ಕನ್ನಡ ಸುದ್ದಿ  /  Nation And-world  /  Ramayan Mahotsav What Is National Ramayan Mahotsav Chattisgarh Sri Ramachandra Seetha Devi National News In Kannada Uks

Ramayan Mahotsav: ಕೆರೆಮನೆ ಯಕ್ಷಗಾನ ತಂಡ ವಿಜಯಿಯಾದ ರಾಮಾಯಣ ಮಹೋತ್ಸವ ಯಾವುದು? ವಿಶೇಷತೆ ಏನು ಇಲ್ಲಿದೆ ವಿವರಣೆ

Ramayan Mahotsav: ಏನಿದು ರಾಷ್ಟ್ರೀಯ ರಾಮಾಯಣ ಮಹೋತ್ಸವ, ಏನಿದರ ವಿಶೇಷತೆ- ಇಲ್ಲಿದೆ ಈ ರಾಷ್ಟ್ರೀಯ ರಾಮಾಯಣ ಮಹೋತ್ಸವದ ವಿವರಣೆ.

ರಾಷ್ಟ್ರೀಯ ರಾಮಾಯಣ ಮಹೋತ್ಸವ
ರಾಷ್ಟ್ರೀಯ ರಾಮಾಯಣ ಮಹೋತ್ಸವ

ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ತಂಡ ಪ್ರಥಮ ಬಹುಮಾನ ಗೆದ್ದ ರಾಷ್ಟ್ರೀಯ ರಾಮಾಯಣ ಮಹೋತ್ಸವ ಯಾವುದು? ಏನಿದರ ವಿಶೇಷತೆ- ಇಲ್ಲಿದೆ ಈ ರಾಷ್ಟ್ರೀಯ ರಾಮಾಯಣ ಮಹೋತ್ಸವದ ವಿವರಣೆ.

ಛತ್ತೀಸ್ ಗಢ ಸರಕಾರ ಜೂನ್ 1ರಿಂದ ಮೂರು ದಿನಗಳ ಕಾಲ ರಾಮಾಯಣ ರಾಷ್ಟ್ರೀಯ ಉತ್ಸವವನ್ನು ರಾಯಘಡ ಜಿಲ್ಲೆಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಿತ್ತು.

ರಾಮಾಯಣ ಉತ್ಸವದ ಮಹತ್ವ

ಮೂರು ದಿನಗಳ ಉತ್ಸವವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಈ ಸಂದರ್ಭ ಉತ್ಸವದ ಮಹತ್ವವನ್ನು ವಿವರಿಸಿ, ಪ್ರಭು ಶ್ರೀರಾಮಚಂದ್ರ ಈಗಿನ ಛತ್ತೀಸ್‌ಗಢದಲ್ಲಿ ತನ್ನ ಜೀವನದ ಹತ್ತು ವರ್ಷಗಳನ್ನು ಕಳೆದಿದ್ದಾಗಿ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮಚಂದ್ರ ಮತ್ತು ರಾಜ್ಯದ ನಡುವಿನ ಗಾಢವಾದ ಸಂಬಂಧಗಳನ್ನು ಪ್ರಕಟಪಡಿಸುವ ಸಲುವಾಗಿ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಹೇಳಿದ್ದರು.

ವನವಾಸ ಮತ್ತು ಸೀತಾಪಹಾರದ ಸನ್ನಿವೇಶ ಸ್ಥಳಗಳು ಛತ್ತೀಸ್‌ಗಢದಲ್ಲಿವೆ..

