Saudia Airlines: ವಿಮಾನದ ಕಿಟಕಿ ಗಾಜಿನಲ್ಲಿ ಬಿರುಕು, ಕೋಲ್ಕತ್ತಾದಲ್ಲಿ ತುರ್ತಾಗಿ ಇಳಿದ ಸೌದಿಯ ಏರ್‌ಲೈನ್ಸ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Saudia Airlines: ವಿಮಾನದ ಕಿಟಕಿ ಗಾಜಿನಲ್ಲಿ ಬಿರುಕು, ಕೋಲ್ಕತ್ತಾದಲ್ಲಿ ತುರ್ತಾಗಿ ಇಳಿದ ಸೌದಿಯ ಏರ್‌ಲೈನ್ಸ್‌

Saudia Airlines: ವಿಮಾನದ ಕಿಟಕಿ ಗಾಜಿನಲ್ಲಿ ಬಿರುಕು, ಕೋಲ್ಕತ್ತಾದಲ್ಲಿ ತುರ್ತಾಗಿ ಇಳಿದ ಸೌದಿಯ ಏರ್‌ಲೈನ್ಸ್‌

ಈ ವಿಮಾನವು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ (Kolkata Airport) ಇಂದು ಮಧ್ಯಾಹ್ನ 12.02 ಗಂಟೆಗೆ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ.

ವಿಮಾನದ ಕಿಟಕಿ ಗಾಜಿನಲ್ಲಿ ಬಿರುಕು, ಕೋಲ್ಕತ್ತಾದಲ್ಲಿ ತುರ್ತಾಗಿ ಇಳಿದ ಸೌದಿಯ ಏರ್‌ಲೈನ್ಸ್‌
ವಿಮಾನದ ಕಿಟಕಿ ಗಾಜಿನಲ್ಲಿ ಬಿರುಕು, ಕೋಲ್ಕತ್ತಾದಲ್ಲಿ ತುರ್ತಾಗಿ ಇಳಿದ ಸೌದಿಯ ಏರ್‌ಲೈನ್ಸ್‌

ಕೋಲ್ಕತ್ತಾ: ಸೌದಿಯ ಏರ್‌ಲೈನ್ಸ್‌ನ (Saudia Airlines ) ವಿಮಾನವೊಂದು ಗಗನದಲ್ಲಿ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಅದರ ವೈಂಡ್‌ಶೀಲ್ಡ್‌ನಲ್ಲಿ ಬಿರುಕು ಮೂಡಿ ಆತಂಕ ಹುಟ್ಟಿಸಿದೆ. ತಕ್ಷಣ ಆ ಕಾರ್ಗೊ ವಿಮಾನವನ್ನು ಲ್ಯಾಂಡ್‌ ಮಾಡಲಾಗಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ. ಈ ವಿಮಾನವು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ (Kolkata Airport) ಇಂದು ಮಧ್ಯಾಹ್ನ 12.02 ಗಂಟೆಗೆ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ.

ಈ ಕಾರ್ಗೊ ವಿಮಾನದಲ್ಲಿ ಇಂತಹ ತುರ್ತು ಪರಿಸ್ಥಿತಿ ಎದುರಾಗಿದೆ ಎಂಬ ಮಾಹಿತಿ ದೊರಕಿದ ತಕ್ಷಣ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್‌ಗೆ ಎಲ್ಲಾ ಏರ್ಪಾಡು ಮಾಡಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಅಬುದಾಬಿ ಮೂಲದ ಎಥಿಹಾಡ್‌ ಏರ್‌ವೇಸ್‌ನ ವಿಮಾನವೊಂದನ್ನು ಬೆಂಗಳೂರಿನಲ್ಲಿ ತುರ್ತಾಗಿ ಲ್ಯಾಂಡ್‌ ಮಾಡಿಸಲಾಗಿತ್ತು. ಆ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿತ್ತು.

ಈ ತಿಂಗಳ ಆರಂಭದಲ್ಲಿ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 40 ವರ್ಷದ ಪಾನಮತ್ತ ಪ್ರಯಾಣಿಕನೊಬ್ಬರು ವಿಮಾನದ ತುರ್ತು ನಿರ್ಗಮನದ ಬಾಗಿಲಿನ ಫ್ಲಾಪ್ ತೆರೆಯಲು ಯತ್ನಿಸಿದ ಘಟನೆ ನಡೆದಿತ್ತು. ದೆಹಲಿ-ಬೆಂಗಳೂರು ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಆ ಪ್ರಯಾಣಿಕನ ವಿರುದ್ಧ ದೂರು ದಾಖಲಿಸಲಾಗಿತ್ತು.

