ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಗ-ಸೊಸೆ ಜೊತೆ ತಾಯಿನೂ ಆತ್ಮಹತ್ಯೆ; ಜಮೀನಿನ ನೀರಿನ ತೊಟ್ಟಿಗೆ ಹಾರಿ ಪ್ರಾಣಬಿಟ್ಟ ಒಂದೇ ಕುಟುಂಬದ ಮೂವರು

ಮಗ-ಸೊಸೆ ಜೊತೆ ತಾಯಿನೂ ಆತ್ಮಹತ್ಯೆ; ಜಮೀನಿನ ನೀರಿನ ತೊಟ್ಟಿಗೆ ಹಾರಿ ಪ್ರಾಣಬಿಟ್ಟ ಒಂದೇ ಕುಟುಂಬದ ಮೂವರು

ಇಡೀ ಕುಟುಂಬದವರು ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಇತರ ಕುಟುಂಬ ಸದಸ್ಯರು ಸ್ವಲ್ಪ ಸಮಯದವರೆಗೆ ಈ ಮೂವರನ್ನು ಕಾಣದೇ ಇದ್ದಾಗ ಹುಡುಕಲು ಪ್ರಾರಂಭಿಸಿದ್ದಾರೆ. ಆಗ ಜಮೀನಿನ ನೀರಿನ ತೊಟ್ಟಿಯಲ್ಲಿ ಶವಗಳು ಪತ್ತೆಯಾಗಿದೆ.

ಒಂದೇ ಕುಟುಂಬದ ಮೂವರು ಆತ್ಮಹತ್ಯೆ (ಸಾಂದರ್ಭಿಕ ಚಿತ್ರ)
ಒಂದೇ ಕುಟುಂಬದ ಮೂವರು ಆತ್ಮಹತ್ಯೆ (ಸಾಂದರ್ಭಿಕ ಚಿತ್ರ)

ಬಾರ್ಮರ್‌ (ರಾಜಸ್ಥಾನ): ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಬಾರ್ಮರ್‌ ಜಿಲ್ಲೆಯಲ್ಲಿ ನಡೆದಿದೆ.

ಟ್ರೆಂಡಿಂಗ್​ ಸುದ್ದಿ

ಮಹಿಳೆ, ಆಕೆಯ ಮಗ ಮತ್ತು ಸೊಸೆ ಜಮೀನಿನಲ್ಲಿ ನಿರ್ಮಿಸಲಾಗಿದ್ದ ನೀರಿನ ತೊಟ್ಟಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಮೃತರನ್ನು ಅಂಚಿ ದೇವಿ (50), ಅವರ ಮಗ ಹಿತೇಶ್ ಕುಮಾರ್ (25) ಮತ್ತು ಸೊಸೆ ಲೆಹ್ರಿ ದೇವಿ (23) ಎಂದು ಗುರುತಿಸಲಾಗಿದೆ.

ಬಾರ್ಮರ್‌ನ ಚೋಹ್ತಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ಹಂತದ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾರ್ಮರ್​ನ ಬುತ್ ರಾಥೋರನ್ ಗ್ರಾಮದಲ್ಲಿ ಇಡೀ ಕುಟುಂಬದವರು ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಇತರ ಕುಟುಂಬ ಸದಸ್ಯರು ಸ್ವಲ್ಪ ಸಮಯದವರೆಗೆ ಈ ಮೂವರನ್ನು ಕಾಣದೇ ಇದ್ದಾಗ ಹುಡುಕಲು ಪ್ರಾರಂಭಿಸಿದ್ದಾರೆ. ಆಗ ಜಮೀನಿನ ನೀರಿನ ತೊಟ್ಟಿಯಲ್ಲಿ ಶವಗಳು ಪತ್ತೆಯಾಗಿದೆ.

ಮೂವರ ಮೃತದೇಹಗಳನ್ನು ಶವಾಗಾರದಲ್ಲಿ ಇರಿಸಲಾಗಿದ್ದು, ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿ ಸುಖರಾಮ್ ಬಿಷ್ಣೋಯ್ ತಿಳಿಸಿದ್ದಾರೆ.

ಟಿ20 ವರ್ಲ್ಡ್‌ಕಪ್ 2024