ಕನ್ನಡ ಸುದ್ದಿ  /  Nation And-world  /  Pm Narendra Modi Tribute To Vinayak Damodar Savarkar Nt Rama Rao Ntr On 101st Mann Ki Baat Top Quotes Mgb

Mann Ki Baat: ಸಾವರ್ಕರ್​, ಎನ್​ಟಿಆರ್​​ ನೆನೆದ ಪ್ರಧಾನಿ ಮೋದಿ; ಮನ್ ಕಿ ಬಾತ್​​ 101ನೇ ಸಂಚಿಕೆಯ ಹೈಲೈಟ್ಸ್​ ಇಲ್ಲಿದೆ

Savarkar-NTR Birth Anniversary: ಇಂದು (ಮೇ 28) ಹಿಂದುತ್ವದ ಐಕಾನ್ ಎಂದು ಕರೆಯಲಾಗುವ ವಿನಾಯಕ ದಾಮೋದರ ಸಾವರ್ಕರ್ ಅವರ ಜನ್ಮದಿನ ಹಾಗೂ ತೆಲುಗು ನಟ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್​ ಟಿ ರಾಮರಾವ್ ಅವರ 100ನೇ ಜನ್ಮದಿನವಾಗಿದ್ದು, ಮನ್ ಕಿ ಬಾತ್​ನಲ್ಲಿ ಅವರಿಬ್ಬರನ್ನೂ ನೆನೆದಿದ್ದಾರೆ.

ಸಾವರ್ಕರ್​, ಎನ್​ಟಿಆರ್​​ ನೆನೆದ ಪ್ರಧಾನಿ ಮೋದಿ
ಸಾವರ್ಕರ್​, ಎನ್​ಟಿಆರ್​​ ನೆನೆದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮೇ 28, ಭಾನುವಾರ) ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮವಾದ ‘ಮನ್ ಕಿ ಬಾತ್’ನ (Mann Ki Baat) 101 ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಇಂದು ಹಿಂದುತ್ವದ ಐಕಾನ್ ಎಂದು ಕರೆಯಲಾಗುವ ವಿನಾಯಕ ದಾಮೋದರ ಸಾವರ್ಕರ್ (VD Savarkar)ಅವರ ಜನ್ಮದಿನ ಹಾಗೂ ತೆಲುಗು ನಟ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್​ ಟಿ ರಾಮರಾವ್ (NT Rama Rao) ಅವರ 100ನೇ ಜನ್ಮದಿನವಾಗಿದ್ದು, ಮನ್ ಕಿ ಬಾತ್​ನಲ್ಲಿ ಅವರಿಬ್ಬರನ್ನೂ ನೆನೆದಿದ್ದಾರೆ.

"ವೀರ ಸಾವರ್ಕರ್ ಅವರ ವ್ಯಕ್ತಿತ್ವವು ಶಕ್ತಿಯನ್ನು ಹೊರಸೂಸುತ್ತದೆ. ಅದು ದೃಢತೆ ಮತ್ತು ಉದಾತ್ತತೆಯನ್ನು ಒಳಗೊಂಡಿತ್ತು. ಅವರ ನಿರ್ಭೀತ ಮತ್ತು ಸ್ವಾಭಿಮಾನದ ಸ್ವಭಾವವು ಗುಲಾಮಗಿರಿಯ ಮನಸ್ಥಿತಿಯನ್ನು ಸಹಿಸಲಿಲ್ಲ. ಕೆಲವೇ ದಿನಗಳಲ್ಲಿ, ಅಂದರೆ ಜೂನ್ 4 ರಂದು, ಸಂತ ಕಬೀರದಾಸ್ ಜಿ ಅವರ ಜನ್ಮದಿನವಾಗಿದೆ. ಕಬೀರದಾಸ್ ಜೀ ಅವರು ನಮಗೆ ತೋರಿಸಿದ ಮಾರ್ಗವು ಇಂದಿಗೂ ಅಷ್ಟೇ ಪ್ರಸ್ತುತವಾಗಿದೆ" ಎಂದು ಪಿಎಂ ಮೋದಿ ಹೇಳಿದರು.

ಮೊದಲು ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ವಿಡಿ ಸಾವರ್ಕರ್ ಭಾವಚಿತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಹಲವಾರು ಕೇಂದ್ರ ಸಚಿವರು ಮತ್ತು ಸಂಸದರು ಪುಷ್ಪ ನಮನ ಸಲ್ಲಿಸಿದರು. ಬಳಿಕ ಹೊಸ ಸಂಸತ್ ಭವನವನ್ನು ಉದ್ಘಾಟಿಸಿದ ನಂತರ ಅಲ್ಲಿಯೂ ಸಾವರ್ಕರ್ ಫೋಟೋಗೆ ಮೋದಿ ಪುಷ್ಪ ನಮನ ಸಲ್ಲಿಸಿದರು.

