ಕನ್ನಡ ಸುದ್ದಿ  /  Nation And-world  /  Report Says Pilots Flying Over Pacific Ocean Spot Several Ufos In Clear Sky

Pilots Spotted UFO: ಪೆಸಿಫಿಕ್ ಮಹಾಸಾಗರದ ಬಳಿ ಯುಎಫ್‌ಓ ಹಾರಾಟ?: ನೀಲಾಕಾಶದಲ್ಲಿ ಪೈಲಟ್‌ಗಳಿಗೆ ಪೀಕಲಾಟ!

ಕಳೆದ ಎರಡು ತಿಂಗಳುಗಳಿಂದ ಪೆಸಿಫಿಕ್ ಮಹಾಸಾಗರದ ಮೇಲೆ ಗುರುತಿಸಲಾಗದ ಹಾರುವ ವಸ್ತುಗಳು(ಯುಎಫ್‌ಓ) ಗೋಚರಿಸುತ್ತಿವೆ ಎಂಬ ವರದಿಯೊಂದು ಇದೀಗ ಜಾಗತಿಕವಾಗಿ ಕುತೂಹಲ ಕೆರಳಿಸಿದೆ. ಮಾಜಿ ಎಫ್‌ಬಿಐ ಏಜೆಂಟ್‌ ಮತ್ತು ಡಿಸ್ಕವರಿ+ನಲ್ಲಿ ಪ್ರಸಾರವಾಗುವ 'ಯುಎಫ್‌ಓ ವಿಟ್ನೆಸ್' ಕಾರ್ಯಕ್ರಮದ ನಿರೂಪಕ ಬೆನ್‌ ಹ್ಯಾನ್ಸೆನ್‌ ಅವರು, ಪೆಸಿಫಿಕ್‌ ಸಾಗರದ ಮೇಲೆ ಕೆಲವು ಪೈಲಟ್‌ಗಳು ಹಾರುವ ನಿಗೂಢ ವಸ್ತುಗಳನ್ನು ಪತ್ತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಪೆಸಿಫಿಕ್‌ ಮಹಾಸಾಗರದ ಮೇಲೆ ಕಂಡ ಯುಎಫ್‌ಓ
ಪೆಸಿಫಿಕ್‌ ಮಹಾಸಾಗರದ ಮೇಲೆ ಕಂಡ ಯುಎಫ್‌ಓ (Verified Twitter)

ವಾಷಿಂಗ್ಟನ್:‌ ಅನ್ಯಗ್ರಹ ಜೀವಿಗಳು ಭೂಮಿಗೆ ಲಗ್ಗೆ ಇಡುವ ಯೋಚನೆಗಳು ಇಂದು ನಿನ್ನೆಯದಲ್ಲ. ಪರಗ್ರಹ ಜೀವಿಗಳು ಭೂಮಿಯ ಮೇಲೆ ದಾಳಿ ಮಾಡುವ ನೂರಾರು ಹಾಲಿವುಡ್‌ ಚಿತ್ರಗಳು ನಮ್ಮನ್ನು ರಂಜಿಸಿವೆ. ಅಷ್ಟೇ ಅಲ್ಲದೇ ಜಗತ್ತಿನ ವಿವಿಧ ಭಾಗಗಳಲ್ಲಿ ಪರಗ್ರಹ ಜೀವಿಗಳ ಯಾನವನ್ನು ಕಂಡಿದ್ದಾಗಿ ವಾದ ಮಂಡಿಸುವ ಅನೇಕ ಜನರು ನಮ್ಮ ಮಧ್ಯೆ ಇದ್ದಾರೆ. ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌ ಕೂಡ ಇತ್ತೀಚಿಗೆ ಈ ರೀತಿಯ ಗುರುತಿಸಲಾಗದ ಹಾರುವ ವಸ್ತು(ಯುಎಫ್‌ಓ)ಗಳ ವಿಡಿಯೋ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದೆ. ಆದರೆ ಇವು ಪರಗ್ರಹ ಜೀವಿಗಳ ಯಾನ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಪೆಂಟಗನ್‌ ಸ್ಪಷ್ಟಪಡಿಸಿದೆ.