’ಕೌಸಲ್ಯಮಾತೆಯ ಭೂಮಿ ಛತ್ತೀಸ್ ಗಢ. ಪ್ರಭು ಶ್ರೀರಾಮಚಂದ್ರ ಪಟ್ಟಾಭಿಷೇಕದ ಸಂದರ್ಭ ನಡೆದ ಘಟನೆಗಳ ಬಳಿಕ ರಾಮ ವನವಾಸಕ್ಕೆಂದು ಬರುತ್ತಾನೆ. ಈ ಸಂದರ್ಭ, ನಿಷದರಾಜ, ಶಬರಿ ಮತ್ತು ವಿವಿಧ ಮುನಿಗಳನ್ನು ಭೇಟಿಯಾಗುತ್ತಾನೆ. ರಾಮ ಎಲ್ಲರಿಗೂ ಬೇಕಾದವನು. ನಿಷದರಾಜ ಮತ್ತು ಶಬರಿಯ ಪ್ರೀತಿಯೇ ಇದಕ್ಕೆ ನಿದರ್ಶನ. ಹೀಗಾಗಿ ವನವಾಸಿ ರಾಮ ಮತ್ತು ಕೌಸಲ್ಯಪುತ್ರ ರಾಮನ ಕುರಿತು ಛತ್ತೀಸ್‌ಗಡದ ಜನರಿಗೆ ಅಪಾರ ಅಭಿಮಾನ.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ರಾಮಾಯಣ ಉತ್ಸವ ಆಯೋಜಿಸಲಾಯಿತು. ರಾಮಾಯಣಕ್ಕೆಸಂಬಂಧಿಸಿದ ವಿವಿಧ ಕಲಾತಂಡಗಳು ಪ್ರದರ್ಶನ ನೀಡಿದವು.

ದೇಶದ 12 ರಾಜ್ಯಗಳಾದ ಕೇರಳ, ಕರ್ನಾಟಕ, ಒಡೀಶಾ, ಅಸ್ಸಾಂ, ಗೋವಾ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ, ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢದ ಕಲಾ ಪ್ರಕಾರಗಳು ಪ್ರದರ್ಶನವಾದವು. ಅಲ್ಲದೆ, ರಾಮಾಯಣಕ್ಕೆ ಅತ್ಯಂತ ಹೆಚ್ಚು ಗೌರವ ನೀಡುವ ದೇಶಗಳಾದ ಕಾಂಬೋಡಿಯಾ ಮತ್ತು ಇಂಡೋನೇಶಿಯಾ ದೇಶಗಳ ತಂಡಗಳೂ ಇದರಲ್ಲಿದ್ದವು. ಅವುಗಳಲ್ಲಿ ಯಕ್ಷಗಾನ ಪ್ರದರ್ಶನ ಮೊದಲ ಸ್ಥಾನಿಯಾದದ್ದು ಕರ್ನಾಟಕಕ್ಕೇ ಗೌರವ ತಂದಿದೆ.

ಕರ್ನಾಟಕದ ಪ್ರಸಂಗ ವಿಜಯಿಯಾದುದು ಏಕೆ?

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ‘ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ’ ತಂಡ ಪಾರ್ತಿಸುಬ್ಬ ವಿರಚಿತ ಸೀತಾಪಹಾರ ಯಕ್ಷಗಾನ ಪ್ರಸಂಗ ಭಾಗವನ್ನು ಪ್ರದರ್ಶಿಸಿತು.

ಸೀತಾಪಹಾರ ಪ್ರಸಂಗ ಮತ್ತು ಛತ್ತೀಸ್‌ಗಢದಲ್ಲಿ ಶ್ರೀರಾಮಚಂದ್ರನ ವನವಾಸ ಸ್ಥಳಗಳಿಗೆ ನಂಟಿದೆ. ಹೀಗಾಗಿ ಈ ಪ್ರಸಂಗ ಅಲ್ಲಿ ಗಮನಸೆಳೆಯಿತು. ಸೀತಾಪಹಾರದ ಪ್ರಸಂಗಕ್ಕೂ ಛತ್ತೀಸ್‌ಗಢಕ್ಕೂ ಭಾವನಾತ್ಮಕ ನಂಟು ಏರ್ಪಟಿದೆ. ಪ್ರಸಂಗ ಹೃದ್ಯವಾಗಿ ನಿರೂಪಿಸಲ್ಪಟ್ಟ ಕಾರಣ ವಿಜಯಿಯಾಗುವುದು ಸಾಧ್ಯವಾಗಿದೆ ಎಂದು ತಂಡ ಹೇಳಿಕೊಂಡಿದೆ.

IPL_Entry_Point