ಕನ್ನಡ ಸುದ್ದಿ  /  Nation And-world  /  Road Ministry Issues Draft Rules For Mandatory Rear Seat Belt Alarms

Rear seat belt mandatory: ಕಾರಿನ ಹಿಂಬದಿ ಸೀಟುಗಳಲ್ಲಿಯೂ ಕಡ್ಡಾಯ ಸೀಟ್‌ ಬೆಲ್ಟ್‌, ಕರಡು ಅಧಿಸೂಚನೆ ಪ್ರಕಟಿಸಿದ ಸರಕಾರ

ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬುಧವಾರ ಕಾರಿನ ಎಲ್ಲಾ ಸೀಟುಗಳಲ್ಲಿಯೂ ಸೀಟ್‌ ಬೆಲ್ಟ್‌ ಕಡ್ಡಾಯಗೊಳಿಸುವ ಕುರಿತು ಕರಡು ನಿಯಮಗಳನ್ನು ಪ್ರಕಟಿಸಿದ್ದು, ಕಾರು ಕಂಪನಿಗಳು ಎಲ್ಲಾ ಸೀಟುಗಳಿಗೂ ಸೀಟ್‌ ಬೆಲ್ಟ್‌ ಜೋಡಿಸುವ ಒತ್ತಡಕ್ಕೆ ಸಿಲುಕಿವೆ.

ಕಾರಿನ ಹಿಂಬದಿ ಸೀಟುಗಳಲ್ಲಿಯೂ ಕಡ್ಡಾಯ ಸೀಟ್‌ ಬೆಲ್ಟ್‌, ಕರಡು ಅಧಿಸೂಚನೆ ಪ್ರಕಟಿಸಿದ ಸರಕಾರ
ಕಾರಿನ ಹಿಂಬದಿ ಸೀಟುಗಳಲ್ಲಿಯೂ ಕಡ್ಡಾಯ ಸೀಟ್‌ ಬೆಲ್ಟ್‌, ಕರಡು ಅಧಿಸೂಚನೆ ಪ್ರಕಟಿಸಿದ ಸರಕಾರ

ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬುಧವಾರ ಕಾರಿನ ಎಲ್ಲಾ ಸೀಟುಗಳಲ್ಲಿಯೂ ಸೀಟ್‌ ಬೆಲ್ಟ್‌ ಕಡ್ಡಾಯಗೊಳಿಸುವ ಕುರಿತು ಕರಡು ನಿಯಮಗಳನ್ನು ಪ್ರಕಟಿಸಿದ್ದು, ಕಾರು ಕಂಪನಿಗಳು ಎಲ್ಲಾ ಸೀಟುಗಳಿಗೂ ಸೀಟ್‌ ಬೆಲ್ಟ್‌ ಜೋಡಿಸುವ ಒತ್ತಡಕ್ಕೆ ಸಿಲುಕಿವೆ.

ಕಾರು ಕಂಪನಿಗಳು ಕೇವಲ ಕಾರು ಸೀಟ್‌ ಬೆಲ್ಟ್‌ಗಳನ್ನು ಕಾರಿನ ಉಳಿದ ಸೀಟುಗಳಿಗೆ ಅಳಡಿಸಿದರೆ ಸಾಲದು. ಕಾರಲ್ಲಿ ಪ್ರಯಾಣಿಸುವವರು ಸೀಟ್‌ ಬೆಲ್ಟ್‌ ಹಾಕಿಲ್ಲದಿದ್ದರೆ ಎಚ್ಚರಿಸುವ ಅಲರಾಂ ಅಥವಾ ಬೀಪ್‌ ಬೀಪ್‌ ಸದ್ದು ಕೇಳಿಸುವ ವ್ಯವಸ್ಥೆಯೂ ಇರಬೇಕೆಂದು ಕರಡು ಪ್ರತಿಯಲ್ಲಿ ತಿಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಕಾರುಗಳ ಎಲ್ಲಾ ಸೀಟುಗಳಿಗೆ ಸೀಟು ಬೆಲ್ಟ್‌ ಕಡ್ಡಾಯಗೊಳಿಸಿರುವುದು ಮಾತ್ರವಲ್ಲದೆ ಕಾರುಗಳು ಓವರ್‌ ಸ್ಪೀಡ್‌ನಲ್ಲಿ ಹೋದರೆ ಅಲರ್ಟ್‌ ನೀಡುವಂತಹ ವ್ಯವಸ್ಥೆ ಮತ್ತು ಸ್ವಯಂಚಾಲಿತವಾಗಿ ಸೆಂಟ್ರಲ್‌ ಲಾಕಿಂಗ್‌ ವ್ಯವಸ್ಥೆ ಚಾಲುಗೊಳ್ಳುವಂತಹ ವ್ಯವಸ್ಥೆಯೂ ಇರಬೇಕೆಂದು ತಿಳಿಸಲಾಗಿದೆ.

