PM Modi US Visit Live: ಬೈಡೆನ್ ದಂಪತಿಗಳೊಂದಿಗೆ ನರೇಂದ್ರ ಮೋದಿ ನೈಟ್ ಡಿನ್ನರ್; ಅಮೆರಿಕ ಕಾಂಗ್ರೆಸ್‌ನಲ್ಲಿ ಭಾಷಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi Us Visit Live: ಬೈಡೆನ್ ದಂಪತಿಗಳೊಂದಿಗೆ ನರೇಂದ್ರ ಮೋದಿ ನೈಟ್ ಡಿನ್ನರ್; ಅಮೆರಿಕ ಕಾಂಗ್ರೆಸ್‌ನಲ್ಲಿ ಭಾಷಣ

ಅಮೆರಿಕದ ವಾಷಿಂಗ್‌ಟನ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುತ್ತಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್(AP)

PM Modi US Visit Live: ಬೈಡೆನ್ ದಂಪತಿಗಳೊಂದಿಗೆ ನರೇಂದ್ರ ಮೋದಿ ನೈಟ್ ಡಿನ್ನರ್; ಅಮೆರಿಕ ಕಾಂಗ್ರೆಸ್‌ನಲ್ಲಿ ಭಾಷಣ

12:11 AM ISTJun 23, 2023 09:58 AM HT Kannada Desk
  • twitter
  • Share on Facebook
12:11 AM IST

PM Modi in US: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಕಾಂಗ್ರೆಸ್‌ನಲ್ಲಿ (ಪ್ರಜಾಪ್ರತಿನಿಧಿ ಸಭೆ) ಮಾತನಾಡಿ, ಗಡಿಯಾಚೆಗಿನ ಭಯೋತ್ಪಾದನೆಯ ಆತಂಕದ ಬಗ್ಗೆ ಕಠಿಣ ನಿಲುವು ಪ್ರದರ್ಶಿಸಿದರು. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಯೋಜಿಸಿದ್ದ 'ಸರ್ಕಾರಿ ಔತಣ'ದಲ್ಲಿಯೂ (ಸ್ಟೇಟ್ ಡಿನ್ನರ್) ಮೋದಿ ಪಾಲ್ಗೊಂಡಿದ್ದರು. ರ ಅಮೆರಿಕ ಪ್ರವಾಸ ಕುರಿತ ಲೈವ್ ಅಪ್‌ಡೇಟ್‌ ಇಲ್ಲಿ ಲಭ್ಯ.

Fri, 23 Jun 202304:28 AM IST

PM Modi US Visit Live: ಭಾರತದಲ್ಲಿ ಅಲ್ಪಸಂಖ್ಯಾತರಿಗೆ ತಾರತಮ್ಯವಿಲ್ಲ: ಮೋದಿ

ಭಾರತ ಪ್ರಜಾಪ್ರಭುತ್ವ ದೇಶ. ಅದು ನಮಗೆ ರಕ್ತಗತವಾಗಿ ಬಂದಿದೆ. ಸಹೋದರತ್ವದಲ್ಲಿ ನಂಬಿಕೆ ಇಟ್ಟಿರುವವರು ನಾವು. ಇದು ನಮ್ಮ ಸಂವಿಧಾನವೂ ಹೌದು. ನಾವು ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಿಕೊಂಡು ಬಾಳುತ್ತಿರುವಾಗ ತಾರತಮ್ಯ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಭಾರತ ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌ , ಸಬ್‌ ಕಾ ವಿಶ್ವಾಸ್‌ ಎನ್ನುವ ತತ್ವದಡಿ ಕೆಲಸ ಮಾಡುತ್ತಿದೆ. ಎಲ್ಲರಿಗೂ ಎಲ್ಲಾ ಸೌಲಭ್ಯಗಳು ಸಿಗುವಂತೆ ಮಾಡಲಾಗಿದೆ. ಇದರಲ್ಲಿ ಯಾವುದೇ ಜಾತಿ, ಧರ್ಮ, ವಯಸ್ಸು, ಪ್ರದೇಶ ಅಡೆತಡೆಗಳು ಇಲ್ಲ ಎಂದು ನರೇಂದ್ರ ಮೋದಿ ಹೇಳಿದರು. 

Fri, 23 Jun 202304:19 AM IST

PM Modi US Visit Live: ಪ್ರಾಯೋಜಿತ ಭಯೋತ್ಪಾದನೆಯನ್ನು ಎದುರಿಸಲು ಸನ್ನದ್ದರಾಗೋಣ

ಭಯೋತ್ಪಾದನೆ ಎನ್ನುವುದು ಮಾನವೀಯತೆಯ ಶತೃ. ಭಯೋತ್ಪಾದನೆಯನ್ನು ಎದುರಿಸುವಾಗ ಅದು ಹಾಗೂ ಆದರೆ ಎನ್ನುವುದು ಇರಲೇಬಾರದು. 9 /11 ಅಮೆರಿಕಾ ಘಟನೆಯ ಎರಡು ದಶಕ ಹಾಗೂ 26/11ನ ಭಾರತದ ಒಂದು ದಶಕದ ನಂತರವೂ ಜಗತ್ತಿನಲ್ಲಿ ಭಯೋತ್ಪಾದನೆ ಇನ್ನೂ ಕಾಡುತ್ತಲೇ ಇದೆ. ಭಯೋತ್ಪಾದನೆಯ ಐಡಿಯಾಗಳು ಹೊಸ ರೂಪ ಹಾಗೂ ಗುರುತುಗಳನ್ನು ಪಡೆಯುತ್ತಲೇ ಇರುತ್ತವೆ. ಅದರಲ್ಲೂ ಪ್ರಾಯೋಜಿತ ಭಯೋತ್ಪಾದನೆಯನ್ನು ಎದುರಿಸಲು ನಾವೆಲ್ಲಾ ಸನ್ನದ್ದರಾಗಲೇಬೇಕು

