UK lawmaker praises PM Modi: 'ಪಿಎಂ ಮೋದಿ ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರು' - ಯುಕೆ ಸಂಸದ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Uk Lawmaker Praises Pm Modi: 'ಪಿಎಂ ಮೋದಿ ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರು' - ಯುಕೆ ಸಂಸದ

UK lawmaker praises PM Modi: 'ಪಿಎಂ ಮೋದಿ ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರು' - ಯುಕೆ ಸಂಸದ

"ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ಗ್ರಹದ ಮೇಲಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರು" ಎಂದು ಬ್ರಿಟನ್​​ ಸಂಸದ ಲಾರ್ಡ್ ಕರಣ್ ಬಿಲಿಮೋರಿಯಾ ಹೇಳಿದ್ದಾರೆ.

ಪಿಎಂ ಮೋದಿಯನ್ನು ಹೊಗಳಿದ ಯುಕೆ ಸಂಸದ
ಪಿಎಂ ಮೋದಿಯನ್ನು ಹೊಗಳಿದ ಯುಕೆ ಸಂಸದ

ಲಂಡನ್: "ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ಗ್ರಹದ ಮೇಲಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರು" ಎಂದು ಬ್ರಿಟನ್​​ ಸಂಸದ ಲಾರ್ಡ್ ಕರಣ್ ಬಿಲಿಮೋರಿಯಾ ಹೇಳಿದ್ದಾರೆ.

"ಬಾಲ್ಯದಲ್ಲಿ ನರೇಂದ್ರ ಮೋದಿಯವರು ಗುಜರಾತ್‌ನ ರೈಲ್ವೆ ನಿಲ್ದಾಣದಲ್ಲಿ ತಮ್ಮ ತಂದೆಯ ಟೀ ಸ್ಟಾಲ್‌ನಲ್ಲಿ ಚಹಾ ಮಾರಿದರು. ಇಂದು ಅವರು ಭಾರತದ ಪ್ರಧಾನಿಯಾಗಿ ಈ ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ" ಎಂದು ಸಂಸತ್ತಿನ ಚರ್ಚೆ ವೇಳೆ ಲಾರ್ಡ್ ಕರಣ್ ಬಿಲಿಮೋರಿಯಾ ಹೇಳಿದರು.

"ಇಂದು ಭಾರತವು G20 ಯ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿದೆ. ಭಾರತವು ಮುಂದಿನ 25 ವರ್ಷಗಳಲ್ಲಿ, USD 32 ಶತಕೋಟಿಯ ಜಿಡಿಪಿಯೊಂದಿಗೆ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗುವ ಗುರಿಯನ್ನು ಹೊಂದಿದೆ. ಇಂಡಿಯನ್ ಎಕ್ಸ್‌ಪ್ರೆಸ್ ನಿಲ್ದಾಣದಿಂದ ಹೊರಟಿದೆ. ಅದು ಈಗ ವಿಶ್ವದ ಅತ್ಯಂತ ವೇಗದ ರೈಲು - ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆ. ಮುಂಬರುವ ದಶಕಗಳಲ್ಲಿ ಬ್ರಿಟನ್​​ ಅದರ ಅತ್ಯಂತ ವಿಶ್ವಾಸಾರ್ಹ ಸ್ನೇಹಿತ ಮತ್ತು ಪಾಲುದಾರರಾಗಿರಬೇಕು" ಎಂದು ಲಾರ್ಡ್ ಕರಣ್ ಭಾರತವನ್ನು ಹೊಗಳಿದ್ದಾರೆ.

