ಕನ್ನಡ ಸುದ್ದಿ  /  Nation And-world  /  Revenge: 16 Year Old Rapes 58 Year Old Woman And Kills Her

Rape & Murder: 16 ವರ್ಷದ ಬಾಲಕನಿಂದ 58 ವರ್ಷದ ಮಹಿಳೆಯ ಅತ್ಯಾಚಾರ-ಕೊಲೆ.. ಪ್ರತೀಕಾರದ ಈ ಸ್ಟೋರಿ ಓದಿ

16 ವರ್ಷದ ಬಾಲಕನೋರ್ವ 58 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಆಕೆಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರೇವಾ (ಮಧ್ಯಪ್ರದೇಶ): ಮಗು, ಮಕ್ಕಳು, ಯುವತಿಯರು, ಮಹಿಳೆಯರು, ಅಜ್ಜಿಯರು ಹೀಗೆ ಯಾರನ್ನೂ ಬಿಡದೆ ದುರುಳರು ಅತ್ಯಾಚಾರ ಎಸಗುತ್ತಾರೆ. ಈ ಅಪರಾಧ ಎಸಗುವವರ ಸಾಲಿನಲ್ಲಿ ವಯಸ್ಕರು ಮಾತ್ರವಲ್ಲ, ಬಾಲಕರೂ ಇದ್ದಾರೆ.

16 ವರ್ಷದ ಬಾಲಕನೋರ್ವ 58 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಆಕೆಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ರೇವಾ ಜಿಲ್ಲೆಯ ಹನುಮಾನ ಪೊಲೀಸ್ ಠಾಣೆ ವ್ಯಾಪ್ತಿಯ ಕೈಲಾಸಪುರಿ ಗ್ರಾಮದಲ್ಲಿ ಜನವರಿ 30 ರಂದು ರಾತ್ರಿ ಈ ಘಟನೆ ನಡೆದಿದೆ.

ಅತ್ಯಾಚಾರ ಎಸಗಿದ ಬಳಿಕ ಬಾಲಕ ಆಕೆಯ ಬಾಯಿಗೆ ಪ್ಲಾಸ್ಟಿಕ್ ಚೀಲ ಮತ್ತು ಬಟ್ಟೆಯನ್ನು ತುಂಬಿ, ಆಕೆಯ ಮನೆಯ ಸಮೀಪದ ನಿರ್ಮಾಣ ಹಂತದ ಕಟ್ಟಡದ ಬಳಿ ಎಳೆದೊಯ್ದಿದ್ದಾನೆ. ಆಕೆಯ ತಲೆ ಮತ್ತು ದೇಹದ ಇತರ ಭಾಗಗಳಿಗೆ ಕುಡಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಆಕೆಯ ಖಾಸಗಿ ಭಾಗಗಳಿಗೆ ಗಾಯಗೊಳಿಸಿದ್ದಾನೆ.

ಪ್ರತೀಕಾರ ತೀರಿಸಿಕೊಂಡ ಬಾಲಕ

ಎರಡು ವರ್ಷಗಳ ಹಿಂದೆ ತಮ್ಮ ಮನೆಗೆ ಟಿವಿ ನೋಡಲು ಬರುತ್ತಿದ್ದ ಈ ಬಾಲಕ ಮೊಬೈಲ್ ಫೋನ್ ಕದ್ದಿದ್ದಾನೆ ಎಂದು ಮಹಿಳೆಯ ಮನೆಯವರು ಆರೋಪಿಸಿದ್ದರು. ಕಳ್ಳತನದ ಆರೋಪದ ನಂತರ ಗ್ರಾಮದಲ್ಲಿ ಎದುರಿಸಿದ ಮುಜುಗರದ ಕಾರಣ ಪ್ರತೀಕಾರ ತೀರಿಸಿಕೊಳ್ಳಲು ಈತ ಹೀಗೆ ಮಾಡಿದ್ದಾನೆ ಎಂದು ಸಂತ್ರಸ್ತೆಯ ಮನೆಯವರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಬ್ರವರಿ 1 ರಂದು ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಮತ್ತು ವಿಧಿ ವಿಜ್ಞಾನ ತಂಡವು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಅತ್ಯಾಚಾರ ಪ್ರಕರಣ; ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುವಿಗೆ ಜೀವಾವಧಿ ಶಿಕ್ಷೆ

2013ರಲ್ಲಿ ದಾಖಲಾದ ಶಿಷ್ಯೆಯ ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು (77)ವಿಗೆ ಗುಜರಾತ್‌ನ ಗಾಂಧಿನಗರದ ನ್ಯಾಯಾಲಯ ಕಳೆದ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸೆಕ್ಷನ್ 376 ಮತ್ತು 377 ಅಡಿಯಲ್ಲಿ ಅಸಾರಾಂ ಬಾಪುವಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಗಾಂಧಿನಗರ ಸೆಷನ್ಸ್ ಕೋರ್ಟ್​ನ ನ್ಯಾಯಾಧೀಶ ಡಿಕೆ ಸೋನಿ ಅವರು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ. ಸಂತ್ರಸ್ತೆಗೆ 50,000 ರೂಪಾಯಿ ಪರಿಹಾರ ನೀಡುವಂತೆಯೂ ಅಪರಾಧಿಗೆ ಕೋರ್ಟ್​ ಸೂಚಿಸಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್‌ಸಿ ಕೊಡೆಕರ್ ತಿಳಿಸಿದ್ದಾರೆ.

ಅಹಮದಾಬಾದ್‌ನ ಚಂದ್‌ಖೇಡಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನ ಪ್ರಕಾರ, ಅಸಾರಾಂ ಬಾಪು 2001 ರಿಂದ 2006 ರವರೆಗೆ ಗಾಂಧಿನಗರದ ಹೊರವಲಯದಲ್ಲಿರುವ ತಮ್ಮ ಆಶ್ರಮದಲ್ಲಿ ಶಿಷ್ಯೆಯೊಬ್ಬರ ಮೇಲೆ ಹಲವಾರು ಸಂದರ್ಭಗಳಲ್ಲಿ ಅತ್ಯಾಚಾರವೆಸಗಿದ್ದಾರೆ. ಸೂರತ್ ಮೂಲದ ಸಂತ್ರಸ್ತೆಯ ದೂರಿನ ಮೇರೆಗೆ 2013ರಲ್ಲಿ ಅಸಾರಾಂ ಬಾಪು ಮತ್ತು ಇತರ ಏಳು ಜನರ ವಿರುದ್ಧ ಅತ್ಯಾಚಾರ ಮತ್ತು ಅಕ್ರಮ ಬಂಧನದ ಪ್ರಕರಣವನ್ನು ದಾಖಲಿಸಲಾಗಿತ್ತು.

ಈ ವಿವಾದಿತ ದೇವಮಾನವ ಈಗಾಗಲೇ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಜೋಧಪುರದ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಗಾಂಧಿ ನಗರದ ತಮ್ಮ ಆಶ್ರಮದಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಅಸಾರಾಂ ಬಾಪುವನ್ನು 2018ರಲ್ಲಿ ಜೋಧ್‌ಪುರ ನ್ಯಾಯಾಲಯವು ತಪ್ಪಿತಸ್ಥನೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಶಿಷ್ಯೆಯ ಅತ್ಯಾಚಾರ ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ ನೀಡಲಾಗಿದೆ.

IPL_Entry_Point