ಕನ್ನಡ ಸುದ್ದಿ  /  Nation And-world  /  Science News Human Trials Neuralink Brain Implant Elon Musk Gets Us Fda Approval Put Computer Chip In Brains Pcp

Neuralink: ಮನುಷ್ಯರ ಮೆದುಳಿನೊಳಗೆ ಕಂಪ್ಯೂಟರ್‌ ಚಿಪ್‌ ಅಳವಡಿಸಲು ಒಪ್ಪಿಗೆ ಪಡೆದ ಎಲಾನ್‌ ಮಸ್ಕ್‌, ನ್ಯೂರಾಲಿಂಕ್‌ ಬಗ್ಗೆ ನಿಮಗೆ ಗೊತ್ತೆ?

Neuralink: ಮೆದುಳು ಕಸಿ ಕಂಪನಿ ನ್ಯೂರಾಲಿಂಕ್‌ (Neuralink) ಒಂದು ಹೊಸ ಮೈಲಿಗಲ್ಲು ಸಾಧಿಸಿದೆ. ಮನುಷ್ಯರ ಮೇಲೆ ವೈದ್ಯಕೀಯ ಅಧ್ಯಯನ ಮಾಡುವ ಸಲುವಾಗಿ ನ್ಯೂರಾಲಿಂಕ್‌ಗೆ ಅಮೆರಿಕದ ಆಹಾರ ಮತ್ತು ಔಷಧ ಪ್ರಾಧಿಕಾರ (ಎಫ್‌ಡಿಎ) ಅನುಮತಿ ನೀಡಿದೆ.

Neuralink: ಮನುಷ್ಯರ ಮೆದುಳಿನೊಳಗೆ ಕಂಪ್ಯೂಟರ್‌ ಚಿಪ್‌ ಅಳವಡಿಸಲು ಒಪ್ಪಿಗೆ ಪಡೆದ ಎಲಾನ್‌ ಮಸ್ಕ್‌
Neuralink: ಮನುಷ್ಯರ ಮೆದುಳಿನೊಳಗೆ ಕಂಪ್ಯೂಟರ್‌ ಚಿಪ್‌ ಅಳವಡಿಸಲು ಒಪ್ಪಿಗೆ ಪಡೆದ ಎಲಾನ್‌ ಮಸ್ಕ್‌

ಟ್ವಿಟ್ಟರ್‌, ಟೆಸ್ಲಾ ಮಾಲೀಕ ಎಲಾನ್‌ ಮಸ್ಕ್‌ (elon musk) ಹಣ ಹೂಡಿಕೆ ಮಾಡಿರುವ ಮೆದುಳು ಕಸಿ ಕಂಪನಿ ನ್ಯೂರಾಲಿಂಕ್‌ (Neuralink) ಒಂದು ಹೊಸ ಮೈಲಿಗಲ್ಲು ಸಾಧಿಸಿದೆ. ಮನುಷ್ಯರ ಮೇಲೆ ವೈದ್ಯಕೀಯ ಅಧ್ಯಯನ ಮಾಡುವ ಸಲುವಾಗಿ ನ್ಯೂರಾಲಿಂಕ್‌ಗೆ ಅಮೆರಿಕದ ಆಹಾರ ಮತ್ತು ಔಷಧ ಪ್ರಾಧಿಕಾರ (ಎಫ್‌ಡಿಎ) ಅನುಮತಿ ನೀಡಿದೆ. ಮನುಷ್ಯರ ಮಿದುಳಿಗೆ ಕಂಪ್ಯೂಟರ್‌ ಚಿಪ್‌ ಅಳವಡಿಸುವಂತಹ ಕಾರ್ಯಕ್ಕೆ ಇದು ನೆರವಾಗಲಿದೆ. ಇದು ನ್ಯೂರಾಲಿಂಕ್‌ಗೆ ಹೊಸ ಟರ್ನಿಂಗ್‌ ಪಾಯಿಂಟ್‌ ಎಂದು ವ್ಯಾಖ್ಯಾನಿಸಲಾಗಿದೆ.

