ಕನ್ನಡ ಸುದ್ದಿ  /  Nation And-world  /  Pm Security Breach For Pm Security Breach Actions Against Ex Punjab Dgp Other Cops

PM security breach: ಪ್ರಧಾನಿ ಮೋದಿಯವರ ಭದ್ರತಾ ಲೋಪ ಪ್ರಕರಣ; ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಪಂಜಾಬ್‌ ಸಿಎಂ ಆದೇಶ

PM security breach: ಕಳೆದ ವರ್ಷ ಜನವರಿಯಲ್ಲಿ ಪಂಜಾಬ್‌ಗೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಸಂದರ್ಭದಲ್ಲಿ ಭದ್ರತಾ ಉಲ್ಲಂಘನೆ ಆಗಿತ್ತು. ಆ ಬಗ್ಗೆ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ಹಲವಾರು ರಾಜ್ಯ ಅಧಿಕಾರಿಗಳನ್ನು ದೋಷಾರೋಪಣೆ ಮಾಡಿದ ನಂತರ ಈ ಕ್ರಮವನ್ನು ಕೈಗೊಳ್ಳಲಾಯಿತು.

ಕಳೆದ ವರ್ಷ ಜನವರಿ 5 ರಂದು, ಫಿರೋಜ್‌ಪುರದಲ್ಲಿ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ಪಡೆ ಫ್ಲೈಓವರ್‌ನಲ್ಲಿ ಸಿಕ್ಕಿಹಾಕಿಕೊಂಡಿತು. ಆ ಸಂದರ್ಭದ ಚಿತ್ರ ಇದು.
ಕಳೆದ ವರ್ಷ ಜನವರಿ 5 ರಂದು, ಫಿರೋಜ್‌ಪುರದಲ್ಲಿ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ಪಡೆ ಫ್ಲೈಓವರ್‌ನಲ್ಲಿ ಸಿಕ್ಕಿಹಾಕಿಕೊಂಡಿತು. ಆ ಸಂದರ್ಭದ ಚಿತ್ರ ಇದು. (HT File Photo)

ಕಳೆದ ವರ್ಷ ಜನವರಿಯಲ್ಲಿ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಸಂದರ್ಭದಲ್ಲಿ ಭದ್ರತಾ ಉಲ್ಲಂಘನೆ ಪ್ರಕರಣ ಸಂಬಂಧ ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಮತ್ತು ಇತರ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ “ಪ್ರಮುಖ ದಂಡಕ್ಕಾಗಿ ಶಿಸ್ತಿನ ಪ್ರಕ್ರಿಯೆ” ಪ್ರಾರಂಭಿಸಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಆದೇಶಿಸಿದ್ದಾರೆ.

ಇದರಂತೆ, ಚಟ್ಟೋಪಾಧ್ಯಾಯರ ಹೊರತಾಗಿ, ಫಿರೋಜ್‌ಪುರ ವ್ಯಾಪ್ತಿಯ ಪೊಲೀಸ್‌ನ ಅಂದಿನ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಇಂದರ್‌ಬೀರ್ ಸಿಂಗ್ ಮತ್ತು ಫಿರೋಜ್‌ಪುರದ ಆಗಿನ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಹರ್ಮನ್‌ದೀಪ್ ಸಿಂಗ್ ಹನ್ಸ್ ವಿರುದ್ಧ ದೊಡ್ಡ ದಂಡದ ಶಿಸ್ತಿನ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗುತ್ತಿದೆ.

ಈ ಅಧಿಕಾರಿಗಳು ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವುದಕ್ಕೆ ಅವಕಾಶ ನೀಡಲಾಗುತ್ತದೆ.