ಸೇಫ್ಟಿ ಬೆಲ್ಟ್‌ ರಿಮೈಂಡರ್‌ ಎಂದರೆ ಕಾರು ಚಾಲಕ ಮತ್ತು ಕಾರಿನಲ್ಲಿ ಕುಳಿತ ಇತರರು ಕಾರಿನಲ್ಲಿ ಕುಳಿತಾಗ ಸೀಟ್‌ ಬೆಲ್ಟ್‌ ಧರಿಸದೆ ಇರುವಾಗ ಅಲರ್ಟ್‌ ನೀಡುವ ವ್ಯವಸ್ಥೆಯಾಗಿದೆ. ಈಗ ಬಹುತೇಕ ಕಾರುಗಳಲ್ಲಿ ಚಾಲಕರಿಗೆ ಇಂತಹ ವ್ಯವಸ್ಥೆ ಇದೆ. ಚಾಲಕನ ಪಕ್ಕದಲ್ಲಿ ಕುಳಿತ ಪ್ರಯಾಣಿಕರಿಗೆ ಇಂತಹ ವ್ಯವಸ್ಥೆ ಕೆಲವು ಕಾರುಗಳಲ್ಲಿ ಇಲ್ಲ.

ಕರಡು ನಿಯಮದಲ್ಲಿ ತಿಳಿಸಿದ ಇನ್ನೊಂದು ವಿಷಯ "ಫಸ್ಟ್‌ ಲೆವೆಲ್‌ ವಾರ್ನಿಂಗ್‌". ಕಾರಿನ ಇಗ್ನಿಷನ್‌ ಆನ್‌ ಮಾಡಿದಾಗ, ಕಾರು ಚಾಲನೆಯಲ್ಲಿ ಇರಲಿ, ಇಲ್ಲದೆ ಇರಲಿ, ಕಾರಿನ ಮುಂಭಾಗಕ್ಕೆ ಮುಖ ಮಾಡಿರುವ ಚಾಲಕ ಮತ್ತು ಇತರೆ ಪ್ರಯಾಣಿಕರು ಸೀಟ್‌ ಬೆಲ್ಟ್‌ ಧರಿಸದೆ ಇರುವ ಕುರಿತು ನೀಡುವ ಎಚ್ಚರಿಕೆಯಾಗಿದೆ. ಇದು ಆಡಿಯೋಬೆಲ್‌ ವಾರ್ನಿಂಗ್‌ ಆಗಿದೆ.

ಸೆಕೆಂಡ್‌ ಲೆವೆಲ್‌ ವಾರ್ನಿಂಗ್‌ ಏಂದರೆ ವಿಷುಯಲ್‌ ಮತ್ತು ಆಡಿಯೆಬಲ್‌ (ಕಾಣಿಸುವ, ಕೇಳಿಸುವ) ಎಚ್ಚರಿಕೆಯಾಗಿದೆ. ಚಾಲಕ ಕಾರು ಸ್ಟಾರ್ಟ್‌ ಮಾಡಿದಾಗ ಸುರಕ್ಷತೆ ಬೆಲ್ಟ್‌ ಹಾಕದವರಿಗೆ ನೀಡುವ ಸೂಚನೆಯಾಗಿದೆ.

ಈ ಕರಡು ನಿಯಮದಲ್ಲಿ, ಎಂ ಮತ್ತು ಎನ್‌ ಕೆಟಗರಿಯ ವಾಹನಗಳು ರಿವರ್ಸ್‌ ಪಾರ್ಕಿಂಗ್‌ ಅಲರ್ಟ್‌ ಸಿಸ್ಟಮ್‌ ಹೊಂದಿರಬೇಕು ಎನ್ನಲಾಗಿದೆ. ಎಂ ಕೆಟಗರಿಯ ವಾಹನಗಳೆಂದರೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವಂತಹ ನಾಲ್ಕು ಚಕ್ರದ ವಾಹನಗಳು. ಎನ್‌ ಕೆಟಗರಿಯ ವಾಹನಗಳೆಂದರೆ ಪ್ರಯಾಣಿಕರನ್ನು ಮಾತ್ರವಲ್ಲದೆ ಗೂಡ್ಸ್‌ಗಳನ್ನು ಕೊಂಡೊಯ್ಯುವ ನಾಲ್ಕು ಚಕ್ರದ ವಾಹನಗಳಾಗಿವೆ.

ಈ ಕರಡು ಅಧಿಸೂಚನೆಗೆ ಕಾರು ಕಂಪನಿಗಳು ಸಾರ್ವಜನಿಕ ಪ್ರತಿಕ್ರಿಯೆ ನೀಡಲು ಅಕ್ಟೋಬರ್‌ 5 ಕೊನೆಯ ದಿನವಾಗಿದೆ. ಬಳಿಕ ಕೆಲವು ದಿನಗಳಲ್ಲಿ ಈ ನಿಯಮ ಕಡ್ಡಾಯವಾಗಿ ಜಾರಿಗೊಳ್ಳುವ ನಿರೀಕ್ಷೆಯಿದೆ.

ಇತ್ತೀಚೆಗೆ ಸೈರಸ್‌ ಮಿಸ್ಟ್ರಿ ಕಾಎರು ಅಪಘಾತಗೊಂಡ ಬಳಿಕ ದೇಶದಲ್ಲಿ ಹಿಂಬದಿ ಸೀಟ್‌ ಬೆಲ್ಟ್‌ಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವ ಕುರಿತು ಸರಕಾರ ಹೆಚ್ಚಿನ ಅಸ್ಥೆ ವಹಿಸಿದೆ. ಸೈರಸ್‌ ಮಿಸ್ಟ್ರಿ ಅವರು ಕಾರಿನ ಹಿಂಬದಿ ಸೀಟ್‌ನಲ್ಲಿ ಕುಳಿತುಕೊಂಡಿದ್ದು, ಸೀಟ್‌ ಬೆಲ್ಟ್‌ ಧರಿಸಿರಲಿಲ್ಲ ಎನ್ನಲಾಗಿದೆ.

IPL_Entry_Point