಪೆಪ್ಸಿಯ ಹೊಸ ಲೋಗೋ ಮತ್ತು ಈಗ ಚಾಲ್ತಿಯಲ್ಲಿರುವ ಲೋಗೋ
ಪೆಪ್ಸಿಯ ಹೊಸ ಲೋಗೋ ಮತ್ತು ಈಗ ಚಾಲ್ತಿಯಲ್ಲಿರುವ ಲೋಗೋ

ಸಾಫ್ಟ್‌ ಡ್ರಿಂಕ್‌ ಮಾರುಕಟ್ಟೆಯಲ್ಲಿರುವ ಜನಪ್ರಿಯ ಪೇಯ ಪೆಪ್ಸಿ ತನ್ನ ಲಾಂಛನವನ್ನು ಬದಲಾಯಿಸಲು ಮುಂದಾಗಿದೆ. 125ನೇ ವರ್ಷಾಚರಣೆಗೆ ಅಣಿಯಾಗುತ್ತಿರುವ ಪೆಪ್ಸಿ ಉತ್ತರ ಅಮೆರಿಕದಲ್ಲಿ ಹೊಸ ಲೋಗೋವನ್ನು ಪರಿಚಯಿಸಿದೆ. ಪ್ರಪಂಚದಾದ್ಯಂತ ಈ ಲೋಗೋ 2024ರ ವೇಳೆಗೆ ಚಾಲ್ತಿಗೆ ಬರಲಿದೆ ಎಂದು ಕಂಪನಿಯ ಹೇಳಿಕೆ ತಿಳಿಸಿದ್ದಾಗಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಪೆಪ್ಸಿ ಲೋಗೋ ಹೇಗಿದೆ ನೆನಪಿದೆಯೇ ಎಂದು ಯಾರಾದರೂ ಕೇಳಿದರೆ, ನೀವು ಏನು ಬರೆಯಬಲ್ಲಿರಿ. ಒಂದು ವೃತ್ತ. ಅದರಲ್ಲಿ ಕೆಂಪು ಬಿಳಿ ಮತ್ತು ನೀಲಿ ಬಣ್ಣದ ಅಡ್ಡಪಟ್ಟಿ. ಬಹುಶಃ ಪೆಪ್ಸಿ ಎಂಬ ಪದವನ್ನು ಸೇರಿಸಬಹುದು.

ಪೆಪ್ಸಿ ಕಂಪನಿ ಇಂತಹ ಕಸರತ್ತುಗಳನ್ನು ಮಾಡುತ್ತಿರುತ್ತದೆ. ಬಹುತೇಕ ಗ್ರಾಹಕರು ಲೋಗೋ ನಡುವೆ ಪೆಪ್ಸಿ ಪದವನ್ನು ಬರೆದೇ ಬರೆಯುತ್ತಾರೆ. ಆದರೆ ಈಗ ಇರುವ ಲೋಗೋ ಹಾಗಿಲ್ಲ. ಲಾಂಛನದ ಹೊರಗಿದೆ ಬ್ರ್ಯಾಂಡ್‌ನ ಹೆಸರು. ಜನಮಾನಸದಲ್ಲಿರುವಂತೆಯೇ ಹೊಸ ಲೋಗೋದಲ್ಲಿ ಮಧ್ಯಭಾಗದಲ್ಲಿ ಪೆಪ್ಸಿ ಪದ ಸೇರಿಕೊಂಡಿದೆ. ಇದು ಶೀಘ್ರವೇ ಪೆಪ್ಸಿ ಟಿನ್‌ಗಳಲ್ಲಿ ರಾರಾಜಿಸಲಿದೆ ಎಂದು ಕಂಪನಿ ಹೇಳಿಕೆ ತಿಳಿಸಿದೆ.

ಪೆಪ್ಸಿ ಕಂಪನಿ ಶುರುವಾಗಿದ್ದು 1898ರಲ್ಲಿ. ಅಂದಿನಿಂದ ಇಂದುವರೆಗೆ ಬ್ರ್ಯಾಂಡ್‌ ತನ್ನ ಲೋಗೋವನ್ನು ಹಲವು ಬಾರಿ ಬದಲಾಯಿಸಿದೆ, ಪರಿಷ್ಕರಿಸಿದೆ. ಈಗ ಇರುವಂತಹ ಲಾಂಛನ 2008ರಲ್ಲಿ ಪರಿಚಯಿಸಿದ್ಧಾಗಿದೆ. 15 ವರ್ಷಗಳ ಬಳಿಕ ಮತ್ತೆ ಲಾಂಛನ ಪರಿಷ್ಕರಣೆ ಮಾಡಿದೆ ಕಂಪನಿ.

