ಕನ್ನಡ ಸುದ್ದಿ  /  Nation And-world  /  Sabarimala Ayyappa Swami Temple Opens Today, Annual Mandalam-makaravilakku Pilgrimage Season Full Details

Sabarimala Temple opens: ತೆರೆದ ಶಬರಿಮಲೆ ದೇಗುಲ, ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಯಾತ್ರೆ ಕೈಗೊಳ್ಳುವವರಿಗೆ ಇಲ್ಲಿದೆ ವಿಶೇಷ ಮಾಹಿತಿ

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಭಕ್ತರು ಈ ಅವಧಿಯಲ್ಲಿ ಶಬರಿಮಲೆಗೆ ಹಲವು ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ಈ ಋತುವಿನಲ್ಲಿ ಯಾತ್ರೆ ಕೈಗೊಳ್ಳುವವರಿಗಾಗಿ ಹಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ತೆರೆದ ಶಬರಿಮಲೆ ದೇಗುಲ, ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಯಾತ್ರೆ ಕೈಗೊಳ್ಳುವವರಿಗೆ ಮಾಹಿತಿ
ತೆರೆದ ಶಬರಿಮಲೆ ದೇಗುಲ, ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಯಾತ್ರೆ ಕೈಗೊಳ್ಳುವವರಿಗೆ ಮಾಹಿತಿ ( Prakash Elamakkara )

ತಿರುವನಂತಪುರ: ಕೇರಳದಲ್ಲಿರುವ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲವು ವಾರ್ಷಿಕ ಮಂಡಲಂ ಮಕರವಿಲ್ಲಕ್ಕು ಅವಧಿಗಾಗಿ ಬಾಗಿಲು ತೆರೆಯಲಾಗಿದೆ. ಇನ್ನು ಮುಂದೆ ಶಬರಿಮಲೆಗೆ ಮಾಲಾಧಾರಿಗಳು ಭೇಟಿ ನೀಡಬಹುದು. ಇಂದು ಧಾನ ಅರ್ಚಕ (ತಂತ್ರಿ) ಕಂದರಾರು ರಾಜೀವರು ಉಪಸ್ಥಿತಿಯಲ್ಲಿ ನಿರ್ಗಮಿತ ಪ್ರಧಾನ ಅರ್ಚಕ ಎನ್.ಪರಮೇಶ್ವರನ್ ನಂಬೂತಿರಿ ಅವರು ಗರ್ಭಗುಡಿಯನ್ನು ತೆರೆದಿದ್ದಾರೆ. ಈ ಋತುವಿನಲ್ಲಿ ಯಾತ್ರೆ ಕೈಗೊಳ್ಳುವವರಿಗಾಗಿ ಮತ್ತು ಶಬರಿಮಲೆಯ ಯಾತ್ರಾ ಋತುವಿನ ಬಗ್ಗೆ ತಿಳಿದುಕೊಳ್ಳಲು ಬಯಸುವವರಿಗಾಗಿ ಒಂದಿಷ್ಟು ಮಾಹಿತಿ ಇಲ್ಲಿ ನೀಡಲಾಗಿದೆ.

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಭಕ್ತರು ಈ ಅವಧಿಯಲ್ಲಿ ಶಬರಿಮಲೆಗೆ ಹಲವು ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ಕೇರಳಕ್ಕೆ ಕರ್ನಾಟಕ ಹತ್ತಿರದ ರಾಜ್ಯವಾಗಿರುವುದರಿಂದ ಹಲವು ಲಕ್ಷ ಭಕ್ತರು ರಾಜ್ಯದಿಂದ ಭೇಟಿ ನೀಡುತ್ತಾರೆ. ಇಂದು ದೇಗುಲದ ಬಾಗಿಲು ತೆರೆಯಲಾಗಿದ್ದು, ಶಬರಿಮಲೆ ಅಯ್ಯಪ್ಪನ ಸನ್ನಿಧಾನದ ಎಲ್ಲೆಡೆ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ನಾಮಸ್ಮರಣೆ ಕೇಳಿಸುತ್ತಿದೆ.

ಮಂಡಲ ಅವಧಿ ಎಂದರೇನು?

- ಇಂದಿನಿಂದ 41ದಿನಗಳ ಕಾಲದ ಅವಧಿಯನ್ನು ಮಂಡಲ ಅವಧಿ ಎನ್ನುತ್ತಾರೆ. ಮಲಯಾಲಂ ಕ್ಯಾಲೆಂಡರ್‌ನ ವೃಶ್ಚಿಕದಿ ಇದು ಆರಂಭವಾಗುತ್ತದೆ. ಈ ಅವಧಿ ಡಿಸೆಂಬರ್‌ 27ಕ್ಕೆ ಕೊನೆಗೊಳ್ಳಲಿದೆ. ಅಂದರೆ, ವೃಶ್ಚಿಕ ಮಾಸದ ಮೊದಲ ದಿನ ಮಂಡಲ ವ್ರತಾಚರಣೆ ಶುರುವಾದರೆ ಧನು ಮಾಸದ 11ನೇ ದಿನ ವ್ರತಾಚರಣೆ ಸಂಪನ್ನವಾಗುತ್ತದೆ.

ಶಬರಿಮಲೆಗೆ ಮುಖ್ಯ ಆರ್ಚಕರು ಯಾರು?

