ಕನ್ನಡ ಸುದ್ದಿ  /  Nation And-world  /  Sex Workers Day 2023 History Significance International Days Problems And Pain Of Sex Workers Kannada News Rst

Sex Workers Day: ಲೈಂಗಿಕ ಕಾರ್ಯಕರ್ತೆಯರ ಬದುಕಲ್ಲೂ ನೋವಿದೆ; ಅವರ ನೋವುಗಳಿಗೆ ಕಿವಿಯಾಗಿ

Sex Workers Problems and Pain: ಪ್ರತಿವರ್ಷ ಜೂನ್‌ 2 ರಂದು ವಿಶ್ವ ಲೈಂಗಿಕ ಕಾರ್ಯಕರ್ತೆಯರ ದಿನವನ್ನು ಆಚರಿಸಲಾಗುತ್ತದೆ. ಲೈಂಗಿಕ ಕಾರ್ಯಕರ್ತೆಯರ ಮೇಲಿನ ಶೋಷಣೆ ಮತ್ತು ಅವರ ವೃತ್ತಿಯ ಪರಿಸ್ಥಿತಿಯ ಕಾರಣವನ್ನು ಎತ್ತಿ ತೋರಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಲೈಂಗಿಕ ಕಾರ್ಯಕರ್ತರ ದಿನ
ವಿಶ್ವ ಲೈಂಗಿಕ ಕಾರ್ಯಕರ್ತರ ದಿನ

ಪ್ರತಿವರ್ಷ ಜೂನ್‌ 2 ರಂದು ಅಂತರರಾಷ್ಟ್ರೀಯ ಲೈಂಗಿಕ ಕಾರ್ಯಕರ್ತೆಯರ ದಿನವನ್ನು ಆಚರಿಸಲಾಗುತ್ತದೆ. ಲೈಂಗಿಕ ಕಾರ್ಯಕರ್ತೆಯರ ಮೇಲೆ ನಡೆಯುವ ದೌರ್ಜನ್ಯ, ಅವರ ಅಸಹಾಯಕತೆ, ಅವರ ಪರಿಸ್ಥಿತಿಯನ್ನು ಜಗತ್ತಿಗೆ ತಿಳಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಲೈಂಗಿಕ ಕಾರ್ಯಕರ್ತೆಯರು ಎದುರಿಸುವ ಸಮಸ್ಯೆಗಳು, ಜನರ ಅವರನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಳ್ಳುತ್ತಾರೆ, ಈ ವೃತ್ತಿಗೆ ಬರಲು ಕಾರಣ, ಜನರನ್ನು ಅವರನ್ನು ಯಾವ ರೀತಿ ಬಲಿಪಶು ಮಾಡುತ್ತಾರೆ ಎಂಬ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ.

ಹೀಗಿತ್ತು ಆ ದಿನ

ಜೂನ್‌ 2, 1975 ಸುಮಾರು 100ಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತೆಯರು ಫ್ರಾನ್ಸ್‌ನ ಲಿಯಾನ್‌ನಲ್ಲಿ ಸೇಂಟ್‌ ನಿಜಿಯರ್‌ ಚರ್ಚ್‌ನಲ್ಲಿ ಒಟ್ಟುಗೂಡುತ್ತಾರೆ. ಅವರೆಲ್ಲರೂ ತಮ್ಮ ಮೇಲಿನ ಕ್ರಿಮಿನಲ್‌ ಪ್ರಕರಣಗಳು ಹಾಗೂ ತಮ್ಮ ಮೇಲಾಗುತ್ತಿರುವ ಶೋಷಣೆಯ ವಿರುದ್ಧ ಆಕ್ರೋಶ, ಹತಾಶೆ ಹಾಗೂ ಕ್ರೋಧವನ್ನು ವ್ಯಕ್ತಪಡಿಸುತ್ತಾರೆ. ಅಲ್ಲದೆ ಇವರೆಲ್ಲರೂ ʼನಮ್ಮ ಮಕ್ಕಳು ನಾವು ಜೈಲಿಗೆ ಹೋಗುವುದನ್ನು ಬಯಸುವುದಿಲ್ಲʼ ಎಂದು ಬರೆದಿರುವ ಬ್ಯಾನರ್‌ ಹಿಡಿದು ಪ್ರತಿಭಟಿಸಿದರು. ಅವರು ತಮ್ಮ ಸಂದೇಶ ಹಾಗೂ ಕಾಳಜಿಯನ್ನು ಜನರಿಗೆ ತಲುಪಲು ಮಾಧ್ಯಮಗಳ ನೆರವು ಪಡೆದರು, ಆ ಮೂಲಕ ಲೈಂಗಿಕ ಕಾರ್ಯಕರ್ತೆಯರ ಜೀವನ ಹಾಗೂ ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಜನರಿಗೆ ತಲುಪಿಸುವ ಕೆಲಸವಾಗಿತ್ತು.

