ಕನ್ನಡ ಸುದ್ದಿ  /  Nation And-world  /  Rss Route March Tamil Nadu Files Fresh Petition In Sc Over Rss Route March Issue

RSS route march: ತಮಿಳುನಾಡಿನಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ; ಸುಪ್ರೀಂ ಕೋರ್ಟಲ್ಲಿ ಹೊಸ ಅರ್ಜಿ ಸಲ್ಲಿಸಿದ ರಾಜ್ಯ ಸರ್ಕಾರ

RSS route march: ಹೊಸ ಅರ್ಜಿಗಳಲ್ಲಿ, ತಮಿಳುನಾಡು ಸರ್ಕಾರವು ಸೆಪ್ಟೆಂಬರ್ 22, 2022 ಮತ್ತು ನವೆಂಬರ್ 2, 2022 ರ ಮದ್ರಾಸ್ ಹೈಕೋರ್ಟ್‌ನ ಎರಡು ಆದೇಶಗಳನ್ನು ಪ್ರಶ್ನಿಸಿದೆ.

ಆರ್‌ಎಸ್‌ಎಸ್‌ ಪಥಸಂಚಲನ (ಕಡತ ಚಿತ್ರ)
ಆರ್‌ಎಸ್‌ಎಸ್‌ ಪಥಸಂಚಲನ (ಕಡತ ಚಿತ್ರ) (ANI)

ನವದೆಹಲಿ: ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪಥಸಂಚಲನ (RSS route march)ಕ್ಕೆ ಸಂಬಂಧಿಸಿದ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ಹೊಸ ಅರ್ಜಿ ಸಲ್ಲಿಸಿರುವುದಾಗಿ ತಮಿಳುನಾಡು ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ನ್ಯಾಯಮೂರ್ತಿಗಳಾದ ವಿ.ರಾಮಸುಬ್ರಮಣಿಯನ್‌ ಮತ್ತು ಪಂಕಜ್‌ ಮಿತ್ತಲ್‌ ಅವರಿದ್ದ ನ್ಯಾಯಪೀಠವು ಈ ಅರ್ಜಿಯ ವಿಚಾರಣೆ ನಡೆಸುತ್ತಿದ್ದು, ವಿಚಾರಣೆಯನ್ನು ಮಾರ್ಚ್‌ 27ಕ್ಕೆ ಮುಂದೂಡಿದೆ.

ಹೊಸ ಅರ್ಜಿಗಳಲ್ಲಿ, ತಮಿಳುನಾಡು ಸರ್ಕಾರವು ಸೆಪ್ಟೆಂಬರ್ 22, 2022 ಮತ್ತು ನವೆಂಬರ್ 2, 2022 ರ ಮದ್ರಾಸ್ ಹೈಕೋರ್ಟ್‌ನ ಎರಡು ಆದೇಶಗಳನ್ನು ಪ್ರಶ್ನಿಸಿದೆ.

ರಾಜ್ಯದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ತಮಿಳುನಾಡು ಸರ್ಕಾರದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಫೆಬ್ರವರಿ 10 ರಂದು ಮದ್ರಾಸ್ ಹೈಕೋರ್ಟ್ ತಮಿಳುನಾಡು ಪೊಲೀಸರಿಗೆ ಆರ್‌ಎಸ್‌ಎಸ್‌ಗೆ ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಪಥ ಸಂಚಲನ ನಡೆಸಲು ಅನುಮತಿ ನೀಡುವಂತೆ ಸೂಚಿಸಿತು.

ಕಳೆದ ವಿಚಾರಣೆಯಲ್ಲಿ, ತಮಿಳುನಾಡು ಸರ್ಕಾರವು ಆರ್‌ಎಸ್‌ಎಸ್ ಪಥ ಸಂಚಲನವನ್ನು ಸಂಪೂರ್ಣವಾಗಿ ವಿರೋಧಿಸುವುದಿಲ್ಲ. ಆದರೆ ಸೂಕ್ಷ್ಮ ಸ್ಥಳಗಳಲ್ಲಿ ಅದನ್ನು ಅನುಮತಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕೂಡ ತಮಿಳುನಾಡಿನಲ್ಲಿ ಮಾರ್ಚ್ 5 ರಂದು ಯಾವುದೇ ಪಥ ಸಂಚಲನ ನಡೆಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿತ್ತು.

ತಮಿಳುನಾಡು ಸರ್ಕಾರವು ಆರ್‌ಎಸ್‌ಎಸ್‌ನ ಪಥಸಂಚಲನವನ್ನು ಸಂಪೂರ್ಣವಾಗಿ ವಿರೋಧಿಸದ ಕಾರಣ ಉದ್ದೇಶಿತ ಮಾರ್ಗಗಳ ಕುರಿತು ಮಾತುಕತೆ ನಡೆಸುವುದಾಗಿ ಹೇಳಿದೆ. ಪಿಎಫ್‌ಐ ಘಟನೆಗಳನ್ನು ಎದುರಿಸುತ್ತಿರುವ ಮತ್ತು ಗಡಿ ಪ್ರದೇಶಗಳ ಗೊಂದಲಗಳಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಲು ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಸೂಕ್ಷ್ಮ ಪ್ರದೇಶಗಳಿಗೆ ಸಂಬಂಧಿಸಿ ಸರ್ಕಾರದ ಬಳಿ ಕೆಲವು ಗುಪ್ತಚರ ವರದಿಗಳಿವೆ ಎಂದು ವಕೀಲರು ಹೇಳಿದರು.

