PM Modi Birthday: ಪ್ರಧಾನಿ ಮೋದಿ ಹುಟ್ಟುಹಬ್ಬ, ಜಗತ್ತಿನ ಜನಪ್ರಿಯ ನಾಯಕ ನರೇಂದ್ರ ಮೋದಿ ಅವರ ವಯಸ್ಸು, ರಾಜಕೀಯ, ವೈಯಕ್ತಿಕ ಬದುಕಿನ ಚಿತ್ರಣ
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಇನ್ನು 73 ವರ್ಷ ವಯಸ್ಸು. ಪ್ರಧಾನಿ ಮೋದಿ ಹುಟ್ಟುಹಬ್ಬ ನಿಮಿತ್ತ ಅವರ ರಾಜಕೀಯ ಮತ್ತು ವೈಯಕ್ತಿಕ ಬದುಕಿನ ಕಡೆಗೊಂದು ನೋಟ ಬೀರುವ ಕಿರು ಚಿತ್ರಣ ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಜೀವನದ ಮತ್ತೊಂದು ವಸಂತವನ್ನು ಪೂರ್ಣಗೊಳಿಸಿದ್ದು, ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರಿಗೆ ಇನ್ನು 73 ವರ್ಷ. ಪ್ರಧಾನಿ ಮೋದಿ ಹುಟ್ಟುಹಬ್ಬದ ನಿಮಿತ್ತ ದೇಶಾದ್ಯಂತ ಅವರ ಅಭಿಮಾನಿಗಳು, ಬಿಜೆಪಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರಧಾನಿ ಮೋದಿ ಹುಟ್ಟುಹಬ್ಬದ ದಿನ ಹಲವು ಕಾರ್ಯಕ್ರಮಗಳು, ಯೋಜನೆಗಳು ಚಾಲ್ತಿಗೆ ಬಂದಿವೆ. ಪ್ರಧಾನಿ ಮೋದಿ ಹುಟ್ಟುಹಬ್ಬದ ನಿಮಿತ್ತವಾಗಿ ಅವರ ರಾಜಕೀಯ ಮತ್ತು ವೈಯಕ್ತಿಕ ಬದುಕಿನ ಕಡೆಗೆ ಒಂದು ಕಿರುನೋಟ ಬೀರುವ ಪ್ರಯತ್ನ ಇದು.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜನಿಸಿ ದೇಶದ ಪ್ರಧಾನ ಮಂತ್ರಿ ಸ್ಥಾನಕ್ಕೇರಿದ ಮೊದಲಿಗ, ತಾಯಿ ಬದುಕಿರುವಾಗಲೇ ಪ್ರಧಾನ ಮಂತ್ರಿ ಹೊಣೆಗಾರಿಕೆ ವಹಿಸಿಕೊಂಡ ಮೊದಲಿಗ ಎಂಬ ಕೀರ್ತಿಗೆ ಭಾಜನರಾದವರು ನರೇಂದ್ರ ಮೋದಿ. ಅವರು ಲೋಕಸಭೆಯಲ್ಲಿ ವಾರಣಾಸಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ಅತ್ಯಂತ ಪ್ರಭಾವಿ ನಾಯಕ, ಮಾಸ್ಟರ್ ಸ್ಟ್ರಾಟಜಿಸ್ಟ್ ಮತ್ತು ಫೇಸ್ ಆಗಿ ಗುರುತಿಸಿಕೊಂಡಿರುವಂಥವರು. ಪಕ್ಷದ ಎಂದು ಪರಿಗಣಿಸಲ್ಪಟ್ಟಿದ್ದಾರೆ.
ನರೇಂದ್ರ ಮೋದಿ ಅವರ ರಾಜಕೀಯ ಬದುಕು
ಯಾವಾಗಲೂ ಕಷ್ಟದಲ್ಲಿರುವವರ ಸೇವೆ ಮತ್ತು ಸಹಾಯಕ್ಕೆ ಸದಾ ಉತ್ಸಾಹದಿಂದ ನಿಲ್ಲುವವರು ನರೇಂದ್ರ ಮೋದಿ. ಈ ವಿಚಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ ಅವರ ಕಾರ್ಯಗಳು ಜನರ ಮಾತುಗಳ ನಡುವೆ ಗಮನಸೆಳೆಯುತ್ತವೆ. ಅವರು 1967 ರ ಗುಜರಾತ್ ಪ್ರವಾಹದ ಸಂದರ್ಭದಲ್ಲಿ ಸಂತ್ರಸ್ತ ಜನರ ನೆರವಿಗೆ ನಿಂತಿದ್ದರು.
ಗುಜರಾತ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿದ್ದ ನರೇಂದ್ರ ಮೋದಿ, ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ (ಎಬಿವಿಪಿ)ಯಲ್ಲಿ ಸಂಘಟನಾತ್ಮಕ ಹೊಣೆಗಾರಿಕೆ ಹೊತ್ತು ಕೆಲಸ ಮಾಡಿದ್ದರು. ತರುವಾಯ ತುರ್ತುಪರಿಸ್ಥಿತಿ ವಿರೋಧಿಸಿದ ಚಳವಳಿಯಲ್ಲಿ ಸಕ್ರಿಯವಾಗಿದ್ದ ಅವರು, ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾದರು.
