ಮ್ಯೂಚುವಲ್ ಫಂಡ್‌ vs ಸ್ಥಿರ ಠೇವಣಿ; ಎಲ್ಲಿ ಹೂಡಿಕೆ ಮಾಡಬೇಕು, ತಿಳಿದುಕೊಳ್ಳಬೇಕಾದ ಹೂಡಿಕೆ ಪ್ರವೃತ್ತಿಯ ಬದಲಾವಣೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮ್ಯೂಚುವಲ್ ಫಂಡ್‌ Vs ಸ್ಥಿರ ಠೇವಣಿ; ಎಲ್ಲಿ ಹೂಡಿಕೆ ಮಾಡಬೇಕು, ತಿಳಿದುಕೊಳ್ಳಬೇಕಾದ ಹೂಡಿಕೆ ಪ್ರವೃತ್ತಿಯ ಬದಲಾವಣೆ

ಮ್ಯೂಚುವಲ್ ಫಂಡ್‌ vs ಸ್ಥಿರ ಠೇವಣಿ; ಎಲ್ಲಿ ಹೂಡಿಕೆ ಮಾಡಬೇಕು, ತಿಳಿದುಕೊಳ್ಳಬೇಕಾದ ಹೂಡಿಕೆ ಪ್ರವೃತ್ತಿಯ ಬದಲಾವಣೆ

ಮ್ಯೂಚುವಲ್ ಫಂಡ್‌ vs ಸ್ಥಿರ ಠೇವಣಿ: ಈ ಎರಡು ಹಣಕಾಸು ಉತ್ಪನ್ನಗಳ ಪೈಕಿ ಎಲ್ಲಿ ಹೂಡಿಕೆ ಮಾಡಬೇಕು. ಯಾರಿಗೆ ಯಾವುದು ಸೂಕ್ತ, ಹಣಕಾಸಿನ ರಿಸ್ಕ್‌ ತೆಗೆದುಕೊಳ್ಳುವುದಾದರೆ ಎಷ್ಟರಮಟ್ಟಿಗೆ ತೆಗೆದುಕೊಳ್ಳಬಹುದು, ತಿಳಿದುಕೊಳ್ಳಬೇಕಾದ ಹೂಡಿಕೆ ಪ್ರವೃತ್ತಿಯ ಬದಲಾವಣೆಗಳಿವು.

ಮ್ಯೂಚುವಲ್ ಫಂಡ್‌ vs ಸ್ಥಿರ ಠೇವಣಿ; ಎಲ್ಲಿ  ಹೂಡಿಕೆ ಮಾಡಬೇಕು, ಹೂಡಿಕೆಯ ಪ್ರವೃತ್ತಿ ಬದಲಾವಣೆಯಾಗಿದೆ. ಈ ಕುರಿತು ಒಳನೋಟ ನೀಡುವ ವಿವರ ಇಲ್ಲಿದೆ.
ಮ್ಯೂಚುವಲ್ ಫಂಡ್‌ vs ಸ್ಥಿರ ಠೇವಣಿ; ಎಲ್ಲಿ ಹೂಡಿಕೆ ಮಾಡಬೇಕು, ಹೂಡಿಕೆಯ ಪ್ರವೃತ್ತಿ ಬದಲಾವಣೆಯಾಗಿದೆ. ಈ ಕುರಿತು ಒಳನೋಟ ನೀಡುವ ವಿವರ ಇಲ್ಲಿದೆ.

ಖಾತರಿಯ ಆದಾಯ ಮತ್ತು ಬಂಡವಾಳ ಸಂರಕ್ಷಣೆಯನ್ನು ಬಯಸುತ್ತಿರುವಾಗ, ಸ್ಥಿರ ಠೇವಣಿಗಳು ನಿಮ್ಮ ಆಯ್ಕೆಯಾಗಿರಬಹುದು. ಆದರೆ ನೀವು ದೀರ್ಘಾವಧಿಯ ದೃಷ್ಟಿಕೋನವನ್ನು ಹೊಂದಿದ್ದರೆ ಮತ್ತು ಹೆಚ್ಚಿನ ಆದಾಯವನ್ನು ಬಯಸುತ್ತಿರುವಾಗ ಕೆಲವು ಚಂಚಲ ಮನಸ್ಥಿತಿಯಿಂದ ಹೊರಬಂದರೆ, ಹಣಕಾಸಿನ ಸಾಮರ್ಥ್ಯವನ್ನು ಹೆಚ್ಚಿಸಲು ಮ್ಯೂಚುವಲ್ ಫಂಡ್‌ಗಳು ನೆರವಾಗಬಹುದು.

