ಕನ್ನಡ ಸುದ್ದಿ  /  Nation And-world  /  Prime Minister Modi Will Inaugurate New Parliament Building Today Puja By Priests Of Sringeri Sarada Mutt Rmy

New Parliament Building: ಪ್ರಧಾನಿ ಮೋದಿ ಅವರಿಂದ ಇಂದು ನೂತನ ಸಂಸತ್ ಭವನ ಲೋಕಾರ್ಪಣೆ; ಶೃಂಗೇರಿ ಶಾರದ ಮಠದ ಪುರೋಹಿತರಿಂದ ಪೂಜೆ

ವಿರೋಧ ಪಕ್ಷಗಳ ವಿರೋಧದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯಲ್ಲಿನ ನೂತನ ಸಂಸತ್ ಭವನ ಉದ್ಘಾಟನೆ ಮಾಡಲಿದ್ದಾರೆ.

ನೂತನ ಸಂಸತ್ ಭವನ ಇಂದು ಪ್ರಧಾನಿ ಮೋದಿ ಅವರಿಂದ ಲೋಕಾರ್ಪಣೆಯಾಗಲಿದೆ
ನೂತನ ಸಂಸತ್ ಭವನ ಇಂದು ಪ್ರಧಾನಿ ಮೋದಿ ಅವರಿಂದ ಲೋಕಾರ್ಪಣೆಯಾಗಲಿದೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಇಂದು (ಮೇ 28, ಭಾನುವಾರ) ನೂತನ ಸಂಸತ್ ಭವನವನ್ನು (New Parliament Building) ಲೋಕಾರ್ಪಣೆ ಮಾಡಲಿದ್ದಾರೆ. ವಿಶೇಷತೆ ಎಂದರೆ ನೂತನ ಕಟ್ಟಡ ಉದ್ಘಾಟನೆ ಪೂಜಾ ಕಾರ್ಯವನ್ನು ಶೃಂಗೇರಿ ಮಠದ ಪುರೋಹಿತರಿಗೆ ವಹಿಸಲಾಗಿದೆ.

2020ರ ನವೆಂಬರ್ 10 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನ ನಿರ್ಮಾಣಕ್ಕಾಗಿ ಶಿಲಾನ್ಯಾಸ ಹಾಗೂ ಭೂಮಿ ಪೂಜೆ ನೆರವೇರಿಸಿದ್ದರು. ಅಂದು ಕೂಡ ಶೃಂಗೇರಿ ಮಠದ ಹಿರಿಯ ಪುರೋಹಿತ ನಾಗರಾಜ ಅಡಿಗ ಅವರ ನೇತೃತ್ವದ ಆರು ಮಂದಿಯ ತಂಡ ಪೂಜೆಯನ್ನು ನೆರವೇರಿಸಿದ್ದರು.

ಐತಿಹಾಸಿಕ ಸೆಂಗೋಲ್​ ಚಿನ್ನದ ರಾಜದಂಡವನ್ನು ಲೋಕಸಭೆಯ ಸ್ಪೀಕರ್‌ ಆಸನದ ಪಕ್ಕ ಇವತ್ತು ಅಳವಡಿಸಲಾಗುತ್ತದೆ. ಸಂಸತ್‌ ಭವನ ಉದ್ಘಾಟನೆಗೂ ಮುನ್ನ ತಮಿಳುನಾಡಿನ ವಿವಿಧ ಅಧೀನಂ ಮಠದ ಪೀಠಾಧಿಪತಿಗಳು ಸೆಂಗೋಲ್​ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿನ್ನೆ (ಮೇ 27, ಶನಿವಾರ) ಹಸ್ತಾಂತರಿಸಿದ್ದರು.

ನೂತನ ಸಂಸತ್ ಭವನ ಕುರಿತ ಪ್ರಮುಖ ಅಂಶಗಳು

  • 1,200 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನೂತನ ಸಂಸತ್ ಭವನದ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ
  • ನೂತನ ಸಂಸತ್ ಭವನದ ವಿಸ್ತೀರ್ಣ 64,500 ಚದರ ಮೀಟರ್ ಇದ್ದು, ತ್ರಿಕೋನ ಆಕಾರದಲ್ಲಿ ಇದೆ
  • ಸಂಸತ್ ಭವನದ ಮೇಲೆ 6.5 ಮೀಟರ್ ಎತ್ತರದ 9.5 ಟನ್ ತೂಕದ ಭವಿಷ್ಯ ರಾಷ್ಟ್ರ ಲಾಂಛನವನ್ನು ಅಳವಡಿಸಲಾಗಿದೆ
  • ಈ ಭವನದಲ್ಲಿ ಒಟ್ಟು 4 ಮಹಡಿಗಳಿದ್ದು, ಜ್ಞಾನ, ಶಕ್ತಿ ಹಾಗೂ ಕರ್ಮ ಎಂಬ 3 ದ್ವಾರಗಳನ್ನು ನಿರ್ಮಿಸಲಾಗಿದೆ
  • ಹೊಸ ಕಟ್ಟಡದಲ್ಲಿನ ಲೋಕಸಭೆ, ರಾಜ್ಯಸಭೆಯ ಆಸನಗಳನ್ನು ಸಂಖ್ಯೆಯನ್ನು 1,272ಕ್ಕೆ ಹೆಚ್ಚಿಸಲಾಗಿದೆ
  • ಲೋಕಸಭೆಗಳ ಸಂಖ್ಯೆಯನ್ನು 888ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಈ ಮೊದಲು ಇದ್ದ ಸಂಖ್ಯೆಗಿಂತ 332 ಅಧಿಕ ಆಸನಗಳ ವ್ಯವ
  • ಕಟ್ಟಡ ನಿರ್ಮಾಣಕ್ಕೆ 23,04,095 ಮಾನವ ದಿನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ.
  • 26,045 ಮೆಟ್ರಿಕ್ ಟನ್ ಉಕ್ಕ, 63,807 ಮೆಟ್ರಿಕ್ ಟನ್ ಸಿಮೆಂಟ್ ಬಳಸಲಾಗಿದೆ.

ದೆಹಲಿಯ ಹೃದಯ ಭಾಗದಲ್ಲಿರುವ ಈಗಿನ ಸಂಸತ್ ಭವನವನ್ನು 1927ರಲ್ಲಿ ಉದ್ಘಾಟನೆ ಮಾಡಲಾಗಿತ್ತು. ಅಂದಿನಿಂದ ಇಂದಿನ ವರೆಗೆ ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಕುರಿತ ಚರ್ಚೆಗಳು, ಐತಿಹಾಸಿನ ಶಾಸನಗಳನ್ನು ಅಂಗೀಕರಿಸಲಾಗಿದೆ. ಇವತ್ತು (ಮೇ 28, ಭಾನುವಾರ) ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ ಭವನವನ್ನು ಉದ್ಘಾಟನೆಗೊಳಿಸುವುದರೊಂದಿಗೆ ಈ ಭವನ ಇತಿಹಾಸದ ಪುಟಗಳಲ್ಲಿ ಮರೆಯಾಗಲಿದೆ.

ವಿಭಾಗ