ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರಾಜಸ್ಥಾನ ಲೋಕಸಭಾ ಫಲಿತಾಂಶ; 14 ಸ್ಥಾನಗಳು ಎನ್‌ಡಿಎ ತೆಕ್ಕೆಗೆ; ಶೂನ್ಯ ಕಳಂಕ ನಿವಾರಿಸಿಕೊಂಡ ಕಾಂಗ್ರೆಸ್

ರಾಜಸ್ಥಾನ ಲೋಕಸಭಾ ಫಲಿತಾಂಶ; 14 ಸ್ಥಾನಗಳು ಎನ್‌ಡಿಎ ತೆಕ್ಕೆಗೆ; ಶೂನ್ಯ ಕಳಂಕ ನಿವಾರಿಸಿಕೊಂಡ ಕಾಂಗ್ರೆಸ್

ಲೋಕಸಭಾ ಚುನಾವಣೆಯ ಏಳು ಹಂತಗಳ ಸುದೀರ್ಘ ಮತದಾನ ಪ್ರಕ್ರಿಯೆ ಮುಗಿದು ಇಂದು (ಜೂನ್ 4) ಫಲಿತಾಂಶ ಪ್ರಕಟವಾಗುತ್ತಿದೆ. ರಾಜಸ್ಥಾನದ 25 ಸ್ಥಾನಗಳ ಫಲಿತಾಂಶ ಕುತೂಹಲ ಕೆರಳಿಸಿದ್ದು, ಮೂರನೆ ಬಾರಿಗೆ ಬಿಜೆಪಿ, ಎನ್‌ಡಿಎ ಪೂರ್ಣ ತನ್ನ ತೆಕ್ಕೆಗೆ ಬಾಚಿಕೊಳ್ಳುವುದೇ ಅಥವಾ ಕಾಂಗ್ರೆಸ್ ತನ್ನ ಶೂನ್ಯ ಸಾಧನೆಯ ದಾಖಲೆ ಮುರಿಯವುದೇ ಎಂಬ ಕುತೂಹಲವದು. ಇದರ ವಿವರ ವರದಿ ಇಲ್ಲಿದೆ.

ರಾಜಸ್ಥಾನ ಲೋಕಸಭಾ ಫಲಿತಾಂಶ;-- ಸ್ಥಾನ ಎನ್‌ಡಿಎ ತೆಕ್ಕೆಗೆ, ಕಾಂಗ್ರೆಸ್‌ನ ಶೂನ್ಯ ಕಳಂಕ ನಿವಾರಣೆ (ಸಾಂಕೇತಿಕ ಚಿತ್ರ)
ರಾಜಸ್ಥಾನ ಲೋಕಸಭಾ ಫಲಿತಾಂಶ;-- ಸ್ಥಾನ ಎನ್‌ಡಿಎ ತೆಕ್ಕೆಗೆ, ಕಾಂಗ್ರೆಸ್‌ನ ಶೂನ್ಯ ಕಳಂಕ ನಿವಾರಣೆ (ಸಾಂಕೇತಿಕ ಚಿತ್ರ)

ಜೈಪುರ: ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಫಲಿತಾಂಶ ಪ್ರಕಟವಾಗುತ್ತಿದೆ. ರಾಜಸ್ಥಾನದ 25 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ 14 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ 11 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ತನ್ಮೂಲಕ ಶೂನ್ಯ ಕಳಂಕ ನಿವಾರಿಸಿಕೊಂಡ ಕಾಂಗ್ರೆಸ್ ತನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ರಾಜಸ್ಥಾನದ 25 ಲೋಕಸಭಾ ಸ್ಥಾನಗಳಿಗಾಗಿ ಏಪ್ರಿಲ್ 19 ಮತ್ತು ಏಪ್ರಿಲ್ 26 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಿತು. ರಾಜಸ್ಥಾನದಲ್ಲಿ 1980 ರಿಂದೀಚೆಗೆ ಕಾಂಗ್ರೆಸ್ ಮತ್ತು ಬಿಜೆಪಿಗಳನ್ನು ಪರ್ಯಾಯ ಪಕ್ಷಗಳಂತೆ ಮತದಾರರು ಪರಿಗಣಿಸಿದ್ದು, ಒಂದು ಅಥವಾ ಎರಡು ಅವಧಿಗೆ ಆಡಳಿತ ನೀಡಿ ಬದಲಾಯಿಸುತ್ತ ಬಂದಿದ್ದಾರೆ. 2023ರಲ್ಲಿ 200 ಸದಸ್ಯ ಬಲದ ವಿಧಾನಸಭೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ (115) ಅಧಿಕಾರದಲ್ಲಿದೆ. ಕಾಂಗ್ರೆಸ್ ವಿರೋಧ ಪಕ್ಷವಾಗಿದೆ.

