ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲಿ ಸೂಟ್‌ಕೇಸ್ ಕಚ್ಚಿ ಹಾನಿ ಮಾಡಿದ ಇಲಿಗಳು; ಪರಿಹಾರ ನೀಡಬೇಂದು ನೆಟ್ಟಿಗರು ಪಟ್ಟು
ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನ ಹೆಚ್1 ಕ್ಯಾಬಿನ್‌ನಲ್ಲಿ ಇಟ್ಟಿದ್ದ ಸೂಟ್‌ಕೇಸ್ ಅನ್ನು ಇಲ್ಲಿಗಳು ಕಚ್ಚಿ ಹಾನಿ ಮಾಡಿರುವ ಘಟನೆ ಮೇ 19 ರಂದು ನಡೆದಿದೆ. ಫೋಟೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ದೆಹಲಿ: ಕೋಲ್ಕತ್ತದಿಂದ ಮುಂಬೈಗೆ (Kolkata to Mumbai) ಸಂಪರ್ಕ ಕಲ್ಪಿಸಲು ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲಿ (Jnaneswari Express Train AC Coach) ಪ್ರಯಾಣಿಕೊರಬ್ಬರ ಸೂಟ್‌ಕೇಸ್ ಅನ್ನು ಇಲಿಗಳು ಕಚ್ಚಿ ಹಾನಿ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಪ್ರಯಾಣಿಕನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲಿನ ಹೆಚ್1ನ ಕ್ಯಾಬಿನ್‌ನಲ್ಲಿ ಇಟ್ಟಿದ್ದ ಕೆಂಪು ಬಣ್ಣದ ಸೂಟ್‌ಕೇಸ್ ಅನ್ನು ಇಲಿಗಳು ಕಚ್ಚಿ ಹಾನಿ ಮಾಡಿರುವ ಘಟನೆ ಮೇ 19 (ಭಾನುವಾರ) ರಂದು ನಡೆದಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಯಾಣಿಕರೊಬ್ಬರು ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಇಲಿಗಳು ನೀಲಿ ಮತ್ತು ಕೆಂಪು ಬಣ್ಣದ ಎರಡು ಸೂಟ್‌ಕೇಸ್‌ಗಳನ್ನು ಕಟ್ಟಿ ಹಾನಿಮಾಡಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಸೀಟ್‌ಗಳ ಮೇಲೆ ಪ್ರಮಾಣಿಕರು ಕುಳಿತಿದ್ದರೆ, ಸೀಟಿನ ಕೆಳಗೆ ಇಡಲಾಗಿರುವ ಸೂಟ್‌ಕೇಸ್‌ಗಳಿಗೆ ಇಲಿಗಳು ಹಾನಿ ಮಾಡಿವೆ.
ರೈಲು ಸಂಖ್ಯೆ 12102 ಮೇ 19 ರಂದು ಹೊರಟಿತ್ತು. ಹೆಚ್1 ಸೀಟ್ ಎ-2. ಪಿಎನ್‌ಆರ್ 6535087042. ದಶಕಗಳಿಂದ ಹಾನಿಗೊಳಗಾಗದ ನಮ್ಮ ಸೂಟ್‌ಕೇಸ್‌ಗಳು. ದೂರು ಸಲ್ಲಿಸಲು ಅರ್ಧ ಗಂಟೆಯಿಂದ ಟಿಸಿಗಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಪ್ರಯಾಣಿಕರೊಬ್ಬರು ಜಾಲತಾಣದಲ್ಲಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಯಾಣಿಕನ ಪೋಸ್ಟ್‌ಗೆ ರೈಲ್ವೆ ಕೂಡ ಪ್ರತಿಕ್ರಿಯಿಸಿದೆ. ಇದನ್ನು ಕೇಳಲು ನಾವು ಚಿಂತಿತರಾಗಿದ್ದೇವೆ. ಎಎಸ್‌ಎಪಿಗೆ ಸಹಾಯ ಮಾಡಲು ಬಯಸುತ್ತೇವೆ. ಡಿಎಂ ಮೂಲಕ ನಮಗೆ ನಿಮ್ಮ ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ. ನೀವು ನೇರವಾಗಿ http://railmadad.indianrailways.gov.in ನಲ್ಲಿ ನಿಮ್ಮಗೆ ಆಗಿರುವ ತೊಂದರೆಯನ್ನು ವ್ಯಕ್ತಪಡಿಸಬಹುದು ಅಥವಾ ತ್ವರಿತ ಪರಿಹಾರಕ್ಕಾಗಿ 139 ಅನ್ನು ಡಯಲ್ ಮಾಡಬಹುದು ಎಂದು ಎಕ್ಸ್‌ನಲ್ಲಿ ರೈಲ್ವೆಸೇವಾ ರಿಟ್ವೀಟ್ ಮಾಡಿದೆ.
ಇನ್ನು ರೈಲ್ವೆ ಪ್ರಯಾಣಿಕನ ಪೋಸ್ಟ್ ನೋಡಿದ ನೆಟ್ಟಿಗರು ಕೂಡಲೇ ಪ್ರತಿಕ್ರಿಯಿಸಿದ್ದಾರೆ. ವಿಶ್ವದ ಅತ್ಯುತ್ತಮ ಸೇವೆಗಳ ಹೆಸರಿನಲ್ಲಿ ಶುಲ್ಕವನ್ನು ವಿಧಿಸುತ್ತಿರುವಾಗ ರೈಲ್ವೆ ಪ್ರಮಾಣಿಕನಿಗೆ ಆಗಿರುವ ಹಾನಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ ನೆಟ್ಟಿಗರೊಬ್ಬರು ಒತ್ತಾಯಿಸಿದ್ದಾರೆ. ಗ್ರಾಹಕ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಸೇವೆಗಳ ಕೊರತೆ. ಭಾರತೀಯ ರೈಲ್ವೆಯಲ್ಲಿನ ನೈರ್ಮಲ್ಯ ಮತ್ತು ಶುಚಿತ್ವದ ಮಾನದಂಡಗಳ ಕೊರತೆಯಿಂದಾಗಿ ಎಲ್ಲಾ ಸಂತ್ರಸ್ತರಿಗೆ ಸಂಕಟ ಎಂದು ಹೇಳಿದ್ದು, ತಮ್ಮ ಹೇಳಿಕೆಯನ್ನು ರೈಲ್ವೆಸಚಿವರಿಗೆ ಟ್ಯಾಗ್ ಮಾಡಿದ್ದಾರೆ.
ಆಘಾತ ಮತ್ತು ಅನಾನುಕೂಲತೆಗಾಗಿ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ. ಮಾರ್ಚ್‌ನಲ್ಲಿ ಭುವನೇಶ್ವರ-ಜುನಾಗಢ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೂಬ್ಬರು ಎಸಿ ಕಂಪಾರ್ಟ್‌ಮೆಂಟ್‌ನಲ್ಲಿ ಇಲಿ ಇರುವುದನ್ನು ಗುರುತಿಸಿದ್ದರು. ಇದೀಗ ಪ್ರಯಾಣಿಕರ ವಸ್ತುಗಳಿಗೆ ಹಾನಿ ಮಾಡುತ್ತಿರುವ ಘಟನೆ ರೈಲ್ವೆ ಇಲಾಖೆಯನ್ನು ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದೆ. ರೈಲ್ವೆ ನಿಲ್ದಾಣಗಳ ಆಧುನಿಕರ, ಹೊಸ ರೈಲುಗಳ ಸಂಚಾರ ಆರಂಭಿಸುವ ಮೂಲಕ ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಹೊಸ ಅನುಭವವನ್ನು ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)