ಕನ್ನಡ ಸುದ್ದಿ  /  Nation And-world  /  Same-sex Marriages To Be Heard By Constitution Bench

Same-sex marriages: ಸಲಿಂಗ ವಿವಾಹ ವಿಚಾರಣೆ ಸಾಂವಿಧಾನಿಕ ಪೀಠಕ್ಕೆ, ಏಪ್ರಿಲ್‌ 18ರಿಂದ ವಿಚಾರಣೆ ಆರಂಭ

ಏಪ್ರಿಲ್ 18ರಿಂದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠದಿಂದ ಸಲಿಂಗ ವಿವಾಹ ಅರ್ಜಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದೆ.

ಸುಪ್ರೀಂಕೋರ್ಟ್‌ (ಸಂಗ್ರಹ ಚಿತ್ರ)
ಸುಪ್ರೀಂಕೋರ್ಟ್‌ (ಸಂಗ್ರಹ ಚಿತ್ರ) (HT_PRINT)

ನವದೆಹಲಿ: ಏಪ್ರಿಲ್ 18ರಿಂದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠದಿಂದ ಸಲಿಂಗ ವಿವಾಹ ಅರ್ಜಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದೆ. ಸಲಿಂಗ ವಿವಾಹ ಅಂಗೀಕರಿಸುವ ಅರ್ಜಿಯ ವಿಚಾರಣೆಯ ಅತ್ಯಂತ ಪ್ರಮುಖವಾದದ್ದು, ವ್ಯಕ್ತಿಯು ಘನತೆಯಿಂದ ಜೀವಿಸುವ ಹಕ್ಕು ಸೇರಿದಂತೆ ಹಲವು ವಿಚಾರಗಳನ್ನು ಒಳಗೊಂಡಿದೆ.

ಸಲಿಂಗ ವಿವಾಹ ಕುರಿತಾದ ವಿಚಾರಣೆಯನ್ನು ಮುಖ್ಯಮಂತ್ರಿ ಡಿವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿಎಸ್‌ ನರಸಿಂಹ ಮತ್ತು ಜೆಬಿ ಪಾರ್ದೀವಾಲಾ ಅವರ ಪೀಠ ನಡೆಸಲಿದ್ದು, ಈ ವಿಚಾರಣೆ ನೇರಪ್ರಸಾರವಾಗಲಿದೆ. ಸಂವಿಧಾನ ಪೀಠದ ಎಲ್ಲಾ ವಿಚಾರಣೆಗಳು ನೇರ ಪ್ರಸಾರವಾಗುತ್ತವೆ.

ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವಂತೆ ಸುಪ್ರೀಂ ಕೋರ್ಟಿಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿರುದ್ಧ ಕೇಂದ್ರ ಸರಕಾರ ಅಫಿಡವಿಟ್ ಸಲ್ಲಿಸಿತ್ತು. ಇದೇ ಸಮಯದಲ್ಲಿ ಸುಪ್ರೀಂಕೋರ್ಟ್‌ ಈ ಮಹತ್ವದ ನಿರ್ಣಯ ತೆಗೆದುಕೊಂಡಿದೆ.

ವಿಶೇಷ ವಿವಾಹ ಕಾಯಿದೆ ಮತ್ತು ವಿದೇಶ ವಿವಾಹ ಕಾಯಿದೆ ಇತ್ಯಾದಿಗಳನ್ನು ಪರಿಗಣಿಸಿ ಸಲಿಂಗ ವಿವಾಹ ಕೂಡ ನೈಸರ್ಗಿಕ ಪ್ರಕ್ರಿಯೆ ಎಂದು ಪರಿಗಣಿಸುವ ಸಾಧ್ಯತೆಯಿದೆ. ಸಲಿಂಗ ವಿವಾಹವು ದತ್ತು ಪ್ರಕ್ರಿಯೆಯನ್ನೂ ಒಳಗೊಂಡಿದೆ. ದತ್ತು ಪಡೆದ ಮಗುವಿನ ಮನಸ್ಥಿತಿಯ ಕುರಿತುಊ ಪರಿಶೀಲನೆ ನಡೆಸುವ ಅವಶ್ಯಕತೆ ಇರುತ್ತದೆ. ಈ ರೀತಿ ಮಗುವನ್ನು ಬೆಳೆಸಬಹುದೇ ಎಂದು ಚಿಂತನೆ ನಡೆಸಬೇಕಿರುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಸಲಿಂಗ ವಿವಾಹಕ್ಕೆ ವೈಯಕ್ತಿಕ ಕಾನೂನಿನ ಮೂಲಕ ಅವಕಾಶ ನೀಡಬಹುದು ಎಂದು ಹಿರಿಯ ವಕೀಲರಾದ ಅಭಿಷೇಕ್‌ ಮನು ಸಿಂಘ್ವಿ ಹೇಳಿದ್ದಾರೆ.

ಕಾನೂನಿನ ಗಂಭಿರ ಪ್ರಶ್ನೆಯನ್ನು ಒಳಗೊಂಡಿರುವ ಪ್ರಕರಣಗಳನ್ನು ಕನಿಷ್ಠ ಐವರು ನ್ಯಾಯಾಧೀಶರು ಆಲಿಸಬೇಕು ಎಂದು ಸಂವಿಧಾನದ 145(3)ನೇ ವಿಧಿ ಹೇಳುತ್ತದೆ. ಹೀಗಾಗಿ, ಈ ಪ್ರಕರಣವನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಗುತ್ತಿದೆ.

ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವಂತೆ ಸುಪ್ರೀಂ ಕೋರ್ಟಿಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿರುದ್ಧ ಕೇಂದ್ರ ಸರಕಾರ ಅಫಿಡವಿಟ್ ಸಲ್ಲಿಸಿತ್ತು. ಸಲಿಂಗ ವಿವಾಹವು ಭಾರತೀಯ ಕುಟುಂಬ ಪದ್ದತಿಯ ಪರಿಕಲ್ಪನೆಗೆ ವಿರುದ್ದವಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿತ್ತು.

2018ರಲ್ಲಿ ಹೊರಬಂದ ಐತಿಹಾಸಿಕ ತೀರ್ಪಿನಲ್ಲಿ, ಸಲಿಂಗಕಾಮಿಗಳ ಮೇಲಿನ ವಸಾಹತುಶಾಹಿ ಯುಗದ ನಿಷೇಧವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌, ಸಲಿಂಗಕಾಮ(gay sex)ವು ಅಪರಾಧವಲ್ಲ ಎಂದು ಹೇಳಿತ್ತು.

2018ರ ಸುಪ್ರೀಂ ತೀರ್ಪು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ದೃಢೀಕರಿಸಿದ್ದರೂ, ಈ ವರ್ಗದ ಜನರು ಇನ್ನೂ ಸಲಿಂಗ ವಿವಾಹಗಳಿಗೆ ಕಾನೂನು ಬೆಂಬಲದಿಂದ ವಂಚಿತರಾಗಿದ್ದಾರೆ ಎಂದು LGBT(lesbian, gay, bisexual and transgender) ಸಮುದಾಯ ಹೇಳುತ್ತಿದೆ.. ಭಿನ್ನಲಿಂಗೀಯ ವಿವಾಹಿತ ದಂಪತಿಗಳು ಆನಂದಿಸುವ ಮೂಲಭೂತ ಹಕ್ಕನ್ನು ನಾವು ಆನಂದಿಸಲು ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ.

IPL_Entry_Point