Kuno national park: ಕುನೊದಲ್ಲಿ ಎರಡು ಚೀತಾಗಳ ಬಿಡುಗಡೆ, ಪ್ರಧಾನಿ ಮೋದಿ ಸಂತಸ, ವಿಡಿಯೋ ನೋಡಿ
"ಗುಡ್‌ನ್ಯೂಸ್, ಕಡ್ಡಾಯ ಕ್ವಾರಂಟೈನ್‌ನ ನಂತರ, ಕುನೋ ಆವಾಸಸ್ಥಾನಕ್ಕೆ ಮತ್ತಷ್ಟು ಹೊಂದಿಕೊಳ್ಳಲು 2 ಚೀತಾಗಳನ್ನು ದೊಡ್ಡ ಆವರಣಕ್ಕೆ ಬಿಡಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಉಳಿದವುಗಳನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದುʼʼ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮಾಡಿದ್ದಾರೆ.

ಕುನೊ: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ನಮೀಬಿಯಾದಿಂದ ತಂದಿರುವ ಎಂಟು ಚೀತಾಗಳ ಪೈಕಿ ಎರಡು ಚೀತಾಗಳನ್ನು ಕ್ವಾರಂಟೈನ್ ಪ್ರದೇಶದಿಂದ ಹೊರಕ್ಕೆ ಬಿಡುಗಡೆ ಮಾಡಲಾಗಿದೆ. ಈ ಕುರಿತು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದು, "ಗುಡ್ ನ್ಯೂಸ್" ಎಂದು ಟ್ವೀಟ್ ಮಾಡಿದ್ದಾರೆ.
"ಗುಡ್‌ನ್ಯೂಸ್, ಕಡ್ಡಾಯ ಕ್ವಾರಂಟೈನ್‌ನ ನಂತರ, ಕುನೋ ಆವಾಸಸ್ಥಾನಕ್ಕೆ ಮತ್ತಷ್ಟು ಹೊಂದಿಕೊಳ್ಳಲು 2 ಚೀತಾಗಳನ್ನು ದೊಡ್ಡ ಆವರಣಕ್ಕೆ ಬಿಡಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಉಳಿದವುಗಳನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದುʼʼ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮಾಡಿದ್ದಾರೆ.
ಕುನೊ ರಾಷ್ಟ್ರೀಯ ಉದ್ಯಾನವನ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಪ್ರಕಾಶ್ ಕುಮಾರ್ ವರ್ಮಾ ಅವರು ಶನಿವಾರ ಎರಡು ಚೀತಾಗಳನ್ನು ಕ್ವಾರಂಟೈನ್ ವಲಯಗಳಿಂದ ದೊಡ್ಡ ಆವರಣದಲ್ಲಿ ಬಿಡಲಾಗಿದೆ ಎಂದು ಹೇಳಿದ್ದಾರೆ. ದೊಡ್ಡ ಆವರಣವು ಐದು ಚದರ ಕಿಲೋಮೀಟರ್‌ಗಿಂತ ಹೆಚ್ಚು ವಿಸ್ತೀರ್ಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ 17ರಂದು ಭಾರತಕ್ಕೆ ಎಂಟು ಚೀತಾಗಳನ್ನು ನಮೀಬಿಯಾದಿಂದ ತರಲಾಗಿತ್ತು. "ಏಳು ದಶಕಗಳ ನಂತರ ಇಂದು ಸೆಪ್ಟೆಂಬರ್ 17ರಂದು ಚೀತಾಗಳು ಭಾರತದ ನೆಲಕ್ಕೆ ಮರಳಿವೆ. ಈ ಐತಿಹಾಸಿಕ ದಿನದಂದು ನಾನು ಎಲ್ಲಾ ಭಾರತೀಯರನ್ನು ಅಭಿನಂದಿಸುತ್ತೇನೆ. ನಮೀಬಿಯಾ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಅವರ ಸಹಾಯವಿಲ್ಲದೆ ಇಂದು ಚೀತಾ ಭಾರತಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲʼʼ ಎಂದು ಆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ದಶಕಗಳ ಹಿಂದೆ, ಜೀವವೈವಿಧ್ಯದ ಹಳೆಯ ಕೊಂಡಿಯಾದ ಚೀತಾ ಇಲ್ಲಿ ಅಳಿದುಹೋಗಿತ್ತು. ಇಂದು ಅದನ್ನು ಮರುಸಂಪರ್ಕಿಸಲು ನಮಗೆ ಅವಕಾಶ ಸಿಕ್ಕಿದೆ. ಈ ಚೀತಾಗಳೊಂದಿಗೆ, ಭಾರತದ ಪ್ರಕೃತಿ-ಪ್ರೀತಿಯ ಪ್ರಜ್ಞೆಯು ಪೂರ್ಣ ಬಲದಿಂದ ಜಾಗೃತಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
1952 ರಲ್ಲಿ ನಾವು ದೇಶದಲ್ಲಿ ಚೀತಾಗಳು ಅಳಿವಿನಂಚಿನಲ್ಲಿವೆ ಎಂದು ಘೋಷಿಸಿದ್ದು ದುರದೃಷ್ಟಕರವಾಗಿತ್ತು. ದಶಕಗಳಿಂದ ಅವುಗಳ ಸಂತತಿ ಭಾರತದಲ್ಲಿ ಬೆಳೆಯುವಂತೆ ಮಾಡಲು ಯಾವುದೇ ಅರ್ಥಪೂರ್ಣ ಪ್ರಯತ್ನಗಳು ನಡೆದಿಲ್ಲ. ಇಂದು, ನಾವು ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಆಚರಿಸುತ್ತಿರುವಾಗ, ದೇಶವು ಹೊಸ ಶಕ್ತಿಯೊಂದಿಗೆ ಚೀತಾಗಳನ್ನು ಪುನರ್ವಸತಿ ಮಾಡಲು ನೋಡುತ್ತಿದ್ದೇವೆ ಎಂದು ಅವರು ಹೇಳಿದ್ದರು.