Cashless Treatment: ರಸ್ತೆ ಅಪಘಾತ ಸಂತ್ರಸ್ತರಿಗೆ ಕ್ಯಾಶ್‌ಲೆಸ್‌ ಚಿಕಿತ್ಸೆ ಜಾರಿಗೊಳಿಸಿದ ಕೇಂದ್ರ ಸರ್ಕಾರ, ಹೊಸ ಯೋಜನೆಯ 3 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Cashless Treatment: ರಸ್ತೆ ಅಪಘಾತ ಸಂತ್ರಸ್ತರಿಗೆ ಕ್ಯಾಶ್‌ಲೆಸ್‌ ಚಿಕಿತ್ಸೆ ಜಾರಿಗೊಳಿಸಿದ ಕೇಂದ್ರ ಸರ್ಕಾರ, ಹೊಸ ಯೋಜನೆಯ 3 ಮುಖ್ಯ ಅಂಶಗಳು

Cashless Treatment: ರಸ್ತೆ ಅಪಘಾತ ಸಂತ್ರಸ್ತರಿಗೆ ಕ್ಯಾಶ್‌ಲೆಸ್‌ ಚಿಕಿತ್ಸೆ ಜಾರಿಗೊಳಿಸಿದ ಕೇಂದ್ರ ಸರ್ಕಾರ, ಹೊಸ ಯೋಜನೆಯ 3 ಮುಖ್ಯ ಅಂಶಗಳು

Road Safety Boost: ರಸ್ತೆ ಅಪಘಾತ ಸಂತ್ರಸ್ತರಿಗೆ ಕ್ಯಾಶ್‌ಲೆಸ್‌ ಚಿಕಿತ್ಸೆಯನ್ನು ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಇಂದು (ಜನವರಿ 7) ಹೇಳಿದರು. ಈಗಾಗಲೇ ಇದು ಪ್ರಾಯೋಗಿಕವಾಗಿ ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿತ್ತು. ಈ ಹೊಸ ಯೋಜನೆಗೆ ಸಂಬಂಧಿಸಿದ 3 ಮುಖ್ಯ ಅಂಶಗಳ ವಿವರ ಇಲ್ಲಿದೆ.

ರಸ್ತೆ ಅಪಘಾತ ಸಂತ್ರಸ್ತರಿಗೆ ಕ್ಯಾಶ್‌ಲೆಸ್‌ ಚಿಕಿತ್ಸೆ ಜಾರಿಗೊಳಿಸಿರುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.
ರಸ್ತೆ ಅಪಘಾತ ಸಂತ್ರಸ್ತರಿಗೆ ಕ್ಯಾಶ್‌ಲೆಸ್‌ ಚಿಕಿತ್ಸೆ ಜಾರಿಗೊಳಿಸಿರುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.

Road Safety Boost: ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ (ಕ್ಯಾಶ್‌ಲೆಸ್‌ ಟ್ರೀಟ್‌ಮೆಂಟ್) ಉಪಕ್ರಮ ಜಾರಿಗೊಳಿಸಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇಂದು (ಜನವರಿ 7) ಘೋಷಿಸಿದರು. ಅವರು ನವದೆಹಲಿಯ ಭಾರತ್ ಮಂಟಪದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು. ಇದಕ್ಕೂ ಮೊದಲು ಅವರು ರಾಜ್ಯಗಳ ಸಾರಿಗೆ ಸಚಿವರ ಸಭೆ ನಡೆಸಿ, ಮಹತ್ವದ ಉಪಕ್ರಮಗಳು ಮತ್ತು ರಸ್ತೆ ಸುರಕ್ಷೆ ಕುರಿತು ಸಮಾಲೋಚನೆ, ಚರ್ಚೆ ನಡೆಸಿದರು. ಈಗಾಗಲೇ ಕ್ಯಾಶ್‌ಲೆಸ್‌ ಚಿಕಿತ್ಸೆ ಉಪಕ್ರಮವನ್ನು ಪ್ರಾಯೋಗಿಕವಾಗಿ ಕೆಲವು ರಾಜ್ಯಗಳಲ್ಲಿ ಜಾರಿಗೊಳಿಸಲಾಗಿತ್ತು. ಅಲ್ಲಿ ಅದು ಯಶಸ್ವಿಯಾಗಿದ್ದು, ಈಗ ಅದನ್ನು ದೇಶವ್ಯಾಪಿ ವಿಸ್ತಿರಿಸಲಾಗಿದೆ ಎಂದು ಸಚಿವ ನಿತಿನ್ ಗಡ್ಕರಿ ವಿವರಿಸಿದರು.

ರಸ್ತೆ ಅಪಘಾತ ಸಂತ್ರಸ್ತರಿಗೆ ಕ್ಯಾಶ್‌ಲೆಸ್‌ ಟ್ರೀಟ್‌ಮೆಂಟ್‌; 3 ಮುಖ್ಯ ಅಂಶಗಳು

ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ ನೀಡುವ ಹೊಸ ಯೋಜನೆ ಜಾರಿಗೊಂಡಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಜನವರಿ 7 ರಂದು ಘೋಷಿಸಿದರು.

