ಕೇಂದ್ರ ಬಜೆಟ್ 2025ಕ್ಕೆ ಮುನ್ನ ಮಹಾಲಕ್ಷ್ಮಿಯನ್ನು ಸ್ಮರಿಸಿದ ಪ್ರಧಾನಿ ಮೋದಿ, ಬಡ ಮಧ್ಯಮ ವರ್ಗಕ್ಕೆ ಲಕ್ಷ್ಮಿ ಅನುಗ್ರಹದ ನಿರೀಕ್ಷೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇಂದ್ರ ಬಜೆಟ್ 2025ಕ್ಕೆ ಮುನ್ನ ಮಹಾಲಕ್ಷ್ಮಿಯನ್ನು ಸ್ಮರಿಸಿದ ಪ್ರಧಾನಿ ಮೋದಿ, ಬಡ ಮಧ್ಯಮ ವರ್ಗಕ್ಕೆ ಲಕ್ಷ್ಮಿ ಅನುಗ್ರಹದ ನಿರೀಕ್ಷೆ

ಕೇಂದ್ರ ಬಜೆಟ್ 2025ಕ್ಕೆ ಮುನ್ನ ಮಹಾಲಕ್ಷ್ಮಿಯನ್ನು ಸ್ಮರಿಸಿದ ಪ್ರಧಾನಿ ಮೋದಿ, ಬಡ ಮಧ್ಯಮ ವರ್ಗಕ್ಕೆ ಲಕ್ಷ್ಮಿ ಅನುಗ್ರಹದ ನಿರೀಕ್ಷೆ

PM Modi on Budget 2025: ಕೇಂದ್ರ ಬಜೆಟ್ ಅಧಿವೇಶನ ಇಂದು (ಜನವರಿ 31) ಶುರುವಾಗಿದೆ. ಅದಕ್ಕೂ ಮೊದಲು ಸಂಸತ್ ಭವನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮಹಾಲಕ್ಷ್ಮಿಯನ್ನು ಸ್ಮರಿಸಿ, ಪ್ರಜಾಪ್ರಭುತ್ವ, ವಿಕಸಿತ ಭಾರತ ಮತ್ತು ಬಡ ಮಧ್ಯಮ ವರ್ಗದ ಜನರ ಹಿತದೃಷ್ಟಿ ಕುರಿತು ಮಾತನಾಡಿದರು. ಬಡ ಮಧ್ಯಮ ವರ್ಗಕ್ಕೆ ಲಕ್ಷ್ಮಿ ಅನುಗ್ರಹದ ನಿರೀಕ್ಷೆ ಹೆಚ್ಚಳವಾಗಿದೆ.

ಕೇಂದ್ರ ಬಜೆಟ್ 2025ಕ್ಕೆ ಮುನ್ನ ಮಹಾಲಕ್ಷ್ಮಿಯನ್ನು ಸ್ಮರಿಸಿದ ಪ್ರಧಾನಿ ಮೋದಿ ಅವರ ನಡೆಯ ಕಾರಣ ಬಡ ಮಧ್ಯಮ ವರ್ಗಕ್ಕೆ ಲಕ್ಷ್ಮಿ ಅನುಗ್ರಹದ ನಿರೀಕ್ಷೆ ಹೆಚ್ಚಳವಾಗಿದೆ.
ಕೇಂದ್ರ ಬಜೆಟ್ 2025ಕ್ಕೆ ಮುನ್ನ ಮಹಾಲಕ್ಷ್ಮಿಯನ್ನು ಸ್ಮರಿಸಿದ ಪ್ರಧಾನಿ ಮೋದಿ ಅವರ ನಡೆಯ ಕಾರಣ ಬಡ ಮಧ್ಯಮ ವರ್ಗಕ್ಕೆ ಲಕ್ಷ್ಮಿ ಅನುಗ್ರಹದ ನಿರೀಕ್ಷೆ ಹೆಚ್ಚಳವಾಗಿದೆ.