ಕುತೂಹಲಕಾರಿ ಅಂಶ ಎಂದರೆ ಈ ಘಟನೆಯ ಬಳಿಕ ಟಿವಿ ವಾಹಿನಿಗಳು ಹಾಗೂ ಪತ್ರಿಕಗಳಲ್ಲಿ ಲೈಂಗಿಕ ಕಾರ್ಯಕರ್ತರ ಮೇಲಿನ ಶೋಷಣೆಯ ಬಗ್ಗೆ ತೋರಿಸಲಾಗಿತ್ತು.

ಲೈಂಗಿಕ ಕಾರ್ಯಕರ್ತೆಯರ ಮೇಲಿನ ದೌರ್ಜನ್ಯ ತಡೆಯಲು ಒತ್ತಾಯಿಸಿ ಸಾವಿರಾರು ಕಾರ್ಯಕರ್ತರು ಫ್ರಾನ್ಸ್‌ನಾದ್ಯಂತ ಮುಷ್ಕರ ನಡೆಸಿದರು. ಅಂದು ಸೇಂಟ್‌ ನಿಜಿಯರ್‌ ಚರ್ಚ್‌ನಲ್ಲಿ ಸೇರಿದ್ದವರು ಪೊಲೀಸ್‌ ಕಿರುಕುಳ ನಿಲ್ಲಿಸಲು, ತಮ್ಮ ಉದ್ಯೋಗಕ್ಕಾಗಿ ಹೊಟೇಲ್‌ಗಳನ್ನು ಪುನಃ ತೆರೆಯಲು ಮತ್ತು ಲೈಂಗಿಕ ಕಾರ್ಯಕರ್ತರ ಹತ್ಯೆಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ಒತ್ತಾಯಿಸಿದರು. ಈ ಪ್ರತಿಭಟನೆ ಸುಮಾರು 8 ದಿನಗಳ ಕಾಲ ನಡೆದಿತ್ತು.

ಮಹತ್ವ

ಐಎಸ್‌ಡ್ಲ್ಯೂಡಿ ಎನ್ನುವುದು ಸಾಮಾಜಿಕ ನ್ಯಾಯವನ್ನು ಉತ್ತೇಜಿಸುವುದು, ಹಿಂಸಾಚಾರವನ್ನು ತಡೆಗಟ್ಟವುದು ಮತ್ತು ಪ್ರಪಂಚದಾದ್ಯಂತ ಲೈಂಗಿಕ ಕಾರ್ಯಕರ್ತೆಯರನ್ನು ರಕ್ಷಿಸುವುದನ್ನು ನೆನಪಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. 1995ರಲ್ಲಿ ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳ ಪ್ರಚಾಕರು ಈ ದಿನದ ಆಚರಣೆಯ ಉದ್ದೇಶವನ್ನು ತಿಳಿಸುವ ಉದ್ದೇಶದಿಂದ ಲೈಂಗಿಕ ಕಾರ್ಯಕರ್ತೆಯರು ದಿನದ ಆಚರಣೆಗೆ ಕರೆ ಕೊಟ್ಟರು. ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅಳವಡಿಸಿಕೊಳ್ಳಬಹುದಾದ ಸ್ಪಷ್ಟವಾದ ನೀತಿ ಸಲಹೆಗಳನ್ನು ರಚಿಸುವುದು ಇದರ ಪ್ರಾಥಮಿಕ ಗುರಿಯಾಗಿದೆ.

IPL_Entry_Point

ವಿಭಾಗ