PFI Explained: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂದರೇನು? ಪಿಎಫ್‌ಐ ಮೇಲೆ ಅನುಮಾನ ಏಕೆ?
ಪಿಎಫ್‌ಐ, ಎಸ್‌ಎಸ್‌ಎಫ್‌ಐ ಹೀಗೆ ಹಲವು ಸಂಘಟನೆಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೆಲವು ದಿನಗಳಿಂದ ಪಿಎಫ್‌ಐ ಸಂಘಟನೆ (popular front of india) ಮೇಲೆ ಇಡಿ, ಎನ್‌ಐಎ ದಾಳಿ ನಡೆಸುತ್ತಿವೆ. ಹೀಗಾಗಿ, ಪಿಎಫ್‌ಐ ಎಂದರೇನು ಎಂದು ತಿಳಿದುಕೊಳ್ಳೋಣ.

ದೇಶದಲ್ಲಿ ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳಾದ ವಿಎಚ್‌ಪಿ, ಭಜರಂಗದಳ ಇತ್ಯಾದಿ ಸಂಘಟನೆಗಳು ಇವೆ. ಈ ಸಂಘಟನೆಗಳು ದೇಶರಕ್ಷಣೆ ವಿಷಯ, ರಾಜಕೀಯ ಗೆಲುವು, ಹಿಂದೂಗಳ ಸಂಘಟನೆ ಇತ್ಯಾದಿ ವಿಷಯಗಳಲ್ಲಿ ಮುಂಚೂಣಿಯಲ್ಲಿರುತ್ತವೆ. ಇಂತಹದ್ದೇ ಸಂಘಟನೆಗಳು ಮುಸ್ಲಿಂರಲ್ಲಿಯೂ ಬೇಕು ಎನ್ನುವ ಕಾರಣಕ್ಕೆ ಕೆಲವೊಂದು ಸಂಘಟನೆಗಳು ಹುಟ್ಟಿಕೊಂಡರೂ ನಾಯಕತ್ವ ಕೊರತೆ, ಶಿಸ್ತಿನ ಕೊರತೆ, ರಚನಾತ್ಮಕವಾಗಿ ಕಾರ್ಯನಿರ್ವಹಿಸುವ ಕೊರತೆ, ಅತ್ಯುತ್ತಮ ಬುನಾದಿ ಇಲ್ಲದೆ ಇರುವುದು ಇತ್ಯಾದಿ ಹಲವು ಕಾರಣಗಳಿಂದ ಯಾವುದೇ ಸಂಘಟನೆಗಳು ಒಳ್ಳೆಯ ಕಾರಣದಿಂದ ಹೆಸರು ಮಾಡಲಿಲ್ಲ. ಪಿಎಫ್‌ಐ, ಎಸ್‌ಎಸ್‌ಎಫ್‌ಐ ಹೀಗೆ ಹಲವು ಸಂಘಟನೆಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೆಲವು ದಿನಗಳಿಂದ ಪಿಎಫ್‌ಐ ಸಂಘಟನೆ ಮೇಲೆ ಇಡಿ, ಎನ್‌ಐಎ ದಾಳಿ ನಡೆಸುತ್ತಿವೆ. ಹೀಗಾಗಿ, ಪಿಎಫ್‌ಐ (popular front of india) ಎಂದರೇನು ಎಂದು ತಿಳಿದುಕೊಳ್ಳೋಣ.
ಟ್ರೆಂಡಿಂಗ್ ಸುದ್ದಿ
ಕರ್ನಾಟಕದಲ್ಲಿ ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಪಿಎಫ್‌ಐ ಕಾರ್ಯಕರ್ತರು ಇದ್ದಾರೆ. ಪ್ರತಿ ಜಿಲ್ಲೆಗಳಲ್ಲಿ, ತಾಲೂಕುಗಳಲ್ಲಿಯು ಪಿಎಫ್‌ಐ ಕಾರ್ಯನಿರ್ವಹಿಸುತ್ತಿದೆ. ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗಗಳಲ್ಲಿ ಈ ಸಂಘಟನೆ ಭದ್ರವಾಗಿ ನೆಲೆಯೂರಲು ಪ್ರಯತ್ನಿಸುತ್ತಿದೆ. ಅಂದರೆ, ಎಲ್ಲಿ ಹಿಂದೂ ಸಂಘಟನೆಗಳು ಹೆಚ್ಚು ಚಟುವಟಿಕೆಯಿಂದ ಇವೆಯೋ ಅಲ್ಲಿ ಈ ಸಂಘಟನೆಗಳನ್ನು ಸ್ಥಾಪಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಾಣಿಸುವ ಸತ್ಯವಾಗಿದೆ.
