ರೆಪೋ ದರ ಬದಲಾಗಿಲ್ಲ, ಮನೆ ಸಾಲದ ಇಎಂಐ ಹೆಚ್ಚಾಗುತ್ತಾ, ಮನೆ ಖರೀದಿಸುವವರಿಗೆ ಹೊರೆಯಾಗುತ್ತಾ, ಇಲ್ಲಿದೆ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರೆಪೋ ದರ ಬದಲಾಗಿಲ್ಲ, ಮನೆ ಸಾಲದ ಇಎಂಐ ಹೆಚ್ಚಾಗುತ್ತಾ, ಮನೆ ಖರೀದಿಸುವವರಿಗೆ ಹೊರೆಯಾಗುತ್ತಾ, ಇಲ್ಲಿದೆ ವಿವರ

ರೆಪೋ ದರ ಬದಲಾಗಿಲ್ಲ, ಮನೆ ಸಾಲದ ಇಎಂಐ ಹೆಚ್ಚಾಗುತ್ತಾ, ಮನೆ ಖರೀದಿಸುವವರಿಗೆ ಹೊರೆಯಾಗುತ್ತಾ, ಇಲ್ಲಿದೆ ವಿವರ

Home Loan: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ವಿತ್ತೀಯ ಸಮಿತಿ ಸಭೆಯ ನಿರ್ಣಯಗಳನ್ನು ಪ್ರಕಟಿಸಿದೆ. ಇದರಂತೆ ರೆಪೋ ದರ ಬದಲಾಗಿಲ್ಲ. ಹಾಗಾಗಿ ಮನೆ ಸಾಲದ ಇಎಂಐ ಹೆಚ್ಚಾಗುತ್ತಾ, ಮನೆ ಖರೀದಿಸುವವರಿಗೆ ಹೊರೆಯಾಗುತ್ತಾ ಎಂಬಿತ್ಯಾದಿ ಸಂದೇಹಗಳಿಗೆ ಪರಿಹಾರ ಒದಗಿಸುವ ವಿವರ ಇಲ್ಲಿದೆ.

ರೆಪೋ ರೇಟ್ ಬದಲಾಗಿಲ್ಲ, ಮನೆ ಸಾಲದ ಇಎಂಐ ಹೆಚ್ಚಾಗುತ್ತಾ, ಮನೆ ಖರೀದಿಸುವವರಿಗೆ ಹೊರೆಯಾಗುತ್ತಾ; ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಕೊಟ್ಟ ವಿವರ.
ರೆಪೋ ರೇಟ್ ಬದಲಾಗಿಲ್ಲ, ಮನೆ ಸಾಲದ ಇಎಂಐ ಹೆಚ್ಚಾಗುತ್ತಾ, ಮನೆ ಖರೀದಿಸುವವರಿಗೆ ಹೊರೆಯಾಗುತ್ತಾ; ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಕೊಟ್ಟ ವಿವರ.

Home Loan: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರವನ್ನು ಸತತ 11 ನೇ ಅವಧಿಗೆ ಶೇಕಡ 6.5ರಲ್ಲೇ ಸ್ಥಿರವಾಗಿ ಇಟ್ಟುಕೊಂಡಿರುವುದಾಗಿ ಶುಕ್ರವಾರ (ಡಿಸೆಂಬರ್ 6) ಘೋಷಿಸಿದೆ. ದೇಶದ ಅರ್ಥ ವ್ಯವಸ್ಥೆಯಲ್ಲಿ ಮುಂದುವರಿದ ಹಣದುಬ್ಬರ ಒತ್ತಡವನ್ನು ಉಲ್ಲೇಖಿಸಿ ರೆಪೋ ದರ ಬದಲಾವಣೆ ಮಾಡಿಲ್ಲ ಎಂದು ಅದು ಸಮಜಾಯಿಷಿ ನೀಡಿದೆ. ಇದರೊಂದಿಗೆ, ಹೆಚ್ಚುತ್ತಿರುವ ವಸತಿ ಬೆಲೆಗಳ ನಡುವೆ, ಮನೆ ಖರೀದಿದಾರರಿಗೆ ಸ್ಥಿರವಾದ ಇಎಂಐ ಮುಂದುವರಿಯಲಿದೆ ಎಂಬ ಸೂಚನೆ ನೀಡಿದೆ. ಅರ್ಥ ವ್ಯವಸ್ಥೆಯಲ್ಲಿ ನಗದು ಹರಿವು ಸಮಸ್ಯೆ ಆಗಬಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಗದು ಮೀಸಲು ಅನುಪಾತ (ಸಿಆರ್‌ಆರ್‌)ವನ್ನು ಶೇಕಡ 4.5 ರಿಂದ ಶೇಕಡ 4ಕ್ಕೆ ಇಳಿಸಲು ನಿರ್ಧಾರಿಸಿದೆ. ಈ ಕ್ರಮದಿಂಧಾಗಿ 1.16 ಲಕ್ಷ ಕೋಟಿ ರೂಪಾಯಿ ಸಾಲ ವಿತರಣೆಗೆ ಬ್ಯಾಂಕ್‌ಗೆ ನೆರವಾಗಲಿದೆ. ಅಷ್ಟೇ ಅಲ್ಲ, ಬ್ಯಾಂಕುಗಳ ಸಾಲ ನೀಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಗದು ಮೀಸಲು ಅನುಪಾತ ಅಥವಾ ಸಿಆರ್‌ಆರ್ ಎಂದರೆ, ಆರ್‌ಬಿಐನಲ್ಲಿ ನಗದು ಹಣಕಾಸು ನಿರ್ವಹಿಸುವುದಕ್ಕೆ ಒಟ್ಟು ಠೇವಣಿಗಳ ಶೇಕಡಾವಾರು ಪ್ರಮಾಣವಾಗಿರುತ್ತದೆ. ಇದನ್ನು ಆರ್‌ಬಿಐ ಕಾಲಕಾಲಕ್ಕೆ ಪರಿಷ್ಕರಿಸುತ್ತಿರುತ್ತದೆ.

