PPF account for kids: ಪೋಷಕರು ಮಕ್ಕಳ ಹೆಸರಲ್ಲಿ ಪಿಪಿಎಫ್ ಖಾತೆ ತೆರೆದರೆ ಲಾಭವೇನು? ಪ್ರಾವಿಡೆಂಟ್ ಫಂಡ್‌ನ ಈ ಅವಕಾಶ ಬಳಸಿಕೊಳ್ಳಿ
PPF account for kids: ಉದ್ಯೋಗಿಗಳು ಪಿಪಿಎಫ್ ಖಾತೆ ಹೊಂದಿರುವುದು ಸಾಮಾನ್ಯ. ತೆರಿಗೆ ಉಳಿತಾಯ ಮಾಡಲು ಮತ್ತು ಮಕ್ಕಳ ಹೆಸರಲ್ಲಿ ಉಳಿತಾಯ ಮಾಡಲು ತಮ್ಮ ಮಕ್ಕಳ ಹೆಸರಿನಲ್ಲಿ ಪಿಪಿಎಫ್ ಖಾತೆ ತೆರೆಯಬಹುದೆಂದು ನಿಮಗೆ ಗೊತ್ತಿದೆಯೇ? ಇಲ್ಲಿದೆ ಈ ಕುರಿತು ವಿವರ.

Public Provident Fund: ಬಹುತೇಕ ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಖಾತೆ ತೆರೆಯುತ್ತಾರೆ. ಆದರೆ, ಕೆಲವು ವರ್ಷಗಳಲ್ಲಿ ಅದನ್ನು ಮರೆತುಬಿಡುತ್ತಾರೆ. ಮಕ್ಕಳ ಹೆಸರಿನಲ್ಲಿ ಪಿಪಿಎಫ್ ಖಾತೆ ತೆರೆಯುವುದು ಒಳ್ಳೆಯ ಐಡಿಯಾ. ಆದರೆ, ಮಗುವಿಗೆ ಅದರಿಂದ ಲಾಭ ಸಿಗಬೇಕೆಂದರೆ ಸ್ಥಿರವಾಗಿ ಹೂಡಿಕೆ ಮಾಡುತ್ತಿರಬೇಕು.
“ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ 2019 ರ ಪ್ಯಾರಾಗ್ರಾಫ್ 3 ರ ಪ್ರಕಾರ ಯಾವುದೇ ಪೋಷಕರು ಅಥವಾ ಕಾನೂನು ಪಾಲಕರು ಅಪ್ರಾಪ್ತ ಮಗುವಿನ ಹೆಸರಿನಲ್ಲಿ ಸಾರ್ವಜನಿಕ ಭವಿಷ್ಯ ನಿಧಿ ಖಾತೆಯನ್ನು ತೆರೆಯಬಹುದು. ಒಬ್ಬ ವ್ಯಕ್ತಿಯ ಹೆಸರಿನಲ್ಲಿಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆಗಳನ್ನು ತೆರೆಯಲು ಸಾಧ್ಯವಿಲ್ಲ ಎನ್ನುವುದನ್ನು ಗಮನಿಸಬೇಕು. ಪಿಪಿಎಫ್ ಯೋಜನೆ, 2019 ರ ಅಡಿಯಲ್ಲಿ ಅಪ್ರಾಪ್ತ ಮಗುವಿನ ಪಿಪಿಎಫ್ ಖಾತೆಗೆ ಯಾವುದೇ ಪೋಷಕರು ಅಥವಾ ಇಬ್ಬರೂ ಪೋಷಕರು ಕೊಡುಗೆ ನೀಡುವುದಕ್ಕೆ ಯಾವುದೇ ನಿರ್ಬಂಧವಿಲ್ಲ" ಎಂದು ತೆರಿಗೆ ಮತ್ತು ಹೂಡಿಕೆ ತಜ್ಞರಾದ ಬಲ್ವಂತ್ ಜೈನ್ ಹೇಳಿದ್ದಾರೆ.