ಈ ವರ್ಷ ಒಟ್ಟು ಹತ್ತು ಪ್ರಯಾಣಿಕರನ್ನು ನೋ ಫ್ಲೈ ಲಿಸ್ಟ್‌ಗೆ ಸೇರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ವಿ ಕೆ ಸಿಂಗ್ ಮಾಹಿತಿ ನೀಡಿದ್ದಾರೆ. 2021 ಮತ್ತು 2022 ರಲ್ಲಿ ಕ್ರಮವಾಗಿ 66 ಮತ್ತು 63 ಪ್ರಯಾಣಿಕರ ಮೇಲೆ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿತ್ತು ಎಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು ಎರಡು ವಿಮಾನಗಳು ಆಕಾಶದಲ್ಲಿ ಡಿಕ್ಕಿ ಹೊಡೆಯುವಷ್ಟು ಹತ್ತಿರಕ್ಕೆ ಬಂದ ಘಟನೆ ಸುದ್ದಿಯಾಗಿತ್ತು. ಆಘಾತಕಾರಿ ಬೆಳವಣಿಗೆಯೊಂದರಲ್ಲಿ ನೇಪಾಳ ಏರ್‌ಲೈನ್ಸ್‌ಗೆ ಸೇರಿದ ವಿಮಾನ ಮತ್ತು ಏರ್‌ ಇಂಡಿಯಾ ವಿಮಾನಗಳ ನಡುವೆ ಬಹುತೇಕ ಡಿಕ್ಕಿ ಸಂಭವಿಸಿದ್ದು, ಕರ್ತವ್ಯದಲ್ಲಿ ಅಜಾಗರೂಕತೆ ತೋರಿದ ಆರೋಪದಡಿ ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ(ಸಿಎನ್‌ಎನ್‌ಎನ್‌)ದ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು.

ಏರ್ ಇಂಡಿಯಾ ವಿಮಾನವು 19,000 ಅಡಿಗಳಿಂದ ಕೆಳಗಿಳಿಯುತ್ತಿದ್ದರೆ, ನೇಪಾಳ ಏರ್‌ಲೈನ್ಸ್ ವಿಮಾನವು ಅದೇ ಸ್ಥಳದಲ್ಲಿ, 15,000 ಅಡಿ ಎತ್ತರದಲ್ಲಿ ಹಾರುತ್ತಿತ್ತು ಎಂದು ನಿರೋಲಾ ಮಾಹಿತಿ ನೀಡಿದ್ದಾರೆ. ಏರ್‌ ಇಂಡಿಯಾ ವಿಮಾನ ಕೆಳಗಿಳಿಯುತ್ತಿದ್ದರಿಂದ, ವಿಮಾನಗಳು ಕ್ಷಣಕ್ಷಣಕ್ಕೂ ಸಮೀಪ ಬರುತ್ತಿದ್ದವು ಎನ್ನಲಾಗಿದೆ.

ಅಂತಃಕರಣ ಮರೆತ ಗಗನಸಖಿ, ಭಾರತದ ಕ್ಯಾನ್ಸರ್‌ ರೋಗಿ ಮಹಿಳೆಯನ್ನು ವಿಮಾನದಿಂದ ಕೆಳಗಿಳಿಸಿದ ಅಮೆರಿಕನ್‌ ಏರ್‌ಲೈನ್ಸ್‌

ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳಾ ಕ್ಯಾನ್ಸರ್‌ ರೋಗಿಯೊಬ್ಬರು ತಮ್ಮ ಕೈಚೀಲವನ್ನು ಕ್ಯಾಬಿನ್‌ನಲ್ಲಿ ಇಡಲು ಫ್ಲೈಟ್‌ ಅಟೆಂಡೆಂಟ್‌ ಬಳಿ ವಿನಂತಿಸಿದ್ದರು. ಆದರೆ, ಅವರಿಗೆ ವಿಮಾನದ ಗಗನಸಖಿ ಯಾವುದೇ ಸಹಕಾರ ನೀಡಿರಲಿಲ್ಲ. ಇದರಿಂದ ಆ ಮಹಿಳೆ ವಿಮಾನದಲ್ಲಿ ಪ್ರಯಾಣ ಮೊಟಕುಗೊಳಿಸಿ ಕೆಳಗಿಳಿಯುವಂತಾಗಿದೆ ಎಂದು ಆರೋಪಿಸಲಾಗಿದೆ.

ಜನವರಿ 30ರಂದು ಈ ಘಟನೆ ನಡೆದಿದೆ. 5 ಪೌಂಡ್‌ಗಿಂತ ಹೆಚ್ಚು ತೂಕದ ಕೈಚೀಲವನ್ನು ಮೇಲಿನ ಕ್ಯಾಬಿನ್‌ನಲ್ಲಿ ಇಡಲು ಸಹಾಯ ಮಾಡಲು ನಿರಾಕರಿಸಿರುವ ಫ್ಲೈಟ್‌ ಅಟೆಂಡೆಂಟ್‌ ವಿರುದ್ಧ ಮೀನಾಕ್ಷಿ ಸೇನ್‌ಗುಪ್ತಾ ಎಂಬವರು ದೂರು ದಾಖಲಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ತನ್ನ ಕೈಗಳು ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಯಿಂದ ದುರ್ಬಲವಾಗಿರುವುದರಿಂದ ಹ್ಯಾಂಡ್‌ಬ್ಯಾಗ್‌ ಮೇಲಿಡಲು ಸಾಧ್ಯವಿಲ್ಲ ಎಂದು ತಿಳಿಸಿದರೂ ಗಗನಸಖಿ ಸಹಾಯ ಮಾಡಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತ ವರದಿ ಓದಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.