ಗೃಹ ವ್ಯವಹಾರಗಳ ಇಲಾಖೆಯು ಸಿಬ್ಬಂದಿ ವಿಭಾಗಕ್ಕೆ ಸೋಮವಾರ ನೀಡಿದ ಮಾಹಿತಿ ಪ್ರಕಾರ, ನರೇಶ್ ಅರೋರಾ, ಆಗಿನ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ), ಜಿ ನಾಗೇಶ್ವರ ರಾವ್, ಆಗಿನ ಎಡಿಜಿಪಿ ಸೈಬರ್ ಕ್ರೈಮ್, ಮುಖವಿಂದರ್ ಸಿಂಗ್ ಛಿನಾ, ಅಂದಿನ ಪಟಿಯಾಲ ರೇಂಜ್ ಐಜಿಪಿ, ಆಗಿನ ಐಜಿ ಕೌಂಟರ್ ಇಂಟೆಲಿಜೆನ್ಸ್ ಮತ್ತು ನೋಡಲ್ ಅಧಿಕಾರಿ ರಾಕೇಶ್ ಅಗರವಾಲ್, ಆಗಿನ ಡಿಐಜಿ ಫರೀದ್‌ಕೋಟ್ ಸುರ್ಜೀತ್ ಸಿಂಗ್ ಮತ್ತು ಆಗಿನ ಎಸ್‌ಎಸ್‌ಪಿ ಮೊಗಾ ಚರಂಜಿತ್ ಸಿಂಗ್ ಅವರ ವಿರುದ್ಧ ಸುಪ್ರೀಂ ಕೋರ್ಟ್‌ ರಚಿಸಿದ ತನಿಖಾ ಸಮಿತಿ ನೀಡಿದ ಶಿಫಾರಸು ವರದಿ ಪ್ರಕಾರ ಶಿಸ್ತು ಕ್ರಮವನ್ನು ಏಕೆ ಪ್ರಾರಂಭಿಸಬಾರದು ಎಂದು ಕೇಳಲಾಗಿತ್ತು. ಇದನ್ನು ಆಧರಿಸಿ ಪಂಜಾಬ್‌ ಸಿಎಂ ಕೂಡ ಈ ನಿರ್ಧಾರ ತೆಗೆದುಕೊಂಡರು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಕಳೆದ ವರ್ಷ ಜನವರಿಯಲ್ಲಿ ಪಂಜಾಬ್‌ಗೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಸಂದರ್ಭದಲ್ಲಿ ಭದ್ರತಾ ಉಲ್ಲಂಘನೆ ಆಗಿತ್ತು. ಆ ಬಗ್ಗೆ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ಹಲವಾರು ರಾಜ್ಯ ಅಧಿಕಾರಿಗಳನ್ನು ದೋಷಾರೋಪಣೆ ಮಾಡಿದ ನಂತರ ಈ ಕ್ರಮವನ್ನು ಕೈಗೊಳ್ಳಲಾಯಿತು.

ಕಳೆದ ವರ್ಷ ಜನವರಿ 5 ರಂದು, ಫಿರೋಜ್‌ಪುರದಲ್ಲಿ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ಪಡೆ ಫ್ಲೈಓವರ್‌ನಲ್ಲಿ ಸಿಕ್ಕಿಹಾಕಿಕೊಂಡಿತು. ನಂತರ ಅವರು ರ್ಯಾಲಿ ಸೇರಿ ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗದೆ ಪಂಜಾಬ್‌ನಿಂದ ಹಿಂತಿರುಗಿದರು.

ಗಮನಿಸಬಹುದಾದ ಸುದ್ದಿ

ನಿಮ್ಮ ಜೀವನೋದ್ದೇಶ ಏನು?; ಗುರಿ ಮತ್ತು ಗುರುವನ್ನು ಕಂಡುಕೊಳ್ಳಲು ಇಲ್ಲಿದೆ ಪಂಚ ಸೂತ್ರ

Life purpose: ಜೀವನೋದ್ದೇಶವನ್ನು ಗುರುತಿಸುವುದು ಸುಲಭದ ಕೆಲಸವಲ್ಲ. ನಿಮ್ಮ ಜೀವನದ ಗುರಿ ಮತ್ತು ಉದ್ದೇಶದ ಸ್ಪಷ್ಟತೆ ಇಲ್ಲದೇ ಇದ್ದಾಗ, ಮಾರ್ಗದರ್ಶಕರ ನೆರವು ಕೂಡ ಬೇಕಾಗುತ್ತದೆ. ಆದಾಗ್ಯೂ, ಬದುಕಿನ ಹಾದಿಯಲ್ಲಿ ಇದೊಂದು ನಿರ್ಣಾಯಕ ಘಟ್ಟ ಎಂಬುದು ವಾಸ್ತವ. ಜೀವನೋದ್ದೇಶ ತಿಳಿಯಬೇಕಾ? ಇಲ್ಲಿ ಕ್ಲಿಕ್‌ ಮಾಡಿ

ಚುನಾವಣಾ ಬೆಟ್ಟಿಂಗ್‌ ಶುರು; ಕಡೂರಲ್ಲಿ ಬೆಳ್ಳಿ ಪ್ರಕಾಶ್‌ ಪರ ʻಆಸ್ತಿʼ ಬಾಜಿಗಿಟ್ಟ ತೆಲುಗು ಸಮಾಜದ ಮುಖಂಡ!

ರಾಜ್ಯದಲ್ಲಿ ಈಗ ವಿಧಾನಸಭೆ ಚುನಾವಣೆಯ ಕಾವು ದಿನೇದಿನೆ ಏರುತ್ತಿದೆ. ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಅನೇಕ ಕುತೂಹಲಕಾರಿ ವಿಚಾರಗಳು ಗಮನಸೆಳೆಯುತ್ತವೆ. ರಾಜಕೀಯ ರಂಗು ಅನೇಕರ ಬದುಕಿನ ಮೇಲೂ ಪರಿಣಾಮ ಬೀರುವುದು ಸುಳ್ಳಲ್ಲ. ಸೋಮವಾರ ಅಂಥದ್ದೇ ಒಂದು ಪ್ರಸಂಗ ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

IPL_Entry_Point