Rahul Gandhi: ಸುದ್ದಿಗೋಷ್ಠಿಯಲ್ಲಿ ತಡವರಿಸಿದ ರಾಹುಲ್ ನಾಲಿಗೆ, ಜೈರಾಮ್ ಕರೆಕ್ಷನ್ ಬರಲಿಲ್ಲ ನೆರವಿಗೆ: ದೇಶವೇ ನೋಡಿದ ಬಿಜೆಪಿ ಟ್ವೀಟ್!
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 'ನಾನು ದುರದೃಷ್ಟವಶಾತ್ ಆಗಿ ಸಂಸದನಾಗಿ ಆಯ್ಕೆಯಾಗಿದ್ದೇನೆ..' ಎಂದು ಹೇಳಿದರು. ಆಗ ರಾಹುಲ್ ಅವರ ಪಕ್ಕವೇ ಕುಳಿತಿದ್ದ ಜೈರಾಮ್ ರಮೇಶ್, ಮೆಲುಧ್ವನಿಯಲ್ಲಿ 'ಈ ಹೇಳಿಕೆ ಒಂದು ಜೋಕ್ ಆಗಬಹುದು. ಹೀಗಾಗಿ ಕೂಡಲೇ ನಿಮ್ಮ ಹೇಳಿಕೆಯನ್ನು ಬದಲಾಯಿಸಿಕೊಳ್ಳಿ..' ಎಂದು ಸಲಹೆ ನೀಡಿದ್ದಾರೆ.
ನವದೆಹಲಿ: ಸದಾ ಒಂದಿಲ್ಲೊಂದು ವಿವಾದದಕ್ಕೆ ಗುರಿಯಾಗುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದೀಗ ಪತ್ರಿಕಾಗೋಷ್ಠಿಯಲ್ಲಿ 'ನಾನು ದುರದೃಷ್ಟವಶಾತ್ ಆಗಿ ಸಂಸದನಾಗಿ ಆಯ್ಕೆಯಾಗಿದ್ದೇನೆ..' ಎಂದು ಹೇಳುವ ಮೂಲಕ, ಹೊಸದೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 'ನಾನು ದುರದೃಷ್ಟವಶಾತ್ ಆಗಿ ಸಂಸದನಾಗಿ ಆಯ್ಕೆಯಾಗಿದ್ದೇನೆ..' ಎಂದು ಹೇಳಿದರು. ಆಗ ರಾಹುಲ್ ಅವರ ಪಕ್ಕವೇ ಕುಳಿತಿದ್ದ ಜೈರಾಮ್ ರಮೇಶ್, ಮೆಲುಧ್ವನಿಯಲ್ಲಿ 'ಈ ಹೇಳಿಕೆ ಒಂದು ಜೋಕ್ ಆಗಬಹುದು. ಹೀಗಾಗಿ ಕೂಡಲೇ ನಿಮ್ಮ ಹೇಳಿಕೆಯನ್ನು ಬದಲಾಯಿಸಿಕೊಳ್ಳಿ..' ಎಂದು ಸಲಹೆ ನೀಡಿದ್ದಾರೆ.
ಕೂಡಲೇ ಎಚ್ಚೆತ್ತ ರಾಹುಲ್ ಗಾಂಧಿ, 'ನಾನು ನಿಮ್ಮ ಪಾಲಿಗೆ ದುರದೃಷ್ಟವಶಾತ್ ಆಗಿ ಸಂಸದನಾಗಿದ್ದೇನೆ..' ಎಂದು ತಮ್ಮ ಹೇಳಿಕೆಯನ್ನು ಮರುವ್ಯಾಖ್ಯಾನಿಸಿದರು. ಆದರೆ ರಾಹುಲ್ ಅವರೊಂದಿಗಿಮ ಜೈರಾಮ್ ರಮೇಶ್ ಚರ್ಚೆ ವಿಡಿಯೋದಲ್ಲಿ ಸೆರೆಯಾಗಿದ್ದು, 25 ಸೆಕೆಂಡ್‌ಗಳ ಈ ವಿಡಿಯೋವನ್ನು ಬಿಜೆಪಿಯ ಹಲವು ನಾಯಕರು ತಮ್ಮ ಅಧಿಕೃತ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ರಾಹುಲ್ ಮತ್ತು ಜೈರಾಮ್ ರಮೇಶ್ ನಡುವಿನ ಚರ್ಚೆಯ ವಿಡಿಯೋ ತುಣುಕನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಕೇಂದ್ರ ಸಚಿವ ಪಿಯೂಷ್ ಗೋಯೆಲ್, ರಾಹುಲ್ ಅವರನ್ನು ಕಿಚಾಯಿಸಿದ್ದಾರೆ. ಇದೇ ವಿಡಿಯೋವನ್ನು ಹಂಚಿಕೊಂಡಿರುವ ಮತ್ತೋರ್ವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, 'ಹೌದು ನಿಜಕ್ಕೂ ಇದು ದುರದೃಷ್ಟ..' ಎಂದು ರಾಹುಲ್ ಅವರ ಕಾಲೆಳೆದಿದ್ದಾರೆ.