ಹಣವನ್ನು ನೋಡುವ ದೃಷ್ಟಿಕೋನದ ಮೇಲೆ ಉಳಿತಾಯ ಮತ್ತು ಹೂಡಿಕೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಗ್ರಾಹಕರಲ್ಲಿ ಬದಲಾಗುತ್ತಿರುವ ದೃಷ್ಟಿಕೋನದ ಪರಿಣಾಮ ಬ್ಯಾಂಕುಗಳಲ್ಲಿ ಹಣದ ಲಭ್ಯತೆ ಕಡಿಮೆಯಾಗುತ್ತಿದೆ. ಬಹುತೇಕರು ಸಾಂಪ್ರದಾಯಿಕ ಉಳಿತಾಯ ಮಾದರಿಗಿಂತ ಮ್ಯೂಚುವಲ್ ಫಂಡ್‌ ಕಡೆಗೆ ಗಮನ ಹರಿಸತೊಡಗಿದ್ದಾರೆ. ಗ್ರಾಹಕರ ನಡವಳಿಕೆಯಲ್ಲಿನ ಈ ಬದಲಾವಣೆಯ ಕಡೆಗೊಂದು ಕಿರುನೋಟ ಬೀರುವಲ್ಲಿ ಬ್ಯಾಂಕ್ ಬಜಾರ್ ಸಿಇಒ ಆದಿಲ್ ಶೆಟ್ಟಿ ಸಹಕಾರ ನೀಡಿದ್ಧಾರೆ.

ಮ್ಯೂಚುವಲ್ ಫಂಡ್‌ vs ಸ್ಥಿರ ಠೇವಣಿ, ಬದಲಾಗುತ್ತಿದೆ ಗ್ರಾಹಕ ಮನಸ್ಥಿತಿ

“ನಾವು ಗ್ರಾಹಕರ ಮನಸ್ಥಿತಿಯಲ್ಲಿ ಆಗುತ್ತಿರು ಬದಲಾವಣೆಯನ್ನು ನೋಡುತ್ತಿದ್ದೇವೆ. ಉಳಿತಾಯ ಮನಸ್ಥಿತಿಯಿಂದ, ಗ್ರಾಹಕರು ಹೂಡಿಕೆಯ ಮನಸ್ಥಿತಿಗೆ ಸಾಗುತ್ತಿದ್ದಾರೆ. ಈ ಬದಲಾವಣೆಯ ಪರಿಣಾಮವೆಂದರೆ ಹೆಚ್ಚು ಹೆಚ್ಚು ಗ್ರಾಹಕರು ಸ್ಥಿರ ಠೇವಣಿಗಳಂತಹ ಉಳಿತಾಯ ಉತ್ಪನ್ನಗಳ ಬದಲು ನೇರವಾಗಿ ಮ್ಯೂಚುವಲ್ ಫಂಡ್ ಗಳಿಗೆ ಹೋಗುತ್ತಿದ್ದಾರೆ. ಅನೇಕ ಉದ್ಯಮದ ನಾಯಕರು ಇತ್ತೀಚೆಗೆ ಎತ್ತಿ ತೋರಿಸಿರುವಂತೆ ಇದು ಬ್ಯಾಂಕುಗಳಲ್ಲಿ ಹಣದ ಲಭ್ಯತೆಯನ್ನು ಕಡಿಮೆ ಮಾಡುತ್ತಿದೆ” ಎಂಬುದರ ಕಡೆಗೆ ಬ್ಯಾಂಕ್ ಬಜಾರ್ ಸಿಇಒ ಆದಿಲ್ ಶೆಟ್ಟಿ ಗಮನಸೆಳೆದರು.