ತಮಿಳುನಾಡು ಸರ್ಕಾರದ ಪರ ವಕೀಲರು ವಾದ ಮಂಡಿಸುತ್ತ, ರಾಜ್ಯ ಸರ್ಕಾರವು ಆರ್‌ಎಸ್‌ಎಸ್‌ನ ಪಥ ಸಂಚಲನವನ್ನು ಸಂಪೂರ್ಣವಾಗಿ ವಿರೋಧಿಸುವುದಿಲ್ಲ. ಆದರೆ ಅದನ್ನು ಮಾಡಲು ಉದ್ದೇಶಿಸಿರುವ ವಿಧಾನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದಾಗಿ ಒತ್ತಿ ಹೇಳಿದರು.

"ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ವನ್ನು ಕೇಂದ್ರ ಸರ್ಕಾರವು ನಿಷೇಧಿಸಿದೆ. ಇದನ್ನು ಉಲ್ಲೇಖಿಸಿಕೊಂಡು ರಾಜ್ಯ ಸರ್ಕಾರ ಆರ್‌ಎಸ್‌ಎಸ್‌ನ ಪಥ ಸಂಚಲನವನ್ನು ನಿಷೇಧಿಸಿದೆ. ಅವರಿಗೆ ಭಯೋತ್ಪಾದಕರನ್ನು ನಿಯಂತ್ರಿಸಲಾಗುತ್ತಿಲ್ಲ. ಅದಕ್ಕೆ ಅವರು ಆರ್‌ಎಸ್‌ಎಸ್‌ನ ರೂಟ್‌ ಮಾರ್ಚ್‌ ಅನ್ನು ನಿಷೇಧಿಸುತ್ತಿದ್ದಾರೆ ಎಂದು ಆರ್‌ಎಸ್‌ಎಸ್‌ ಪರ ವಕೀಲರು ವಾದಿಸಿದ್ದಾರೆ.

ಮರುನಿಗದಿಪಡಿಸಿದ ದಿನಾಂಕಗಳಲ್ಲಿ ತಮಿಳುನಾಡಿನಲ್ಲಿ ಆರ್‌ಎಸ್‌ಎಸ್ ರೂಟ್ ಮಾರ್ಚ್‌ಗೆ ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತೆರಳಿದೆ.

ಗಮನಿಸಬಹುದಾದ ಸುದ್ದಿಗಳು

ನೊಬೆಲ್‌ ಪುರಸ್ಕಾರಕ್ಕೆ ಮೋದಿ ಹೆಸರು; ಸುಳ್ಳು ಸುದ್ದಿ ಎಂದ ನೊಬೆಲ್‌ ಕಮಿಟಿ ಮೆಂಬರ್‌; ಹಾಗಾದರೆ ತೋಜೆ ಹೇಳಿದ್ದೇನು?

Nobel Peace Prize: ನೊಬೆಲ್‌ ಶಾಂತಿ ಪುರಸ್ಕಾರ ಸಂಬಂಧಿಸಿ ನಾವು ಬಹಿರಂಗವಾಗಿ ಚರ್ಚಿಸುವಂತೆ ಇಲ್ಲ ಅಥವಾ ಅಂತಹ ವದಂತಿಗಳಿಗೆ ಪುಷ್ಟಿ ನೀಡುವಂತೆಯೂ ಇಲ್ಲ. ನನ್ನ ಹೇಳಿಕೆ ಎಂಬುದನ್ನು ನಾನು ಸ್ಪಷ್ಟವಾಗಿ ನಿರಾಕರಿಸುತ್ತೇನೆ ಎಂದು ತೋಜೆ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ತೋಜೆಯ ಮಾತುಗಳು ನೊಬೆಲ್‌ ಪುರಸ್ಕಾರದ ವಿಚಾರದಲ್ಲಿ ಸಾರ್ವಜನಿಕ ಸಂಚಲನ ಮೂಡಿಸಿದ್ದು ವಾಸ್ತವ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

ಇಂದು ವಿಶ್ವ ನಿದ್ರಾ ದಿನ; ಥೀಮ್‌, ಇತಿಹಾಸ ಮತ್ತು ಮಹತ್ವ ಹೀಗಿದೆ ಗಮನಿಸಿ

World Sleep Day 2023: ಇಂದು ವಿಶ್ವ ನಿದ್ರಾ ದಿನ. ನಿದ್ರಾ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಉದ್ದೇಶ. ಈ ದಿನಾಚರಣೆಯ ಇತಿಹಾಸ, ಮಹತ್ವ ಮತ್ತು ಇತರೆ ವಿವರ ಇಲ್ಲಿದೆ.

IPL_Entry_Point