ತುರ್ತುಪರಿಸ್ಥಿತಿ ವಿರೋಧಿ ಚಳವಳಿಯ ಸಂದರ್ಭದಲ್ಲಿ ಅವರು ಜನಸಂಘದ ಇಬ್ಬರು ನಾಯಕರಾದ ವಸಂತ ಗಜೇಂದ್ರಗಡ್ಕರ್ ಮತ್ತು ನಾಥಲಾಲ್ ಜಗ್ಹದಾ ಅವರ ಸಂಪರ್ಕಕ್ಕೆ ಬಂದರು. ಏಕತಾ ಯಾತ್ರೆ ಸಂದರ್ಭದಲ್ಲ ಮುರಳೀಮನೋಹರ ಜೋಶಿ ಅವರ ಜತೆಗೆ ಗುರುತಿಸಲ್ಪಟ್ಟು ಗಮನಸೆಳೆದರು.
ಅದಾಗಿ, 1995 ರಲ್ಲಿ ನರೇಂದ್ರ ಮೋದಿ ಅವರನ್ನು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ವಿವಿಧ ರಾಜ್ಯಗಳಲ್ಲಿ ಪಕ್ಷದ ಸಂಘಟನೆಯನ್ನು ಪುನರುಜ್ಜೀವನಗೊಳಿಸುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. 1998 ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಪಡೆದರು. 2001ರ ಅಕ್ಟೋಬರ್‌ವರೆಗೆ ಆ ಹೊಣೆಗಾರಿಕೆ ನಿಭಾಯಿಸಿದರು.
ಅದಾಗಿ, 2001ರ ಅಕ್ಟೋಬರ್‌ನಲ್ಲಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾದರು. ನಿಕಟಪೂರ್ವ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಅವರು ಉಪಚುನಾವಣೆಗಳಲ್ಲಿ ಬಿಜೆಪಿಯ ಸೋಲಿನ ಕಾರಣಕ್ಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹಾಗೆ, ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸತತ ಮೂರು ಗೆಲುವು ಸಾಧಿಸಿ ಮುಖ್ಯಮಂತ್ರಿ ಆಗಿದ್ದ ಅವರು, ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು. 2014 ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದರು. ಲೋಕಸಭಾ ಚುನಾವಣೆಯಲ್ಲಿ ವಡೋದರಾದಿಂದ ಅತಿ ಹೆಚ್ಚು ಅಂತರದ (5.70 ಲಕ್ಷ ಮತ) ಗೆಲುವು ಕಂಡ ದಾಖಲೆ ನರೇಂದ್ರ ಮೋದಿ ಅವರ ಹೆಸರಿನಲ್ಲಿದೆ.
ನರೇಂದ್ರ ಮೋದಿ ಅವರ ವೈಯಕ್ತಿಕ ಬದುಕಿನ ಕಡೆಗೊಂದು ಕಿರುನೋಟ
ಪೂರ್ಣ ಹೆಸರು- ನರೇಂದ್ರ ದಾಮೋದರ ದಾಸ್ ಮೋದಿ
ಜನನ - 17.09.1950
ನರೇಂದ್ರ ಮೋದಿ ವಯಸ್ಸು - 73 ವರ್ಷ (ಸೆ.17ರಿಂದ)
ಅಪ್ಪ - ದಾಮೋದರ ದಾಸ್ ಮೋದಿ (1989ರಲ್ಲಿ ನಿಧನರಾದರು)
ಅಮ್ಮ - ಹೀರಾಬೆನ್ ಮೋದಿ (30.12.2022ರಂದು ನಿಧನರಾದರು)
ನರೇಂದ್ರ ಮೋದಿ ಪತ್ನಿ - ಜಶೋದಾ ಬೆನ್ ಚಿಮ್ನಾಲಾಲ್ ಮೋದಿ
ನರೇಂದ್ರ ಮೋದಿ ಸಹೋದರರು - ಸೋಮಾ ಮೋದಿ (75 ವರ್ಷ), ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ, ಅಮೃತ್ ಮೋದಿ (72) ಲೇತ್ ಮಷಿನ್ ಆಪರೇಟರ್, ಪ್ರಹ್ಲಾದ್ ಮೋದಿ (62) ಅಹಮದಾಬಾದ್‌ನಲ್ಲಿ ಅಂಗಡಿ ನಡೆಸುತ್ತಿದ್ದಾರೆ, ಪಂಕಜ್ (57) ಗಾಂಧಿ ನಗರ ವಾರ್ತಾ ಇಲಾಖೆಯಲ್ಲಿ ಕ್ಲರ್ಕ್, ಸಹೋದರಿ ವಸಂತಿ ಬೆನ್ ಹಸ್ಮುಕ್‌ಲಾಲ್ ಬೆನ್.
-------------------
ವಿಭಾಗ