ಪೆಪ್ಸಿಯ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಟಾಡ್ ಕಪ್ಲಾನ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹೊಸ ಲೋಗೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು "ಪೆಪ್ಸಿಯ ಹೊಸ ಯುಗಕ್ಕೆ ಸುಸ್ವಾಗತ! ನಮ್ಮ ಹೊಸ ಪೆಪ್ಸಿ ಲೋಗೋ ಮತ್ತು ವಿಷುವಲ್‌ ಐಡೆಂಟಿಟಿಯನ್ನು ಶೇರ್‌ ಮಾಡಿಕೊಳ್ಳಲು ನಾನು ಹೆಮ್ಮೆಪಡುತ್ತೇನೆ. ಅಮೆರಿಕದಲ್ಲಿ ಈ ಅವಧಿಯಲ್ಲೇ ಪರಿಚಯಿಸಲಾಗುತ್ತದೆ" ಎಂದು ಹೇಳಿಕೊಂಡಿದ್ದಾರೆ.

ಪೆಪ್ಸಿಯ ಹೊಸ ನೋಟವು ಉತ್ತರ ಅಮೆರಿಕಾದ ಮಾರುಕಟ್ಟೆಯಲ್ಲಿ ಈ ಶರತ್ಕಾಲದಲ್ಲಿ ಲಭ್ಯವಿರುತ್ತದೆ. 2024 ರ ವೇಳೆಗೆ ವಿಶ್ವದಾದ್ಯಂತ ಲಭ್ಯವಾಗಲಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದರ ನಡುವೆ, ಹೊಸ ಲೋಗೋಕ್ಕೆ ಸಂಬಂಧಿಸಿದ ವಿಡಿಯೋವನ್ನು ಟಾಡ್‌ ಕಪ್ಲಾನ್‌ ಶೇರ್‌ ಮಾಡಿದ್ದಾರೆ.

ಈ ಹೊಸ ಲೋಗೋದ ಮಧ್ಯಭಾಗದಲ್ಲಿ ಪೆಪ್ಸಿ ಪದ ಬಳಸಲಾಗಿದೆ. ಇದು 1990 ರ ಲೋಗೋದಂತೆ ಕಾಣುತ್ತಿದೆ. ಇದು ಜನರ ಮನಸ್ಸಿನಲ್ಲಿ ಅಂಟಿಕೊಂಡಿದೆ ಎಂದು ತೋರುತ್ತದೆ. ಆದ್ದರಿಂದ, ಅಸ್ತಿತ್ವದಲ್ಲಿರುವ ವಿನ್ಯಾಸಕ್ಕೆ ಕನಿಷ್ಠ ವಿಧಾನವನ್ನು ತೆಗೆದುಹಾಕುವ ಮೂಲಕ, ಪೆಪ್ಸಿ ಅದನ್ನು ಬಲವಾದ, ದಪ್ಪ ಮತ್ತು ಆತ್ಮವಿಶ್ವಾಸವನ್ನು ಇರಿಸಿಕೊಳ್ಳಲು ನಿರ್ಧರಿಸಿತು. ಅದೇ ರೀತಿ, ಪೆಪ್ಸಿಕೋದ ಮುಖ್ಯ ವಿನ್ಯಾಸ ಅಧಿಕಾರಿ ಮೌರೊ ಪೊರ್ಸಿನಿ "ನಾವು ಅಂತಹ ಒಳನೋಟವನ್ನು ನಿರ್ಲಕ್ಷಿಸಲಾಗಲಿಲ್ಲ... ಅದನ್ನು ತಿರಸ್ಕರಿಸುವ ಬದಲು ನಾವು ಅದನ್ನು ಸ್ವೀಕರಿಸಲು ನಿರ್ಧರಿಸಿದ್ದೇವೆ" ಎಂದು ಹೇಳಿದ್ದಾಗಿ ಸಿಎನ್‌ಎನ್‌ ವರದಿ ಹೇಳಿದೆ.

ಗಮನಿಸಬಹುದಾದ ಸುದ್ದಿಗಳು

ಪ್ಯಾನ್‌ - ಆಧಾರ್‌ ಜೋಡಣೆ ಅವಧಿ 3 ತಿಂಗಳು ವಿಸ್ತರಣೆ; ಜೂ.30 ಈಗ ಹೊಸ ಡೆಡ್‌ಲೈನ್‌

PAN-Aadhaar linking: ಕಾಯಿದೆಯ ಪ್ರಕಾರ 2023ರ ಏಪ್ರಿಲ್‌ 1 ರಿಂದ ಕೆಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈಗ ಈ ಗಡುವನ್ನು ಅಂದರೆ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವ ಉದ್ದೇಶದ ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point