ಬಿಜೆಪಿಯ ಅಮಿತ್ ಮಾಳವಿಯಾ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು, 'ಜೈರಾಮ್ ರಮೇಶ್ ಅವರು ರಾಹುಲ್ ಗಾಂಧಿಯವರ ಅಧಿಕೃತ ಅಜ್ಜಿ..' ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ವಿಚಾರವಾಗಿ ಸ್ಪಷ್ಟನೆ ರೂಪದಲ್ಲಿ ಟ್ವೀಟ್ ಮಾಡಿರುವ ಜೈರಾಮ್ ರಮೇಶ್, 'ಬಿಜೆಪಿಯ ಸುಳ್ಳಿನ ಯಂತ್ರವು ರಾಹುಲ್ ಗಾಂಧಿ ಅವರ ಪ್ರತಿ ಹೇಳಿಕೆಯನ್ನು ತಿರುಚುತ್ತದೆ ಎಂದು ಕಿಡಿಕಾರಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡುವಾಗ ನಾವು ಬಿಜೆಪಿ ನಾಯಕರಂತೆ ಟೆಲಿಪ್ರಾಮ್ಟರ್‌ಗಳನ್ನು ಬಳಸುವುದಿಲ್ಲ. 'ಮೋದಾನಿ' ಹಗರಣದಿಂದ ದೇಶದ ಗಮನ ಬೇರೆಡೆ ಸೆಲೆಯಲು, ಇದು ಬಿಜೆಪಿ ಹೆಣೆದಿರುವ ಮತ್ತೊಂದು ಕುತಂತ್ರ..' ಎಂದು ಕಿಡಿಕಾರಿದ್ದಾರೆ.
ಈಗಾಗಲೇ ರಾಹುಲ್ ಗಾಂಧಿ ಅವರ ಕೇಂಬ್ರಿಡ್ಜ್ ಭಾಷಣವನ್ನು ತೀವ್ರವಾಗಿ ಖಂಡಿಸುತ್ತಿರುವ ಬಿಜೆಪಿ, ಇದೀಗ ರಾಹುಲ್ ಅವರ ಅಪ್ರಬುದ್ಧ ನಡುವಳಿಕೆಯ ಬಗ್ಗೆ ಪ್ರಶ್ನೆ ಎತ್ತಿದೆ. ಪತ್ರಿಕಾಗೋಷ್ಠಿಯಲ್ಲೇ ಅಸಂಬದ್ಧವಾಗಿ ಮಾತನಾಡುವ ರಾಹುಲ್ ಗಾಂಧಿ, ವಿದೇಶಗಳಲ್ಲಿ ಇನ್ನೂ ಏನೇನು ಅವಾಂತರಗಳನ್ನು ಮಾಡಬಲ್ಲರು ಎಂದು ಬಿಜೆಪಿ ಪ್ರಶ್ನಿಸಿದೆ.
ಒಟ್ಟಿನಲ್ಲಿ ರಾಹುಲ್ ಹಾಗೂ ಜೈರಾಮ್ ರಮೇಶ್ ಅವರ ನಡುವಿನ ಸಂಭಾಷಣೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ರಾಹುಲ್ ಅವರಿಗೆ ತಮ್ಮ ಸಂಸದ ಸ್ಥಾನ ಬೇಡವಾಗಿದ್ದರೆ ಈ ಕೂಡಲೇ ರಾಜೀನಾಮೆ ನೀಡಿ ಹೊರಬರಲಿ ಎಂಬ ಆಗ್ರಹ ಎಲ್ಲೆಡೆ ಕೇಳಿಬರುತ್ತಿದೆ.
ಸಂಬಂಧಿತ ಸುದ್ದಿ
Varun Gandhi: ರಾಹುಲ್ ಕೇಂಬ್ರಿಡ್ಜ್ ಭಾಷಣ ವಿವಾದ: ಆಕ್ಸ್‌ಫರ್ಡ್ ಆಫರ್‌ಗೆ ಒಲ್ಲೆ ಎಂದು ಕೈ ಮುಗಿದ ವರುಣ್ ಗಾಂಧಿ!
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಸರಿಯಾದ ಹಾದಿಯಲ್ಲಿದೆ ಎಂಬ ವಿಷಯದ ಕುರಿತು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಚರ್ಚೆಯೊಂದನ್ನು ಆಯೋಜಿಸಲಾಗಿದೆ. ಈ ಚರ್ಚೆಯಲ್ಲಿ ಭಾಗವಹಿಸುವಂತೆ ರಾಹುಲ್ ಗಾಂಧಿ ಅವರ ಸೋದರ ಸಂಬಂಧಿ ಹಾಗೂ ಬಿಜೆಪಿ ಸಂಸದ ವರುಣ್ ಗಾಂಧಿ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ವರುಣ್ ಗಾಂಧಿ ಈ ಆಹ್ವಾನವನ್ನು ತಿರಸ್ಕರಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
ಸಂಬಂಧಿತ ಲೇಖನ