2019ರಿಂದಲೇ ನ್ಯೂರಾಲಿಂಕ್‌ನ ಮೆದುಳು ಕಸಿಯನ್ನು ಮನುಷ್ಯರ ಮೇಲೆ ಪ್ರಯೋಗಿಸಬೇಕೆಂದು ಎಲಾನ್‌ ಮಸ್ಕ್‌ ಬಯಸಿದ್ದರು. ಪ್ಯಾರಾಲಿಸಿಸ್‌ ಮತ್ತು ಅಂಧತ್ವದಂತಹ ತೀವ್ರ ತೊಂದರೆಗಳಿಗೆ ಸಂಭಾವ್ಯ ಪರಿಹಾರ ಹುಡುಕುವ ನಿಟ್ಟಿನಲ್ಲಿ ಇದು ಅತ್ಯಂತ ಪ್ರಮುಖವಾಗಿತ್ತು. ಆದರೆ, ಕಂಪನಿಯು 2016ರಲ್ಲಿ ಆರಂಭವಾಗಿದ್ದರಿಂದ ಅಷ್ಟು ಬೇಗ ಅನುಮತಿ ನೀಡಲು ಅಮೆರಿಕದ ಔಷಧ ಪ್ರಾಧಿಕಾರ ಮುಂದಾಗಲಿಲ್ಲ. ಹೀಗಿದ್ದರೂ ಎಲಾನ್‌ ಮಸ್ಕ್‌ ನೇತೃತ್ವದ ನ್ಯೂರಾಲಿಂಕ್‌ ಕಂಪನಿಯು ತನ್ನ ಪ್ರಯತ್ನ ಮುಂದುವರೆಸಿತ್ತು. ಹಲವು ಬಾರಿ ಇವರ ಅರ್ಜಿಯನ್ನು ಎಫ್‌ಡಿಎ ನಿರಾಕರಿಸಿತ್ತು.

ಮನುಷ್ಯರ ಮೇಲೆ ಪ್ರಯೋಗ ಕೈಗೊಳ್ಳುವ ಮೊದಲು ಅನುಸರಿಸಬೇಕಾದ ಹಲವು ಕ್ರಮಗಳ ಕುರಿತು ಎಫ್‌ಡಿಎ ತನ್ನ ಸಂದೇಹ ವ್ಯಕ್ತಪಡಿಸಿತ್ತು. ವಿಶೇಷವಾಗಿ ಈ ರೀತಿ ಕಸಿ ಮಾಡುವ ಸಂದರ್ಭದಲ್ಲಿ ಲೀಥಿಯಂ ಅಯಾನ್‌ ಬ್ಯಾಟರಿಯನ್ನೂ ಜೋಡಿಸಲಾಗುತ್ತದೆ. ಇದರ ಕುರಿತು ಎಫ್‌ಡಿಎಗೆ ಹೆಚ್ಚಿನ ಅನುಮಾನಗಳಿದ್ದವು. ಮಿದುಳಿನೊಳಗೆ ವೈರ್‌ಗಳು ಪಲ್ಲಟವಾದರೆ ಏನ್ಕಥೆ ಎಂದು ಎಫ್‌ಡಿಎ ಪ್ರಶ್ನಿಸಿತ್ತು. ಇದರೊಂದಿಗೆ ಮಿದುಳಿನೊಳಗೆ ಈ ಚಿಪ್‌ ಸಾಧನವನ್ನು ಜೋಡಿಸುವುದು ಮತ್ತು ತೆಗೆಯುವ ಸಂದರ್ಭದಲ್ಲಿ ಮಿದುಳಿನ ಅಂಗಾಂಶಗಳಿಗೆ ಹಾನಿಯಾಗುವ ಸಾಧ್ಯತೆಯ ಕುರಿತೂ ಎಫ್‌ಡಿಎ ಪ್ರಶ್ನಿಸಿತ್ತು.

ನ್ಯೂರಾಲಿಂಕ್‌ ಅನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡುತ್ತಿರುವ ಸಂದರ್ಭದಲ್ಲಿ ಉಂಟಾಗುವ ತೊಂದರೆಗಳ ಕುರಿತು ಮೇಲ್ಚಿಚಾರಣೆ ಮಾಡುವ ಸಮಿತಿಗಳ ಮೇಲೆ ಅಮೆರಿಕದ ಕಾನೂನು ನಿಯಂತ್ರಕರ ಒತ್ತಡ ಹೆಚ್ಚುತ್ತಿದೆ ಎನ್ನಲಾಗಿದೆ. ಇದೇ ಸಮಯದಲ್ಲಿ ಎಫ್‌ಡಿಎಯು ಮಾನವರ ಮೇಲೆ ನ್ಯೂರಾಲಿಂಕ್‌ ಪ್ರಯೋಗ ಮಾಡಲು ಅನುಮತಿ ನೀಡಿದೆ. ಪ್ರಾಣಿ ಕಲ್ಯಾಣ ಕಾಯಿದೆಯ ಉಲ್ಲಂಘಣೆ ಮಾಡಿರುವ ಕುರಿತು ಈಗಾಗಲೇ ನ್ಯೂರಾಲಿಂಕ್‌ ತನಿಖೆ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ನ್ಯೂರಾಲಿಂಕ್‌ಗೆ ಎಫ್‌ಡಿಎ ಅನುಮತಿ ನೀಡಿದೆ. ಇದನ್ನು ನ್ಯೂರಾಲಿಂಕ್‌ ಕಂಪನಿಯು ಟ್ವೀಟ್‌ ಮೂಲಕ ಖಚಿತಪಡಿಸಿದೆ.