PM Modi on Budget 2025: ಕೇಂದ್ರ ಬಜೆಟ್ ಅಧಿವೇಶನ ಇಂದು (ಜನವರಿ 31) ಶುರುವಾಗುತ್ತಿದ್ದು, ಅದರಲ್ಲಿ ಪಾಲ್ಗೊಳ್ಳುವುದಕ್ಕಾಗಿ ಸಂಸತ್ ಭವನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತ, ಪ್ರಜಾಪ್ರಭುತ್ವ, ವಿಕಸಿತ ಭಾರತ ಮತ್ತು ಬಡ ಮಧ್ಯಮ ವರ್ಗದ ಜನರ ಹಿತದೃಷ್ಟಿ ಕುರಿತು ಮಾತನಾಡಿದರು. ಮಾತು ಆರಂಭಿಸುತ್ತಿದ್ದಂತೆ, ಯಾವುದೇ ಶುಭ ಫಲಕ್ಕಾಗಿ ನಾವು ಮಹಾಲಕ್ಷ್ಮಿಯನ್ನು ಪ್ರಾರ್ಥಿಸುವುದು ಸಾಮಾನ್ಯ ಎಂದು ಹೇಳುತ್ತ, “ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ | ಮಂತ್ರ-ಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಸ್ತುತೇ” ಸಾಲುಗಳನ್ನು ಪಠಿಸಿದರು.

“ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ, ನಾನು ಸಂಪತ್ತು ಮತ್ತು ಸಮೃದ್ಧಿಯ ದೇವತೆ ಲಕ್ಷ್ಮಿ ದೇವಿಗೆ ನಮಸ್ಕರಿಸುತ್ತೇನೆ… ಲಕ್ಷ್ಮಿ ದೇವಿಯು ನಮ್ಮ ದೇಶದ ಬಡ ಮತ್ತು ಮಧ್ಯಮ ವರ್ಗದವರನ್ನು ಆಶೀರ್ವದಿಸುವುದನ್ನು ಮುಂದುವರಿಸಬೇಕೆಂದು ನಾನು ಪ್ರಾರ್ಥಿಸುತ್ತೇನೆ. ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ 75 ವರ್ಷಗಳನ್ನು ಪೂರ್ಣಗೊಳಿಸಿದೆ ಎಂಬುದು ಬಹಳ ಹೆಮ್ಮೆಯ ವಿಷಯವಾಗಿದೆ ”ಎಂದು ಪ್ರಧಾನಿ ಮೋದಿ ಹೇಳಿದರು.

ಕೇಂದ್ರ ಬಜೆಟ್ 2025; ದೇಶಕ್ಕೆ ಹೊಸ ಶಕ್ತಿ, ಭರವಸೆ ತುಂಬಲಿದೆ- ಪ್ರಧಾನಿ ಮೋದಿ

“ಭಾರತವು ಜಾಗತಿಕ ವ್ಯವಸ್ಥೆಯಲ್ಲು ತನ್ನನ್ನು ತಾನು ಉತ್ತಮವಾಗಿ ಸ್ಥಾಪಿಸಿಕೊಂಡಿದೆ… ಇದು ನನ್ನ ಮೂರನೇ ಅವಧಿಯ ಮೊದಲ ಸಂಪೂರ್ಣ ಬಜೆಟ್. 2047 ರಲ್ಲಿ, ಭಾರತವು 100 ವರ್ಷಗಳ ಸ್ವಾತಂತ್ರ್ಯ ದಿನಾಚರಣೆ ಪೂರ್ಣಗೊಳಿಸಿದಾಗ, ಅದು ವಿಕಸಿತ ಭಾರತವಾಗಿ ದಾಖಲಾಗಬೇಕು. ಆ ಗುರಿಯನ್ನು ಸಾಧಿಸಬೇಕು. ಈ ಹಿನ್ನೆಲೆಯಲ್ಲಿ ಈ ಬಜೆಟ್ ರಾಷ್ಟ್ರಕ್ಕೆ ಹೊಸ ಶಕ್ತಿ ಮತ್ತು ಭರವಸೆಯನ್ನು ನೀಡುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ ” ಎಂದು ಪ್ರಧಾನಿ ನರೇಂದ್ರ ಮೋದಿ ವಿವರಿಸಿದರು.