ವಿಶೇಷವೆಂದರೆ, ಕರ್ನಾಟಕದ ಪಕ್ಕದ ರಾಜ್ಯ ಕೇರಳದಲ್ಲಿ ಪಿಎಫ್‌ಐ ಸಂಘಟನೆ ಹೆಚ್ಚು ಬಲಿಷ್ಠವಾಗಿದೆ. ಮಂಗಳೂರು, ಪುತ್ತೂರು, ಸುಳ್ಯ, ಬೆಳ್ಳಾರೆ, ವಿಟ್ಲ ಇತ್ಯಾದಿ ಕೇರಳದ ಗಡಿ ಪ್ರದೇಶಗಳಲ್ಲಿ ಹತ್ತಿರದಲ್ಲಿರುವ ಕರ್ನಾಟಕದ ಪ್ರದೇಶಗಳಲ್ಲಿ ಪಿಎಫ್‌ಐ ಸಂಘಟನೆಗಳಿಗೆ ಪಕ್ಕದ ಕೇರಳವೇ ಪ್ರಮುಖ ಸೂತ್ರದಾರಿ ಎನ್ನಲಾಗುತ್ತಿದೆ.
2007ರಲ್ಲಿ ಕೇರಳದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ (ಎನ್‌ಡಿಎಫ್), ತಮಿಳುನಾಡಿನ ಮನಿತಾ ನೀತಿ ಪಸರೈ ಮತ್ತು ಕರ್ನಾಟಕದ ಫೋರಂ ಫಾರ್ ಡಿಗ್ನಿಟಿ ಎಂಬ ಮೂರು ಇಸ್ಲಾಮಿಕ್ ಸಂಘಟನೆಗಳು ವಿಲೀನವಾಗಿ ಪಿಎಫ್‌ಐ ಎಂಬ ಸಂಘಟನೆಯನ್ನು ರಚಿಸಿದವು. ವಿಶೇಷವೆಂದರೆ, ಈ ಸಂಘಟನೆಗಳು ಒಟ್ಟಾಗಿ ಪಿಎಫ್‌ಐ ರಾಲಿಯನ್ನು ಬೆಂಗಳೂರಿನಲ್ಲಿ ಅದೇ ವರ್ಷ ಆಯೋಜಿಸಿತ್ತು.
Naya Caravan Naya Hindustan ಎಂಬ ಟ್ಯಾಗ್‌ಲೈನ್‌ನಡಿ Popular Front of India ಕಾರ್ಯನಿರ್ವಹಿಸುತ್ತದೆ. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಸಂಘಟನೆ ಎಂದು ಪಿಎಫ್‌ಐ ಹೇಳಿಕೊಂಡಿದೆ. ತರಬೇತಿ, ಶಿಕ್ಷಣ, ಚಳವಳಿಗಳನ್ನು ನೀಡುವುದಾಗಿ ಪಿಎಫ್‌ಐ ಹೇಳಿಕೊಳ್ಳುತ್ತಿದೆ. ಮುಸ್ಲಿಮರು ಮಾತ್ರವಲ್ಲದೆ ಪರಿಶಿಷ್ಟ ಸಮುದಾಯ, ಹಿಂದುಳಿದ ಸಮಾಜದವರ ಹಕ್ಕುಗಳಿಗಾಗಿಯೂ ಹೋರಾಡುವ ಉದ್ದೇಶವಿರುವುದಾಗಿ ಪಿಎಫ್‌ಐ ಹೇಳಿದೆ. ಕೆಲವು ರಾಜಕೀಯ ಪಕ್ಷಗಳೂ ಪಿಎಫ್‌ಐ ಜತೆಗೆ ನಂಟು ಇಟ್ಟುಕೊಂಡು ಮತ ಪಡೆಯಲು ಪ್ರಯತ್ನಿಸುತ್ತಿವೆ. ಹೀಗಿದ್ದರೂ, ಪಿಎಫ್‌ಐ ತನ್ನ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿಲ್ಲ.
