UPI ATM Explainer: ಯುಪಿಐ ಎಟಿಎಂ ಬಳಸಿ ಕ್ಯಾಶ್ ವಿತ್‌ಡ್ರಾ ಮಾಡುವುದು ಹೀಗೆ, ವಿಡಿಯೋ ಇಲ್ಲಿದೆ ನೋಡಿ
UPI ATM: ಹಣ ವಿತ್‌ಡ್ರಾ ಮಾಡುವುದಕ್ಕೆ ಇನ್ನು ಕಾರ್ಡ್‌ಗಳು ಬೇಕಾಗಿಲ್ಲ. ಸ್ಮಾರ್ಟ್‌ಫೋನ್ ಮತ್ತು ಯುಪಿಐ ಆಪ್ ಇನ್‌ಸ್ಟಾಲ್ ಆಗಿದ್ದರೆ ಸಾಕು. ಯುಪಿಐ ಆಧಾರಿತ ಸೇವೆ ಬಳಸುವ ಆಪ್ಶನ್ ಅನ್ನು ಸಕ್ರಿಯಗೊಳಿಸಿರಬೇಕು. ಇಷ್ಟಿದ್ದರೆ ಸಾಕು ಯುಪಿಐ ಎಟಿಎಂ ಮೂಲಕ ಹಣ ವಿತ್ ಡ್ರಾ ಮಾಡಬಹುದು. ಹೇಗೆ ಎಂಬುದರ ವಿವರ ಇಲ್ಲಿದೆ.
ಹೌದು ಅಂಥದ್ದೊಂದು ಅವಕಾಶವನ್ನು ಯುಪಿಐ ಎಟಿಎಂ ನೀಡಿದೆ. ಯುಪಿಐ-ಎಟಿಎಂ ಕಾರ್ಯನಿರ್ವಹಣೆಯನ್ನು ಬೆಂಬಲಿಸುವ ಅಥವಾ ಆ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಯಾವುದೇ ಎಟಿಎಂನಲ್ಲಿ ಗ್ರಾಹಕರು ಕಾರ್ಡ್ ಇಲ್ಲದೆಯೇ ನಗದು ಹಣ ವಿತ್‌ಡ್ರಾಮಾಡಬಹುದಾಗಿದೆ. ಸಹಜವಾಗಿಯೇ ಇನ್ನು ಕ್ಯಾಶ್ ವಿತ್‌ಡ್ರಾ ಮಾಡುವುದಕ್ಕೆ ನಿಮ್ಮ ಕೈಯಲ್ಲಿ ಸ್ಮಾರ್ಟ್‌ಫೋನ್ ಒಂದು ಇದ್ದರೆ ಸಾಕು, ಡೆಬಿಟ್, ಕ್ರೆಡಿಟ್ ಅಥವಾ ಎಟಿಎಂ ಕಾರ್ಡ್ ಇರಲೇಬೇಕು ಎಂದೇನೂ ಇಲ್ಲ.
ಯುಪಿಐ ಎಟಿಎಂನಿಂದ ಹಣ ವಿತ್‌ಡ್ರಾ ಮಾಡುವುದು ಹೇಗೆ, ಅನುಸರಿಸಬೇಕಾದ ಪ್ರಕ್ರಿಯೆ ಹೀಗಿದೆ ನೋಡಿ
ಎಟಿಎಂನಲ್ಲಿ ಯುಪಿಐ ಕ್ಯಾಶ್ ವಿತ್‌ಡ್ರಾವಲ್ ಆಪ್ಶನ್ ಆಯ್ಕೆ ಮಾಡಬೇಕು. ನಂತರ ವಿತ್‌ಡ್ರಾ ಮಾಡಬೇಕಾದ ಹಣದ ಮೊತ್ತ ನಮೂದಿಸಬೇಕು. ಅದಾಗಿ ಎಟಿಎಂ ಪರದೆ ಮೇಲೆ ಮೂಡುವ ಕ್ಯೂಆರ್ ಕೋಡ್ ಅನ್ನು ಯಾವುದಾದರೂ ಯುಪಿಐ ಆಪ್ ಮೂಲಕ ಸ್ಕ್ಯಾನ್ ಮಾಡಬೇಕು. ಬಳಿಕ ಯುಪಿಐ ಪಿನ್ ನಮೂದಿಸಿದರೆ ಸಾಕು. ಹಣ ಎಟಿಎಂ ಮಶೀನ್‌ನಲ್ಲಿ ಹೊರಬರುತ್ತದೆ.