ಯುನೈಟೆಡ್ ಕಿಂಗ್‌ಡಮ್ ಮತ್ತು ಭಾರತದ ನಡುವಿನ ಸಂಬಂಧದ ಪ್ರಾಮುಖ್ಯತೆ ಕುರಿತ ಚರ್ಚೆಯ ಸಂದರ್ಭದಲ್ಲಿ ಲಾರ್ಡ್ ಕರಣ್, "ಭಾರತವು ಈಗ ಯುಕೆಯನ್ನು ಹಿಂದಿಕ್ಕಿದೆ ಮತ್ತು 1.4 ಬಿಲಿಯನ್ ಜನರೊಂದಿಗೆ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. 75 ವರ್ಷಗಳ ಪ್ರಜಾಪ್ರಭುತ್ವದೊಂದಿಗೆ, ಇದು ಯುವ ದೇಶವಾಗಿದೆ. ಭಾರತವು ಕಳೆದ ಹಣಕಾಸು ವರ್ಷದಲ್ಲಿ 8.7 ಶೇಕಡಾ ಬೆಳವಣಿಗೆ ದರವನ್ನು ಹೊಂದಿತ್ತು. ಅಷ್ಟೇ ಅಲ್ಲದೇ ಭಾರತವು ನವೀಕರಿಸಬಹುದಾದ ಶಕ್ತಿ ಮತ್ತು ಸೌರಶಕ್ತಿಯ ನಾಲ್ಕನೇ ಅತಿದೊಡ್ಡ ಉತ್ಪಾದಕವಾಗಿದೆ" ಎಂದು ತಿಳಿಸಿದರು.

ಪ್ರತಿಯೊಂದು ಅಂಶದಲ್ಲೂ ಭಾರತವನ್ನು ಗಮನಿಸಿರುವ ಲಾರ್ಡ್ ಬಿಲಿಮೋರಿಯಾ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾದೊಂದಿಗೆ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಪಾಲುದಾರಿಕೆಯೊಂದಿಗೆ ಶತಕೋಟಿ ಲಸಿಕೆಗಳು ಉತ್ಪಾದಿಸುವ ಮೂಲಕ ತನ್ನ ಬಲವನ್ನು ಭಾರತ ಹೆಚ್ಚಿಸಿತು. ಯುಕೆ-ಭಾರತ ಮುಕ್ತ ವ್ಯಾಪಾರ ಒಪ್ಪಂದವು ಉತ್ತಮವಾಗಿ ಮುಂದುವರಿದಿದೆ. ಭಾರತವು ಯುಕೆಯ 12ನೇ ಅತಿದೊಡ್ಡ ವ್ಯಾಪಾರ ಪಾಲುದಾರವಾಗಿದೆ. ಇದು ಸಾಕಾಗುವುದಿಲ್ಲ. ಇನ್ನೂ ಹೆಚ್ಚಿನ ಸ್ಥಾನಕ್ಕೆ ಬರಬೇಕು ಎಂದು ಹೇಳಿದರು.

Rishi Sunak fined: ಸೀಟ್‌ ಬೆಲ್ಟ್‌ ಧರಿಸದೇ ಕಾರು ಪ್ರಯಾಣ; ಯುಕೆ ಪ್ರಧಾನಿ ರಿಷಿ ಸುನಕ್‌ಗೆ ದಂಡ ವಿಧಿಸಿದ ಪೊಲೀಸರು-ವಿಡಿಯೋ ಇಲ್ಲಿದೆ

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಯುಕೆ ಪ್ರಧಾನಮಂತ್ರಿ ರಿಷಿ ಸುನಕ್‌ಗೆ ಲಂಕಾಶೈರ್‌ ಪೊಲೀಸರು ದಂಡ ವಿಧಿಸಿದ್ದಾರೆ. ಸೋಷಿಯಲ್‌ ಮೀಡಿಯಾ ವಿಡಿಯೋ ಶೂಟಿಂಗ್‌ ಸಂದರ್ಭದಲ್ಲಿ ಅವರು ಸೀಟ್‌ ಬೆಲ್ಟ್‌ ಧರಿಸಿರಲಿಲ್ಲ. ಇದನ್ನು ಗಮನಿಸಿದ ಲಂಕಾಶೈರ್‌ ಪೊಲೀಸರು ಈ ಕ್ರಮ ಜರುಗಿಸಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್​ ಮಾಡಿ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.