ಕನ್ನಡ ಸುದ್ದಿ  /  Nation And-world  /  Rahul Gandhi Disqualified Rahul Gandhi Disqualified By Parliament After Conviction In Modi Surname Case

Rahul Gandhi disqualified: ಮೋದಿ ಸರ್‌ನೇಮ್‌ ಕೇಸ್‌ನಲ್ಲಿ ದೋಷಿಯಾದ ರಾಹುಲ್‌ ಗಾಂಧಿಯನ್ನು ಅನರ್ಹಗೊಳಿಸಿದ ಸಂಸತ್‌

Rahul Gandhi disqualified: 'ಮೋದಿ ಉಪನಾಮ' ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ನಂತರ ರಾಹುಲ್ ಗಾಂಧಿ ಅವರನ್ನು ಸಂಸತ್ತು ಅನರ್ಹಗೊಳಿಸಿದೆ.

ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ (PTI Photo/Kamal Singh))

ಮೋದಿ ಸರ್‌ನೇಮ್‌ ಕೇಸ್‌ನಲ್ಲಿ ದೋಷಿ ಎನಿಸಿಕೊಂಡ ರಾಹುಲ್‌ ಗಾಂಧಿ ಶುಕ್ರವಾರ ಸಂಸತ್‌ ಸದಸ್ಯತ್ವವನ್ನೂ ಕಳೆದುಕೊಂಡರು.

ಸೂರತ್‌ ನ್ಯಾಯಾಲಯವು, ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಪ್ಪಿತಸ್ಥರೆಂದು ಪರಿಗಣಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದಾಗಿ ಸಂಸತ್‌ ಪ್ರಕಟಿಸಿದೆ.

ಸಂಸತ್ತಿನ ನೋಟೀಸ್‌ನಲ್ಲಿರುವ ಪ್ರಕಾರ, ಸೂರತ್‌ ಕೋರ್ಟ್‌ ಮಾ.23ರಂದು ನೀಡಿದ ತೀರ್ಪಿನ ಪ್ರಕಾರ ರಾಹುಲ್‌ ಗಾಂಧಿ ಅವರು ದೋಷಿ ಎನಿಸಿಕೊಂಡಿದ್ದಾರೆ. ಸಂವಿಧಾನದ 102ನೇ ಅನುಚ್ಛೇದ (1)(ಇ) ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್‌ (8)ರ ಪ್ರಕಾರ ಅವರನ್ನು ವಯನಾಡು ಸಂಸತ್‌ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ ಎಂಬ ಉಲ್ಲೇಖವಿದೆ.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಕರ್ನಾಟಕದಲ್ಲಿ ಪ್ರಚಾರ ಸಭೆಯಲ್ಲಿ ಮೋದಿ ಸರ್‌ನೇಮ್‌ ಕುರಿತು ಅವಹೇಳನ ಮಾಡಿದ್ದರು. ಎಲ್ಲ ಕಳ್ಳರಿಗೂ ಮೋದಿ ಎಂಬ ಸರ್‌ನೇಮ್‌ ಹೇಗೆ ಬಂತು ಎಂದು ಲೇವಡಿ ಮಾಡಿದ್ದರು.

ಇದರ ವಿರುದ್ದ ಗುಜರಾತ್‌ನ ಸೂರತ್‌ನಲ್ಲಿ ಕೇಸ್‌ ದಾಖಲಾಗಿತ್ತು. ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ರಾಹುಲ್‌ ಗಾಂಧಿ ವಿರುದ್ಧ ಕ್ರಿಮಿನಲ್‌ ಮಾನಹಾನಿ ದಾವೆ ಹೂಡಿದ್ದರು. ಸೂರತ್‌ ಕೋರ್ಟ್‌ ಇದರ ವಿಚಾರಣೆ ನಡೆಸಿ ಇಂದು ತೀರ್ಪು ಪ್ರಕಟಿಸಿತು. ಆದರೆ, ಈ ತೀರ್ಪನ್ನು ರಾಹುಲ್ ಗಾಂಧಿ ಪ್ರಶ್ನಿಸಲಿರುವ ಕಾರಣ, ಕೋರ್ಟ್‌ ತಾನು ನೀಡಿದ ಎರಡು ವರ್ಷಗಳ ಶಿಕ್ಷೆಯನ್ನು ಒಂದು ತಿಂಗಳ ಮಟ್ಟಿಗೆ ಅಮಾನತುಗೊಳಿಸಿತ್ತು.