Fri, 23 Jun 202303:49 AM IST

PM Modi US Visit Live: ಮೋದಿ-ಬೈಡೆನ್ ಚರ್ಚೆಯಲ್ಲಿ ಉಕ್ರೇನ್ ಯುದ್ಧದ ಪ್ರಸ್ತಾಪ

ವಾಷಿಂಗ್‌ಟನ್: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಡುವಣ ಮಾತುಕತೆಯಲ್ಲಿ ಉಕ್ರೇನ್-ರಷ್ಯಾ ಯುದ್ಧದ ಬಗ್ಗೆಯೂ ಚರ್ಚೆ ನಡೆದಿರಬಹುದು ಎಂಬ ಮಾತುಗಳಿಗೆ ಬೈಡೆನ್ ನೀಡಿದ ಹೇಳಿಕೆಯಿಂದ ಪುಷ್ಟಿ ಸಿಕ್ಕಿದೆ. ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೋ ಬೈಡೆನ್, 'ರಾಜತಾಂತ್ರಿಕ ಪ್ರಯತ್ನಗಳ ಮೂಲಕ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು ಕ್ರಮ ಕೈಗೊಳ್ಳಲು ಎರಡೂ ದೇಶಗಳು ನಿರ್ಧರಿಸಿವೆ' ಎಂದು ಹೇಳಿದರು.

Fri, 23 Jun 202303:43 AM IST

PM Modi US Visit Live: ನಾವು ಪ್ರಜಾಪ್ರಭುತ್ವವನ್ನೇ ಉಸಿರಾಡುತ್ತಿದ್ದೇವೆ; ಮೋದಿ

ವಾಷಿಂಗ್‌ಟನ್: ಅಮೆರಿಕ ಪ್ರವಾಸದಲ್ಲಿರುವ ಮೋದಿ ಅವರು ಶ್ವೇತಭವನದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಈ ವೇಳೆ ಪತ್ರಕರ್ತರೊಬ್ಬರು ಭಾರತದಲ್ಲಿರುವ ತಾರತಮ್ಯ ಕುರಿತು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮೋದಿ, ನಾವು ಪ್ರಜಾಪ್ರಭುತ್ವವನ್ನೇ ಉಸಿರಾಡುತ್ತಿದ್ದೇವೆ. ನಮ್ಮ ಹಿರಿಯರು ಅದನ್ನು ಸಂವಿಧಾನ ರೂಪದಲ್ಲಿ ಖಾತ್ರಿಪಡಿಸಿದ್ದಾರೆ. ಜಾತಿ, ಧರ್ಮ ಮತ್ತು ಲಿಂಗವನ್ನು ಆಧರಿಸಿದ ತಾರತಮ್ಯಗಳಿಗೆ ಭಾರತದಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟ ದನಿಯಲ್ಲಿ ಪ್ರತಿಪಾದಿಸಿದರು.

 

Fri, 23 Jun 202303:20 AM IST

PM Modi US Visit Live: ಅಮೆರಿಕ ಕಾಂಗ್ರೆಸ್‌ನಲ್ಲಿ ಮೋದಿ ಮಾತು

ವಾಷಿಂಗ್‌ಟನ್: ಅಮೆರಿಕದ ಪ್ರಜಾಪ್ರತಿನಿಧಿ ಸಭೆ ಎನಿಸಿರುವ 'ಕಾಂಗ್ರೆಸ್‌'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಮತ್ತೊಂದು ದೇಶದ ನಾಯಕನಿಗೆ ಸಿಗುವ ಅಪರೂಪದ ಗೌರವ ಇದು ಎಂದೇ ಪರಿಗಣಿಸಲಾಗುತ್ತದೆ. ತಮ್ಮ ಭಾಷಣದಲ್ಲಿ ಮೋದಿ ಅವರು ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಮುಂಬೈನಲ್ಲಿ ನಡೆದ ಭಯೋತ್ಪಾದಕರ ದಾಳಿ (9/11) ಕುರಿತೂ ಅವರು ಪ್ರಸ್ತಾಪಿಸಿದರು.

 

Fri, 23 Jun 202303:39 AM IST

PM Modi US Visit Live: ಅಮೆರಿಕ ಕ್ರಿಕೆಟ್ ಟೀಮ್

ವಾಷಿಂಗ್‌ಟನ್: ಅಧ್ಯಕ್ಷರ ನಿವಾಸದಲ್ಲಿ ನಡೆದ ಔತಣಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ನರೇಂದ್ರ ಮೋದಿ, ಅಮೆರಿಕದಲ್ಲಿ ಬೇಸ್‌ಬಾಲ್ ಜೊತೆಗೆ ಕ್ರಿಕೆಟ್‌ಗೂ ಆದರ ಹೆಚ್ಚಾಗುತ್ತಿದೆ. ಈ ಬಾರಿಯ ಕ್ರಿಕೆಟ್ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಅಮೆರಿಕದ ಕ್ರಿಕೆಟ್ ತಂಡ ಪ್ರಯತ್ನಿಸುತ್ತಿದೆ. ಅವರಿಗೆ ಗುಡ್‌ಲಕ್ ಹೇಳುತ್ತೇನೆ ಎಂದು ಮೋದಿ ನುಡಿದರು.

ಹಂಚಿಕೊಳ್ಳಲು ಲೇಖನಗಳು

  • twitter