SBI Recruitment 2022: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಉದ್ಯೋಗಾವಕಾಶ, ಪದವಿ ವಿದ್ಯಾರ್ಹತೆ ಇರುವವರು ಅರ್ಜಿ ಸಲ್ಲಿಸಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /   Sbi Recruitment 2022: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಉದ್ಯೋಗಾವಕಾಶ, ಪದವಿ ವಿದ್ಯಾರ್ಹತೆ ಇರುವವರು ಅರ್ಜಿ ಸಲ್ಲಿಸಿ

SBI Recruitment 2022: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಉದ್ಯೋಗಾವಕಾಶ, ಪದವಿ ವಿದ್ಯಾರ್ಹತೆ ಇರುವವರು ಅರ್ಜಿ ಸಲ್ಲಿಸಿ

ಎಸ್‌ಬಿಐಯು ಮ್ಯಾನೇಜರ್‌ ಹುದ್ದೆಗಳ (SBI Manager Online Form 2022) ನೇಮಕ ಪ್ರಕ್ರಿಯೆ ಆರಂಭಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕ್ರೆಡಿಟ್‌ ಅನಾಲಿಸ್ಟ್‌, ಪ್ರಾಜೆಕ್ಟ್ಸ್‌ ಡಿಜಿಟಲ್‌ ಪೇಮೆಂಟ್ಸ್‌, ಪ್ರಾಡಕ್ಟ್‌ ಡಿಜಿಟಲ್ಸ್‌ ಪ್ಲಾಟ್‌ಫಾರ್ಮ್ಸ್‌, ಪ್ರಾಡಕ್ಟ್ಸ್‌ ಡಿಜಿಟಲ್‌ ಪೇಮೆಂಟ್ಸ್‌, ಕಾರ್ಡ್ಸ್‌ ವಿಭಾಗಗಗಳಲ್ಲಿ ಹುದ್ದೆಗಳಿವೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT_PRINT)

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಪ್ರಮುಖ ಹುದ್ದೆ ಪಡೆಯಲು ಬಯಸುವವರಿಗೆ ಸಿಹಿ ಸುದ್ದಿ. ಎಸ್‌ಬಿಐಯು ಮ್ಯಾನೇಜರ್‌ ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕ್ರೆಡಿಟ್‌ ಅನಾಲಿಸ್ಟ್‌, ಪ್ರಾಜೆಕ್ಟ್ಸ್‌ ಡಿಜಿಟಲ್‌ ಪೇಮೆಂಟ್ಸ್‌, ಪ್ರಾಡಕ್ಟ್‌ ಡಿಜಿಟಲ್ಸ್‌ ಪ್ಲಾಟ್‌ಫಾರ್ಮ್ಸ್‌, ಪ್ರಾಡಕ್ಟ್ಸ್‌ ಡಿಜಿಟಲ್‌ ಪೇಮೆಂಟ್ಸ್‌, ಕಾರ್ಡ್ಸ್‌ ವಿಭಾಗಗಗಳಲ್ಲಿ ಹುದ್ದೆಗಳಿವೆ. ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆ, ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ಸೇರಿದಂತೆ ಹಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಹುದ್ದೆಗಳ ವಿವರ

ಮ್ಯಾನೇಜರ್‌ (ಕ್ರೆಡಿಟ್‌ ಅನಾಲಿಸ್ಟ್‌)-55

ಮ್ಯಾನೇಜರ್‌ (ಪ್ರಾಜೆಕ್ಟ್ಸ್‌- ಡಿಜಿಟಲ್‌ ಪೇಮೆಂಟ್ಸ್‌)- 5

ಮ್ಯಾನೇಜರ್‌ (ಪ್ರಾಡಕ್ಟ್ಸ್‌- ಡಿಜಿಟಲ್‌ ಪೇಮೆಂಟ್ಸ್‌/ಕಾರ್ಡ್ಸ್‌)- 2

ಮ್ಯಾನೇಜರ್‌ ( ಪ್ರಾಡಕ್ಟ್ಸ್‌- ಡಿಜಿಟಲ್‌ ಪ್ಲಾಟ್‌ಫಾರ್ಮ್ಸ್‌)- 2

ಒಟ್ಟು ಹುದ್ದೆ: 64

ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಬೇರೆ ಯಾವುದೇ ವಿಧಾನದ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಅರ್ಜಿ ಶುಲ್ಕ

ಸಾಮಾನ್ಯ, ಒಬಿಸಿ, ಇಡಬ್ಲ್ಯುಎಸ್‌ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಿಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಡಿಸೆಂಬರ್‌ 12, 2022ರ ಮೊದಲು ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ ಪಾವತಿಸಲು ಕೂಡ ಡಿಸೆಂಬರ್‌ 12 ಕೊನೆಯ ದಿನಾಂಕವಾಗಿದೆ.

ವಯೋಮಿತಿ: ಕ್ರೆಡಿಟ್‌ ಅನಾಲಿಸ್ಟ್‌ ವಿಭಾಗದ ಮ್ಯಾನೇಜರ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 25 ವರ್ಷ ಮತ್ತು ಉಳಿದ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಕನಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವಿದ್ಯಾರ್ಹತೆ ಏನು?

ಮ್ಯಾನೇಜರ್‌ ಹುದ್ದೆಗಳಿಗೆ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಆಯಾ ಹುದ್ದೆಗಳಿಗೆ ತಕ್ಕಂತೆ ಕೆಲವು ಹುದ್ದೆಗಳಿಗೆ ಎಂಬಿಎ/ಎಂಎಂಎಸ್‌(ಫೈನಾನ್ಸ್‌)/ ಪಿಜಿಡಿಬಿಎ/ ಪಿಜಿಡಿಬಿಎಂ/ ಸಿಎ/ ಸಿಎಫ್‌ಎ/ ಐಸಿಡಬ್ಲ್ಯುಎ ವಿದ್ಯಾರ್ಹತೆ ಬಯಸಲಾಗಿದೆ.

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಗೆ ನೀಡಿರುವ ಪಿಡಿಎಫ್‌ಗಳನ್ನು ಪರಿಶೀಲಿಸಿ.

ಅಧಿಸೂಚನೆ 1

ಅಧಿಸೂಚನೆ 2

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.