ಈ ಪ್ರಕರಣ ಸಂಬಂಧ ಇನ್ನಷ್ಟು ಸುದ್ದಿಗಳು

ಯುಪಿಎ ಸರ್ಕಾರದ ಸುಗ್ರೀವಾಜ್ಞೆ ಹರಿದುಹಾಕಿದ್ದ ರಾಹುಲ್‌ ಗಾಂಧಿಗೆ ಅದಾಗ ಹತ್ತು ವರ್ಷದ ಬಳಿಕ ಅನರ್ಹತೆಯ ಭೀತಿ

Rahul Gandhi tore ordinance: ಅನರ್ಹತೆ ತಪ್ಪಿಸಲು ಯುಪಿಎ ಹೊರಡಿಸಿದ್ದ ಸುಗ್ರೀವಾಜ್ಞೆ ಪ್ರತಿಹರಿದು ಹಾಕಿದ್ದ ರಾಹುಲ್‌ ಗಾಂಧಿಗೆ ಈಗ ಅದೇ ಸುಪ್ರೀಂ ಕೋರ್ಟ್‌ ತೀರ್ಪಿನ ಅಂಶ ಮುಳುವಾಗಿದೆ. ಸಂಸದ ಸ್ಥಾನದಿಂದ ಅನರ್ಹರಾಗುವ ಆತಂಕ ಉಂಟಾಗಿದೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

2 ವರ್ಷ ಜೈಲು ಶಿಕ್ಷೆ ಘೋಷಣೆ ಕಾರಣ ರಾಹುಲ್‌ ಗಾಂಧಿ ಸಂಸದ ಸ್ಥಾನ ಕಳೆದುಕೊಳ್ಳುತ್ತಾರಾ?

Rahul Gandhi Convicted: ಮೋದಿ ಸರ್‌ನೇಮ್‌ ಅವಹೇಳನ ಮಾಡಿ ಕ್ರಿಮಿನಲ್‌ ಮಾನನಷ್ಟ ಕೇಸ್‌ ಎದುರಿಸಿದ ರಾಹುಲ್‌ ಗಾಂಧಿ ದೋಷಿ ಎಂದು ಸೂರತ್‌ ಕೋರ್ಟ್‌ ಇಂದು ತೀರ್ಪು ನೀಡಿದೆ. 2 ವರ್ಷದ ಸಜೆಯನ್ನೂ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಅವರು ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ಅನರ್ಹರಾಗುತ್ತಾರಾ?ವಿವರ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

ʻಸತ್ಯವೇ ನನ್ನ ದೇವರುʼ; ಸೂರತ್‌ ಕೋರ್ಟ್‌ ತೀರ್ಪಿನ ಬಳಿಕ ರಾಹುಲ್‌ ಗಾಂಧಿ ಮೊದಲ ಪ್ರತಿಕ್ರಿಯೆ

ಮೋದಿ ಸರ್‌ನೇಮ್‌ ಹೊಂದಿದವರನ್ನು ಅವಹೇಳನ ಮಾಡಿದ ಪ್ರಕರಣದಲ್ಲಿ ಗುಜರಾತ್‌ನ ಸೂರತ್‌ ಕೋರ್ಟ್‌ ರಾಹುಲ್‌ ಗಾಂಧಿಗೆ ಎರಡು ವರ್ಷ ಸಜೆ ವಿಧಿಸಿದೆ. ಬಳಿಕ ಜಾಮೀನು ಕೂಡ ನೀಡಿದೆ. ಈ ತೀರ್ಪು ಪ್ರಕಟವಾದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿರುವ ರಾಹುಲ್‌ ಗಾಂಧಿ, ಮಹಾತ್ಮ ಗಾಂಧಿ ಅವರ ಹೇಳಿಕೆಯನ್ನು ಬಳಸಿಕೊಂಡಿದ್ದಾರೆ. ಈ ಹೇಳಿಕೆಯನ್ನು ಅವರು ಟ್ವೀಟ್‌ ಮಾಡಿ ಗಮನಸೆಳೆದಿದ್ದಾರೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಮೋದಿ ಸರ್‌ನೇಮ್‌ ಅವಹೇಳನ; ರಾಹುಲ್‌ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ- ಸೂರತ್‌ ಕೋರ್ಟ್‌ ತೀರ್ಪು

Rahul Gandhi Convicted: 'ಮೋದಿ ಉಪನಾಮ' ಹೇಳಿಕೆಗೆ ಸಂಬಂಧಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ಜಿಲ್ಲಾ ನ್ಯಾಯಾಲಯ ಅವರನ್ನು ದೋಷಿ ಎಂದು ತೀರ್ಪು ನೀಡಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point