"ದೇಶದ ಜನರು ಮೂರನೆಯ ಬಾರಿಗೆ ನನಗೆ ದೇಶವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಿದ್ದಾರೆ. ಇದು ನನ್ನ ಮೂರನೇ ಅವಧಿಯ ಸಂಪೂರ್ಣ ಬಜೆಟ್ ಆಗಿದೆ. ಈ ಬಜೆಟ್ ಹೊಸ ಶಕ್ತಿಯನ್ನು ನೀಡುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. 2047 ರ ಹೊತ್ತಿಗೆ ದೇಶವನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು 140 ಕೋಟಿ ಜನರು ಇಚ್ಛಾಶಕ್ತಿ ಈ ದೃಷ್ಟಿಯನ್ನು ಅವರ ಸಂಕಲ್ಪದಿಂದ ಪೂರೈಸಿಕೊಳ್ಳಬೇಕಾದ್ದು ಅವಶ್ಯ ಎಂದು ಪ್ರಧಾನಿ ಮೋದಿ ಹೇಳಿದರು.

"ನಾವೀನ್ಯತೆ, ಸೇರ್ಪಡೆ ಮತ್ತು ಹೂಡಿಕೆ ಯಾವಾಗಲೂ ನಮ್ಮ ಆರ್ಥಿಕ ಕಾರ್ಯತಂತ್ರದ ಅಡಿಪಾಯವಾಗಿದೆ. ಈ ಅಧಿವೇಶನದಲ್ಲಿ, ಹಿಂದಿನಂತೆ, ಸದನದಲ್ಲಿ ಅನೇಕ ಮಹತ್ವದ ಮಸೂದೆಗಳನ್ನು ಮಂಡಿಸಿ ಚರ್ಚಿಸಲಾಗುವುದು. ಸಂಪೂರ್ಣ ವಿವೇಚನೆಯ ನಂತರ, ದೇಶವನ್ನು ಬಲಪಡಿಸುವುದಕ್ಕಾಗಿ ಈ ಮಸೂದೆಗಳನ್ನು ಕಾನೂನಿನಲ್ಲಿ ಜಾರಿಗೆ ತರಲಾಗುವುದು"ಎಂದು ಪ್ರಧಾನಿ ಮೋದಿ ಹೇಳಿದರು.

ನಾರಿ ಶಕ್ತಿಯ ಅಭಿಮಾನವನ್ನು ಮರುಸ್ಥಾಪಿಸುವ ಗುರಿ; ಪಿಎಂ ಮೋದಿ ಆಶಯ

ದೇಶದಲ್ಲಿ ನಾರಿ ಶಕ್ತಿಯ ಅಭಿಮಾನವನ್ನು ಮರುಸ್ಥಾಪಿಸಬೇಕಾದ ಮಹತ್ವದ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಾತಿ ಮತ್ತು ಧರ್ಮದ ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬ ಮಹಿಳೆಯೂ ಗೌರವಾನ್ವಿತ ಜೀವನ ಮತ್ತು ಸಮಾನ ಹಕ್ಕುಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ. ಈಸಲದ ಬಜೆಟ್‌ ಅಧಿವೇಶನದಲ್ಲಿ ಈ ದಿಕ್ಕಿನಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

"ಈ ಬಜೆಟ್ ಅಧಿವೇಶನದಲ್ಲಿ, ಎಲ್ಲಾ ಸಂಸದರು ಅಭಿವೃದ್ಧಿ ಹೊಂದಿದ ಭಾರತವನ್ನು ಬಲಪಡಿಸಲು ಕೊಡುಗೆ ನೀಡುತ್ತಾರೆ. ಇದು ವಿಶೇಷವಾಗಿ ಯುವ ಸಂಸದರಿಗೆ ಒಂದು ಸುವರ್ಣಾವಕಾಶವಾಗಿದೆ. ಏಕೆಂದರೆ ಅವರು ಸದನದಲ್ಲಿ ಹೆಚ್ಚು ಜಾಗೃತಿ ಮತ್ತು ಭಾಗವಹಿಸುವಿಕೆ ಹೆಚ್ಚಾಗುತ್ತದೆ, ಅಭಿವೃದ್ಧಿ ಹೊಂದಿದ ಭಾರತದ ಹೆಚ್ಚು ಫಲಗಳನ್ನು ಮೊದಲು ನೋಡುವುದು ಅವರ ಕಂಗಳು ಎಂದು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಬಜೆಟ್ ಮತ್ತು ಸಂಸತ್‌ ಅಧಿವೇಶನದ ಬಗ್ಗೆ ಆಶಾಭಾವ ವ್ಯಕ್ತಪಡಿಸಿದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.