Sanjay Raut: ಕರ್ನಾಟಕ ಸಿಎಂ ನಿಮ್ಮ ಮುಖಕ್ಕೆ ಉಗಿದರೂ ನಿಮಗೆ ನಾಚಿಕೆಯಿಲ್ಲ..ಶಿಂಧೆಗೆ ಕ್ಲಾಸ್‌ ತೆಗೆದುಕೊಂಡ ರಾವತ್!‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sanjay Raut: ಕರ್ನಾಟಕ ಸಿಎಂ ನಿಮ್ಮ ಮುಖಕ್ಕೆ ಉಗಿದರೂ ನಿಮಗೆ ನಾಚಿಕೆಯಿಲ್ಲ..ಶಿಂಧೆಗೆ ಕ್ಲಾಸ್‌ ತೆಗೆದುಕೊಂಡ ರಾವತ್!‌

Sanjay Raut: ಕರ್ನಾಟಕ ಸಿಎಂ ನಿಮ್ಮ ಮುಖಕ್ಕೆ ಉಗಿದರೂ ನಿಮಗೆ ನಾಚಿಕೆಯಿಲ್ಲ..ಶಿಂಧೆಗೆ ಕ್ಲಾಸ್‌ ತೆಗೆದುಕೊಂಡ ರಾವತ್!‌

ಕರ್ನಾಟಕ-ಮಹಾರಾಷ್ಟ್ರ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾರಾಷ್ಟ್ರದ ಹಾಲಿ ಸರ್ಕಾರದ ಮುಖಕ್ಕೆ ಉಗಿದಿದ್ದಾರೆ. ಆದರೆ ಏಕನಾಥ್‌ ಶಿಂಧೆ ನೇತೃತ್ವದ ಮಹಾರಾಷ್ಟ್ರ ಮೈತ್ರಿ ಸರ್ಕಾರಕ್ಕೆ ಯಾವುದೇ ನಾಚಿಕೆಯಿಲ್ಲ ಎಂದು ಶಿವಸೇನೆ(ಉದ್ಧವ್‌ ಠಾಕ್ರೆ ಬಣ)ನಾಯಕ ಸಂಜಯ್‌ ರಾವತ್‌ ಕಿಡಿಕಾರಿದ್ದಾರೆ. ಈ ಕುರಿತಾದ ವಿಸ್ತೃತ ಮಾಹಿತಿ ಇಲ್ಲಿದೆ..

ಸಂಜಯ್‌ ರಾವತ್‌ (ಸಂಗ್ರಹ ಚಿತ್ರ)
ಸಂಜಯ್‌ ರಾವತ್‌ (ಸಂಗ್ರಹ ಚಿತ್ರ) (HT_PRINT)

ಮುಂಬೈ: ಕರ್ನಾಟಕ-ಮಹಾರಾಷ್ಟ್ರ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ, ಮಹಾರಾಷ್ಟ್ರದ ಬಿಜೆಪಿ-ಶಿವಸೇನೆ(ಏಕನಾಥ್‌ ಶಿಂಧೆ ಬಣ) ಮೈತ್ರಿ ಸರ್ಕಾರದ ವಿರುದ್ಧ ಶಿವಸೇನೆ(ಉದ್ಧವ್‌ ಠಾಕ್ರೆ ಬಣ) ನಾಯಕ ಸಂಜಯ್‌ ರಾವತ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಹಾರಾಷ್ಟ್ರದ ಹಾಲಿ ಸರ್ಕಾರದ ಮುಖಕ್ಕೆ ಉಗಿದಿದ್ದಾರೆ. ಆದರೆ ಮಾನ-ಮರ್ಯಾದೆ ಇರದ ರಾಜ್ಯ ಸರ್ಕಾರ, ಈ ವಿಚಾರವಾಗಿ ಮೌನವಾಗಿದೆ ಎಂದು ಸಂಜಯ್‌ ರಾವತ್‌ ಕಿಡಿಕಾರಿದ್ದಾರೆ.

" ನೀರಿನ ಕೊರತೆ ಎದುರಿಸುತ್ತಿರುವ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಕೆಲವು ಹಳ್ಳಿಗಳಿಗೆ, ಕರ್ನಾಟಕ ನೀರು ಬಿಡುಗಡೆ ಮಾಡಿದೆ ಎಂಬ ಸುದ್ದಿ ಇದೆ. ಇದು ನಿಜವೇ ಆಗಿದ್ದಲ್ಲಿ, ಕರ್ನಾಟಕ ಬಿಡುಗಡೆ ಮಾಡಿರುವ ನೀರಿನಲ್ಲಿ ಮಹಾರಾಷ್ಟ್ರ ಸರ್ಕಾರ ಸ್ವತಃ ಮುಳುಗಬೇಕು. ಕಳೆದ 50- 55 ವರ್ಷಗಳಲ್ಲಿ ಮಹಾರಾಷ್ಟ್ರ ಇಂತಹ ಅವಮಾನವನ್ನು ಅನುಭವಿಸಿರಲಿಲ್ಲ.." ಎಂದು ಸಂಜಯ್‌ ರಾವತ್‌ ಕಿಡಿಕಾರಿದ್ದಾರೆ.

