ಕನ್ನಡ ಸುದ್ದಿ  /  Nation And-world  /  Pregnant Woman, Husband Burnt To Death In Kerala After Car Catches Fire

Car catches fire: ಹೆರಿಗೆ ನೋವೆಂದು ಆಸ್ಪತ್ರೆಗೆ ತೆರಳುವ ವೇಳೆ ಕಾರಿಗೆ ಬೆಂಕಿ: ಗರ್ಭಿಣಿ ಮಹಿಳೆ, ಆಕೆಯ ಪತಿ ಸಜೀವ ದಹನ

ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಗರ್ಭಿಣಿ ಮಹಿಳೆ ಮತ್ತು ಆಕೆಯ ಪತಿ ಸಾವನ್ನಪ್ಪಿರುವ ದುರಂತ ಘಟನೆ ಕೇರಳದ ಕಣ್ಣೂರಿನಲ್ಲಿ ಇಂದು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಣ್ಣೂರು (ಕೇರಳ): ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಗರ್ಭಿಣಿ ಮಹಿಳೆ ಮತ್ತು ಆಕೆಯ ಪತಿ ಸಾವನ್ನಪ್ಪಿರುವ ದುರಂತ ಘಟನೆ ಕೇರಳದ ಕಣ್ಣೂರಿನಲ್ಲಿ ಇಂದು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಕರಿದ್ದರು. ಪತ್ನಿ-ಪತಿ ಮುಂದುಗಡೆ ಹಾಗೂ ಇತರ ಮೂವರು ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ಹಿಂಬದಿ ಕುಳಿತಿದ್ದ ಮೂವರು ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಕೆಳಗಿಳಿದಿದ್ದಾರೆ. ಆದರೆ ಮುಂಬದಿ ಕುಳಿತಿದ್ದ ಗಂಡ-ಹೆಂಡತಿ ಸೀಟ್ ಬೆಲ್ಟ್ ಹಾಕಿಕೊಂಡಿದ್ದರು. ಅದನ್ನು ಅನ್​ಲಾಕ್​ ಮಾಡಲು ಸಾಧ್ಯವಾಗದ ಕಾರಣ ಹೊರಬರಲು ಸಾಧ್ಯವಾಗಲಿಲ್ಲ.

ಮೃತರನ್ನು ನಂತರ ರೀಶಾ (26) ಮತ್ತು ಆಕೆಯ ಪತಿ ಪ್ರಜಿತ್ (32) ಎಂದು ಗುರುತಿಸಲಾಗಿದೆ. ರೀಶಾ ಗರ್ಭಿಣಿಯಾಗಿದ್ದು, ನೋವು ಕಾಣಿಸಿಕೊಂಡಿದ್ದರಿಂದ ಆಕೆಯನ್ನು ಕಣ್ಣೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ.

"ನಾವು ಅವರನ್ನು ಉಳಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು ಆದರೆ ವಾಹನವು ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿತು ಮತ್ತು ಇಂಧನದ ಟ್ಯಾಂಕ್ ಒಡೆದುಹೋಗಿ ಕಾರು ಸ್ಫೋಟಗೊಳ್ಳುತ್ತದೆ ಎಂದು ನಾವು ಭಯಪಟ್ಟಿದ್ದೆವು" ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು. ಪ್ರಾಥಮಿಕ ತನಿಖೆಯ ನಂತರ, ಶಾರ್ಟ್ ಸರ್ಕ್ಯೂಟ್‌ನಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ ಮತ್ತು ವಿಧಿವಿಜ್ಞಾನ ಅಧಿಕಾರಿಗಳು ಸಹ ಪರಿಶೀಲನೆ ನಡೆಸುತ್ತಿದ್ದಾರೆ.

ಭೀಕರ ರಸ್ತೆ ಅಪಘಾತ - ತಾಯಿ, ಮಗಳ ದುರ್ಮರಣ

ಕರ್ನಾಟಕದ ರಾಜಧಾನಿ ಬೆಂಗಳೂರಿನ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಸಿಮೆಂಟ್ ತುಂಬಿದ ಕಾಂಕ್ರೀಟ್ ಮಿಕ್ಸರ್ ಟ್ರಕ್‌ ಪಲ್ಟಿಯಾಗಿ ಕಾರಿನ ಮೇಲೆ ಬಿದ್ದ ಪರಿಣಾಮ ಮಹಿಳೆ ಮತ್ತು ಆಕೆಯ ಹದಿಹರೆಯದ ಮಗಳು ಸಾವನ್ನಪ್ಪಿದ್ದಾರೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಗಾಯತ್ರಿ ಕುಮಾರ್‌ (47) ಮತ್ತು ಆಕೆಯ ಪುತ್ರಿ ಸಮಂತಾ ಕುಮಾರ್‌ (16) ಎಂದು ಗುರುತಿಸಲಾಗಿದೆ. ಗಾಯತ್ರಿ ಎಸ್‌ಯುವಿ ಚಲಾಯಿಸುತ್ತಿದ್ದರು. ಅವರು ತಮ್ಮ ಮಗಳು ಸಮಂತಾರನ್ನು ಶಾಲೆಗೆ ಬಿಡಲು ತೆರಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ಸ್ಥಳದಲ್ಲಿ ವಾಹನದ ಅಡಿ ಸಿಲುಕಿದ್ದ ಮಹಿಳೆ ಮತ್ತು ಅವರ ಪುತ್ರಿಯನ್ನು ಹೊರತೆಗೆಯಲು ಸಾರ್ವಜನಿಕರು ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಅಪಘಾತವಾದ ಕೂಡಲೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೃತದೇಹಗಳನ್ನು ಹೊರತೆಗೆಯಲು ಒಟ್ಟು ನಾಲ್ಕು ಮೊಬೈಲ್ ಕ್ರೇನ್‌ಗಳು ಮತ್ತು ಅರ್ಥ್‌ ಮೂವರ್‌ ಅನ್ನು ಬಳಸಲಾಯಿತು ಎಂದು ಎಎನ್‌ಐ ವರದಿ ಮಾಡಿದೆ. ಈ ಸುದ್ದಿಯ ಫೋಟೋಸ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