ಅಪ್ರಾಪ್ತರ ಹೆಸರಿನಲ್ಲಿ ಪಿಪಿಎಫ್ ಖಾತೆ ತೆರೆಯುವುದರಿಂದ ಪ್ರಯೋಜನಗಳು
1. ಲಾಕ್ ಇನ್ ಅವಧಿ
ಪಿಪಿಎಫ್ ಖಾತೆಯ ಒಂದು ಪ್ರಯೋಜನವೆಂದರೆ ಅದಕ್ಕೆ 15 ವರ್ಷಗಳ ಲಾಕ್ ಇನ್ ಅವಧಿ ಇರುತ್ತದೆ. ಮಗು ದೊಡ್ಡವನಾಗಿ/ಳಾಗಿ 18 ವರ್ಷವಾದ ಬಳಿಕ ಅವರು ಆ ಫಂಡ್ ಅನ್ನು ಮುಚ್ಚುವುದೋ ಅಥವಾ ವಿಸ್ತರಿಸುವುದೋ ಎಂದು ನಿರ್ಧಾರ ಕೈಗೊಳ್ಳಬಹುದು. "18 ವರ್ಷವಾದ ಬಳಿಕ ನಿಮ್ಮ ಮಕ್ಕಳು ತಮ್ಮ ಪಿಪಿಎಫ್ ಖಾತೆಯನ್ನು ಮುಂದುವರೆಸುವುದೋ ಅಥವಾ ಮುಕ್ತಾಯಗೊಳಿಸುವುದೋ ಎಂದು ನಿರ್ಧರಿಸಬಹುದು. ತುಸು ದೊಡ್ಡದಾದ ಬಳಿಕ ಮಕ್ಕಳು ಪಿಪಿಎಫ್ ಖಾತೆ ತೆರೆದರೆ ಲಾಕ್ ಇನ್ ಮಾಡದೆ ಇರುವುದು ಒಳ್ಳೆಯದು" ಎಂದು ಮೈ ಫಂಡ್ ಬಜಾರ್‌ನ ಸಿಇಒ ಮತ್ತು ಸ್ಥಾಪಕ ವಿನಿತ್ ಖಂಡರೆ ಹೇಳಿದ್ದಾರೆ.
2. ತೆರಿಗೆ ಪ್ರಯೋಜನಗಳು
ಮನೆಯ ಒಬ್ಬ ಸದಸ್ಯರಿಗೆ ಒಂದು ಖಾತೆಯಂತೆ ಕುಟುಂಬ ಹಲವು ಪಿಪಿಎಫ್ ಖಾತೆಗಳನ್ನು ತೆರೆಯಬಹುದು. ಹೀಗಿದ್ದರೂ, ಪ್ರತಿಯೊಬ್ಬ ವ್ಯಕ್ತಿ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್‌ನಲ್ಲಿ ಒಂದು ಪಿಪಿಎಫ್ ಖಾತೆಯಲ್ಲಿ ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ 1.5 ಲಕ್ಷ ಹೂಡಿಕೆ ಮಾಡಬಹುದು.
3. ಹಣ ಬೆಳೆಯುತ್ತದೆ
ಕಡಿಮೆ ರಿಸ್ಕ್ ಇರುವ ಪಿಪಿಎಫ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಲಾಭವೂ ದೊರಕುತ್ತದೆ.
4) ಪಿಪಿಎಫ್ ಬಡ್ಡಿದರ ಇತಿಹಾಸ
ಮಕ್ಕಳ ಬೆಳೆದಂತೆ ಪಿಪಿಎಫ್‌ನ ಬಡ್ಡಿದರ ಹೆಚ್ಚಾಗುತ್ತದೆ ಎಂದು ಹೇಳಲಾಗದು. ಈಗ ಪಿಪಿಎಫ್ ಬಡ್ಡಿದರ ಶೇಕಡ 7ರ ಆಸುಪಾಸಿನಲ್ಲಿದೆ. ಮೊದಲು ಇದು ಶೇಕಡ 12ರಷ್ಟಿತ್ತು. ಮಕ್ಕಳು ಬೆಳೆದ ಬಳಿಕ ಈ ಬಡ್ಡಿದರ ಇನ್ನಷ್ಟು ಕಡಿಮೆಯಾಗಬಹುದು. "ಪಿಪಿಎಫ್‌ನಲ್ಲಿ ಹೂಡಿಕೆ ಮಾಡಲು ತಡ ಮಾಡುವುದು ಬೇಡ. ಮಕ್ಕಳು ಚಿಕ್ಕವರಿದ್ದಾಗಲೇ ಹೂಡಿಕೆ ಮಾಡಿದರೆ ಹೆಚ್ಚಿನ ಪ್ರಯೋಜನ ಪಡೆಯಬಹುದು" ಎಂಮದು ಪಂಕಜ್ ಮಥಾಲ್ ಹೇಳಿದ್ದಾರೆ. ಅವರು ಆಪ್ಟಿಮಾದ ಎಂಡಿ ಮತ್ತು ಸಿಇಒ.
ಏಪ್ರಿಲ್ 1 1986ರಿಂದ ಮಾರ್ಚ್ 31 1988ರವರೆಗೆ ಮತ್ತು ಏಪ್ರಿಲ್ 1 1988ರಿಂದ ಜನವರಿ 2000ರವರೆಗೆ ಪಿಪಿಎಫ್ ಬಡ್ಡಿದರ ಶೇಕಡ 12 ಇತ್ತು. ಕಳೆದ ಹತ್ತು ವರ್ಷಗಳಲ್ಲಿ ಪಿಪಿಎಫ್ ಬಡ್ಡಿದರ ಶೇಕಡ 7.1ರಿಂದ ಶೇಕಡ 8.8ರ ನಡುವೆ ಇದೆ.
ಈಗಿನ ಪಿಪಿಎಫ್ ಬಡ್ಡಿದರ
ಈಗ ಪಿಪಿಎಫ್ ಬಡ್ಡಿದರ ಶೇಕಡ 7.1 ಇದೆ.