ನಗದು ಮೀಸಲು ಅನುಪಾತ ಇಳಿಸಿ, ಸಾಲ ಪ್ರಮಾಣ ಹೆಚ್ಚಳಕ್ಕೆ ಅವಕಾಶ ನೀಡಿದ ಆರ್‌ಬಿಐ

“ನಗದು ಮೀಸಲು ಅನುಪಾತವನ್ನು 4.5 ಪ್ರತಿಶತದಿಂದ 4 ಪ್ರತಿಶತಕ್ಕೆ ಇಳಿಸುವ ಮೂಲಕ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹೆಚ್ಚುವರಿ ಹಣ ಬಳಕೆಗೆ ಸಿಗುವಂತೆ ಮುಕ್ತಗೊಳಿಸಲು ಆರ್‌ಬಿಐ ಕ್ರಮ ತೆಗೆದುಕೊಂಡಿದೆ. ನಗದು ಮೀಸಲು ಅನುಪಾತ ಇಳಿಸಿದ ಕ್ರಮವು ಬ್ಯಾಂಕ್‌ಗಳಿಗೆ ಹೆಚ್ಚಿನ ಸಾಲ ನೀಡಲು ಅನುವು ಮಾಡಿಕೊಡುತ್ತದೆ. ಈ ಕ್ರಮವು ಕಡಿಮೆ ಸಾಲದ ಬಡ್ಡಿ ದರಗಳಿಗೆ ಕಾರಣವಾಗುತ್ತದೆ. ಗೃಹ ಮತ್ತು ವೈಯಕ್ತಿಕ ಸಾಲಗಳನ್ನು ಸಾಲಗಾರರಿಗೆ ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ. ಕಡಿಮೆಯಾದ ಎರವಲು ವೆಚ್ಚಗಳು ಸಮೀಕರಿಸಿದ ಮಾಸಿಕ ಕಂತುಗಳನ್ನು (ಇಎಂಐಗಳು) ಹಗುರಗೊಳಿಸಬಹುದು, ಸಾಲವನ್ನು ಪಡೆದುಕೊಳ್ಳುವುದನ್ನು ಉತ್ತೇಜಿಸಬಹುದು ಮತ್ತು ವಸತಿ ಮತ್ತು ಸಣ್ಣ ವ್ಯವಹಾರಗಳಂತಹ ವಲಯಗಳನ್ನು ಉತ್ತೇಜಿಸಬಹುದು. ಇದರಿಂದಾಗಿ ಸಾಲಗಾರರ ಮೇಲೆ ಆರ್ಥಿಕ ಹೊರೆಗಳನ್ನು ಸರಾಗಗೊಳಿಸುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ'' ಎಂದು ಆಂಡ್ರೊಮಿಡಾ ಸೇಲ್ಸ್ ಆಂಡ್ ಡಿಸ್ಟ್ರಿಬ್ಯೂಷನ್‌ ಪ್ರೈವೇಟ್ ಲಿಮಿಟೆಡ್‌ನ ಸಹ-ಸಿಇಒ ರೌಲ್ ಕಪೂರ್ ಹೇಳಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಗೃಹ ಸಾಲದ ಬಡ್ಡಿದರದಲ್ಲಿ ಬದಲಾವಣೆ ಇಲ್ಲ, ಮನೆ ಖರೀದಿಗೆ ಉತ್ತೇಜನದ ಕ್ರಮ

