ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Whatsapp Channel: ಪ್ರಧಾನಿ ಮೋದಿಯವರ ವಾಟ್ಸಾಪ್ ಚಾನೆಲ್​​ಗೆ ನೀವೂ ಸೇರಲು ಇಲ್ಲಿದೆ 3 ಹಂತಗಳು

WhatsApp Channel: ಪ್ರಧಾನಿ ಮೋದಿಯವರ ವಾಟ್ಸಾಪ್ ಚಾನೆಲ್​​ಗೆ ನೀವೂ ಸೇರಲು ಇಲ್ಲಿದೆ 3 ಹಂತಗಳು

ವಾಟ್ಸಾಪ್ ಚಾನೆಲ್ ಒಂದು-ಮಾರ್ಗದ ಪ್ರಸಾರ ಸಾಧನವಾಗಿದ್ದು, ಕಳೆದ ವಾರ ಬಿಡುಗಡೆಯಾದ ಈ ಹೊಸ ಫೀಚರ್​ ಅಡ್ಮಿನ್​ಗಳು ತಮ್ಮ ವಾಟ್ಸಾಪ್ ಚಾನೆಲ್​​ನಲ್ಲಿ ಅನುಯಾಯಿಗಳೊಂದಿಗೆ ಟೆಕ್ಸ್ಟ್​​, ಫೋಟೋಗಳು, ವಿಡಿಯೋಗಳು, ಸ್ಟಿಕ್ಕರ್‌ಗಳು ಮತ್ತು ಸಮೀಕ್ಷೆಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ.

ವಾಟ್ಸಾಪ್ ಚಾನೆಲ್​​ಗೆ ಸೇರಿದ ಮೋದಿ
ವಾಟ್ಸಾಪ್ ಚಾನೆಲ್​​ಗೆ ಸೇರಿದ ಮೋದಿ

ನವದೆಹಲಿ: ಮೆಟಾದ ಹೊಸ ಫೀಚರ್​ ಆಗಿರುವ ವಾಟ್ಸಾಪ್ ಚಾನೆಲ್​ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಮೋದಿ ಅವರ ವಾಟ್ಸಾಪ್ ಚಾನೆಲ್​​ಗೆ ನೀವೂ ಸೇರಬಹುದಾಗಿದೆ.

ಟ್ರೆಂಡಿಂಗ್​ ಸುದ್ದಿ

ಮೋದಿಯವರ ವಾಟ್ಸಾಪ್ ಚಾನೆಲ್ ಸೇರುವುದು ಹೇಗೆ?

1) ಮೊದಲು ನೀವು ನಿಮ್ಮ ವಾಟ್ಸಾಪ್ ಅಪ್​ಡೇಟ್​ ಮಾಡಬೇಕು. ನಂತರ Updates ಟ್ಯಾಬ್​​ಗೆ ಹೋಗಿ.. (ಸ್ಟೇಟಸ್​ ಕಾಣುತ್ತಿದ್ದ ಜಾಗದಲ್ಲಿ)

2) ಸ್ಕ್ರೀನ್​ ಕೆಳಭಾಗದಲ್ಲಿ "Find Channels" ಆಯ್ಕೆ ಕಾಣುತ್ತದೆ. ಅದರ ಮೇಲೆ ಟ್ಯಾಪ್​ ಮಾಡಿ

3) ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಲಭ್ಯವಿರುವ ಚಾನೆಲ್‌ಗಳ ಪಟ್ಟಿ ಕಾಣಿಸುತ್ತದೆ. ಅಥವಾ ನೀವೇ ಹುಡುಕಲು ಸರ್ಚ್​ ಆಪ್ಶನ್​ ಇದೆ. ನಿಮಗೆ ಬೇಕಾದವರ ಚಾನೆಲ್​​ ಸೇರಲು, ಅವರ ಚಾನಲ್‌ನ ಹೆಸರಿನ ಪಕ್ಕದಲ್ಲಿರುವ ಪ್ಲಸ್ ಐಕಾನ್ ಅನ್ನು ಟ್ಯಾಪ್ ಮಾಡಿ.

ವಾಟ್ಸಾಪ್ ಚಾನೆಲ್ ಎಂದರೇನು? (What is WhatsApp Channel?)

