Haryana: ಉರಿಯುತ್ತಿದ್ದ ರಾವಣನ ಪ್ರತಿಕೃತಿ ಬಿದ್ದು ಹಲವರಿಗೆ ಗಾಯ, ವಿಡಿಯೋ ನೋಡಿ
ರಾವಣ ದಹನ ಕಾರ್ಯಕ್ರಮದ ವೇಳೆ ರಾವಣನ ಪ್ರತಿಕೃತಿ ಸ್ಥಳದಲ್ಲಿ ನೆರೆದಿದ್ದ ಜನರ ಮೇಲೆ ಬಿದ್ದಿದ್ದು, ಹಲವರಿಗೆ ಗಾಯಗಳಾಗಿವೆ.
ಹರಿಯಾಣದ ಯಮುನಾನಗರದಲ್ಲಿ ನಡೆಯುತ್ತಿದ್ದ ದಸರಾ ಸಂಭ್ರಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ರಾವಣ ದಹನ ಕಾರ್ಯಕ್ರಮದ ವೇಳೆ, ರಾವಣನ ಪ್ರತಿಕೃತಿ ಸ್ಥಳದಲ್ಲಿ ನೆರೆದಿದ್ದ ಜನರ ಮೇಲೆ ಬಿದ್ದಿದ್ದು, ಭಾರಿ ಅನಾಹುತ ತಪ್ಪಿದೆ.
ಟ್ರೆಂಡಿಂಗ್ ಸುದ್ದಿ
ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ. ವಿಡಿಯೋದಲ್ಲಿ ಕಾಣುವಂತೆ, ಉರಿಯುತ್ತಿದ್ದ ರಾವಣನ ಪ್ರತಿಕೃತಿ ಬಳಿ ಜನರು ಓಡಿ ಹೋಗಿದ್ದಾರೆ. ಈ ವೇಳೆ ಪ್ರತಿಕೃತಿ ಕೆಳಬಿದ್ದಿದೆ. ಅದರ ಬಳಿಯೇ ಇದ್ದ ಕೆಲಜನರ ಮೇಲೆ ಬಿದ್ದಿರುವ ದೃಶ್ಯ ಕಾಣುತ್ತಿದೆ. ಬಿದ್ದ ತಕ್ಷಣ ಪ್ರತಿಕೃತಿಯೊಂದಿಗೆ ಜೋಡಿಸಲಾಗಿದ್ದ ಪಟಾಕಿಗಳು ಕೂಡಾ ಸಿಡಿದಿದೆ.
ಹಿಂದೂ ಪುರಾಣಗಳ ಪ್ರಕಾರ, ಈ ದಿನದಂದು ಶ್ರೀರಾಮನು ರಾವಣನನ್ನು ಕೊಂದಿದ್ದರಿಂದ ದುಷ್ಟರ ವಿರುದ್ಧ ವಿಜಯ ಸಾಧಿಸಿದ ನೆನಪಿಗಾಗಿ ಪ್ರತಿ ವರ್ಷ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಹೆಚ್ಚಿನ ಕಡೆ ಇದರ ಭಾಗವಾಗಿ ರಾವಣ ದಹನ ನಡೆಯುತ್ತದೆ. ಉತ್ತರ ಭಾರತದಲ್ಲಿ ಈ ಸಂಭ್ರಮ ಜೋರಾಗಿರುತ್ತದೆ.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ಬಳಿಕ ರಾವಣನ ಪ್ರತಿಕೃತಿಗಳನ್ನು ದಹಿಸುವ ಮೂಲಕ ದೇಶಾದ್ಯಂತ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ನಡುವೆ ಹರಿಯಾಣದಲ್ಲಿ ದುರ್ಘಟನೆ ಸಂಭವಿಸಿದ್ದು, ಹಲವರಿಗೆ ಗಾಯಗಳಾಗಿದೆ.
ವಿಭಾಗ