"ಇದರ ಪರಿಣಾಮ, ಹೆಚ್ಚಿನ ಮತ್ತು ದೀರ್ಘಾವಧಿಯ ದರಗಳು ಫ್ಲಾಟ್ ಆಗಿ ಉಳಿಯುವುದರಿಂದ 1 ವರ್ಷದ ಬಡ್ಡಿದರ ಅಂದರೆ ಅಲ್ಪಾವಧಿಯ ಠೇವಣಿಗಳ ಬೇಡಿಕೆ ಹೆಚ್ಚಾಗುತ್ತದೆ ಎಂಬ ನಿರೀಕ್ಷೆಯಿದೆ. ಗ್ರಾಹಕರು, ವಿಶೇಷವಾಗಿ ಹಿರಿಯ ನಾಗರಿಕರು ಉತ್ತಮ ಬಡ್ಡಿ ಗಳಿಕೆಗಾಗಿ ಈ ಅಲ್ಪಾವಧಿಯ ದರ ಹೆಚ್ಚಳವನ್ನು ಪಡೆಯಬಹುದು" ಎಂದು ಬ್ಯಾಂಕ್ ಬಜಾರ್ ಸಿಇಒ ಆದಿಲ್ ಶೆಟ್ಟಿ ವಿವರಿಸಿದರು.

ಮ್ಯೂಚುವಲ್ ಫಂಡ್‌ ದೀರ್ಘಾವಧಿಯ ಹೂಡಿಕೆ ಉತ್ಪನ್ನ

ಮ್ಯೂಚುವಲ್ ಫಂಡ್‌ ದೀರ್ಘಾವಧಿಯ ಹೂಡಿಕೆಯ ಉತ್ಪನ್ನ. ಇದು ಸ್ಥಿರ ಠೇವಣಿಗೆ ಹೋಲಿಸಿದರೆ ಹೆಚ್ಚಿನ ಆದಾಯ ನೀಡುತ್ತದೆ. ಅದೇ ರೀತಿ ಹೆಚ್ಚಿನ ಅಪಾಯವೂ ಇದೆ.

ಈ ಬಗ್ಗೆ ಬ್ಯಾಂಕ್‌ಬಜಾರ್ ಸಿಇಒ ಆದಿಲ್ ಶೆಟ್ಟಿ ಅವರು ಬಿಜಿನೆಸ್ ಟುಡೇ ಜೊತೆ ಮಾತನಾಡುತ್ತ, “ಸ್ಥಿರ ಠೇವಣಿಗಳು ಕಡಿಮೆ-ಅಪಾಯದ ಉಳಿತಾಯದ ಆಯ್ಕೆಯಾಗಿದ್ದು ಅದು ಸ್ಥಿರವಾದ ಆದಾಯದೊಂದಿಗೆ ನಿಮ್ಮ ಪೋರ್ಟ್‌ಫೋಲಿಯೊಗೆ ಸ್ಥಿರತೆಯನ್ನು ನೀಡುತ್ತದೆ. ನಿವೃತ್ತಿಯನ್ನು ಸಮೀಪಿಸುತ್ತಿರುವ ಮತ್ತು ಬಂಡವಾಳ ಸಂರಕ್ಷಣೆ ಮತ್ತು ಸ್ಥಿರ ಆದಾಯವನ್ನು ಹುಡುಕುತ್ತಿರುವ ಹೂಡಿಕೆದಾರರಿಗೆ ಸ್ಥಿರ ಠೇವಣಿ ಸೂಕ್ತವಾಗಿದೆ.

ಸ್ಥಿರ ಠೇವಣಿಗಳಿಂದ ಲಭ್ಯವಾಗುವ ಆದಾಯವು ಸ್ಥಿರವಾಗಿದ್ದರೂ, ಹಣಕಾಸಿನ ಗುರಿಗಳನ್ನು ಪೂರೈಸಲು ಸಾಕಾಗುವುದಿಲ್ಲ. ಮತ್ತೊಂದೆಡೆ, ಮ್ಯೂಚುವಲ್ ಫಂಡ್‌ಗಳು ಹಣದುಬ್ಬರ ಮೀರಿಸುವ ರಿಟರ್ನ್‌ಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿವೆ. ಅದು ನಿಮ್ಮ ಗುರಿಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂಬುದನ್ನು ಆದಿಲ್ ಶೆಟ್ಟಿ ವಿವರಿಸುತ್ತಾರೆ.

