Explainer: ಪಿಂಚಣಿದಾರರಿಗೆ ಸಿಹಿ ಸುದ್ದಿ: ಮನೆ ಎದುರೇ ಅಂಚೆ ಇಲಾಖೆಯಿಂದ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸೇವೆ
Postal service ಭಾರತೀಯ ಅಂಚೆ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್, ಪಿಂಚಣಿದಾರರ ಮನೆ ಬಾಗಿಲಿನಲ್ಲಿ, ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಸಲ್ಲಿಸಲು ವ್ಯವಸ್ಥೆ ಮಾಡಿದೆ.
ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರಿಗೆ/ಕುಟುಂಬ ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಡಿಎಲ್‌ಸಿ) ಸೇವೆಗಳನ್ನು ಸುಲಭವಾಗಿ ಒದಗಿಸಲು, ಕರ್ನಾಟಕ ರಾಜ್ಯ ಸರ್ಕಾರದ ಖಜಾನೆ ಆಯುಕ್ತರೊಂದಿಗೆ ಭಾರತೀಯ ಅಂಚೆ ಇಲಾಖೆಯ ಅಡಿಯಲ್ಲಿ ಬರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಎಂಒಯುಗೆ ಸಹಿ ಹಾಕಿದೆ.
ತಿಳುವಳಿಕೆ ಪತ್ರದ (ಎಂಒಯು) ಅಡಿಯಲ್ಲಿ, IPPBಯು ನವೆಂಬರ್ 1 ರಿಂದ ನವೆಂಬರ್ 30, 2023 ರವರೆಗಿನ ಮಸ್ಟರಿಂಗ್ ಅವಧಿಯಲ್ಲಿ 5.4 ಲಕ್ಷ+ ಕರ್ನಾಟಕ ಸರಕಾರದ ಪಿಂಚಣಿದಾರರು/ಕುಟುಂಬ ಪಿಂಚಣಿದಾರರಿಗೆ DLC ( ಡಿಜಿಟಲ್ ಲೈಫ್ ಸರ್ಟಿಫಿಕೇಟ್ ) ಸೇವೆಗಳನ್ನು ಒದಗಿಸುತ್ತದೆ.
ಪಿಂಚಣಿದಾರರು ವೈಯಕ್ತಿಕವಾಗಿ ಜೀವನ ಪ್ರಮಾಣಪತ್ರವನ್ನು ಸಲ್ಲಿಸುವ ಸಮಯದಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ತಪ್ಪಿಸಲು, ಭಾರತೀಯ ಅಂಚೆ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ “ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್”, ಪಿಂಚಣಿದಾರರ ಮನೆ ಬಾಗಿಲಿನಲ್ಲಿ, ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಸಲ್ಲಿಸಲು ವ್ಯವಸ್ಥೆ ಮಾಡಿದೆ.
ಪಿಂಚಣಿದಾರರು ತಮ್ಮ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಕೆಲವೇ ನಿಮಿಷಗಳಲ್ಲಿ ಪೋಸ್ಟ್‌ಮ್ಯಾನ್ ಮೂಲಕ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಪಿಒ ಸಂಖ್ಯೆ ಮತ್ತು ಪಿಂಚಣಿದಾರರ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ತಮ್ಮ ಬಯೋಮೆಟ್ರಿಕ್ (ಬೆರಳಚ್ಚು) ವೆರಿಫೈ ಮಾಡಿ ಸಲ್ಲಿಸಬಹುದು.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಅನ್ನು ಸೆಪ್ಟೆಂಬರ್ 01, 2018 ರಂದು ರಾಷ್ಟ್ರವ್ಯಾಪಿ ಪ್ರಾರಂಭಿಸಲಾಗಿದೆ. IPPB ಯ ಸೇವೆಗಳು ಈಗಾಗಲೇ ಸೇರ್ಪಡೆಗೊಂಡಿರುವ 8 ಕೋಟಿ+ ಗ್ರಾಹಕರಿಗೆ ಹಾಗು ಇನ್ನಿತರರಿಗೆ, ದೇಶಾದ್ಯಂತ 1,36,000 ಅಂಚೆ ಕಚೇರಿಗಳ ಮೂಲಕ ಲಭ್ಯವಿದೆ.
ಕರ್ನಾಟಕದಲ್ಲಿ IPPBಯು 31 ಶಾಖೆಗಳನ್ನು ಹೊಂದಿದ್ದು ಅದರ ಜೊತೆಗೆ 9500+ ಪೋಸ್ಟ್‌ಮ್ಯಾನ್‌ಗಳು ಅವರ ದೈನಂದಿನ ಡೆಲಿವರಿ ಬೀಟ್‌ನಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಸ್ಮಾರ್ಟ್‌ಫೋನ್ ಮತ್ತು ಬಯೋಮೆಟ್ರಿಕ್ ಸಾಧನಗಳನ್ನು ಹೊಂದಿದ್ದಾರೆ.
ಕರ್ನಾಟಕ ಸರ್ಕಾರದ ಪಿಂಚಣಿದಾರರು/ಕುಟುಂಬ ಪಿಂಚಣಿದಾರರು ತಮ್ಮ ಹತ್ತಿರದ ಅಂಚೆ ಕಛೇರಿಯಲ್ಲಿ ಅಥವಾ ಪೋಸ್ಟ್‌ಮ್ಯಾನ್ ಮೂಲಕ ಕೇವಲ ರೂ.70/- (ಜಿಎಸ್‌ಟಿ ಸೇರಿದಂತೆ) ಶುಲ್ಕನೀಡಿ ಈ ಸೌಲಭ್ಯವನ್ನು ಪಡೆದು ತಮ್ಮ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ಡಿಜಿಟಲ್ ನೊಂದಣಿಗೆ ಏನು ಬೇಕು
- ಪಿಂಚಣಿದಾರರು ಆಧಾರ್ ಸಂಖ್ಯೆ ಹೊಂದಿರಬೇಕು
- ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಬೇಕು
- ಆಧಾರ್ ಅನ್ನು ಪಿಂಚಣಿ ನೀಡುವ ಸಂಸ್ಥೆಯೊಂದಿಗೆ ನೊಂದಣಿ ಮಾಡಿಸಿರಬೇಕು
- ಬೇಕಾದ ಎಲ್ಲಾ ಮಾಹಿತಿಯನ್ನು ಸಿದ್ದಪಡಿಸಿಕೊಂಡಿರಬೇಕು
- ಯಾವ ರೀತಿ ಪಿಂಚಣಿ ಎನ್ನುವ ಮಾಹಿತಿಯನ್ನು ಇಟ್ಟುಕೊಂಡಿರಬೇಕು
- ಪಿಪಿಒ ಸಂಖ್ಯೆ
- ಪಿಂಚಣಿಯ ಖಾತೆ ಸಂಖ್ಯೆ
- ಪಿಂಚಣಿ ಅನುಮತಿಸುವ ಪ್ರಾಧಿಕಾರದ ಮಾಹಿತಿ
- ಹಿಂದಿನ ವರ್ಷವೇ ಡಿಎಲ್‌ಸಿ ಮಾಡಿಸಿದ್ದರೆ ಅ ಕುರಿತು ಮಾಹಿತಿ
- 70 ರೂ. ಶುಲ್ಕ