ಸಹಾಯಕ ಲೋಕೋ ಪೈಲಟ್ ನೇಮಕಾತಿ; 9970 ಹುದ್ದೆಗಳು ಖಾಲಿ, ನೋಂದಣಿ ಗಡುವು ವಿಸ್ತರಿಸಿದ ಆರ್‌ಆರ್‌ಬಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಹಾಯಕ ಲೋಕೋ ಪೈಲಟ್ ನೇಮಕಾತಿ; 9970 ಹುದ್ದೆಗಳು ಖಾಲಿ, ನೋಂದಣಿ ಗಡುವು ವಿಸ್ತರಿಸಿದ ಆರ್‌ಆರ್‌ಬಿ

ಸಹಾಯಕ ಲೋಕೋ ಪೈಲಟ್ ನೇಮಕಾತಿ; 9970 ಹುದ್ದೆಗಳು ಖಾಲಿ, ನೋಂದಣಿ ಗಡುವು ವಿಸ್ತರಿಸಿದ ಆರ್‌ಆರ್‌ಬಿ

ಆರ್‌ಆರ್‌ಬಿ ನೇಮಕಾತಿ 2025: ರೈಲ್ವೆ ನೇಮಕಾತಿ ಮಂಡಳಿಯು ಸಹಾಯಕ ಲೋಕೋ ಪೈಲಟ್‌ ಹುದ್ದೆಗಳಿಗೆ ನೋಂದಣಿ ಗಡುವನ್ನು ಮೇ 19ರವರೆಗೆ ವಿಸ್ತರಿಸಲಾಗಿದೆ. 9970 ಹುದ್ದೆಗಳನ್ನು ಭರ್ತಿ ಮಾಡುವ ಗುರಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ಸಹಾಯಕ ಲೋಕೋ ಪೈಲಟ್ ನೇಮಕಾತಿಗೆ ನೋಂದಣಿ ಗಡುವು ವಿಸ್ತರಿಸಿದ ಆರ್‌ಆರ್‌ಬಿ (ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್‌ ಪ್ಯಾಸೆಂಜರ್ ರೈಲನ್ನು ಓಡಿಸುತ್ತಿರುವ ಚಿತ್ರ)
ಸಹಾಯಕ ಲೋಕೋ ಪೈಲಟ್ ನೇಮಕಾತಿಗೆ ನೋಂದಣಿ ಗಡುವು ವಿಸ್ತರಿಸಿದ ಆರ್‌ಆರ್‌ಬಿ (ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್‌ ಪ್ಯಾಸೆಂಜರ್ ರೈಲನ್ನು ಓಡಿಸುತ್ತಿರುವ ಚಿತ್ರ) (Santosh Kumar/ Hindustan Times)

ರೈಲ್ವೆ ನೇಮಕಾತಿ ಮಂಡಳಿಯು (RRB) ಆರ್‌ಆರ್‌ಬಿ ಸಹಾಯಕ ಲೋಕೋ ಪೈಲಟ್ ಅಥವಾ ಎಎಲ್‌ಪಿ 2025 ಹುದ್ದೆಗೆ ನೋಂದಾಯಿಸಲು ಗಡುವನ್ನು ವಿಸ್ತರಿಸಿದೆ. ನೇಮಕಾತಿ ಡ್ರೈವ್‌ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ನಿಮ್ಮ ಪ್ರಾದೇಶಿಕ ಆರ್‌ಆರ್‌ಬಿಯ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು. ಇದರೊಂದಿಗೆ ಅರ್ಜಿ ಶುಲ್ಕವನ್ನು ಪಾವತಿಸುವ ದಿನಾಂಕದ ಗಡುವನ್ನು ಮಂಡಳಿಯು ಮೇ 21ರವರೆಗೆ ವಿಸ್ತರಿಸಿದೆ. ಶುಲ್ಕವನ್ನು ಪಾವತಿಸಿ ಅರ್ಜಿ ನಮೂನೆಯಲ್ಲಿ ತಿದ್ದುಪಡಿಗಾಗಿ ಮಾಡಿಫಿಕೇಶನ್‌ ವಿಂಡೋವನ್ನು ಮೇ22 ರಿಂದ ಮೇ 31ರವರೆಗೆ ಪರಿಷ್ಕರಿಸಲಾಗಿದೆ.