ನಮ್ಮ ನೆರೆಯ ರಾಜ್ಯದ ಮುಖ್ಯಮಂತ್ರಿ (ಬಸವರಾಜ ಬೊಮ್ಮಾಯಿ) ನಿಮಗೆ ಸವಾಲು ಹಾಕುತ್ತಿದ್ದಾರೆ. ಆದರೆ ಆತ್ಮ ಗೌರವ ಕಳೆದುಕೊಂಡಿರುವ ನೀವು, ಈ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕರ್ನಾಟಕದ ಮುಖ್ಯಮಂತ್ರಿ ನಿಮ್ಮ ಮುಖಕ್ಕೆ ಉಗಿದಿದ್ದಾರೆ ಎಂದು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ವಿರುದ್ಧ ಸಂಜಯ್‌ ರಾವತ್‌ ಟೀಕಾಪ್ರಹಾರ ನಡೆಸಿದ್ದಾರೆ.

ಮಹಾರಾಷ್ಟ್ರದ ಅಸ್ಮಿತೆಗೆ ಧಕ್ಕೆಯಾದ ಯಾವ ಸಂದರ್ಭದಲ್ಲೂ ಪ್ರಸ್ತುತ ಮೈತ್ರಿ ಸರ್ಕಾರ ಮಾತನಾಡುತ್ತಿಲ್ಲ. ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು, ಛತ್ರಪತಿ ಶಿವಾಜಿ ಮಹಾರಾಜ್ ವಿರುದ್ಧ ನೀಡಿದ ಅವಹೇಳನಾಕಾರಿ ಹೇಳಿಕೆಗೆ ಬಿಜೆಪಿ ಮೌನವಹಿಸಿದೆ ಎಂದು ಸಂಜಯ್ ರಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮರಾಠಾ ರಾಜನಿಗೆ ಮಾಡಿದ ಅವಮಾನಕ್ಕೆ ಮಹಾರಾಷ್ಟ್ರದ ಪ್ರತೀಕಾರ ತೀರಿಸಿಕೊಳ್ಳುತ್ತಾರೆ. ಆದರೆ ಅಧಿಕಾದಲ್ಲಿರುವುವರು ಗುಲಾಮರಂತೆ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಂಜಯ್‌ ರಾವತ್‌ ಹರಿಹಾಯ್ದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಯಾರೇ ಕೀಳಾಗಿ ಮಾತನಾಡಿದರೂ ಬಿಜೆಪಿ ಅತ್ಯಂತ ಉಗ್ರವಾಗಿ ಪ್ರತಿಕ್ರಿಯೆ ನೀಡುತ್ತದೆ. ಆದರೆ 17ನೇ ಶತಮಾನದ ಮರಾಠಾ ದೊರೆಗೆ ಯಾರಾದರೂ ಅವಮಾನಿಸಿದರೆ, ಮೌನವನ್ನು ಹೊದ್ದು ಮಲಗುತ್ತದೆ ಎಂದು ಸಂಜಯ್‌ ರಾವತ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

1957ರಲ್ಲಿ ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ರಾಜ್ಯಗಳ ಪುನರ್‌ವಿಂಡಗಣೆ ನಡೆದಿತ್ತು. ಅಂದಿನಿಂದಲೇ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಗಡಿ ಸಮಸ್ಯೆ ಭುಗಿಲೆದ್ದಿತು. ಬೆಳಗಾವಿ, ಕಾರವಾರ, ನಿಪ್ಪಾಣಿ ಸೇರಿದಂತೆ ಕರ್ನಾಟಕದ ಭಾಗವಾಗಿರುವ 814 ಮರಾಠಿ ಭಾಷಿಕ ಹಳ್ಳಿಗಳು ತನಗೆ ಸೇರಬೇಕು ಎಂದು ಮಹಾರಾಷ್ಟ್ರ ವಾದಿಸುತ್ತಿದೆ.

ಇದಕ್ಕೆ ಪ್ರತಿಯಾಗಿ ಮಹಾರಾಷ್ಟ್ರದ ಭಾಗವಾಗಿರುವ ಕನ್ನಡ ಭಾಷಿಕ ಪ್ರದೇಶಗಳು ತನಗೆ ಸೇರಬೇಕು ಎಂದು ಕರ್ನಾಟಕ ವಾದಿಸುತ್ತಿದೆ. ಸದ್ಯ ಉಭಯ ರಾಜ್ಯಗಳ ನಡುವಿನ ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿದ್ದು, ಈ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮತ್ತು ಕರ್ನಾಟಕದ ರಾಜಕೀಯ ನಾಯಕರ ನಡುವೆ ವಾಕ್ಸಮರ ನಡೆಯುತ್ತಿದೆ.

ಇಂದಿನ ಪ್ರಮುಖ ಸುದ್ದಿಗಳು

Sundar Pichai: ನಾನು ಎಲ್ಲಿಯೇ ಇರಲಿ, ಭಾರತ ನನ್ನೊಳಗಿರಲಿದೆ: ತಾಯ್ನಾಡಿಗೆ ನಮಿಸಿದ 'ಪದ್ಮಭೂಷಣ' ಸುಂದರ ಪಿಚೈ

ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಭಾರತೀಯ ಮೂಲದ ಸುಂದರ್ ಪಿಚೈ ಅವರಿಗೆ, ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿರುವ ತರಣ್‌ಜೀತ್‌ ಸಿಂಗ್‌ ಸಂಧು ಅವರು, ಸುಂದರ್‌ ಪಿಚೈ ಅವರಿಗೆ ಸ್ಯಾನ್​ ಫ್ರಾನ್ಸಿಸ್ಕೋದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಹಸ್ತಾಂತರಿಸಿದ್ದಾರೆ. ಈ ವೇಳೆ ಮಾತನಾಡಿದ ಸುಂದರ್‌ ಪಿಚೈ, ಭಾರತ ನನ್ನ ಜೀವನದ ಅವಿಭಾಜ್ಯ ಅಂಗ ಎಂದು ಹೇಳಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.