ಗೃಹ ಸಾಲದ ಬಡ್ಡಿ ದರಗಳು ಬದಲಾಗದೇ ಇರುವುದು ಉತ್ತಮ ಬೆಳವಣಿಗೆ. ಪ್ರಸಕ್ತ ಅವಧಿಯಲ್ಲಿ ಮನೆ ಖರೀದಿ ಬೇಡಿಕೆಯನ್ನು ಬೆಂಬಲಿಸುತ್ತವೆ. ಇದಲ್ಲದೆ, ಕಳೆದ ಎರಡು ತ್ರೈಮಾಸಿಕಗಳಲ್ಲಿ ಮಾರಾಟವು ಕಡಿಮೆಯಾಗುತ್ತಿರುವ ಕಾರಣ, ಡೆವಲಪರ್‌ಗಳು ಇತ್ತೀಚೆಗೆ ಬೆಲೆಗಳನ್ನು ಹೆಚ್ಚಿಸುವ ಬಗ್ಗೆ ಜಾಗರೂಕರಾಗಿದ್ದಾರೆ. ಆಸ್ತಿಯ ಸ್ವಾಧೀನದ ಒಟ್ಟಾರೆ ವೆಚ್ಚವು ತುಲನಾತ್ಮಕವಾಗಿ ಕೈಗೆಟುಕುವ ದರದಲ್ಲಿ ಉಳಿಯುತ್ತದೆ ಈ ಸನ್ನಿವೇಶದಲ್ಲಿ, ಮನೆ ಖರೀದಿದಾರರು ಖರೀದಿ ಮಾಡಬಹುದು ಎಂದು ಅನರಾಕ್‌ ಗ್ರೂಪ್‌ ಚೇರ್‌ಮನ್‌ ಅನುಜ್ ಪುರಿ ಸಲಹೆ ನೀಡುತ್ತಾರೆ.

ಅನರಾಕ್‌ ರೀಸರ್ಚ್‌ ಪ್ರಕಾರ, 2024 ರ ಮೂರನೇ ತ್ರೈಮಾಸಿಕ ಪ್ರಕಾರ, ಈ ಮಾರುಕಟ್ಟೆಗಳಲ್ಲಿನ ಸರಾಸರಿ ಬೆಲೆಗಳು ಒಟ್ಟಾರೆಯಾಗಿ ಅಂದಾಜುಗೆ ಏರಿದಾಗಲೂ ಸಹ ಅಗ್ರ 7 ನಗರಗಳಲ್ಲಿ ಸರಾಸರಿ ವಸತಿ ಬೆಲೆಗಳು ವಾರ್ಷಿಕವಾಗಿ 23 ಪ್ರತಿಶತದಷ್ಟು ಏರಿಕೆ ಕಂಡಿವೆ. 2024ರ ಮೂರನೇ ತ್ರೈಮಾಸಿಕದಲ್ಲಿ ಪ್ರತಿ ಚದರಕ್ಕೆ 8,390 ರೂಪಾಯಿ. ಇದುವೇ 2023ರ ಮೂರನೇ ತ್ರೈಮಾಸಿಕದಲ್ಲಿ ಪ್ರತಿ ಚದರಕ್ಕೆ 6,800 ರೂಪಾಯಿ ಇತ್ತು. ಬೆಲೆಗಳ ಏರಿಕೆಯೊಂದಿಗೆ, 2024 ರ 3ನೇ ತ್ರೈಮಾಸಿಕದಲ್ಲಿ ವಸತಿ ಮಾರಾಟವು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಅನರಾಕ್ ರೀಸರ್ಚ್‌ ಪ್ರಕಾರ, 2023 ರ 3ನೇ ತ್ರೈಮಾಸಿಕಕ್ಕೆ ಹೋಲಿಸಿದರೆ ವಾರ್ಷಿಕ ಮಾರಾಟ 2024ರ ಮೂರನೇ ತ್ರೈಮಾಸಿಕ್ಕೆ ಶೇಕಡ 11 ಇಳಿದಿದೆ. ಹೊಸ ವಸತಿ ಯೋಜನೆ ಜಾರಿ ಕೂಡ ಶೇಕಡ 19 ಇಳಿದಿದೆ ಎಂದು ವರದಿ ವಿವರಿಸಿದೆ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.