ಈ ನೇಮಕಾತಿ ಡ್ರೈವ್ ಮೂಲಕ ರೈಲ್ವೆ ನೇಮಕಾತಿ ಮಂಡಳಿಯು 9,970 ಸಹಾಯಕ ಲೋಕೋ ಪೈಲಟ್ ಹುದ್ದೆಗಳನ್ನು (ಎಎಲ್‌ಪಿ) ಭರ್ತಿ ಮಾಡುವ ಗುರಿ ಹೊಂದಿದೆ. ಹೀಗಾಗಿ ಹಲವು ಹುದ್ದೆಯ ಆಯ್ಕೆ ಇರುವುದರಿಂದ ಆಸಕ್ತರು ಅರ್ಜಿ ಸಲ್ಲಿಸಬಹುದು.

ಆರ್‌ಆರ್‌ಬಿ ಪ್ರಕಾರ, ಪರೀಕ್ಷಾ ವೇಳಾಪಟ್ಟಿ ಮತ್ತು ಸ್ಥಳಗಳ ಮಾಹಿತಿಯನ್ನು ಅಧಿಕೃತ ಆರ್‌ಆರ್‌ಬಿ ವೆಬ್‌ಸೈಟ್‌ಗಳಲ್ಲಿ ನೀಡಲಾಗುತ್ತದೆ. ಇದರೊಂದಿಗೆ ಎಸ್ಎಂಎಸ್ ಮತ್ತು ಇಮೇಲ್ ಮೂಲಕ ಸರಿಯಾದ ಸಮಯದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದೆ. ಇದೇ ವೇಳೆ, ಯಾವುದೇ ಹಂತಗಳನ್ನು ಮುಂದೂಡಲು ಅಥವಾ ಸ್ಥಳ, ದಿನಾಂಕ ಮತ್ತು ಶಿಫ್ಟ್ ಬದಲಾಯಿಸುವುದಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಮನವಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಮಂಡಳಿ ಸ್ಪಷ್ಟವಾಗಿ ತಿಳಿಸಿದೆ.

ಆರ್‌ಆರ್‌ಬಿ ನೇಮಕಾತಿ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ

  1. ಮೊದಲ ಹಂತ CBT (CBT-1)
  2. ಎರಡನೇ ಹಂತ CBT (CBT-2)
  3. ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್ (ಸಿಬಿಎಟಿ)
  4. ದಾಖಲೆ ಪರಿಶೀಲನೆ (DV)
  5. ವೈದ್ಯಕೀಯ ಪರೀಕ್ಷೆ (ME)

ಆರ್‌ಆರ್‌ಬಿ ಎಎಲ್‌ಪಿ ನೇಮಕಾತಿ 2025

ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಆರ್‌ಆರ್‌ಬಿ ಎಎಲ್‌ಪಿ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು...

1. ಆರ್‌ಆರ್‌ಬಿ (ರೈಲ್ವೆ ನೇಮಕಾತಿ ಮಂಡಳಿ) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

2. ಮುಖಪುಟದಲ್ಲಿ, ಆರ್‌ಆರ್‌ಬಿ ಎಎಲ್‌ಪಿ ನೇಮಕಾತಿ ಡ್ರೈವ್‌ಗೆ ಅರ್ಜಿ ಸಲ್ಲಿಸಲು ಲಿಂಕ್ ಅನ್ನು ಕ್ಲಿಕ್ ಮಾಡಿ.

3. ನಿಮ್ಮ ರುಜುವಾತುಗಳನ್ನು (ಕ್ರೆಡೆನ್ಷಿಯಲ್ಸ್)‌ ನಮೂದಿಸುವ ಮೂಲಕ ನೋಂದಾಯಿಸಿ.

4. ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿದ ಬಳಿಕ ಸಬ್ಮಿಟ್ ಮಾಡಿ.

5. ಅರ್ಜಿ ಶುಲ್ಕ ಪಾವತಿಸಿ.

6. ದೃಢೀಕರಣವಾದ ಪುಟವನ್ನು ಡೌನ್‌ಲೋಡ್ ಮಾಡಿ. ನಿಮ್ಮ ಮುಂದಿನ ಉಲ್ಲೇಖಕ್ಕಾಗಿ ಅದರ ಪ್ರಿಂಟ್‌ಔಟ್ ತೆಗೆದು ಇಟ್ಟುಕೊಳ್ಳಿ.

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.