ಅದರಂತೆ ಕಳೆದ ಎರಡು ತಿಂಗಳುಗಳಿಂದ ಪೆಸಿಫಿಕ್ ಮಹಾಸಾಗರದ ಮೇಲೆ ಗುರುತಿಸಲಾಗದ ಹಾರುವ ವಸ್ತುಗಳು(ಯುಎಫ್‌ಓ) ಗೋಚರಿಸುತ್ತಿವೆ ಎಂಬ ವರದಿಯೊಂದು ಇದೀಗ ಜಾಗತಿಕವಾಗಿ ಕುತೂಹಲ ಕೆರಳಿಸಿದೆ. ಮಾಜಿ ಎಫ್‌ಬಿಐ ಏಜೆಂಟ್‌ ಮತ್ತು ಡಿಸ್ಕವರಿ+ನಲ್ಲಿ ಪ್ರಸಾರವಾಗುವ 'ಯುಎಫ್‌ಓ ವಿಟ್ನೆಸ್' ಕಾರ್ಯಕ್ರಮದ ನಿರೂಪಕ ಬೆನ್‌ ಹ್ಯಾನ್ಸೆನ್‌ ಅವರು, ಪೆಸಿಫಿಕ್‌ ಸಾಗರದ ಮೇಲೆ ಕೆಲವು ಪೈಲಟ್‌ಗಳು ಹಾರುವ ನಿಗೂಢ ವಸ್ತುಗಳನ್ನು ಪತ್ತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೇ ಏರ್ ಟ್ರಾಫಿಕ್ ಕಂಟ್ರೋಲ್ ರೆಕಾರ್ಡಿಂಗ್‌ಗಳನ್ನು ಕೂಡ ಬೆನ್‌ ಹ್ಯಾನ್ಸೆನ್ ಸಂಗ್ರಹಿಸಿದ್ದು, ಈ ಮಾಹಿತಿಗಳು ಯುಎಫ್‌ಓಗಳ ಬಗೆಗಿನ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಸೌತ್‌ವೆಸ್ಟ್ ಏರ್‌ಲೈನ್ಸ್, ಹವಾಯಿಯನ್ ಏರ್‌ಲೈನ್ಸ್ ಮತ್ತು ಹಲವಾರು ಇತರ ಪೈಲಟ್‌ಗಳು, ಈ ಪ್ರದೇಶದಲ್ಲಿ ಅನೇಕ ಯುಎಫ್‌ಓಗಳನ್ನು

ಗುರುತಿಸಿದ್ದಾರೆ. ಮಾಜಿ ಮಿಲಿಟರಿ ಪೈಲಟ್ ಓರ್ವ ನಾನು ಪೆಸಿಫಿಕ್‌ ಮಹಾಸಾಗರದ ಮೇಲೆ ಅನೇಕ ವಿಚಿತ್ರ ಹಾರುವ ವಸ್ತುಗಳನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾನೆ ಎಂದು ಬೆನ್‌ ಹ್ಯಾನ್ಸೆನ್ ಹೇಳಿದ್ದಾರೆ.

ಲಾಸ್ ಏಂಜಲೀಸ್ ಕರಾವಳಿಯಿಂದ ಚಾರ್ಟರ್ ಜೆಟ್‌ವೊಂದನ್ನು ಚಲಾಯಿಸುತ್ತಿದ್ದಾಗ, ಪೈಲಟ್ ಮಾರ್ಕ್ ಹಲ್ಸೆ ಅವರು ಕಳೆದ ಆಗಸ್ಟ್ 18 ರಂದು ಹಲವು ನಿಗೂಢ ಹಾರುವ ವಸ್ತುಗಳನ್ನು ಕಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಕೂಡಲೇ ಮಾರ್ಕ್‌ ಹಲ್ಸೆ ಏರ್‌ ಟ್ರಫಿಕ್‌ ಕಂಟ್ರೋಲ್‌ಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಆದರೆ ರೆಡಾರ್‌ನಲ್ಲಿ ಯಾವುದೇ ನಿಗೂಢ ವಸ್ತುಗಳು ದಾಖಲಾಗಿಲ್ಲ ಎಂದು ಬೆನ್‌ ಹ್ಯಾನ್ಸೆನ್ ತಿಳಿಸಿದ್ದಾರೆ.