ಯುಪಿಐ-ಎಟಿಎಂನ ಪ್ರಮುಖ ಅಂಶಗಳು
ಪೂರಕವಾಗಿ ಕೆಲಸ ಮಾಡಬಲ್ಲದು. ಅದೇ ರೀತಿ ಕಾರ್ಡ್ ಬಳಸದೇ ವಹಿವಾಟು ನಡೆಸಬಹುದು.
ಪ್ರತಿ ವಹಿವಾಟಿಗೆ 10,000 ರೂಪಾಯಿ ಮಿತಿ ಇದೆ. ಇದು ಈಗಾಗಲೇ ಯುಪಿಐ ಬಳಕೆಗೆ ಇರುವ ದಿನದ ಮಿತಿಯಲ್ಲೇ ಅಡಕವಾಗಿದೆ. ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡಲು ಇನ್ನು ಕಾರ್ಡ್ ತೆಗೆದುಕೊಂಡು ಹೋಗಬೇಕಾದ ಅಗತ್ಯ ಇಲ್ಲ.
ಯುಪಿಐ ಆಪ್ ಬಳಸಿಕೊಂಡು ಬೇರೆ ಬೇರೆ ಬ್ಯಾಂಕುಗಳ ಖಾತೆಯಿಂದ ಹಣ ವಿತ್ ಡ್ರಾ ಮಾಡುವುದು ಸಾಧ್ಯವಿದೆ.
ಯುಪಿಐ ಎಟಿಎಂ ಬಳಸಿ ಕ್ಯಾಶ್ ವಿತ್‌ಡ್ರಾ ಮಾಡುವುದು ಹೀಗೆ, ಇಲ್ಲಿದೆ ವಿಡಿಯೋ
ಕೇಂದ್ರ ಸಚಿವ ಪಿಯೂಶ್ ಗೋಯೆಲ್ ಅವರು ಎಕ್ಸ್‌ನಲ್ಲಿ ಫಿನ್‌ಟೆಕ್ ಇನ್‌ಫ್ಲುಯೆನ್ಸರ್ ರವಿಸುತಾಂಜನಿ ಅವರು ಯುಪಿಐ ಬಳಸಿಕೊಂಡು ಎಟಿಎಂನಿಂದ ಹಣ ವಿತ್ ಡ್ರಾ ಮಾಡುವುದು ಹೇಗೆ ಎಂಬುದರ ಡೆಮೋ ಕೊಟ್ಟ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಯುಪಿಐ ಎಟಿಎಂ ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದೆ. ಎನ್‌ಸಿಆರ್ ಕಾರ್ಪೊರೇಶನ್ ಇದನ್ನು ಸ್ಥಾಪಿಸಿದೆ.
ಬಳಕೆದಾರರು ಈಗ ವಾಯ್ಸ್ ಚಾಲಿತ ಯುಪಿಐ ಪಾವತಿ ಬಳಸಬಹುದು
ಜನಪ್ರಿಯ ಪಾವತಿಗಳ ವೇದಿಕೆ ಯುಪಿಐ, ಯುಪಿಐನಲ್ಲಿ ಕ್ರೆಡಿಟ್ ಲೈನ್, ಯುಪಿಐ ಲೈಟ್ ಎಕ್ಸ್ ಮತ್ತು ಟ್ಯಾಪ್ ಆಂಡ್ ಪೇ, ಹಲೋ ಯುಪಿಐ ಮತ್ತು ಸಂಭಾಷಣಾ ಬಿಲ್ ಪಾವತಿಗಳನ್ನು ಬುಧವಾರ ಪ್ರಾರಂಭಿಸಿತು. ಇದಕ್ಕೆ ಎನ್‌ಪಿಸಿಐ ಚಾಲನೆ ನೀಡಿತು.
ಆಗಸ್ಟ್ ತಿಂಗಳಲ್ಲಿ ಯುಪಿಐ ಪಾವತಿ 10 ಬಿಲಿಯನ್‌ಗೂ ಅಧಿಕ
ಯುಪಿಐ ಪಾವತಿ ಕಳೆದ ತಿಂಗಳು ಆಗಸ್ಟ್‌ನಲ್ಲಿ 10 ಬಿಲಿಯನ್‌ಗಿಂತಲೂ ಹೆಚ್ಚು ಪಾವತಿ ಮಾಡಿ ದಾಖಲೆ ನಿರ್ಮಿಸಿದೆ.