ಬ್ರಹ್ಮೋಸ್ ಶಕ್ತಿ ಏನು ಎಂದು ಪಾಕಿಸ್ತಾನವನ್ನು ಕೇಳಿ ನೋಡಿ; ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ವಿಡಿಯೋ ವೈರಲ್
ಬ್ರಹ್ಮೋಸ್ ಶಕ್ತಿ ಏನು ಎಂದು ಆಪರೇಷನ್ ಸಿಂದೂರದಲ್ಲಿ ಏಟು ತಿಂದಿರುವ ಪಾಕಿಸ್ತಾನವನ್ಜು ಕೇಳಿ ನೋಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಭಾರತ ಪಾಕ್ ಉದ್ವಿಗ್ನತೆ ನಡುವೆ ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಹಬ್ ಉದ್ಘಾಟನಾ ಸಮಾರಂಭದಲ್ಲಿ ಅವರ ಭಾಷಣದ ವಿಡಿಯೋ ವೈರಲ್ ಆಗಿದೆ.

ಬ್ರಹ್ಮೋಸ್ ಶಕ್ತಿ ಏನು: ಪಹಲ್ಗಾಮ್ ಉಗ್ರ ದಾಳಿ ಬೆನ್ನಿಗೆ ಭಾರತ ಶುರುಮಾಡಿದ ಭಯೋತ್ಪಾದನೆ ವಿರುದ್ಧದ ಹೋರಾಟದ ಭಾಗವಾಗಿರುವ ಆಪರೇಷನ್ ಸಿಂದೂರ ಪಾಕಿಸ್ತಾನಕ್ಕೆ ಬಲವಾದ ಹೊಡೆತ ನೀಡಿದೆ. ಪಾಕಿಸ್ತಾನದಲ್ಲಿರುವ ಹಾಗೂ ಪಾಕ್ ಆಕ್ರಮಿತ ಜಮ್ಮು - ಕಾಶ್ಮೀರದ ಭಾಗದಲ್ಲಿರುವ 9 ಉಗ್ರ ನೆಲೆಗಳನ್ನು ಭಾರತೀಯ ಸೇನೆ ನಾಶಪಡಿಸಿದೆ. ಇದರ ಬೆನ್ನಿಗೆ ಪಾಕಿಸ್ತಾನ ಅಪ್ರಚೋದಿತವಾದ ಡ್ರೋನ್ ದಾಳಿ ನಡೆಸಿದ ಕಾರಣ ಪ್ರತಿದಾಳಿ ನಡೆಸಿ, ಆ ಡ್ರೋನ್ ದಾಳಿ ಎಲ್ಲಿಂದ ಆಯಿತೆಂದು ತಿಳಿದು ಅದನ್ನು ನಾಶಪಡಿಸಿದೆ. ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನತೆ ಇರುವಾಗಲೇ ಉತ್ತರ ಪ್ರದೇಶದ ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಹಬ್ ಇಂದು (ಮೇ 11) ಉದ್ಘಾಟನೆಯಾಗಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಬ್ರಹ್ಮೋಸ್ ಶಕ್ತಿ ಏನು ಎಂದು ಪಾಕಿಸ್ತಾನವನ್ನು ಕೇಳಿ ನೋಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.
ಬ್ರಹ್ಮೋಸ್ ಶಕ್ತಿ ಏನು ಎಂದು ಪಾಕಿಸ್ತಾನವನ್ನು ಕೇಳಿ ನೋಡಿ; ಯೋಗಿ
ಲಕ್ನೋದಲ್ಲಿ ಭಾನುವಾರ ನಡೆದ 'ಬ್ರಹ್ಮೋಸ್ ಏರೋಸ್ಪೇಸ್ ಇಂಟಿಗ್ರೇಷನ್ ಅಂಡ್ ಟೆಸ್ಟಿಂಗ್ ಫೆಸಿಲಿಟಿ' ಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡುವಾಗ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬ್ರಹ್ಮೋಸ್ ಕ್ಷಿಪಣಿಗಳ ಬಲವನ್ನು ಶ್ಲಾಘಿಸಿದರು. 'ಆಪರೇಷನ್ ಸಿಂದೂರ್' ನಮಗೆ 'ಬ್ರಹ್ಮೋಸ್ ಕ್ಷಿಪಣಿಗಳ' ಶಕ್ತಿಯನ್ನು ಸ್ಪಷ್ಟವಾಗಿ ತೋರಿಸಿದೆ. ನಿಮಗೆ ಈ ವಿಚಾರದಲ್ಲಿ ಯಾವುದೇ ಸಂದೇಹವಿದ್ದರೆ, ಹೋಗಿ ಪಾಕಿಸ್ತಾನದ ಜನರನ್ನು ಅದರ ಬಗ್ಗೆ ಕೇಳಿ ಎಂದು ಯೋಗಿ ಆದಿತ್ಯನಾಥ ಹೇಳಿದರು.