ವಾಟ್ಸಾಪ್ ಚಾನೆಲ್ ಒಂದು-ಮಾರ್ಗದ ಪ್ರಸಾರ ಸಾಧನವಾಗಿದ್ದು, ಕಳೆದ ವಾರ ಬಿಡುಗಡೆಯಾದ ಈ ಹೊಸ ಫೀಚರ್​ ಅಡ್ಮಿನ್​ಗಳು ತಮ್ಮ ವಾಟ್ಸಾಪ್ ಚಾನೆಲ್​​ನಲ್ಲಿ ಅನುಯಾಯಿಗಳೊಂದಿಗೆ ಟೆಕ್ಸ್ಟ್​​, ಫೋಟೋಗಳು, ವಿಡಿಯೋಗಳು, ಸ್ಟಿಕ್ಕರ್‌ಗಳು ಮತ್ತು ಸಮೀಕ್ಷೆಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ಈ ಮೂಲಕ ಒಂದೇ ಆ್ಯಪ್​​ನಲ್ಲೇ ನಿಮ್ಮ ಆಯ್ಕೆಯ ವ್ಯಕ್ತಿಗಳು ಮತ್ತು ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರಬಹುದು.

ಇಲ್ಲಿ ಕೂಡ ನೀವು ಪ್ರತಿಕ್ರಿಯೆ ನೀಡಲು ಎಮೋಜಿಗಳನ್ನು ಬಳಸಬಹುದು. ಒಟ್ಟಾರೆ ಎಷ್ಟು ರಿಯಾಕ್ಷನ್​ ಬಂದಿದೆ ಎಂಬುದೂ ಗೊತ್ತಾಗುತ್ತದೆ. ಆದರೆ ನೀವು ಹೇಗೆ ರಿಯಾಕ್ಟ್ ಆಗುತ್ತೀರಿ ಎಂಬುದು ಇತರ ಅನುಯಾಯಿಗಳಿಗೆ ಕಾಣುವುದಿಲ್ಲ.

ವಾಟ್ಸ್​ ಆಪ್​ ಚಾಲನ್​ ಅಡ್ಮಿನ್​ಗಳು 30 ದಿನಗಳವರೆಗೆ ತಮ್ಮ ಕಟೆಂಟ್​ ಅನ್ನು ಅಪ್​ಡೇಟ್​ ಮತ್ತು ಬದಲಾವಣೆ ಮಾಡಲು ಅವಕಾಶವಿರುತ್ತದೆ. 30 ದಿನಗಳ ನಂತರ ತಂತಾನೆಯೇ ಹಳೆಯ ಅಪ್​ಡೇಟ್​​ಗಳು ರಿಮೂವ್​ ಆಗುತ್ತವೆ.

ನೀವು ಚಾಟ್‌ಗಳು ಅಥವಾ ಗುಂಪುಗಳಿಗೆ ಅಪ್​ಡೇಟ್ಸ್​ಗಳನ್ನು ಫಾರ್ವರ್ಡ್ ಮಾಡಿದಾಗ, ಅದು ಸ್ವಯಂಚಾಲಿತವಾಗಿ ಮೂಲ ಚಾನಲ್‌ಗೆ ಲಿಂಕ್ ಅನ್ನು ಒಳಗೊಂಡಿರುತ್ತದೆ. ಹೀಗಾಗಿ ಚಾನಲ್‌ನ ವಿಷಯವನ್ನು ಅನ್ವೇಷಿಸಲು ಬಯಸುವ ಇತರರಿಗೆ ಇದು ಸುಲಭವಾಗುತ್ತದೆ.

ಆದರೆ ಸದ್ಯ ಎಲ್ಲಿರಿಗೂ ವಾಟ್ಸಾಪ್​ ಚಾನೆಲ್​ ಕ್ರಿಯೇಟ್​ ಮಾಡುವ ಅವಕಾಶ ನೀಡಲಾಗಿಲ್ಲ. ಕೆಲವು ಸೆಲೆಬ್ರಿಟಿಗಳು, ಪ್ರಭಾವಿ ನಾಯಕರು, ಕ್ರೀಡಾ ತಂಡಗಳು, ಸಂಸ್ಥೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

IPL_Entry_Point

ವಿಭಾಗ