ಭಾರತದಲ್ಲಿ ಸಿಮಿ ಸಂಘಟನೆ ಜನಪ್ರಿಯವಾಗಿತ್ತು. ಅದು, ನಾನಾ ಕಾರಣಗಳಿಂದ ಪ್ರತಿದಿನ ಸುದ್ದಿಯಲ್ಲಿತ್ತು. ವಿಶೇಷವಾಗಿ, ಅದು ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬ ಅನುಮಾನವೂ ಇತ್ತು. ಹೀಗಾಗಿ, 2001ರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಭಾರತದಲ್ಲಿ ನಿಷೇಧಿಸಲಾಯಿತು. ಪಿಎಫ್‌ಐಯನ್ನೂ ನಿಷೇಧಿಸಬೇಕು ಎಂದು ಬಿಜೆಪಿಯ ವಿವಿಧ ನಾಯಕರು, ಹಿಂದೂ ಸಂಘಟನೆಗಳ ಮುಖಂಡರೂ ಹಲವು ಸಮಯದಿಂದ ಒತ್ತಾಯಿಸುತ್ತಾ ಬಂದಿದ್ದಾರೆ.
ಹೀಗಿದ್ದರೂ, ಪಿಎಫ್‌ಐನ ಸದಸ್ಯತ್ವದ ಕುರಿತು ಯಾವುದೇ ದಾಖಲೆಗಳು ಇಲ್ಲ ಎಂದು ವರದಿಗಳು ಹೇಳಿವೆ. ಅಂದರೆ, ಪಿಎಫ್‌ಐನಲ್ಲಿ ಯಾರೆಲ್ಲ ಸದಸ್ಯರಾಗಿದ್ದಾರೆ ಎಂಬ ಅಧಿಕೃತ ದಾಖಲೆಗಳು ಇಲ್ಲ.ಹೀಗಾಗಿ, ಪಿಎಫ್‌ಐ ಸದಸ್ಯರನ್ನು ಹುಡುಕುವುದು ತನಿಖಾ ಸಂಸ್ಥೆಗಳಿಗೆ ಕಷ್ಟವಾಗಿದೆ. ಪಿಎಫ್‌ಐನ ಈ ನಡೆಯೂ ಅನುಮಾನಸ್ಪದವಾಗಿದೆ. 2009ರಲ್ಲಿ ಆರಂಭವಾದ ಸೋಷಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸ್ಥಾಪಿಸಲಾಯಿತು.
ಕೇರಳದಲ್ಲಿ ಪಿಎಫ್‌ಐ ಪ್ರಾಬಲ್ಯ ಹೆಚ್ಚಿದೆ. ಕೊಲೆ, ದರೋಡೆ, ಭಯೋತ್ಪಾದನಾ ಚಟುವಟಿಕೆ ಜತೆ ಲಿಂಕ್ ಇತ್ಯಾದಿ ಕಾರಣಗಳಿಂದಲೂ ಪಿಎಫ್‌ಐ ಹೆಸರು ಆಗಾಗ ಕೇಳಿಸುತ್ತದೆ. ಆರ್‌ಎಸ್‌ಎಸ್ ಕಾರ್ಯಕರ್ತರ ಕೊಲೆಯಲ್ಲಿಯೂ ಪಿಎಫ್‌ಐ ಇರುವ ಕುರಿತು ಸುದ್ದಿಯಾಗಿತ್ತು. ಭಾರತವನ್ನು ಇಸ್ಲಾಂ ರಾಷ್ಟ್ರವಾಗಿ ಮಾಡುವ ಉದ್ದೇಶವೂ ಪಿಎಫ್‌ಐಗೆ ಇದೆ ಎಂಬ ಆರೋಪವಿದೆ.
ವಿಭಾಗ