ಏನಿದು ನ್ಯೂರಾಲಿಂಕ್‌?

2016ರಲ್ಲಿ ಎಲಾನ್‌ ಮಸ್ಕ್‌ ಅವರು ನ್ಯೂರಾಲಿಂಕ್‌ ಎಂಬ ನ್ಯೂರೊಟೆಕ್ನಾಲಜಿ ಕಂಪನಿಯನ್ನು ಸ್ಥಾಪಿಸಿದರು. ಮಾನವನ ಮೆದುಳು ಮತ್ತು ಕಂಪ್ಯೂಟರ್‌ಗಳು ಅಥವಾ ಇತರ ಬಾಹ್ಯ ಸಾಧನಗಳ ನಡುವೆ ನೇರ ಸಂಪರ್ಕವನ್ನು ಸ್ಥಾಪಿಸುವ ಇಂಪ್ಲಾಂಟಬಲ್ ಬ್ರೈನ್-ಕಂಪ್ಯೂಟರ್ ಇಂಟರ್ಫೇಸ್‌ಗಳನ್ನು (ಬಿಸಿಐಗಳು) ಅಭಿವೃದ್ಧಿಪಡಿಸುವುದು ಇದರ ಪ್ರಾಥಮಿಕ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಮಾನವನ ಜ್ಞಾನವನ್ನು ಇನ್ನಷ್ಟು ಉತ್ತಮಪಡಿಸುವುದು, ಕೃತಕ ಬುದ್ಧಿಮತ್ತೆಯ ಜತೆಗೆ ಮಾನವನ ಬುದ್ಧಿಮತ್ತೆಯನ್ನು ವಿಲೀನಗೊಳಿಸುವ ಮೂಲಕ ನರವೈಜ್ಞಾನಿಕ ಅಸ್ವಸ್ಥತೆಗಳನ್ನು ತಗ್ಗಿಸುವ ಉದ್ದೇಶವನ್ನು ಈ ನ್ಯೂರಾಲಿಂಕ್‌ ಹೊಂದಿದೆ.

ನ್ಯೂರಾಲಿಂಕ್‌ ತನ್ನ ಮಿದುಳಿನ ಕಸಿಯನ್ನು ನರ ಕಸೂತಿ ಎಂದು ಕರೆಯತ್ತದೆ. ವಿದ್ಯುದ್ವಾರದೊಂದಿಗೆ ಸಣ್ಣ ಹೊಂದಿಕೊಳ್ಳುವ ಎಳೆಗಳನ್ನು ಮಿದುಳಿನೊಳಗೆ ಸೇರಿಸಲಾಗುತ್ತದೆ. ಈ ಎಳೆಗಳು ಹೆಚ್ಚು ರೆಸಲ್ಯೂಷನ್‌ನ ರೆಕಾರ್ಡಿಂಗ್‌ ಮತ್ತು ನರ ಚಟುವಟಿಕೆಯ ಪ್ರಚೋದನೆ ಹೆಚ್ಚಿಸುತ್ತದೆ. ಇದರೊಂದಿಗೆ ಮಿದುಳಿನಲ್ಲಿ ಸಂಗ್ರಹವಾದ ಡೇಟಾವನ್ನು ವಿಶ್ಲೇಷಣೆಗಾಗಿ ಮತ್ತು ನಿಯಂತ್ರಣಕ್ಕಾಗಿ ಬಾಹ್ಯಾ ಸಾಧನಕ್ಕೆ ರವಾನಿಸುತ್ತದೆ. ನ್ಯೂರಾಲಿಂಕ್‌ನ ತಂತ್ರಜ್ಞಾನವು ವಿಫುಲ ಸಾಧ್ಯತೆಯನ್ನು ಹೊಂದಿದೆ. ಬೆನ್ನುಹುರಿಯ ಗಾಯಗಳು ಮತ್ತು ವಿವಿಧ ರೀತಿಯ ಸಂವೇದನಾ ದುರ್ಬಲತೆಯಂತಹ ನರವೈಜ್ಞಾನಿಕ ಪರಿಸ್ಥಿತಿಗಳೊಂದಿಗೆ ವ್ಯಕ್ತಿಗಳಿಗೆ ಸಹಾಯ ಮಾಡುವ ಗುಡಿಯನ್ನು ಹೊಂದಿದೆ. ಮೆದುಳು ಮತ್ತು ಬಾಹ್ಯಾ ಸಾಧನಗಳ ನಡುವೆ ನೇರ ಸಂಪರ್ಕ ಕಲ್ಪಿಸಿ ಒಟ್ಟಾರೆ ಜೀವನಮಟ್ಟವನ್ನು ಸುಧಾರಿಸಲು ಯತ್ನಿಸಲಿದೆ.

IPL_Entry_Point