Wrestlers protest: ಹೊಸ ಬೇಡಿಕೆ ಇಟ್ಟ ಕುಸ್ತಿಪಟುಗಳು: ಏನು ಬೇಡಿಕೆಗಳು
ಮೂರು ದಿನದ ಹಿಂದೆ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ನಿಯೋಗವು ಈ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿತ್ತು. ಶಾ ಸೂಚನೆ ಹಿನ್ನೆಲೆಯಲ್ಲಿ ಠಾಕೂರ್ ಸಭೆ ನಡೆಸಿದ್ದಾರೆ .
ಹೊಸದಿಲ್ಲಿ: ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರ ಬಂಧನ ಹಾಗೂ ವಜಾಕ್ಕೆ ಪಟ್ಟು ಹಿಡಿದಿರುವ ಪ್ರತಿಭಟನಾ ನಿರತ ಕುಸ್ತಿ ಪಟುಗಳು ಫೆಡರೇಷನ್‌ಗೆ ಮಹಿಳಾ ಅಧ್ಯಕ್ಷರನ್ನು ನೇಮಿಸುವಂತೆ ಒತ್ತಾಯಿಸಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ಬುಧವಾರ ಮಧ್ಯಾಹ್ನ ಮಾತುಕತೆ ನಡೆಸಿದ ವೇಳೆ ಐದು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಐದು ಬೇಡಿಕೆ ಈಡೇರಿಸುವುದಾದರೆ ಒಂದೂವರೆ ತಿಂಗಳಿನಿಂದ ನಡೆಸುತ್ತಿರುವ ಕುಸ್ತಿ ಪಟುಗಳು ಧರಣಿ ಹಿಂಪಡೆಯಲಿದ್ದಾರೆ ಎಂದು ಸಚಿವರಿಗೆ ಸ್ಪಷ್ಟಮಾತುಗಳಲ್ಲಿ ತಿಳಿಸಿದ್ದಾರೆ.
ಭಾರತೀಯ ಕುಸ್ತಿ ಫೆಡರೇಷನ್(WFI)ಗೆ ಅಧ್ಯಕ್ಷರನ್ನಾಗಿ ಮಹಿಳೆಯೊಬ್ಬರನ್ನು ನೇಮಿಸಬೇಕು.
ಕುಸ್ತಿ ಫೆಡರೇಷನ್‌ನ ಹಾಲಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಹಾಗೂ ಅವರ ಯಾವುದೇ ಕುಟುಂಬದ ಸದಸ್ಯರು ಭಾರತೀಯ ಕುಸ್ತಿ ಫೆಡರೇಷನ್‌ನಲ್ಲಿ ಇರಬಾರದು.
ಇಡೀ ಭಾರತೀಯ ಕುಸ್ತಿ ಫೆಡರೇಷನ್ ಭ್ರಷ್ಟಾಚಾರ ಹಾಗೂ ಅತ್ಯಂತ ಕೆಟ್ಟ ನಿರ್ವಹಣೆಯಿಂದ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಫೆಡರೇಷನ್‌ಗೆ ಚುನಾವಣೆಯು ನ್ಯಾಯಯುತ ಹಾಗೂ ಮುಕ್ತವಾಗಿ ನಡೆಸಬೇಕು.
ಮೇ 28ರ ಸಂಸತ್‌ನ ಹೊಸ ಭವನ ಉದ್ಘಾಟನೆ ದಿನದಂದು ಜಂತರ್ ಮಂತರ್ ರಸ್ತೆಯಲ್ಲಿ ಪ್ರತಿಭಟನೆ ನಡೆಸುವಾಗ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘಿಸಿದರು ಎಂದು ತಮ್ಮ ವಿರುದ್ದ ದಾಖಲಾಗಿರುವ ಎಲ್ಲಾ ಮೊಕದ್ದಮೆಗಳನ್ನು ವಾಪಾಸ್ ಪಡೆಯಬೇಕು. ಬ್ರಿಜ್ ಭೂಷಣ್ ಸಿಂಗ್ ಅವರನ್ನು ವಜಾಗೊಳಿಸಿ ಬಂಧಿಸಬೇಕು ಎನ್ನುವ ಬೇಡಿಕೆ ಮುಂದಿಟ್ಟರು.
ಕುಸ್ತಿಪಟುಗಳಾಗ ಭಜರಂಗ್ ಪೂನಿಯಾ, ಸಾಕ್ಷಿ ಮಲ್ಲಿಕ್ ಹಾಗೂ ಇತರೆ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸಿದ ಸಚಿವ ಅನುರಾಗ್ ಠಾಕೂರ್ ಯಾವುದೇ ಭರವಸೆಯನ್ನು ನೀಡಲಿಲ್ಲ.
ಮೂರು ದಿನದ ಹಿಂದೆ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ನಿಯೋಗವು ಈ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿತ್ತು. ಶಾ ಸೂಚನೆ ಹಿನ್ನೆಲೆಯಲ್ಲಿ ಠಾಕೂರ್ ಸಭೆ ನಡೆಸಿದ್ದಾರೆ .
ಫೆಡರೇಷನ್ ವಿರುದ್ದ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೂ ಬಿಗಿಯಾಗುತ್ತಾ ಹೋಗಿದೆ. ರೈತಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಇರುವುದರಿಂದ ಕೇಂದ್ರ ಸರ್ಕಾರವೂ ವಿವಾದ ಬಗೆಹರಿಸಲು ಪ್ರಯತ್ನಿಸುತ್ತಿದೆ.
ವಿಭಾಗ