ಕೇವಲ 23 ನಿಮಿಷಗಳ ಅಂತರದಲ್ಲಿ ಮತ್ತೋರ್ವ ಪೈಲಟ್‌ ಹಲ್ಸಿ ಕೂಡ, ಏಳು ನಿಗೂಢ ಹಾರುವ ವಸ್ತುಗಳನ್ನು ಗುರುತಿಸಿದ್ದು, 5,000 ರಿಂದ 10,000 ಅಡಿಗಳ ಮೇಲೆ ಇವು ಹಾರಾಟ ನಡೆಸುತ್ತಿದ್ದವು ಎಂದು ಹ್ಯಾನ್ಸೆನ್‌ ಹೇಳಿದ್ದಾರೆ. ಇಷ್ಟೇ ಅಲ್ಲದೇ ತಮ್ಮ ಹೆಸರನ್ನು ಬಹಿರಂಗಪಡಿಸದಿರುವ ಷರತ್ತಿನ ಮೇಲೆ ಇನ್ನೂ ಅನೇಕ ಮಿಲಿಟರಿ ಪೈಲಟ್‌ಗಳು, ತಾವು ಕಂಡ ಯುಎಫ್ಓ ಕುರಿತ ಮಾಹಿತಿ ಹಂಚಿಕೊಳ್ಳಲು ಸಿದ್ಧರಿದ್ದಾರೆ ಎಂದೂ ಹ್ಯಾನ್ಸೆನ್‌ ಸ್ಪಷ್ಟಪಡಿಸಿದ್ದಾರೆ.

ಒಂದು ನಿರ್ದಿಷ್ಟ ಸಮಯದಲ್ಲಿ ಭಾರೀ ಸಂಖ್ಯೆಯಲ್ಲಿ ಯುಎಫ್‌ಓಗಳು ಕಂಡುಬಂದಿದ್ದು, ಇವುಗಳ ಕುರಿತು ಅಮೆರಿಕ ಸರ್ಕಾರ ಹೆಚ್ಚಿನ ಸಂಶೋಧನೆ ನಡೆಸುವ ಅವಶ್ಯಕತೆ ಇದೆ ಎಂದು ಬೆನ್‌ ಹ್ಯಾನ್ಸೆನ್‌ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಪೆಸಿಫಿಕ್‌ ಮಹಾಸಾಗರದ ನೀಲಾಕಾಶದಲ್ಲಿ ಯುಎಫ್‌ಓಗಳ ಗುರುತಿಸುವಿಕೆ ಜಾಗತಿಕವಾಗಿ ಕುತೂಹಲ ಕೆರಳಿಸಿದ್ದು, ಭೂಮಿಗೆ ಪರಗ್ರಹ ಜೀವಿಗಳು ನಿರಂತರವಾಗಿ ಭೇಟಿ ನೀಡುತ್ತಿವೆ ಎಂಬ ವಾದಕ್ಕೆ ಮತ್ತಷ್ಟು ಪುಷ್ಠಿ ಒದಗಿಸಿದೆ.

ಕಳೆದ ವರ್ಷ ವಾಷಿಂಗ್ಟನ್ ಅಧಿಕಾರಿಗಳು ಯುಎಫ್‌ಓ ವೀಕ್ಷಣೆಗಳ ವಿದ್ಯಮಾನಗಳನ್ನು ವಿವರಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡ ನಂತರ, ರಕ್ಷಣಾ ಇಲಾಖೆಯು ನಿರ್ಬಂಧಿತ ವಾಯುಪ್ರದೇಶದಲ್ಲಿ ಯುಎಫ್‌ಓಗಳನ್ನು ಹುಡುಕುವ ಮತ್ತು ಗುರುತಿಸುವ ಹೊಸ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

 

IPL_Entry_Point

ವಿಭಾಗ