1) ಕ್ಯಾಶ್‌ಲೆಸ್ ಟ್ರೀಟ್‌ಮೆಂಟ್‌: ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ ಸಿಗುವಂತಾಗಲು, ಅಪಘಾತ ಸಂಭವಿಸಿದ 24 ಗಂಟೆ ಒಳಗೆ ಪೊಲೀಸರಿಗೆ ಮಾಹಿತಿ ನೀಡಿರಬೇಕು. ಅದಾದ ಕೂಡಲೇ ನಗದು ರಹಿತ ಚಿಕಿತ್ಸೆ ಸೌಲಭ್ಯವು ರಸ್ತೆ ಅಪಘಾತ ಸಂತ್ರಸ್ತರಿಗೆ ಸಿಗುತ್ತದೆ.

2) ನಗದು ರಹಿತ ಚಿಕಿತ್ಸೆಯ ವೆಚ್ಚ ಮಿತಿ: ಅಪಘಾತ ಸಂತ್ರಸ್ತರ 7 ದಿನಗಳ ಚಿಕಿತ್ಸಾ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದ್ದು, ಗರಿಷ್ಠ ಮಿತಿ 1.5 ಲಕ್ಷ ರೂಪಾಯಿ ಮಾತ್ರ.

3) ಹಿಟ್ ಆಂಡ್ ರನ್‌ ಕೇಸ್‌: ಗುದ್ದೋಡಿದ ಪ್ರಕರಣ ಅಥವಾ ಹಿಟ್ ಆಂಡ್ ರನ್ ಕೇಸ್‌ಗಳಲ್ಲಿ ರಸ್ತೆ ಅಪಘಾತ ಸಂತ್ರಸ್ತರು ಮೃತಪಟ್ಟರೆ ಆಗ, ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಧನ ಸಿಗಲಿದೆ.

ಕ್ಯಾಶ್‌ಲೆಸ್‌ ಟ್ರೀಟ್‌ಮೆಂಟ್‌ ನಿಯಮದಲ್ಲಿ ಸುಧಾರಣೆ

“ಕೆಲವು ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ರಸ್ತೆ ಅಪಘಾತ ಸಂತ್ರಸ್ತರಿಗೆ ಕ್ಯಾಶ್‌ಲೆಸ್‌ ಚಿಕಿತ್ಸೆ ನೀಡುವ ಉಪಕ್ರಮವನ್ನು ಜಾರಿಗೊಳಿಸಲಾಗಿತ್ತು. ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುವ ಹಂತದಲ್ಲಿ ಕೆಲವೊಂದು ಲೋಪ ದೋಷಗಳನ್ನು ಗಮನಿಸಲಾಗಿತ್ತು. ಅವುಗಳನ್ನು ಸರಿಪಡಿಸಿಕೊಂಡು ಉಪಕ್ರಮವನ್ನು ಸುಧಾರಿಸುವ ಕೆಲಸ ಮಾಡಿದ್ದೇವೆ. ಅದು ಮುಂದುವರಿಯುತ್ತಿದೆ. ಈ ಉಪಕ್ರಮ ಖಚಿತವಾಗಿಯೂ ಪ್ರಯೋಜನಕಾರಿ" ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು.

ರಸ್ತೆ ಸುರಕ್ಷತೆ ಆದ್ಯತೆ; ಅಪಘಾತ ಪ್ರಮಾಣ ತಗ್ಗಿಸುವ ಕಡೆಗೆ ಗಮನ

“ನಮ್ಮ ಪ್ರಮುಖ ಆದ್ಯತೆ ರಸ್ತೆ ಸುರಕ್ಷತೆ. 2024 ರಲ್ಲಿ ರಸ್ತೆ ಅಪಘಾತಗಳಲ್ಲಿ 1.8 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ 30,000 ಜನರು ಹೆಲ್ಮೆಟ್ ಧರಿಸದೇ ಸಾವನ್ನಪ್ಪಿದ್ದಾರೆ. ಮತ್ತೊಂದು ಗಂಭೀರ ವಿಷಯವೆಂದರೆ ಮಾರಣಾಂತಿಕ ಅಪಘಾತಗಳಿಗೆ ಬಲಿಯಾದವರಲ್ಲಿ ಶೇಕಡಾ 66 ರಷ್ಟು ಜನರು 18-34 ವರ್ಷ ವಯಸ್ಸಿನವರು. ನಮ್ಮ ಶಾಲೆಗಳು ಮತ್ತು ಕಾಲೇಜುಗಳ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲೇ 10,000 ಮಕ್ಕಳು ಮೃತಪಟ್ಟಿದ್ದಾರೆ ಎಂದು ಸಚಿವ ಗಡ್ಕರಿ ಕಾಳಜಿ ತೋರಿದರು.

ಚಾಲನಾ ಪರವಾನಗಿ ಇಲ್ಲದೇ ವಾಹನ ನಡೆಸಿದ್ದರಿಂದ ಉಂಟಾದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 3000ದ ಆಸುಪಾಸಿನಲ್ಲಿದೆ. ಹೀಗಾಗಿ ಚಾಲನಾ ತರಬೇತಿ ಕೇಂದ್ರ ಸ್ಥಾಪನೆ ಕೂಡ ಕಾರ್ಯಸೂಚಿಯಲ್ಲಿದೆ. ಭಾರತದಲ್ಲಿ 22 ಲಕ್ಷ ಚಾಲಕರ ಕೊರತೆ ಇದೆ. ಅದಕ್ಕಾಗಿ ಹೊಸ ನೀತಿ ರೂಪಿಲಾಗಿದೆ ಎಂದು ನಿತಿನ್‌ ಗಡ್ಕರಿ ವಿವರಿಸಿದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.