"ಎನ್​ಟಿಆರ್ ಅವರ ಅದ್ಭುತ ಮತ್ತು ಬಹುಮುಖ ಪ್ರತಿಭೆಯು ಅವರನ್ನು ಸಿನಿಮಾ ಕ್ಷೇತ್ರದಲ್ಲಿ ಅಪ್ರತಿಮ ವ್ಯಕ್ತಿಯಾಗಿಸಿತು. ಅವರು 300 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ತಮ್ಮ ಅಭಿನಯದೊಂದಿಗೆ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ, ವಿವಿಧ ಐತಿಹಾಸಿಕ ಪಾತ್ರಗಳಿಗೆ ಜೀವ ತುಂಬಿದ್ದರು. ಭಗವಾನ್ ಕೃಷ್ಣ ಮತ್ತು ಭಗವಾನ್ ರಾಮರಂತಹ ದೇವತೆಗಳ ಅವರ ಪಾತ್ರದ ಚಿತ್ರಣ ಜನರಲ್ಲಿ ಆಳವಾಗಿ ಬೇರೂರಿದೆ, ಅವರ ಅಸಾಧಾರಣ ನಟನಾ ಪರಾಕ್ರಮಕ್ಕಾಗಿ ಅವರನ್ನು ಇನ್ನೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಇದರ ಹೊರತಾಗಿ ಅವರ ರಾಜಕೀಯ ಚಾಣಾಕ್ಷತನದಿಂದಲೂ ಅಪ್ರತಿಮ ವ್ಯಕ್ತಿಯಾಗಿ ಯಾವಾಗಲೂ ನೆನಪಿನಲ್ಲಿ ಉಳಿಯುತ್ತಾರೆ" ಎಂದು ಮೋದಿ ಹೇಳಿದರು.

ಮನ್ ಕಿ ಬಾತ್​​ನ 101ನೇ ಸಂಚಿಕೆಯ ಇತರ ಪ್ರಮುಖ ಅಂಶಗಳು

1. ಶಿಕ್ಷಣ ಸಚಿವಾಲಯದ 'ಯುವ ಸಂಗಮ' ಕಾರ್ಯಕ್ರಮ ದೇಶದ ವೈವಿಧ್ಯತೆ ಮತ್ತು ಜನರಿಂದ ಜನರ ನಡುವಿನ ಸಂಪರ್ಕವನ್ನು ಉತ್ತೇಜಿಸಲು ಉತ್ತಮ ಉಪಕ್ರಮವಾಗಿದೆ ಎಂದು ಪ್ರಧಾನಿ ಶ್ಲಾಘಿಸಿದರು. ಯುವ ಸಂಗಮದ ಮೊದಲ ಸುತ್ತಿನಲ್ಲಿ ಸುಮಾರು 1,200 ಯುವಕರು ದೇಶದ 22 ರಾಜ್ಯಗಳಲ್ಲಿ ಪ್ರವಾಸ ಮಾಡಿದರು. ಅದರ ಭಾಗವಾಗಿರುವ ಪ್ರತಿಯೊಬ್ಬರೂ ಅನೇಕ ನೆನಪುಗಳೊಂದಿಗೆ ಹಿಂದಿರುಗುತ್ತಿದ್ದಾರೆ, ಅದು ಅವರ ಜೀವನದುದ್ದಕ್ಕೂ ಅವರ ಹೃದಯದಲ್ಲಿ ಉಳಿಯುತ್ತದೆ ಎಂದರು.

2. ಗುರುಗ್ರಾಮವು ವಿಶಿಷ್ಟವಾದ ವಸ್ತುಸಂಗ್ರಹಾಲಯವನ್ನು ಹೊಂದಿದೆ, ಅದೇ ಮ್ಯೂಸಿಯೊ ಕ್ಯಾಮೆರಾ (Museo Camera). ಇದು 1860 ರ ನಂತರದ ಯುಗಕ್ಕೆ ಸೇರಿದ 8,000 ಕ್ಕೂ ಹೆಚ್ಚು ಕ್ಯಾಮೆರಾಗಳ ಸಂಗ್ರಹವನ್ನು ಹೊಂದಿದೆ. ನಮ್ಮ ದಿವ್ಯಾಂಗ ಜನರನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡಿನ 'Museum of Possibilities' ಮ್ಯೂಸಿಯಂ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದರು ಮೋದಿ.

3. ಇಂದು ದೇಶದ ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರಗಳನ್ನು ನಿರ್ಮಿಸಲಾಗುತ್ತಿದೆ. ನಮ್ಮ ಅಮೃತ ಸರೋವರಗಳು ವಿಶೇಷವಾದವು ಏಕೆಂದರೆ ಅವುಗಳನ್ನು ಆಜಾದಿ ಕಾ ಅಮೃತ ಕಾಲದಲ್ಲಿ (ಸ್ವಾತಂತ್ರ್ಯದ ಅಮೃತಕಾಲ) ನಿರ್ಮಿಸಲಾಗುತ್ತಿದೆ. ಇದರಲ್ಲಿ ಜನರ ಶ್ರಮದ ಸಾರವಿದೆ ಎಂದರು.

5. ಜೂನ್ 21 ರಂದು ನಾವು 'ವಿಶ್ವ ಯೋಗ ದಿನ'ವನ್ನು ಆಚರಿಸುತ್ತೇವೆ. ಅದಕ್ಕಾಗಿ ದೇಶ-ವಿದೇಶಗಳಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಈ ಸಿದ್ಧತೆಗಳ ಬಗ್ಗೆ ನೀವು ನಿಮ್ಮ 'ಮನ್ ಕಿ ಬಾತ್' ಅನ್ನು ನನಗೆ ಬರೆದು ಕಳುಹಿಸಬಹುದು ಎಂದು ಮೋದಿ ತಿಳಿಸಿದರು.

IPL_Entry_Point