- ಕೆ. ಜಯರಾಮನ್‌ ನಂಬೋದರಿಯವರು ಶಬರಿಮಲೆಯ ಮುಖ್ಯ ಆರ್ಚಕರಾಗಿ ಸೇವೆ ಸಲ್ಲಿಸಲಿದ್ದಾರೆ. ಹರಿಹರಣ್‌ ನಂಬೋದರಿಯವರು ಮಲ್ಲಿಕಾಪುರಂ ದೇಗುಲದ ಮುಖ್ಯ ಆರ್ಚಕರಾಗಿ ಹರಿಹರಣ್‌ ನಂಬೋದರಿಯವರು ನೇಮಕಗೊಂಡಿದ್ದಾರೆ.

ಈ ಬಾರಿ ಎಷ್ಟು ಭಕ್ತರು ಭೇಟಿ ನೀಡಬಹುದು?

- ಕಳೆದ ಕೆಲವು ವರ್ಷಗಳಿಂದ ಕೊರೊನಾ ನಿರ್ಬಂಧಗಳಿಂದ ಶಬರಿಮಲೆಗೆ ಭೇಟಿ ನೀಡುವ ಭಕ್ತರಿಗೆ ಮಿತಿ ಹೇರಳಾಗಿತ್ತು. ಆದರೆ, ಈ ಬಾರಿ ಯಾವುದೇ ಮಿತಿ ಇಲ್ಲದೆ ಇರುವುದರಿಂದ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದೆ. ಕಂದಾಯ ಸಚಿವಾರದ ಕೆ. ರಾಜನ್‌ ಪ್ರಕಾರ ಈ ಬಾರಿ ಕಡಿಮೆಯೆಂದರೂ 40 ಲಕ್ಷ ಭಕ್ತರು ಶಬರಿಮಲೆಗೆ ಭೇಟಿ ನೀಡುವ ನಿರೀಕ್ಷೆಯಿದೆ. ಅತ್ಯಧಿಕ ಸಂಖ್ಯೆಯ ಭಕ್ತರು ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಈ ಬಾರಿ ಯಾತ್ರೆ ಕೈಗೊಳ್ಳುವವರು ಭಕ್ತರ ದಟ್ಟಣೆ ಹೆಚ್ಚಿರುವ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

ಶಬರಿಮಲೆ ಆಡಳಿತದ ಹೊಣೆ ಯಾರದ್ದು?

- ಟ್ರಾವಂಕೂರ್‌ ದೇವಸ್ವಂ ಮಂಡಳಿ (ಟಿಡಿಬಿ)ಯು ಶಬರಿಮಲೆಯ ಉಸ್ತುವಾರಿ ನೀಡಿಕೊಳ್ಳುತ್ತದೆ.

ಮಕರವಿಲ್ಲಕ್ಕು ಯಾತ್ರಾ ಋತು ಆರಂಭವಾಗುವುದು ಯಾವಾಗ?

- ಶಬರಿಮಲೆ ದೇಗುಲವು ಡಿಸೆಂಬರ್‌ 30ರಂದು ಮತ್ತೆ ತೆರೆಯಲಿದೆ. ಜನವರಿ 20ಕ್ಕೆ ಮುಚ್ಚಲಿದೆ. ಜನವರಿ 14ರಂದು ಜ್ಯೋತಿ ದರ್ಶನವಾಗಲಿದೆ.

ಶಬರಿಮಲೆ ದೇವಾಲಯ ಇಷ್ಟೊಂದು ಜನಪ್ರಿಯತೆ ಏಕೆ?

ಕೇರಳದ ಜನಪ್ರಿಯ ಶಾಸ್ತ ದೇಗುಲಗಳಲ್ಲಿ ಒಂದಾಗಿದೆ. ಈ ದೇಗುಲವು ಸಮುದ್ರ ಮಟ್ಟದಿಂದ 3 ಸಾವಿರ ಅಡಿ ಎತ್ತರದಲ್ಲಿದೆ. ಎಲ್ಲಾ ಧರ್ಮದವರೂ ಇಲ್ಲಿಗೆ ಭೇಟಿ ನೀಡಬಹುದು.

ಶಬರಿಮಲೆಗೆ ವರ್ಷದ ಎಲ್ಲಾ ದಿನಗಳಲ್ಲಿಯೂ ಹೋಗಬಹುದೇ?

ಇಲ್ಲ, ಇದು ವರ್ಷಾದ್ಯಾಂತ ತೆರೆದಿರುವ ದೇಗುಲವಲ್ಲ. ಮಂಡಲಪೂಜೆ, ಮಕರವಿಲ್ಲಕ್ಕು, ವಿಷು ಮತ್ತು ಮಲಯಾಲಂ ತಿಂಗಳ ಮೊದಲ ದಿನ ಮಾತ್ರ ದೇಗುಲದ ಬಾಗಿಲು ತೆರೆಯಲಾಗುತ್ತದೆ.

ಆನ್‌ಲೈನ್‌ ಬುಕ್ಕಿಂಗ್‌ ಕಡ್ಡಾಯ

ಈ ವರ್ಷ ಯಾತ್ರಿಗಳಿಗೆ ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ಮಾತ್ರವೇ ಪ್ರವೇಶ ಇರಲಿದೆ. ಒಂದು ದಿನಕ್ಕೆ ಗರಿಷ್ಠ 1.2 ಲಕ್ಷ ಮಂದಿಗೆ ದರ್ಶನ ಸಿಗಲಿದೆ ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ. ಎಲ್ಲಾದರೂ ಸ್ಪಾಟ್‌ ಬುಕ್ಕಿಂಗ್‌ಗೆ ಮುಂದಿನ ದಿನಗಳಲ್ಲಿ ಅವಕಾಶ ದೊರಕುವುದೇ ಎಂಬ ಕುರಿತು ಸರಕಾರ ಇನ್ನೂ ಸ್ಪಷ್ಟಪಡಿಸಿಲ್ಲ.

IPL_Entry_Point

ವಿಭಾಗ