ಈ ಲೋಕಸಭಾ ಚುನಾವಣೆಯನ್ನು ಎರಡೂ ಪಕ್ಷಗಳು ಬಹಳ ಪ್ರತಿಷ್ಠೆಯ ವಿಚಾರವಾಗಿ ಪರಿಗಣಿಸಿವೆ. 2014 ರಿಂದೀಚೆಗೆ ಎರಡು ಅವಧಿಗೆ ರಾಜಸ್ಥಾನದ 25ಕ್ಕೆ 25 ಸ್ಥಾನಗಳು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಪಾಲಾಗಿವೆ. ಈ ಸಲವೂ ಕೈ ತಪ್ಪಿ ಹೋದರೆ ಸತತ ಮೂರನೇ ಬಾರಿಗೆ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯಲ್ಲಿ ರಾಜಸ್ಥಾನವನ್ನು ಪ್ರತಿನಿಧಿಸುವುದು ಸಾಧ್ಯವಿಲ್ಲ ಎಂಬ ಅರಿವು ಇದ್ದ ಕಾರಣ ಚುನಾವಣಾ ಪ್ರಚಾರದ ವೇಳೆ ಹೊಸ ಹೊಸ ತಂತ್ರಗಾರಿಕೆಗಳನ್ನು ಅನುಸರಿಸಿತ್ತು.

ಲೋಕಸಭಾ ಚುನಾವಣೆ 2024; ರಾಜಸ್ಥಾನದ ಹೈ ಪ್ರೊಫೈಲ್ ಕ್ಷೇತ್ರಗಳಿವು

ಬಿಕಾನೇರ್ - ಅರ್ಜುನ್ ರಾಮ್ ಮೇಘವಾಲ್ (ಬಿಜೆಪಿ)

ಚುರು - ರಾಹುಲ್ ಕಸ್ವಾನ್ (ಕಾಂಗ್ರೆಸ್‌)

ಕೋಟಾ - ಓಂ ಬಿರ್ಲಾ (ಬಿಜೆಪಿ)

ಅಜ್ಮೇರ್ - ಭಗೀರಥ್ ಚೌಧರಿ (ಬಿಜೆಪಿ)

ಜೈಪುರ- ಮಂಜು ಶರ್ಮಾ (ಬಿಜೆಪಿ)

ಜಾಲೋರ್ - ವೈಭವ್ ಗೆಹ್ಲೋಟ್ (ಕಾಂಗ್ರೆಸ್‌)

ಜೋಧಪುರ-ಕರಣ್ ಸಿಂಗ್ ಉಚಿಯಾರ್ದ (ಕಾಂಗ್ರೆಸ್)

ಆಳ್ವಾರ್ - ಲಲಿತ್ ಯಾದವ್ (ಕಾಂಗ್ರೆಸ್)

ಭಿಲ್ವಾರ- ಸಿ ಪಿ ಜೋಷಿ (ಕಾಂಗ್ರೆಸ್)

ರಾಜಸ್ಥಾನ ಲೋಕಸಭಾ ಫಲಿತಾಂಶ 2024; ರಾಜ್ಯದ ಲೋಕಸಭಾ ಚುನಾವಣೆಗಳ ಹಿನ್ನೋಟ

ರಾಜಸ್ಥಾನದಲ್ಲಿ 2019ರ ಮೇ ತಿಂಗಳಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಸೋತ ಐದು ತಿಂಗಳ ನಂತರ, ಬಿಜೆಪಿ ಗಮನಾರ್ಹವಾದ ಪುನರಾಗಮನವನ್ನು ಮಾಡಿತು. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ರಾಜ್ಯದ ಎಲ್ಲಾ 25 ಲೋಕಸಭಾ ಸ್ಥಾನಗಳನ್ನು ಪಡೆದುಕೊಂಡಿತು. ಮತ್ತೊಂದೆಡೆ, ಕಾಂಗ್ರೆಸ್ 2014 ರಂತೆಯೇ ಶೂನ್ಯ ಸಾಧನೆ ತೋರಿತು.

ರಾಜಸ್ಥಾನದಲ್ಲಿ ಬಿಜೆಪಿ ತನ್ನ ಮತಗಳ ಪಾಲನ್ನು ಹೆಚ್ಚಿಸಿದೆ ಮಾತ್ರವಲ್ಲದೆ ರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಸೋತ ಪ್ರದೇಶಗಳಲ್ಲಿ ಅಸಾಧಾರಣವೆನಿಸುವ ಉತ್ತಮ ಪ್ರದರ್ಶನ ನೀಡಿದೆ. 25 ಎನ್‌ಡಿಎ ಅಭ್ಯರ್ಥಿಗಳ ಪೈಕಿ 20 ಅಭ್ಯರ್ಥಿಗಳು 2014 ರ ಲೋಕಸಭಾ ಚುನಾವಣಾ ಫಲಿತಾಂಶಗಳಿಗೆ ಹೋಲಿಸಿದರೆ ತಮ್ಮ ಗೆಲುವಿನ ಅಂತರವನ್ನು ಸುಧಾರಿಸಿದ್ದಾರೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಮಾಹಿತಿಯ ಪ್ರಕಾರ, 2019 ರಲ್ಲಿ ಬಿಜೆಪಿ 58.47 ಶೇಕಡಾ ಮತಗಳನ್ನು ಪಡೆದಿದೆ. ಇದು 2014 ರಲ್ಲಿ ಪಕ್ಷ ಪಡೆದುಕೊಂಡ 54.94 ಶೇಕಡಾ ಮತಗಳಿಕೆಗಿಂತ ಹೆಚ್ಚು.

👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

ಟಿ20 ವರ್ಲ್ಡ್‌ಕಪ್ 2024