ಆರನೇ ಬಾರಿಗೆ ರೆಪೋ ದರ ಯಥಾಸ್ಥಿತಿ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಲಿಕ್ವಿಡಿಟಿ ಕೊರತೆ ಇಳಿಕೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು ಫೆಬ್ರವರಿ 8 ರಂದು, ಜಾಗತಿಕ ಅನಿಶ್ಚಿತತೆಗಳು ಮತ್ತು ಚಿಲ್ಲರೆ ಹಣದುಬ್ಬರವನ್ನು ಶೇಕಡಾ 4 ಕ್ಕೆ ಇಳಿಸುವ ಉದ್ದೇಶವನ್ನು ಉಲ್ಲೇಖಿಸಿ ಸತತ ಆರನೇ ಬಾರಿಗೆ ರೆಪೊ ದರವನ್ನು ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿತು.

ತನ್ನ "ಹೊಂದಾಣಿಕೆಯನ್ನು ಹಿಂತೆಗೆದುಕೊಳ್ಳುವ" ಹಣಕಾಸು ನೀತಿ ವಿಧಾನದ ಭಾಗವಾಗಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಣಕಾಸಿನ ಲಭ್ಯತೆಯನ್ನು ಆರ್‌ಬಿಐ ಕಾಪಾಡಿಕೊಳ್ಳುತ್ತಿದೆ.

"ನಗದು ಲಭ್ಯವಿರುವ ವ್ಯವಸ್ಥೆಯಲ್ಲಿ ಅಗತ್ಯ ಮೊತ್ತವನ್ನು ಒದಗಿಸುವಲ್ಲಿ ತ್ವರಿತ ಮತ್ತು ಹೊಂದಿಕೊಳ್ಳುವ ಆರ್‌ಬಿಐ ಭರವಸೆಯು ಕಳೆದ ತ್ರೈಮಾಸಿಕದಲ್ಲಿ ಸಾಲದ ಬೆಳವಣಿಗೆಯಲ್ಲಿ ಕಂಡುಬರುವ ಏರಿಕೆ ಮತ್ತು ಚುನಾವಣೆಯ ಸಮಯದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿಯ ಹೆಚ್ಚುವರಿ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಸಕಾರಾತ್ಮಕ ಸಂಕೇತವಾಗಿದೆ" ಎಂದು ರಿಸರ್ಜೆಂಟ್ ಇಂಡಿಯಾದ ಎಂಡಿ ಜ್ಯೋತಿ ಪ್ರಕಾಶ್ ಗಾಡಿಯಾ ಹೇಳಿದ್ದಾರೆ.

ಆರ್‌ಬಿಐನ ಅಂಕಿಅಂಶ ಪ್ರಕಾರ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಲಿಕ್ವಿಡಿಟಿ ಕೊರತೆ ಗಮನಾರ್ಹವಾಗಿ ಕಡಿಮೆಯಾಗಿದೆ. ಇದು ಜನವರಿ 24 ರಂದು ಸರಿಸುಮಾರು 3.46 ಲಕ್ಷ ಕೋಟಿ ರೂಪಾಯಿ ಇದ್ದುದು ಫೆಬ್ರವರಿ 4 ರಂದು ಸುಮಾರು 1.40 ಲಕ್ಷ ಕೋಟಿ ರೂ.ಗೆ ಇಳಿದಿದೆ.

ಹಕ್ಕುತ್ಯಾಗ: ಮೇಲಿನ ಅಭಿಪ್ರಾಯಗಳು ಮತ್ತು ಶಿಫಾರಸುಗಳು ವಿಶ್ಲೇಷಕರ ವೈಯಕ್ತಿಕ. ಹಿಂದೂಸ್ತಾನ್ ಟೈಮ್ಸ್ ಕನ್ನಡದ್ದಲ್ಲ. ಯಾವುದೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಪ್ರಮಾಣೀಕೃತ ತಜ್ಞರೊಂದಿಗೆ ಸಮಾಲೋಚಿಸುವುದು ಒಳಿತು.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.