ಬ್ರಹ್ಮೋಸ್ ಮಿಸೈಲ್ ಎಂದರೇನು?: ಯೋಗಿ ಆದಿತ್ಯನಾಥ ಪ್ರಶ್ನೆ
ಬ್ರಹ್ಮೋಸ್ ಕ್ಷಿಪಣಿ ಎಂದರೇನು?, ನೀವು ಇತ್ತೀಚೆಗೆ ಆಪರೇಷನ್ ಸಿಂದೂರ್ ಸಮಯದಲ್ಲಿ ಅದರ ಒಂದು ನೋಟವನ್ನು ನೋಡಿರಬಹುದು.ನೀವು ಅದನ್ನು ನೋಡದಿದ್ದರೆ, ಕನಿಷ್ಠ, ಬ್ರಹ್ಮೋಸ್ ಕ್ಷಿಪಣಿಯ ನಿಜವಾದ ಶಕ್ತಿ ಏನು ಎಂದು ನೀವು ಪಾಕಿಸ್ತಾನದ ಜನರನ್ನು ಕೇಳಬೇಕು" ಎಂದು ಲಕ್ನೋದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.
ಯಾವುದೇ ಭಯೋತ್ಪಾದನೆ ಕೃತ್ಯವನ್ನು ಈಗ ಯುದ್ಧದ ಕೃತ್ಯವೆಂದು ಪರಿಗಣಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಮತ್ತು ನೆನಪಿಡಿ, ಭಯೋತ್ಪಾದನೆ ಸಂಪೂರ್ಣವಾಗಿ ನಾಶಮಾಡುವ ತನಕ, ಆ ಸಮಸ್ಯೆಗೆ ಪರಿಹಾರವೇ ಇಲ್ಲ. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಮಟ್ಟಹಾಕುವ ಸಮಯ ಬಂದಿದೆ. ಇಡೀ ರಾಷ್ಟ್ರ, ಇಡೀ ಉತ್ತರ ಪ್ರದೇಶ ಪಿಎಂ ಮೋದಿಯ ನಾಯಕತ್ವದಲ್ಲಿ ಒಂದೇ ಧ್ವನಿಯಾಗಬೇಕು ಮತ್ತು ಈ ಅಭಿಯಾನವನ್ನು ಬೆಂಬಲಿಸಬೇಕು ಎಂದು ಯೋಗಿ ಹೇಳಿದರು.
ಭಯೋತ್ಪಾದನೆ ಎಂಬುದು ನಾಯಿ ಬಾಲ ಇದ್ದಂತೆ. ಅದು ಎಂದೆಂದಿಗೂ ಡೊಂಕು. ಶಾಂತಿಯ ಭಾಷೆಯನ್ನು ಅರ್ಥಮಾಡಿಕೊಳ್ಳದವರಿಗೆ ಅವರದ್ದೇ ದಾಟಿಯಲ್ಲಿ ಉತ್ತರಿಸಬೇಕು. ಆಪರೇಷನ್ ಸಿಂದೂರದ ಮೂಲಕ ಭಾರತವೂ ಅದೇ ದಾಟಿಯ ಉತ್ತರ ನೀಡುತ್ತಿದ್ದು, ಜಗತ್ತಿಗೆ ಬಲವಾದ ಸಂದೇಶ ರವಾನಿಸಿದೆ ಎಂದು ಯೋಗಿ ಆದಿತ್ಯನಾಥ ವಿವರಿಸಿದರು.
200 ಎಕರೆ ಪ್ರದೇಶದಲ್ಲಿ ಬ್ರಹ್ಮೋಸ್ ಕ್ಷಿಪಣಿ ಹಬ್
ನಾವು ಬ್ರಹ್ಮೋಸ್ ಕ್ಷಿಪಣಿಗಾಗಿ 200 ಎಕರೆ ಪ್ರದೇಶವನ್ನು ಲಕ್ನೋದಲ್ಲಿ ಮೀಸಲಾಗಿಟ್ಟಿದ್ದೇವೆ. ಅಲ್ಲಿ ಕ್ಷಿಪಣಿ ಉತ್ಪಾದನೆ ಶುರುವಾಗಲಿದೆ. ಆಪರೇಷನ್ ಸಿಂದೂರ್ ಸಮಯದಲ್ಲಿ ಬ್ರಹ್ಮೋಸ್ ಕ್ಷಿಪನಿಯ ಶಕ್ತಿಯನ್ನು ನೀವು ಮನಗಂಡಿರಬಹುದು. ಒಂದೊಮ್ಮೆ ನೋಡಿಲ್ಲ ಎಂದಾರೆ, ಪಾಕಿಸ್ತಾನದ ಜನ ಬ್ರಹ್ಮೋಸ್ ಕ್ಷಿಪಣಿಯ ಶಕ್ತಿ ಏನು ಎಂಬುದನ್ನು ವಿವರಿಸಬಲ್ಲರು ಎಂದು ಯೋಗಿ ಆದಿತ್ಯನಾಥ ಹೇಳಿದರು. ಈ ಯೋಜನೆಗೆ 300 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇದೇ ವೇಳೆ ಹೇಳಿದರು.
ವಿಭಾಗ